ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ:16-06-2021 ರಂದು ಪಿರ್ಯಾದಿದಾರರಾದ ಜಯ ಪ್ರಸಾದರವರ ಪರಿಚಯದ ಕೆಲಸಗಾರರಾದ ಉದಿತ್ ಚೌಧರಿ ಮತ್ತು ಪ್ರಹ್ಲಾದ್ ಚೌಧರಿಯವರೊಂದಿಗೆ ರಾಹೆ 66 ರ ಪಣಂಬೂರು ಕಡೆಯಿಂದ ಬೈಕಂಪಾಡಿ ಕಡೆಗೆ ಹೊಗುವ ರಾಹೆ 66ರ ಎಡಬದಿಯಲ್ಲಿರುವ ಸರ್ವೀಸ್ ರಸ್ತೆಯ ಬದಿಯ IOC ಪೆಟ್ರೋಲ್ ಪಂಪ್ ಬಳಿ ನಿಂತುಕೊಂಡಿದ್ದ ಸಮಯ ಸುಮಾರು 16-00 ಗಂಟೆಗೆ ಪಿರ್ಯಾದಿದಾರರು ಹಾಗೂ ಉದಿತ್ ಚೌಧರಿ ಮತ್ತು ಪ್ರಹ್ಲಾದ್ ಚೌಧರಿ ಎದುರುಗಡೆಯಿಂದ ಸರ್ವೀಸ್ ರಸ್ತೆಯಲ್ಲಿ KA19AB0837 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಸುಬ್ರಮಣ್ಯ ಶೆಟ್ಟಿ ಎಂಬುವರು ಹಿಮ್ಮುಖವಾಗಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹತ್ತಿರ ನಿಂತಿದ್ದ ಉದಿತ್ ಚೌಧರಿ ಮತ್ತು ಪ್ರಹ್ಲಾದ್ ಚೌಧರಿ ಡಿಕ್ಕಿ ಪಡಿಸಿದ ಪರಿಣಾಮ ಅವರಿಬ್ಬರು ರಸ್ತೆಗೆ ಬಿದ್ದು ಉದಿತ್ ಚೌಧರಿಯವರ ಬಲಕಾಲಿನ ಮೊಣಗಂಟಿನ ಕೆಳಗೆ ಗಂಭೀರ ಸ್ವರೂಪದ ರಕ್ತಗಾಯ ಹಾಗೂ ಪ್ರಹ್ಲಾದ್ ಚೌಧರಿಯವರ ಬಲಕಾಲಿಗೆ ರಕ್ತಗಾಯವಾಗಿದ್ದು ಉದಿತ್ ಚೌದರಿಯವರು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿದ್ದು ಪ್ರಹ್ಲಾದ್ ಚೌಧರಿಯವರು ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ.

Crime Reported in Bajpe PS

ಫಿರ್ಯಾದಿ Jony Sheikh ರವರು ದಿನಾಂಕ 15.06.2021 ರಂದು ಸಂಜೆ 6:30 ಗಂಟೆಗೆ ಮಂಜುನಾಥ ಎಂಬವರ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19ಇಬಿ-9682 ನೇಯದರಲ್ಲಿ ಸಹಸವಾರನಾಗಿ ಕುಳಿತುಕೊಂಡು ಭೂಮಿಕಾ ಕ್ವಾರೆಯಿಂದ ಎಡಪದವಿಗೆ ಬರುತ್ತಿರುವಾಗ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಭೂಮಿಕಾ ಕ್ವೇರೆಗೆ  ಹೋಗುವ ರಸ್ತೆಯಲ್ಲಿ ಮೋಟಾರ್ ಸೈಕಲನ್ನು ಮಂಜುನಾಥರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಲ್ಲಿ ನಾಯಿ ಅಡ್ಡ ಬಂದಿದ್ದರಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಫಿರ್ಯಾದಿದಾರರ ಬಲ ಕಾಲ ಮೊಣಗಂಟಿಗೆ ಬಾರಿ ಗಾಯ ಮತ್ತು ಎಡ ಕೈ ಗಂಟಿನ ಕೋಲು ಕೈಗೆ ತರಚಿದ ಗಾಯವಾಗಿದ್ದು ಗಾಯಾಳು ಫಿರ್ಯಾದಿದಾರರು ಕೈಕಂಬ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ದಿನಾಂಕ 16.06.2021 ರಂದು ಮಂಗಳೂರು ತೇಜಸ್ವಿನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ

Crime Reported in Ullal PS

 ಫಿರ್ಯಾದಿ Pradeep T.R. PSI ರವರು ದಿನಾಂಕ: 16-06-2021 ರಂದು ಸಿಬ್ಬಂದಿ ಜೊತೆ ಇಲಾಖಾ ವಾಹನದಲ್ಲಿ ಸಂಜೆ 16-00 ಗಂಟೆಗೆ ಠಾಣೆಯಿಂದ ರೌಂಡ್ಸ್ ಹೊರಟು ಕೋಟೆಕಾರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿರುವಾಗ ಸಂಜೆ 17-30 ಗಂಟೆ ಫಿರ್ಯಾದಿದಾರರಿಗೆ ಬಂದ ಖಚಿತ ಮಾಹಿತಿ ಏನೆಂದರೆ ಪೆರ್ಮನ್ನೂರು ಗ್ರಾಮದ ಹೊಸ ಪಡ್ಪು ಎಂಬಲ್ಲಿ ನೇತ್ರಾವತಿ ನದಿ ಹಿನ್ನೀರಿನ ಬಳಿಯಲ್ಲಿ ಜಿಪ್ಸನ್ ರಿತೇಶ್ ಎಂಬಾತನು ನೇತ್ರಾವತಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ, ಸಾಮಾನ್ಯ ಮರಳನ್ನು ಕಳವು ಮಾಡಿಸಿಕೊಂಡು ಅಕ್ರಮವಾಗಿ ಇರಿಸಿಕೊಂಡಿರುವುದಾಗಿ ಬಂದ  ಮಾಹಿತಿಯಂತೆ ಸಿಬ್ಬಂದಿ ಜೊತೆಯಲ್ಲಿ  ಖಚಿತಮಾಹಿತಿ ಬಂದ ಸ್ಥಳಕ್ಕೆ ಸಂಜೆ 17-45 ಗಂಟೆಗೆ ಪರಿಶೀಲಿಸಿದಾಗ ಸ್ಥಳದಲ್ಲಿ ಸುಮಾರು 14 ಟಿಪ್ಪರ್ ಲಾರಿಯಲ್ಲಿ ತುಂಬಬಹುದಾದಷ್ಟು,  ಸಾಮಾನ್ಯ ಮರಳಿನ ಲೋಡ್ ಅಕ್ರಮವಾಗಿ ದಾಸ್ತಾನು ಇರಿಸಿರುವುದು ಕಂಡು ಬಂದಿರುತ್ತದೆ. ಸದ್ರಿ ಮರಳನ್ನು ಜಿಪ್ಸನ್ ರಿತೇಶ್ ಎಂಬಾತನು ಅಕ್ರಮ ಲಾಭಗಳಿಸುವ ಉದ್ದೇಶದಿಂದ ಸರಕಾರಿ ಪರಂಬೋಕು ಸ್ಥಳದಿಂದ ಯಾವುದೇ ಪರವಾನಿಗೆ ಹೊಂದದೇ ಹಾಗೂ ರಾಜಸ್ವ ಧನ ಸರಕಾರಕ್ಕೆ ಪಾವತಿಸದೇ ಕಳವು ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದರಿಂದ ಆರೋಪಿ ಜಿಪ್ಸನ್ ರಿತೇಶ್ ವಿರುದ್ಧ ವರದಿಯನ್ನು ತಯಾರಿಸಿ, ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಅಕ್ರಮ ಸಂಗ್ರಹಿಸಿಟ್ಟಿದ್ದ ಸಾಮಾನ್ಯ ಮರಳಿನ ಅಂದಾಜು ಮೌಲ್ಯ 40,000/- ಆಗಬಹುದು. ಎಂಬಿತ್ಯಾದಿಯಾಗಿರುತ್ತದೆ

2) ಫಿರ್ಯಾದಿ Sandeep G S Inspector of Police ರವರು ದಿನಾಂಕ: 16-06-2021 ರಂದು ಸಿಬ್ಬಂದಿ ಜೊತೆ ಇಲಾಖಾ ವಾಹನದಲ್ಲಿ ಸಂಜೆ 17-00 ಗಂಟೆಗೆ ಠಾಣೆಯಿಂದ ರೌಂಡ್ಸ್ ಹೊರಟು ದೇರಳಕಟ್ಟೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿರುವಾಗ ಸಂಜೆ 17-45 ಗಂಟೆಗೆ ಫಿರ್ಯಾದಿದಾರರಿಗೆ ಬಂದ ಖಚಿತ ಮಾಹಿತಿ ಯಂತೆ ಪೆರ್ಮನ್ನೂರು ಗ್ರಾಮದ ಕಲ್ಲಾಪು ಪಟ್ಲ ಎಂಬಲ್ಲಿ ಶಾಲೆಯ ಹಿಂಬಾಗದಲ್ಲಿ ಶಾಪಿ ಮತ್ತು ಇತರರು ನೇತ್ರಾವತಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ, ಸಾಮಾನ್ಯ ಮರಳನ್ನು ಕಳವು ಮಾಡಿಸಿಕೊಂಡು ಅಕ್ರಮವಾಗಿ ಇರಿಸಿಕೊಂಡಿರುವುದಾಗಿ ಬಂದ  ಮಾಹಿತಿಯಂತೆ ಸಿಬ್ಬಂದಿ ಜೊತೆಯಲ್ಲಿ  ಖಚಿತಮಾಹಿತಿ ಬಂದ ಸ್ಥಳಕ್ಕೆ ಸಂಜೆ 18-00 ಗಂಟೆಗೆ ಪರಿಶೀಲಿಸಿದಾಗ ಸ್ಥಳದಲ್ಲಿ ಸುಮಾರು 15 ಟಿಪ್ಪರ್ ಲಾರಿಯಲ್ಲಿ ತುಂಬಬಹುದಾದಷ್ಟು,  ಸಾಮಾನ್ಯ ಮರಳಿನ ಲೋಡ್ ಅಕ್ರಮವಾಗಿ ದಾಸ್ತಾನು ಇರಿಸಿರುವುದು ಕಂಡು ಬಂದಿರುತ್ತದೆ. ಸದ್ರಿ ಮರಳನ್ನು ಶಾಫಿ ಮತ್ತು ಇತರರು ಅಕ್ರಮ ಲಾಭಗಳಿಸುವ ಉದ್ದೇಶದಿಂದ ಸರಕಾರಿ ಪರಂಬೋಕು ಸ್ಥಳದಿಂದ ಯಾವುದೇ ಪರವಾನಿಗೆ ಹೊಂದದೇ ಹಾಗೂ ರಾಜಸ್ವ ಧನ ಸರಕಾರಕ್ಕೆ ಪಾವತಿಸದೇ ಕಳವು ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದರಿಂದ ಆರೋಪಿ ಶಾಫಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಅಕ್ರಮ ಸಂಗ್ರಹಿಸಿಟ್ಟಿದ್ದ ಸಾಮಾನ್ಯ ಮರಳಿನ ಅಂದಾಜು ಮೌಲ್ಯ 42,000/- ಆಗಬಹುದು. ಎಂಬಿತ್ಯಾದಿಯಾಗಿರುತ್ತದೆ.

Crime Reported in Mangalore Women PS 

ನೊಂದ ಬಾಲಕಿಯು ಪಿ ಯು ಕಾಲೇಜಿನಲ್ಲಿ ಓದುತ್ತಿದ್ದು ರಜೆ ಇದ್ದ ಕಾರಣ ಮನೆಯಲ್ಲಿಯೇ ಇರುವುದಾಗಿದೆ. ಬಾಲಕಿಯು 10 ನೇ ತರಗತಿಯಲ್ಲಿ ಓದುತ್ತಿದ್ದ ಸಮಯ ಆಕೆಯ ತಂದೆ ಆರೋಪಿ ಅಬ್ದುಲ್ ಹಕೀಂ ದಿನಾಂಕ: 12-05-2018 ರಂದು ಮಧ್ಯಾಹ್ನ ಸುಮಾರು 14-00 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೊಂದ ಬಾಲಕಿಯನ್ನು ಬೆಡ್ ರೂಂ ನ ಳಗೆ ಎಳೆದುಕೊಂಡು ಹೋಗಿ, ಬಾಲಕಿ ಧರಿಸಿದ್ದ ಬಟ್ಟೆಗಳನ್ನು ಬಿಚ್ಚಿ ಎರಡೂ ಕೈಗಳನ್ನು ಚೂಡಿದಾರದ ಶಾಲಿನಿಂದ ಕಟ್ಟಿ ಬಾಲಕಿ ಬೊಬ್ಬೆ ಹಾಕದಂತೆ ಬಾಯಿಯನ್ನು ಗಟ್ಟಿಯಾಗಿ ಹಿಡಿದು ಎದೆಯ ಭಾಗಕ್ಕೆ ಕೈ ಹಾಕಿ ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಪರ್ಕ ನಡೆಸಿದ್ದು ಇದೇ ರೀತಿ ಅನೇಕ ಬಾರಿ ಲೈಂಗಿಕ ಸಂಪರ್ಕ ನಡೆಸಿರುತ್ತಾನೆ. ಆರೋಪಿಯು ಹೇಳಿದ ಹಾಗೆ ನೊಂದ ಬಾಲಕಿಯು ಕೇಳದೇ ಇದ್ದಾಗ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯುತ್ತಿದ್ದು ದಿನಾಂಕ: 02-06-2021 ರಂದು ಬೆಳಿಗ್ಗೆ 8-00 ಗಂಟೆಗೆ ಆರೋಪಿತನು ಸಾರಿಗೆ ಖಾರ ಕಡಿಮೆಯಾಗಿದೆ ಎಂದು ನೊಂದ ಬಾಲಕಿಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬಟ್ಟೆ ಹೊಲಿಯುವ ಮೆಷಿನ್ ಅನ್ನು ಕಾಲಿಗೆ ಬಿಸಾಡಿದ್ದು ರಕ್ತ ಗಾಯವಾಗಿರುತ್ತದೆ. ಇದರಿಂದ ನೊಂದ ಬಾಲಕಿಯ ತಾಯಿ ನೊಂದ ಬಾಲಕಿಯನ್ನು ಹಾಗೂ ಆಕೆಯ ಅಕ್ಕ ಮತ್ತು ಅಣ್ಣನನ್ನು ಕರೆದುಕೊಂಡು ಅಜ್ಜಿಯ ಮನೆಗೆ ಬಂದಿರುತ್ತಾರೆ. ಅಲ್ಲಿ ಬಾಲಕಿಯ ಮಾವನಾದ ಅಬ್ದುಲ್ ರಹೀಂ ರವರು ನೊಂದ ಬಾಲಕಿಯ ತಾಯಿಯನ್ನು ವಿಚಾರಿಸಿದಾಗ ನೊಂದ ಬಾಲಕಿಯು ತನ್ನ ತಂದೆ ಅಬ್ದುಲ್ ಹಕೀಂ ರವರು ಸುಮಾರು 2 ವರ್ಷದಿಂದ ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಪರ್ಕ ನಡೆಸುತ್ತಿರುವುದಾಗಿ ತಿಳಿಸಿದಾಗ ಬಾಲಕಿಯ ಅಕ್ಕ ಮೈಮುನಾ ಶಿಫಾನಾ ರವರು ಕೂಡಾ ದಿನಾಂಕ 25-04-2019 ರಂದು ಮಧ್ಯಾಹ್ನ 14-15 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಅವರೊಂದಿಗೆ ಸಹಾ ತನ್ನ ತಂದೆ ಒತ್ತಾಯ ಪೂರ್ವಕವಾಗಿ ಲೈಂಗಿಕ ಸಂಪರ್ಕ ನಡೆಸಿರುತ್ತಾರೆ ಅಲ್ಲದೇ ಹಲವಾರು ಬಾರಿ ಲೈಂಗಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿರುತ್ತಾರೆ. ಮನೆಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಗಲಾಟೆ ಮಾಡಿ ನೊಂದ ಬಾಲಕಿಯ ತಂದೆ ರಾಡ್ ನಿಂದ ತೆಂಗಿನ ಕಾಯಿ ತುರಿಯುವ ಮನೆಯಿಂದ ಹೊಡೆಯುತ್ತಿದ್ದು ಇದರಿಂದಾಗಿ ನೊಂದ ಬಾಲಕಿಯ ಅಕ್ಕನಿಗೆ ತೊಡೆಯ ಬಳಿ ಗಾಯವಾಗಿರುತ್ತದೆ. ಅಲ್ಲದೇ ಫಿರ್ಯಾದಿದಾರರ ತಾಯಿಗೆ ಕೂಡಾ ಹಲವಾರು ಬಾರಿ ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಹೊಡೆದಿದ್ದು ರಕ್ತಗಾಯವಾಗಿರುತ್ತದೆ,. ಅಲ್ಲದೇ ಫಿರ್ಯಾದಿದಾರರನ್ನು ಹಾಗೂ ಆಕೆಯ ಅಕ್ಕ ಮತ್ತು ತಾಯಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ.

Crime Reported in Urva PS

ದಿನಾಂಕ 06-06-2021 ರಂದು ಒಂದು ಟ್ರೋಲ್ ಪೇಜ್ ನಲ್ಲಿ ಹಾಕಲಾಗಿದ್ದ ಪೋಸ್ಟ್ ಗೆ ಸೂರ್ಯ್ ಎನ್ ಕೆ ಎಂಬಾತ ತುಳುನಾಡಿನ ಬಾವುಟವನ್ನು ಚಪ್ಪಲಿಗೆ ಎಡಿಟ್ ಮಾಡಿ ಅಸ್ಲೀಲ ಬರಹಗಳ ಮೂಲಕ ಕಮೆಂಟ್ಸ್ ಹಾಕಿ ತುಳುವರ ದಾರ್ಮಿಕ ಭಾವನೆಗೆ ದಕ್ಕೆ ಉಂಟು  ಮಾಡಿರುತ್ತಾರೆ.

ಇತ್ತೀಚಿನ ನವೀಕರಣ​ : 17-06-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080