ಅಭಿಪ್ರಾಯ / ಸಲಹೆಗಳು

 Crime Reported in  E and N Crime PS

ದಿನಾಂಕ 17-07-2021 ರಂದು ಇ&ಎನ್ ಸಿಪಿಎಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ  ಲತಾ ಕೆ ಎನ್ ರವರಿಗೆ ಬೆಳಿಗ್ಗೆ 09-55 ಗಂಟೆಗೆ  ಬಂದ ಮಾಹಿತಿ ಯಂತೆ ಮಂಗಳೂರು ನಗರದ ಪಂಪುವೆಲ್ ನಲ್ಲಿರುವ  ಫಾದರ್ ಮುಲ್ಲರ್ಸ್ ಕನ್ವೆನ್ಶನ್ ಸೆಂಟರ್ ನ ದ್ವಾರದ ಬಳಿಯಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡಿದ್ದು, ಆತನು   ನಶೆಯಲ್ಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬುದಾಗಿ ಮಾಹಿತಿ ಇದ್ದು, ಠಾಣಾ ಸಿಬ್ಬಂದಿಯವರೊಂದಿಗೆ ಹೊರಟು  ಮಾಹಿತಿ ಬಂದ ಸ್ಥಳಕ್ಕೆ ತೆರಳಿ ನಶೆಯಲ್ಲಿದ್ದ ಮುನೀರ್ @ ಮುನ್ನ ಎಂಬವನನ್ನು ವಶಕ್ಕೆ ಪಡೆದು ಆತನ ಗಾಂಜಾ ಸೇದಿರುವ ಬಗ್ಗೆ ಒಪ್ಪಿಕೊಂಡಂತೆ ಮಾಧಕ ವಸ್ತು ಗಾಂಜಾ ಸೇದಿರುವ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದಲ್ಲಿ ಮಾಧಕ ವಸ್ತು ಸೇದಿರುವುದು ದೃಢಪಟ್ಟಿರುವುದರಿಂದ ಆರೋಪಿ ವಿರುದ್ದ NARCOTIC DRUGS AND PSYCHOTROPIC SUBSTANCES ACT, ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Crime Reported in  Kankanady Town PS

ಪಿರ್ಯಾದಿ Premanatha Acharya ರವರು ಮೂಡುಶೆಡ್ಡೆಯಲ್ಲಿ ಜ್ಯುವೆಲ್ಲರಿ ಶಾಪ್‌ ನಲ್ಲಿ ಕೆಲಸ ಮಾಡಿಕೊಂಡಿದ್ದು   ದಿನಾಂಕ 16/07/2021 ರಂದು ರಾತ್ರಿ ಕೆಲಸ ಮುಗಿಸಿ ಪದವು ಗ್ರಾಮದ ಮನೆಯಲ್ಲಿದ್ದ ನಾಗ ಬ್ರಹ್ಮಸ್ಥಾನದ ಬಳಿಯ ಮನೆಯಲ್ಲಿದ್ದ ಸಮಯ ಸುಮಾರು 10.15 ಗಂಟೆಗೆ ಪಿರ್ಯಾದಿದಾರರ ಮನೆಯ ಎದುರುಗಡೆ ಹೊಸದಾಗಿ ಕಟ್ಟಿಸಿರುವ ಕಾಮಗಾರಿ ಹಂತದಲ್ಲಿರುವ ಒಂದನೇ ಮಹಡಿಯಲ್ಲಿರುವ ಮನೆಯಲ್ಲಿ ಯಾರೋ ಜೋರಾಗಿ ಮಾತಾಡಿ ಕಿರುಚಾಡುತ್ತಿದ್ದ ಶಬ್ದ ಕೇಳಿ ಬಂದು ನೋಡಿದಾಗ ಪಿರ್ಯಾದಿ ಚಿಕ್ಕಮ್ಮನ ಮಗನಾದ ಕಾರ್ತಿಕ್‌, ನೋಡಿ ಪರಿಚಯವಿರುವ ಅವಿನಾಶ್, ಪ್ರೀತಮ್ ಹಾಗೂ ಇತರ 5-6 ಜನ ಯುವಕರು  ಸೇರಿಕೊಂಡು ಮಧ್ಯಪಾನ ಸೇವಿಸುತ್ತಾ ಒಬ್ಬರನ್ನೊಬ್ಬರು ಬೈದಾಡುತ್ತಿದ್ದನ್ನು ನೋಡಿ ಪಿರ್ಯಾದಿದಾರರು ಕಾರ್ತಿಕ್‌ನನ್ನು ಕೆಳಗಡೆ ಕರೆದು ನೀವು, ಇಲ್ಲಿ ಕುಡಿದು ಗಲಾಟೆ ಮಾಡುವುದು ಬೇಡ, ಇದರಿಂದ ನಮಗೆಲ್ಲಾ ತೊಂದರೆಯಾಗುತ್ತದೆ ಇಲ್ಲಿಂದ ಹೋಗಿ ಎಂಬುದಾಗಿ ತಿಳಿಸಿದಾಗ, ಕಾರ್ತಿಕ್‌ನು ನಿನಗೆ ಏನು ತೊಂದರೆ ಎಂದು ಬೈದು ಕೈಯಿಂದ ಮುಖಕ್ಕೆ ಹೊಡೆದನು, ಇದೇ ವೇಳೆ ಮಹಡಿಯಲ್ಲಿದ್ದ ಅವಿನಾಶ್‌ ಕೈಯಲ್ಲಿ ಬಿಯರ್ ಬಾಟ್ಲಿ ಹಿಡಿದುಕೊಂಡೆ ಕೆಳಗೆ ಬರುತ್ತಿದ್ದಂತೆ ಇತರರು ಕೂಡಾ ಕೆಳಗೆ ಬಂದು, ಅವರುಗಳ ಪೈಕಿ ಅವಿನಾಶ್‌ ಎಂಬಾತನು ಅಂಗಿಯನ್ನು ಹಿಡಿದೆಳೆದು,  “ನೀನು ಯಾರು, ನಮ್ಮನ್ನು ಕೇಳಲು, ಬೇವರ್ಷಿ, ಎಂದು ಕೆಟ್ಟ ಶಬ್ದದಿಂದ ಬೈದುದಲ್ಲದೇ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಹೇಳಿ ಬಿಯರ್ ತುಂಬಿರುವ ಬಾಟಲಿಯಿಂದ ಪಿರ್ಯಾದಿ ತಲೆಯ ಮೇಲೆ ಬೀಸಿದ್ದು,  ಪಿರ್ಯಾದಿದಾರರು ತಪ್ಪಿಸಿಕೊಂಡಾಗ ಬಿಯರ್ ಬಾಟಲಿನ ಪೆಟ್ಟು ಎಡ ಭುಜಕ್ಕೆ ತಾಗಿರುತ್ತದೆ, ನಂತರ ಮತ್ತೆ ಬಿಯರ್‌ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಒಬ್ಬಾತ ಹೆಲ್ಮಟ್‌ ನಿಂದ ಮುಖದ ಎಡಭಾಗಕ್ಕೆ ಹೊಡೆದಿರುತ್ತಾನೆ, ಇತರರು ಕೈಯಿಂದ ಮುಷ್ಟಿ ಹಿಡಿದು ಮುಖಕ್ಕೆ, ತಲೆಗೆ ಗುದ್ದುತ್ತಿದ್ದಂತೆ, ಪ್ರೀತಮ್‌ ಎಂಬಾತನು ಅಲ್ಲೇ ಇದ್ದ ಮರದ ಸೋಂಟೆಯಿಂದ ಕೈ ಕಾಲಿಗೆ ಹೊಡೆದಿದ್ದು,  ಪಿರ್ಯಾದಿಯು ಜೋರಾಗಿ ಬೊಬ್ಬೆ ಹೊಡೆದಾಗ ತಮ್ಮ ಪ್ರಮೋದ್, ನೆರೆಮನೆಯ ನಟರಾಜ್ ಹಾಗೂ ಇತರರು ಬಿಡಿಸಿರುತ್ತಾರೆ.ಆ ಸಮಯ ಅವಿನಾಶ್‌ ಎಂಬಾತನು ಪಿರ್ಯಾದಿದಾರರನ್ನು  ಉದ್ದೇಶಿಸಿ, “ ನಿನ್ನನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲವಾಗಿ “ ಬೆದರಿಕೆ ಒಡ್ಡಿ ಅವರುಗಳು ಬಂದಿರುವ ದ್ವಿಚಕ್ರ ವಾಹನದಲ್ಲಿ ಹೋಗಿರುತ್ತಾರೆ.   ಅವಿನಾಶ್‌ ಹಾಗೂ ಇತರರು ಹಲ್ಲೆ ನಡೆಸಿರುವುದರಿಂದ ಪಿರ್ಯಾದಿ ತಲೆಗೆ, ಮೂಗು, ಕಿವಿ, ಗಲ್ಲ, ಎಡ ಕಾಲಿನ ಮೊಣಗಂಟು, ಎಡ ಕಾಲಿನ ಪಾದಕ್ಕೆ ಹಾಗೂ ಎಡ ಕೈಯ ಕಿರುಬೆರಳಿಗೆ ರಕ್ತ ಗಾಯ ಹಾಗೂ ಗುದ್ದಿದ ಗಾಯವಾಗಿದ್ದು ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಪಿರ್ಯಾದಿದಾರರು ಹೊಸದಾಗಿ ನಿರ್ಮಿಸಿರುವ ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಮಧ್ಯಪಾನ ಸೇವಿಸಿ ಅವರೊಳಗೆ ಬೈದಾಡಿ ಕಿರುಚಾಡುತ್ತಿದ್ದ ಬಗ್ಗೆ ಕೇಳಿದಕ್ಕೆ ಅವಿನಾಶ್‌, ಕಾರ್ತಿಕ್, ಮೋಹಿತ್, ಗಣೇಶ್, ಪುನೀತ್, ಪ್ರಾಣೇಶ್, ಧೀರಜ್‌ ಹಾಗೂ ಪ್ರೀತಂ ಹಾಗೂ ಇತರರು ಪಿರ್ಯಾದುದಾರರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವುದಾಗಿದೆ ಎಂಬಿತ್ಯಾದಿ

Crime Reported in  Surathkal PS       

PRAPTHI NILAYA KONKANA BAILU, NEAR MUKKA CHECK POST MUKKA SURATHKAL ನಿವಾಸಿ ಪಿರ್ಯಾದಿ VITTAL SHETTY (71) ರವರ ಮಗ ಕಿರಣ್ ಶೆಟ್ಟಿ (40)ಎಂಬವರು ಇಂಟಿರಿಯರ್ ಡೆಕೋರೇಟರ್ ಆಗಿ ಚೇಳಾರು ನಿವಾಸಿ ರಾಜು ಎಂಬವರ ಜೊತೆಯಲ್ಲಿ ಸುಮಾರು 3 ವರ್ಷಗಳಿಂದ ಪಾಟ್ನರ್ ಶಿಫ್ ನಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಲಾಕ್ ಡೌನ್ ಆದ ಸಮಯದಿಂದ ಯಾವೂದೇ ಕೆಲಸವಿಲ್ಲದೇ ಇದ್ದನು. ದಿನಾಂಕ: 13-07-2021 ರಂದು ಸಮಯ ಸುಮಾರು ಬೆಳಿಗ್ಗೆ 11.00 ಗಂಟೆಗೆ ತನ್ನ ಕಿನ್ನಿಗೋಳಿಯ ಗೆಳೆಯನಾದ ಶ್ರೀಕುಮಾರ್ ರವರ ಮನೆಗೆ ಪೂಜೆಗೆ ಹೋಗಿ, ಅಲ್ಲಿಂದ ತನ್ನ ಕಿನ್ನಿಗೋಳಿಯ ಭಾವ ರವಿಯವರ  ಹೋಟೇಲಿಗೆ ಹೋಗಿ, ಅವರ ಜೊತೆಯಲ್ಲಿ ಮಾತನಾಡಿ, ನಂತರ ಇಬ್ಬರು ವಾಪಸ್ಸು ತನ್ನ ಗೆಳೆಯನಾದ ಶ್ರೀಕುಮಾರ್ ರವರ  ಮನೆಯಲ್ಲಿ ರಾತ್ರಿಯ ಊಟ ಮುಗಿಸಿ  ತನ್ನ ಮನೆಗೆ ಬಂದಿದ್ದು, ದಿನಾಂಕ: 14-07-2021 ರಂದು ಬೆಳಗಿನ ಜಾವ ಸಮಯ ಸುಮಾರು 4.00 ಗಂಟೆಗೆ  ಪಿರ್ಯಾದಿದಾರರ ಹೆಂಡತಿ ಮೋಹಿನಿಯವರು  ಹೊರಗೆ ಬಂದು ನೋಡಲಾಗಿ ಟೇಬಲಿನ ಮೇಲೆ ಅವನ ಬೈಕಿನ ಕೀ, ವಾಚನ್ನು ಬಿಟ್ಟು ಹೋಗಿದ್ದು,  ಸಂಜೆಯಾದರೂ ಬಾರದ ಕಾರಣ, ಸಂಬಂಧಿಕರ ಮನೆಯಲ್ಲಿ ಹುಡುಕಾಡಿ, ಆತನ ಗೆಳೆಯರಲ್ಲಿ ವಿಚಾರಿಸಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿಯಾಗಿರುತ್ತದೆ.

Crime Reported in  Moodabidre PS

ದಿನಾಂಕ: 15-07-2021 ರಂದು ಬೆಳಿಗ್ಗೆ 11-42 ಗಂಟೆಗೆ ಪಿರ್ಯಾದಿ SHRINIVASA GOWDA ರವರ  ಮೊಬೈಲ್ ನಂಬ್ರಕ್ಕೆ 9606853474 ಮೊಬೈಲ್ ನಂಬ್ರದಿಂದ ಬಂದ ಮಿಸ್ಡ್ ಕಾಲ್‌ಗೆ ಕರೆ ಮಾಡಿದ ಪಿರ್ಯಾದಿದಾರರ ಕರೆಯನ್ನು ಸ್ವೀಕರಿಸಿದ ಪ್ರಶಾಂತ್ ಬಂಗೇರ ಎಂಬ ವ್ಯಕ್ತಿಯು ಪಿರ್ಯಾದಿದಾರರನ್ನುದ್ಧೇಶಿಸಿ ಬೇವರ್ಸಿ ಮಗ ಗಂಜಿಗೆ ಗತಿಯಲ್ಲದ ನಿನಗೆ ಕಂಬಳದ ಕೋಣಗಳನ್ನು ಸಾಕಲು ಗೊತ್ತಿದೆಯಾ? ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೇ ಪಿರ್ಯಾದಿದಾರರ ಮನೆಯವರಿಗೂ ಬೇಡದ ಭಾಷೆಯಲ್ಲಿ ಬೈದು ನಿನ್ನನ್ನು ಜೀವಂತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಜಾನಪದ ಕ್ರೀಡೆಯಾಗಿರುವ ಕಂಬಳ ಓಟಗಾರರಾದ ಪಿರ್ಯಾದಿದಾರರನ್ನು ಕಂಬಳದಿಂದ ಹಿಂದೆ ಸರಿಸುವ ಉದ್ಧೇಶದಿಂದ ಬೆದರಿಕೆ ಒಡ್ಡಿ ಭಯ ಹುಟ್ಟಿಸಿರುವುದು ಎಂಬಿತ್ಯಾದಿ.

Crime Reported in  Urva PS              

ದಿನಾಂಕ 16-07-2021 ರಂದು ಬೆಳಿಗ್ಗೆ 09-15 ಗಂಟೆಗೆ ಪಿರ್ಯಾದಿದಾರರಾದ ಅರುಣ್ ಕುಮಾರ್, ಪತ್ನಿ ಲತಾಕ್ಷಿ  ಮತ್ತು ಮಗಳು ಅನನ್ಯ ರವರು ಮಂಗಳೂರು ನಗರ ಕೋಡಿಕಲ್ ಆಲಗುಡ್ಡೆ ಗಣೇಶ್ ಕೃಪಾ ಮನೆಗೆ ಬೀಗ ಹಾಕಿ ಮಂಗಳೂರು ಅಳಕೆಯಲ್ಲಿರುವ ಮಂಗಳಾ ಗ್ರಾಪಿಕ್ಸ್ ಎಂಬ ಫ್ರಿಂಟಿಂಗ್ ಪ್ರೆಸ್ ಗೆ ಕೆಲಸಕ್ಕೆ ಹೋದವರು ಕೆಲಸ ಮುಗಿಸಿ ವಾಪಾಸು ಸಂಜೆ 5-20 ಗಂಟೆಗೆ  ಮನೆಗೆ ಬಂದು ನೋಡಲಾಗಿ  ಮನೆಯ ಎದುರು ಭಾಗಿಲಿನ ಚಿಲಕದ ಕೊಂಡಿಯನ್ನು ಯಾರೋ ಅಪರಿಚಿತ ಕಳ್ಳರು ಬಲವಾದ ಆಯುಧದಿಂದ ಮೀಟಿ ಎಬ್ಬಿಸಿರುವುದು ಕಂಡು ಬಂದಿದ್ದು,  ಮನೆಯ ಒಳಗಡೆ ಹೋಗಿ ನೋಡಲಾಗಿ ಮನೆಯ  ಬೆಡ್ ರೂಮ್ ಒಳಗಡೆ ಇರಿಸಿದ್ದ ಕಬ್ಬಿಣದ ಕಪಾಟ್‌ ಗಳನ್ನು ಒಡೆದು, ಅದರಲ್ಲಿದ್ದ ಬಟ್ಟೆ ಬರೆಗಳನ್ನು ಹೊರಗಡೆ ಎಳೆದು ಚೆಲ್ಲಾಪಿಲ್ಲಿ ಮಾಡಿದ್ದು, ಅಲ್ಲದೆ ಬೆಡ್ ರೂಮಿನ ಉತ್ತರ ಬದಿಯ ಗೋಡೆಯ ಬಳಿ ಇರಿಸಿದ್ದ ಗೋದ್ರೇಜ್ ಕಪಾಟಿನ ಒಳಗಡೆ ಲಾಕರನ್ನು ಒಡೆದು ಅದರೊಳಗಿದ್ದ ಪಿರ್ಯಾದಿದಾರರ ಪತ್ನಿ ಮತ್ತು ಮಗಳ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಲಾಕರ್ ನಲ್ಲಿ ಇರಿಸಿದ್ದ ಚಿನ್ನಾಭರಣಗಳಾದ 1) 14 ಚಿನ್ನದ ಬಳೆಗಳು 15 ಪವನ್ ತೂಕ, 2) 3 ಚಿನ್ನದ ಚೈನ್ ಒಟ್ಟು ತೂಕ 15 ಪವನ್, 3) ಚಿನ್ನದ ಶಾರ್ಟ್‌ ನೆಕ್ಲೇಸ್ 2 1/2 ಪವನ್ ತೂಕ, 4) 4 ಜೊತೆ ಚಿನ್ನದ ಕಿವಿಯ ಓಲೆಗಳು ಒಟ್ಟು ತೂಕ 5 ಪವನ್, 5) ಬೆರಳುಗಳ ಚಿನ್ನದ ಉಂಗುರ ಒಟ್ಟು 10 ಒಟ್ಟು ತೂಕ 8 ಪವನ್, 6) ನಗದು ರೂಪಾಯಿ 1,700/- ಕಳವಾದ ಚಿನ್ನಾಭರಣಗಳ ಒಟ್ಟು ತೂಕ 360 ಗ್ರಾಂ ಆಗಿದ್ದು ಇವುಗಳ ಅಂದಾಜು ಮೌಲ್ಯ ರೂ 14,00,000/- ( ಹದಿನಾಲ್ಕು ಲಕ್ಷ ) ಹಾಗೂ ನಗದು 1700 ಸೇರಿ ಒಟ್ಟು 14,01,700/- ಆಗಬಹದು ಎಂಬಿತ್ಯಾದಿ

Crime Reported in  Mangalore North PS

ಪಿರ್ಯಾದಿದಾರರಾದ ಶ್ರೀಮತಿ ಇಂದುಮತಿ.  ಎಂಬವರು  ಮಂಗಳೂರು ನಗರದ ಹಂಪನಕಟ್ಟೆಯ ಬಳಿ ಇರುವ ಮಹಾಲಕ್ಷ್ಮೀ, ಎಂಬ ವಾಣಿಜ್ಯ ಕಟ್ಟಡದ ಮಾಲಕರಾಗಿದ್ದು, ದಿನಾಂಕ 12-07-2021 ರಂದು ಸಂಜೆ ಸುಮಾರು 5-00 ಗಂಟೆ ಸಮಯಕ್ಕೆ ಪಿರ್ಯದಿದಾರರು ಸದ್ರಿ ಕಟ್ಟಡದ ಮೇಲ್ಬಾಗಕ್ಕೆ  ಶೀಟನ್ನು ಅಳವಡಿಸುತ್ತಿರುವ ಸಮಯ  ಚಂದ್ರಕಾಂತ್ ಸಾನು ಮತ್ತು ಆತನ ಮಗ  ಗುರುಸಾನು ಎಂಬವರು  ಪಿರ್ಯಾದಿದಾರರ ಸದ್ರಿ ಕಟ್ಟಡದೊಳಗಡೆ  ಅಕ್ರಮ ಪ್ರವೇಶ ಮಾಡಿದಲ್ಲದೇ, ಪಿರ್ಯಾದಿದಾರರು ಕಟ್ಟಡಕ್ಕೆ ಅಳವಡಿಸಿದ  ಶೀಟುಗಳನ್ನು , ಸಿಸಿ ಕ್ಯಾಮರಾ  ಹಾಗೂ ಅದಕ್ಕೆ ಸಂಬಂಧಪಟ್ಟ  ವಯರ್ ಗಳನ್ನು ಕಿತ್ತು ಬಿಸಾಡಿ, 12 ರಂದ್ರಗಳನ್ನು  ಡ್ರಿಲ್ ಮಾಡಿ  ಕಟ್ಟಡಕ್ಕೆ  ಹಾನಿಗೊಳಿಸಿದಲ್ಲದೇ ಈ ಬಗ್ಗೆ ಪಿರ್ಯಾದಿದಾರರು ಆಕ್ಷೇಪಿಸಿದಕ್ಕೆ  ಚಂದ್ರಕಾಂತ್ ಸಾನು ಮತ್ತು ಆತನ ಮಗ ಗುರುಸಾನು ಎಂಬವರು  ಪಿರ್ಯಾದಿದಾರರಿಗೆ ಮತ್ತು ಅವರ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು,  ನಿಮ್ಮ ನ್ನು ಜೀವ ಸಹಿತ ಬಿಡುವುದಿಲ್ಲ, ನಿಮ್ಮನ್ನು ಸಾಯಿಸುತ್ತೇನೆ ಎಂಬುವುದಾಗಿ   ಜೀವಬೆದರಿಕೆ  ಒಡ್ಡಿರುವುದಾಗಿದೆ. ಎಂಬಿತ್ಯಾದಿಯಾಗಿರುತ್ತದೆ.

Crime Reported in  Ullal PS

ಪಿರ್ಯಾದಿದಾರರಾದ ಖತೀಜ ಮೆಹ್ ಸರ್ ರವರು ದಿನಾಂಕ 2-7-2021 ರಂದು  ಮನೆಯಾದ ಸಿಲಿಕಾನಿಯಾ ಅಪಾರ್ಟ್ ಮೆಂಟ್ ಡೋರ್ ನಂ 1207 ಎ ಬ್ಲಾಕ್ ನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳನೊಬ್ಬ  ಹರಿತವಾದ ಆಯುಧ ದೊಂದಿಗೆ ಮನೆಗೆ ನುಗ್ಗಿ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಹಾಗೂ ಮನೆಯೊಳಗೆ ಇದ್ದ ಸಿಸಿ ಟಿವಿ ಕೆಮಾರವನ್ನು ಕದ್ದು ಪರಾರಿಯಾಗಿದ್ದು ಸಿಸಿ ಟಿವಿ ಪರಿಶೀಲಿಸಿದಾಗ ಪಿರ್ಯಾದಿದಾರರಿಗೆ ಪರಿಚಯವಿದ್ದ ಮದನಿ ನಗರ ನಿವಾಸಿ ಅಬ್ದುಲ್ ಮುನೀರ್ ಎಂಬವನಾಗಿರುತ್ತಾನೆ.  ಈತನು ಸುಮಾರು ಒಂದು ವರ್ಷ ಗಳ ಹಿಂದೆ ಆರೋಪಿಯ ಅಬ್ದುಲ್ ಮುನೀರ್ ಸಹೋದರ ಮೊಹಮ್ಮದ್ ಸಿರಾಜ್ ಎಂಬವನೊಟ್ಟಿಗೆ ಸೇರಿಕೊಂಡು ಪಿರ್ಯಾದಿದಾರರ ಮನೆಯಿಂದ  160 ಗ್ರಾಂ ಚಿನ್ನ  ಕಳವಾಗಿದ್ದು ಇದರಲ್ಲಿ ದೊಡ್ಡ ಬಳೆ -4, ಮಕ್ಕಳ ಬಳೆ-3, ಮಕ್ಕಳ ಕಿವಿಯೋಲೆ -1, ಮಕ್ಕಳ ದೊಡ್ಡ ಕಿವಿಯೋಲೆ -1, ಬ್ರಾಸೆಲೇಟ್-1 ವಜ್ರದ ಉಂಗುರ-1 ಕಳವು ಮಾಡಿರುತ್ತಾನೆ. ಆರೋಪಿಯು ಬೆಲೆ ಬಾಳುವ 2 ಕಾರುಗಳನ್ನು ಹೊಂದಿರುತ್ತಾನೆ.ಆರೋಪಿ ಅಬ್ದುಲ್ ಮುನೀರ್ ಮತ್ತು ಮೊಹಮ್ಮದ್ ಸಿರಾಜ್ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂಬಿತ್ಯಾದಿ

2)ಪಿರ್ಯಾದಿದಾರರು ದಿನಾಂಕ 16/07/2021 ರಂದು ಕೆಲಸದಿಂದ ಮನೆಗೆ ಬಂದು ರಾತ್ರಿ 7-30 ಗಂಟೆಯ ಸುಮಾರಿಗೆ ತಮ್ಮ ಮನೆಯ ಒಳಗೆ ಇರುವ ಸ್ನಾನದ ಮನೆಯಲ್ಲಿ ಸ್ನಾನ ಮಾಡುವಾಗ ವ್ಯಕ್ತಿಯೊಬ್ಬ ಮೊಬೈಲ್ ಕ್ಯಾಮೆರಾವನ್ನು ಬಾತ್ ರೂಮ್ ಒಳಗೆ ಕಾಣಿಸುವಂತೆ ಚಿತ್ರೀಕರಣ ಮಾಡುತ್ತಿರುವುದು ಬಾತ್ ರೂಮ್ ಕಿಟಕಿಯ ಹೊರಗಡೆಯಿಂದ ಏನೊ ಅಲುಗಾಡುತ್ತಿರುವಂತೆ ಕಂಡುಬಂದಿದ್ದು ಸರಿಯಾಗಿ ನೋಡಿದಾಗ ಬಾತ್ ರೂಮ್ ಕಿಡಕಿಯ ಹೊರಗಡೆಯಿಂದ ಬ್ಲೂ ಮತ್ತು ಗ್ರೇ ಬಣ್ಣದ ಕವರ್ ಹೊಂದಿದ್ದ ಮೊಬೈಲ್ವೊಂದನ್ನು ಕಂಡು ಬಂದಿದ್ದು ಕೂಡಲೇ ತಾಯಿಯವರ ಬಳಿ ಬಂದು ವಿಷಯವನ್ನು ಅವರಿಗೆ ತಿಳಿಸಿ ಟಾರ್ಚ್ ತೆಗೆದುಕೊಂಡು ಸ್ನಾನದ ಮನೆಯ ಹಿಂದುಗಡೆ ಬಂದು ಟಾರ್ಚ್ ಹಾಕಿ ನೋಡಿದಾಗ ಬಾತ್ ರೂಮ್ ಕಿಟಕಿಗೆ ಕಾಣುವ ಹಾಗೆ ಬೆಂಚ್ವೊಂದನ್ನು ಹಾಕಿಕೊಂಡು ನಿಂತಿದ್ದ ವ್ಯಕ್ತಿಯೊಬ್ಬ ಅಲ್ಲಿಂದ ಓಡಿ ಹೋಗಿರುತ್ತಾನೆ. ಮಹಿಳೆಯಾದ ಪಿರ್ಯಾದಿದಾರರು ಸ್ನಾನ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಮನೆಯ ಪಕ್ಕದಲ್ಲಿ ಇರಿಸಿದ್ದ ಬೆಂಚೊಂದನ್ನು ಸ್ನಾನದ ಮನೆಗೆ ಕಾಣುವ ಹಾಗೆ ಇಟ್ಟುಕೊಂಡು, ಸ್ನಾನ ಮಾಡುತ್ತಿದ್ದ ಪಿರ್ಯಾದಿದಾರರನ್ನು ಕದ್ದುನೋಡಿ ತನ್ನ ಮೊಬೈಲ್ ನಿಂದ ಚಿತ್ರಿಕರಣ ಮಾಡಿರಬಹುದಾಗಿರುತ್ತದೆ. ಸದ್ರಿ ವ್ಯಕ್ತಿಯನ್ನು ಮುಂದಕ್ಕೆ ನೋಡಿದರೆ ಗುರುತಿಸ ಬಲ್ಲೆನು. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿಕೊಂಡಿರುವುದು ಲಿಖಿತ ಪಿರ್ಯಾದಿಯ ಸಾರಾಂಶ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 17-07-2021 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080