ಅಭಿಪ್ರಾಯ / ಸಲಹೆಗಳು

Crime Reported  in Mangalore North PS

ಪಿರ್ಯಾದಿದಾರರಾದ ಯಾಸೀನ್ ಹಮೀದ್ ರವರ ಮಂಗಳೂರು ನಗರದ ಕುದ್ರೋಳಿ ಕರ್ಬಾಲಾ ರೋಡ್ ನಲ್ಲಿರುವ ಮನೆಗೆ ದಿನಾಂಕ 09.08.2021 ರಂದು ಮದ್ಯಾಹ್ನ 12-30 ಗಂಟೆಯಿಂದ ದಿನಾಂಕ 12.08.2021 ರಂದು ಬೆಳಗ್ಗೆ 09-30 ಗಂಟೆ ಮದ್ಯ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಮೇಲಿನ ಮಹಡಿಯ ಬಾಗಿಲಿನ ಚಿಲಕ ಮುರಿದು ಒಳಗಡೆ ಪ್ರವೇಶಿಸಿ ಕಪಾರ್ಟ್ ನಲ್ಲಿದ್ದ ನಗದು ಹಣ 10,000/- ರೂಪಾಯಿ, ಟಿಶ್ಪಾರ್ಟ್ ವಾಚ್ -01, ಆಪಲ್ ವಾಚ್-01, ಸಿಲ್ವರ್ ಚೈನ್ -1, ಆರ್ಟಿಫೀಷಿಯಲ್ ಜ್ಯುವೆಲ್ಲರ್ಸ್-1, ಐಪೋನ್ ಏರ್ ಪೋನ್-1, ರೆಡ್ಮಿ ಓರಿಜಿನಲ್ ಚಾರ್ಜರ್ -1, ಬ್ರಾಂಡೆಂಡ್ ಫರ್ಫೂಮ್ -1, ಸ್ಕೂರ್ ಮತ್ತು ಮನೆಯ ಕೀ, ನೋಕಿಯಾ ಕಂಪನಿಯ ಕೀಪ್ಯಾಡ್ ಮೊಬೈಲ್ -1, 1 ಗ್ರಾಂ ಬಂಗಾರದ ಬಳೆ ಇವುಗಳನ್ನು ಯಾರ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

Crime Reported in   Panambur PS

ದಿನಾಂಕ 17-08-2021 ರಂದು ಪೊಲೀಸ್ ಉಪನಿರೀಕ್ಷಕರಾದ ಉಮೇಶ್ ಕುಮಾರ್ ರವರಿಗೆ ಮದ್ಯಾಹ್ನ 13-30 ಗಂಟೆಗೆ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿಯೊಂದು ಸ್ವೀಕೃತವಾಗಿದ್ದು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಣಂಬೂರು ಗ್ರಾಮದ ದೀಪಕ್ ಪೆಟ್ರೋಲ್ ಬಂಕ್ ನ ಕಂಪೌಂಡ್ ಗೋಡೆಯ ಹಿಂಭಾಗದಿಂದ ಸ್ವಲ್ಪ ದೂರದಲ್ಲಿರುವ ರಸ್ತೆಯಲ್ಲಿ  ಅಣ್ಣಪ್ಪ @ ಮನು ಎಂಬಾತನು ಕೆಎ 19 ಇಜಿ 3024 ಕಪ್ಪು ಬಣ್ಣದ ಹೋಂಡಾ ಆಕ್ಟಿವ್ ಸ್ಕೂಟರ್ ನ್ನು ರಸ್ತೆಯಲ್ಲಿ ನಿಲ್ಲಿಸಿ ಅಲ್ಲೆ ಹತ್ತಿರದಲ್ಲಿರುವ ಮರವೊಂದರ ಕೆಳಗಡೆ ಕುಳಿತುಕೊಳ್ಳಲು ಇರಿಸಿರುವ ಕಲ್ಲಿನ ಮೇಲೆ ಮಾದಕ ಗಾಂಜಾವನ್ನು ಲಾರಿ ಚಾಲಕರುಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬುದಾಗಿ ಬಾತ್ಮೀದಾರರ ಮೂಲಕ ಖಚಿತವಾದ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ  ಅಣ್ಣಪ್ಪ @ ಮನು ಎಂಬಾತನನ್ನು ವಶಕ್ಕೆ ಪಡೆದು ಸುಮಾರು  610 ಗ್ರಾಂ ಗಾಂಜಾವನ್ನು ಆತನಿಂದ ಸ್ವಾದೀನ ಪಡಿಸಿಕೊಂಡು ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.   

Crime Reported in Ullal PS

ಫಿರ್ಯಾದಿದಾರಾದ ದಕ್ಷಿಣ ಸಂಚಾರ ಪೊಲೀಸ ಠಾಣೆಯ ಉಪ ನಿರೀಕ್ಷಕರು  ಸುಕುಮಾರನ್ ಮತ್ತು ಪಿಸಿ  ರಾಜು ಹೊನ್ನಕಂಠಿ ರವರೊಂದಿಗೆ  ಇಲಾಖಾ ವಾಹನದಲ್ಲಿ ದಿನಾಂಕ 16-08-2021 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ರೌಂಡ್ಸ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 02-30 ಗಂಟೆಗೆ ಬಂಡಿಕೊಟ್ಯ ಅಕ್ಕರೆಕೆರೆ ಮಾರ್ಗದಲ್ಲಿ ಯಾವುದೋ ಟಿಪ್ಪರ ವಾಹನ ಪಿರ್ಯಾದಿದಾರರ ಎದುರು ಬಂದಿದನ್ನು ನೋಡಿ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ ಸಾಮನ್ಯ ಮರಳು  ಸಾಗಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ.  ಫಿರ್ಯಾದಿದಾರರು ಸದ್ರಿ ಚಾಲಕನ್ನು ವಿಚಾರಿಸಿದಾಗ ಆತನು ಹೆಸರು ಇರ್ಷಾದ(26) ತಂದೆ:ಇಲಿಯಾಸ. ವಾಸ: ಹೈದರಾಲಿ ರಸ್ತೆ ಮುಕ್ಕಚೆರಿ ಉಳ್ಳಾಲ ಗ್ರಾಮ ಮಂಗಳೂರು. ಎಂಬುವುದಾಗಿ ತಿಳಿಸಿರುತ್ತಾನೆ.  ಚಾಲಕ ಇರ್ಷಾದ್ ಮತ್ತು ವಾಹನ ಮಾಲಿಕ ಇಮ್ತೀಯಾಜ್ ರವರು ಸರಕಾರಿ ಪೊರಂಬೋಕು ಸ್ಥಳವಾದ ಕೋಟೆಪುರದ  ಫಿಶ್ ಪ್ಯಾಕ್ಟ್ರಿಯ ಹಿಂಬದಿಯ ಸಮುದ್ರದ ಮರಳನ್ನು ಕಳುವು ನಡೆಸಿಕೊಂಡು ಯಾವುದೇ ಪರವಾನಗೆ  ಹೊಂದದೆ  ಹಾಗೂ ರಾಜಸ್ವ ಧನವನ್ನು ಸರಕಾರಕ್ಕೆ ಪಾವತಿಸದೆ  ಕೆಎ-19-ಡಿ-6463 ಈಚರ ಕಂಪನಿಯ ಟಿಪ್ಪರ್ ನಲ್ಲಿ ಅಕ್ರಮ ಸಾಗಾಟ ಮಾಡುತ್ತಿದ್ದ  ಸಾಮಾನ್ಯ ಮರಳಿನ ಅಂದಾಜು ಮೌಲ್ಯ ರೂ 5000 ಆಗಬಹುದು, ಅಲ್ಲದೇ ವಾಹನದ ಅಂದಾಜು ಮೌಲ್ಯ ಸುಮಾರು ರೂ 3,00,000 ಆಗಬಹುದು ಸದ್ರಿ ವಾಹನದ ಚಾಲಕ ಇರ್ಷಾದ್ ಮತ್ತು ವಾಹನದ ಮಾಲೀಕ ಇಮ್ತೀಯಾಜ್ ಎಂಬುವವರ ವಿರುದ್ದ   ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 17-08-2021 04:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080