ಅಭಿಪ್ರಾಯ / ಸಲಹೆಗಳು

Crime Reported in  Mangalore East PS

ಪಿರ್ಯಾದಿದಾರರಾದ  ಸುದೀರ್ ಕುಮಾರ್ ರವರು ತನ್ನ ಬಾಬ್ತು ಕೆಎ-19-ಹೆಚ್.ಬಿ-8408 ನೇ  ಹೋಂಡಾ ಡಿವ್ಯೋ ಸ್ಕೂಟರ್ ನ್ನು ದಿನಾಂಕ: 12-05-2021 ರಂದು ಬೆಳಿಗ್ಗೆ 9-00 ಗಂಟೆಗೆ ಮಂಗಳೂರು ನಗರ ಕಂಕನಾಡಿ ಹಳೆ ರಸ್ತೆಯಲ್ಲಿರುವ ಅನ್ವಿತ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದನ್ನು ಅದೇ ದಿನ ಮದ್ಯಾಹ್ನ: 3-00 ಗಂಟೆ ಮಧ್ಯೆ ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಇದರ ಅಂದಾಜು ಮೌಲ್ಯ ರೂ: 50,000/- ಆಗಬಹುದು. ಇದರ ಚಾಸಿಸ್ ನಂ: ME4JF39LDKG005220  ಇಂಜಿನ್ ನಂಬರ್:  JF39EG1010002 , ಮಾಡೆಲ್- 2019 ಬಣ್ಣ: ಗ್ರೇ,  ಪಿರ್ಯಾದಿದಾರರು ಕಳವಾದ ತನ್ನ ಸ್ಕೂಟರ್ ನ್ನು  ನಗರದ ಎಲ್ಲಾ ಕಡೆ ಹುಡುಕಾಡಿ, ಸಿಗದ ಕಾರಣ ಹಾಗು ಲಾಕ್ ಡೌನ್ ಇದ್ದ ಕಾರಣ ಮತ್ತು ಅಗತ್ಯ ಕೆಲಸ ಇದ್ದ ಕಾರಣ ತಡವಾಗಿ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Crime Reported in  Bajpe PS

ಪಿರ್ಯಾದಿ Shrinivas Mijar ರವರು ದಿನಾಂಕ 10-05-2021 ರಂದು ನಮ್ಮ ಟಿ.ವಿ. ವಾಹಿನಿಯ “ದೈವದ ಕಲ” ಶಿರೋನಾಮೆಯ ಕಾರ್ಯಕ್ರಮದಲ್ಲಿ ದೂರವಾಣಿಯ ಮೂಲಕ ಕರೆ ಮಾಡಿ ತನ್ನ ಕುಲ ದೈವ ಕಾನದ-ಕಟದರು  “ಮನ್ಸ” ಮೂಲ ಜಾತಿಗೆ ಸಂಬಂಧಿಸಿದವರೆಂದು ತಿಳಿಸಿದ್ದು, ಈ ವಿಚಾರದಲ್ಲಿ ಕುಪಿತಗೊಂಡ ರಾಜ್ಯ ಆದಿದ್ರಾವಿಡ ಸಂಘಟನೆಯು ಸಾಮಾಜಿಕ ಜಾಲತಾಣದಲ್ಲಿ ಅರ್ಜಿದಾರರನ್ನು ಸಮಾಜ ಬಹಿಷ್ಕರಿಸಬೇಕೆಂದು ಸುದ್ದಿ ಮಾಡಿರುತ್ತದೆ. ಅಲ್ಲದೇ ಅರ್ಜಿದಾರರಿಗೆ ಅನಾಮಧೇಯ ವ್ಯಕ್ತಿಗಳು ಅನೇಕ ನಂಬ್ರಗಳಿಂದ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದಾಗಿದೆ  ಎಂಬಿತ್ಯಾದಿ.

Crime Reported in  Cyber Crime PS

ಪಿರ್ಯಾದಿದಾರರು ಮಂಗಳೂರಿನ ಬಿಜೈ ನಲ್ಲಿ  ವೈದ್ಯಕೀಯ ಉಪಕರಣಗಳ ಸರಬರಾಜು ಉದ್ಯಮ ನಡೆಸುತ್ತಿದ್ದು, ಗ್ರಾಹಕರಿಂದ Oxygen Concentrators ಒದಗಿಸುವ ಬಗ್ಗೆ ಬೇಡಿಕೆ ಬಂದಿದ್ದು ಅದರಂತೆ ಪಿರ್ಯಾದಾರರು ಸದ್ರಿ ಉಪಕರಣದ ತುರ್ತು ಅವಶ್ಯಕತೆಯ ಬಗ್ಗೆ Indiamart ವೆಬ್ ಸೈಟ್ ನಲ್ಲಿ ನೊಂದಣಿ ಮಾಡಿದ್ದು  ಅದರಂತೆ ದಿನಾಂಕ: 13.05.2021 ರಂದು   ಮುಂಬೈನ ಡೊಂಬಿವಿಲಿಯಲ್ಲಿರುವ ಓಂ ಸಾಯಿ ಎಂಟರ್ಪ್ರೈಸಸ್ ಸಂಸ್ಥೆಯವರೆಂದು ತಿಳಿಸಿ ಆರೋಪಿತರು ಪಿರ್ಯಾದಿದಾರರನ್ನು ಸಂಪರ್ಕಿಸಿ ಪಿರ್ಯಾದಿದಾರರಿಗೆ Oxygen Concentrators  ಸರಬರಾಜು ಮಾಡುವುದಾಗಿ ನಂಬಿಸಿ ಅವರಿಂದ ಹಂತ ಹಂತವಾಗಿ ದಿನಾಂಕ: 13.05.2021 ರಿಂದ 17.05.2021 ರ ಮಧ್ಯಾವಧಿಯಲ್ಲಿ ರೂ 11,86,000/- ಗಳನ್ನು ಆರೋಪಿತರ ಖಾತೆಗೆ ವರ್ಗಾಯಿಸಿಕೊಂಡು  ಉಪಕರಣವನ್ನು ಸರಬರಾಜು ಮಾಡದೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 18-05-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080