Crime Reported in Mangalore Women PS
ದಿನಾಂಕ 18-06-2021 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿದಾರರಾದ ಯಶವಂತ ರಾವ್ ಎಂಬುವರು ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರಿಗೆ ದಿನಾಂಕ 28-11-2004 ರಂದು ಕುಂಪಳ ನಿವಾಸಿ ಅಮಿತರಾವ್(39) ಎಂಬಾಕೆಯೊಂದಿಗೆ ಮದುವೆಯಾಗಿದ್ದು, ಆಕೆಯು ದಿನಾಂಕ 17-06-2021 ರಂದು ಸಂಜೆ ಸುಮಾರು 3.00 ಗಂಟೆಗೆ ಮಗನಲ್ಲಿ ಗೆಳತಿಯನ್ನು ಬೇಟಿ ಮಾಡಿ ಬರುವುದಾಗಿ ತಿಳಿಸಿ ಹೋದವಳು ತಡ ರಾತ್ರಿಯ ವರೆಗೂ ಮನೆಗೆ ಬಾರದೇ ಇದ್ದು, ಆಕೆಯ ಫೋನ್ ಸ್ವೀಚ್ ಆಫ್ ಆಗಿರುತ್ತದೆ. ಸಂಬಂಧಿಕರಲ್ಲಿ ಕೇಳಲಾಗಿ ಅಲ್ಲಿಗೂ ಹೋಗಿರುವುದಿಲ್ಲ. ಆದ್ದರಿಂದ ಕಾಣೆಯಾದ ಹೆಂಡತಿಯನ್ನು ಪತ್ತೆಮಾಡಿಕೊಡಬೇಕಾಗಿ ಕೋರಿಕೊಂಡಿರುವುದಾಗಿದೆ
Crime Reported in Mangalore East PS
ಫಿರ್ಯಾದಿ ಡೇನ್ ಜಿ. ಡಿ’ಸೋಜಾರವರ ಬಾಬ್ತು ಮಂಗಳೂರಿನ ಯೆಯ್ಯಾಡಿಯಲ್ಲಿರುವ ಮಧುವನ ಬಾರ್ & ರೆಸ್ಟೋರೆಂಟ್ ನ ಪಾರ್ಸೆಲ್ ಕೌಂಟರ್ ನಲ್ಲಿ ದಿನಾಂಕ: 01-01-2019 ರಿಂದ ಮ್ಯಾನೇಜರ್ ಮತ್ತು ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಆರೋಪಿ ಪ್ರಶಾಂತ್ ಭಂಡಾರಿಯವರು ಸಂಸ್ಥೆಗೆ ಮೋಸ ಮತ್ತು ವಂಚನೆ ಮಾಡುವ ಉದ್ದೇಶದಿಂದ ಪಾರ್ಸೆಲ್ ವಿಭಾಗದಲ್ಲಿ ಗ್ರಾಹಕರಿಗೆ ಕಂಪ್ಯೂಟರೀಕೃತ ಬಿಲ್ ಗಳನ್ನು ನೀಡಿ ಗ್ರಾಹಕರಿಂದ ಹಣ ಬಂದ ಮೇಲೆ ಆ ಹಣವನ್ನು ತನ್ನ ಸ್ವಂತಕ್ಕಾಗಿ ಉಪಯೋಗಿಸಿ ಕಂಪ್ಯೂಟರ್ ನಲ್ಲಿ ನೀಡಿದಂತಹ ಬಿಲ್ ಗಳನ್ನು ಅಳಿಸಿ ನಂತರ ನಕಲಿ ಲೆಕ್ಕ ಪತ್ರ ತಯಾರಿಸಿ ಸಂಸ್ಥೆಗೆ ನಕಲಿ ಲೆಕ್ಕ ಪತ್ರಗಳನ್ನು ತೋರಿಸಿ ಜನವರಿ 2019 ರಿಂದ 27-01-2021 ರ ವರೆಗೆ ಸುಮಾರು ಹತ್ತು ಲಕ್ಷ ರೂ.ಗಳನ್ನು ವಂಚಿಸಿ ನಂಬಿಕೆ ದ್ರೋಹ ಎಸಗಿದ್ದು, ಈ ಬಗ್ಗೆ ಜನವರಿ 2020 ರಿಂದ ದಿನಾಂಕ: 27-01-2021 ರ ವರೆಗೆ ಸುಮಾರು 4,97,417/- ರೂ. ಹಣವನ್ನು ಹೀಗೆ ವಂಚನೆಗೈದು ಆರೋಪಿಯು ತನ್ನ ಸ್ವಂತಕ್ಕಾಗಿ ಬಳಸಿರುವ ದಾಖಲೆಗಳು ಸಂಸ್ಥೆಯ ಕಂಪ್ಯೂಟರ್ ನಲ್ಲಿ ಶೇಖರಣೆ ಗೊಂಡಿರುವುದಾಗಿಯೂ, ಆರೋಪಿಯ ವಿರುದ್ಧ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕೆಂದು ನೀಡಿರುವ ಫಿರ್ಯಾದಿಯಾಗಿರುತ್ತದೆ.
Crime Reported in Urva PS
ದೂರಿನ ಸಾರಾಂಶವೇನೆಂದರೆ ಮಂಗಳೂರು ಬೆನ್ಕೊ ಅಪಾರ್ಟ್ ಮೆಂಟ್ ನಲ್ಲಿ ವಾಸಮಾಡಿಕೊಂಡಿರುವ ನೋವೆಲ್ ಎಂಬವರಿಗೆ ಅಪಾರ್ಟ್ ಮೆಂಟ್ ವಾಸಿ ಗಣೇಶ್ ಎಂಬವರು ಅಪಾರ್ಟ್ ಮೆಂಟ್ ನ ಇತರ ಸದಸ್ಯರೊಂದಿಗೆ ಸಮಾನ ಉದ್ದೇಶದಿಂದ ಸೇರಿಕೊಂಡು ಉದ್ದೇಶ ಪೂರ್ವಕವಾಗಿ ನೀರಿನ ಹಣವನ್ನು ನೀಡಿಲ್ಲೆವೆಂದು ಹೇಳಿ ನೋವೆಲ್ ಮತ್ತು ಅವರ ಅಪ್ರಾಪ್ತ ಮಗಳಿಗೆ ಸ್ವಚ್ಚತೆಗೆ ನೀರಿನ್ನು ಕೊಡದೆ ಮಾನಸಿಕವಾಗಿ ತೊಂದರೆ ಉಂಟು ಮಾಡಿರುತ್ತಾರೆ ಎಂಬಿತ್ಯಾದಿ
Crime Reported in Bajpe PS
ಫಿರ್ಯಾದಿ Mahesh ರವರ ತಂದೆ; ಜಯರಾಮ ಶೆಟ್ಟಿ (54 ವರ್ಷ) ಎಂಬವರು ದಿನಾಂಕ 16.06.2021 ರಂದು ರಾತ್ರಿ ಸುಮಾರು 10:00 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲೂಕು, ಕೊಳವೂರು ಗ್ರಾಮದ, ಪಾಂಡಿಗುಳಿ ಮನೆ ಎಂಬಲ್ಲಿಂದ ರಾತ್ರಿ ಊಟ ಮಾಡಿ ಮೊಬೈಲ್ ಫೋನ್ ಇಡಿದುಕೊಂಡು ಫೋನಿನಲ್ಲಿ ಮಾತಾಡಲು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಇವರ ಬಗ್ಗೆ ನೆರೆಕರೆಯವರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ” ಎಂಬಿತ್ಯಾದಿ
ಕಾಣೆಯಾದವರ ಚಹರೆ:
ಹೆಸರು : ಜಯರಾಮ ಶೆಟ್ಟಿ ( 54 ವರ್ಷ)
ಎತ್ತರ : 5’6”
ಬಣ್ಣ : ಎಣ್ಣೆ ಕಪ್ಪು ಬೈ ಬಣ್ಣ (ಕೂಲಿ ಕೆಲಸ)
Crime Reported in Moodabidre PS
ಪಿರ್ಯಾದಿ Mohammed Sadakhath ರವರು ಮೂಡಬಿದ್ರೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸ್ ಪಾಲರಾಗಿದ್ದು, Ka01memes ಎಂಬ ಇನ್‌ಸ್ಟಾಗ್ರಾಂ ಅಕೌಂಟ್ ಹೊಂದಿರುವ ಆರೋಪಿ Adhishakthi Prasadh(A1)ಯು ಪಿರ್ಯಾದಿದಾರರ ಸಂಸ್ಥೆಯ ಹೆಸರನ್ನು ಕೆಡಿಸುವ ಉದ್ದೇಶದಿಂದ ದಿನಾಂಕ: 24-04-2021 ರಂದು ತನ್ನ ಇನ್‌ಸ್ಟಾಗ್ರಾಂ ನಲ್ಲಿ” ತಾನು ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಯಾಗಿದ್ದು, ನಮ್ಮನ್ನು ಲಾಕ್ ಡೌನ್ ಆದರೂ ಕೂಡಾ ಕಾಲೇಜಿನಲ್ಲಿ ಇರಿಸಿಕೊಂಡಿದ್ದಾರೆ, ನಮ್ಮ ತಂದೆ- ತಾಯಿಯವರು ಪೋನ್ ಮಾಡಿ ಕೇಳಿದರೂ ಕೂಡಾ ನಮ್ಮ ಮನೆಗೆ ಕಳುಹಿಸಲಿಲ್ಲ, ಕೇಳಿದರೆ ಟಿ.ಸಿ ತಗೊಂಡು ಹೋಗಿ ಬಿಡಿ ಪರ್ಮನೆಂಟಾಗಿ ಮತ್ತೆ ಕಾಲೇಜಿಗೆ ಕಳುಹಿಸಬೇಡಿ “ಅಂತ ಹೇಳಿಬಿಟ್ಟು ಬ್ಲಾಕ್ ಮೇಲ್ ಮಾಡಿ ಹೆದರಿಸಿ ನಮ್ಮನ್ನು ಇಲ್ಲೇ ಇರಿಸಿಕೊಂಡಿದ್ದಾರೆ. ಇಲ್ಲಿ ಕೊರೋನಾ ಕೇಸ್ ತುಂಬಾನೆ ಇದೆ ಆದರೂ ಕಾಲೇಜಿನಲ್ಲಿ ಯಾವುದೇ ಹೆಲ್ತ್ ಮೆಜರ್ಸ್, ಯಾವುದೇ ಹೆಲ್ತ್ ಸೇಪ್ಟೀ ಮೆಶರ್ಸ್ ಕೂಡಾ ತೆಗೊಂಡ್ತಿಲ್ಲ. ಇಲ್ಲಿಗೆ ಬರುವಂತಹ ಸ್ಟಾಪ್ಸ್ ಒಬ್ಬರೂ ಕೂಡ ಹೊರಗಡೆಯಿಂದ ಬರೋರು ಮಾಸ್ಕ್ ಹಾಕಲ್ಲ ಅಂದರೆ ಬಸ್ ಡ್ರೈವರ್ಸ್, ಟೀಚರ್ಸ್ ಕೆಲವು ಜನ ಹೊರಗಡೆಯಿಂದ ಬರ್ತಾರೆ ಅವರು ಕೂಡಾ ಮಾಸ್ಕ್ ಹಾಕಿ ಪಾಠ ಮಾಡಲ್ಲ”.ಎಂಬುದಾಗಿ ಪಿರ್ಯಾದಿದಾರರ ಸಂಸ್ಥೆಯ ವಿದ್ಯಾರ್ಥಿಯ ಹೆಸರಿನಲ್ಲಿ ಸುಳ್ಳು ದ್ವನಿ ಮುದ್ರಿಕೆಯನ್ನು ತಯಾರಿ ಮಾಡಿ ಸುಳ್ಳು ವಿಚಾರವನ್ನು ಇನ್ಸಟಾಗ್ರಾಮ್, ವಾಟ್ಸ್ ಅಪ್, ಪೇಸ್ ಬುಕ್ ಇನ್ನಿತರ ಸಾಮಾಜಿಕ ಜಾಲಾತಾಣದಲ್ಲಿ ಹರಿಯ ಬಿಟ್ಟು ಆರೋಪಿಯು ಪಿರ್ಯಾದಿದಾರರ ಸಂಸ್ಥೆಯ ಒಳ್ಳೆಯ ಹೆಸರಿಗೆ ಧಕ್ಕೆ ತರುವಂತಹ ಕೃತ್ಯವನ್ನು ಎಸಗಿರುತ್ತಾನೆ ಎಂಬಿತ್ಯಾದಿ
2) ಪಿರ್ಯಾದಿ H M Abdul Khadar Haji ರವರು ಹಂಡೇಲು ಮೊಹಿದ್ದೀನ್ ಜುಮ್ಮಾ ಮಸೀದಿಯ ಅದ್ಯಕ್ಷರಾಗಿದ್ದು ಸದ್ರಿ ಜುಮ್ಮಾ ಮಸೀದಿ ಜಮಾತಿಗೆ ಒಳಪಟ್ಟ ಪುತ್ತಿಗೆ ಗ್ರಾಮದ ಹಂಡೇಲು ವರಂಕಿಲ ಮನೆಯ ನಿವಾಸಿ ಅಬ್ದುಲ್ ಲತೀಫ್ ರವರ ಮಗಳು ಆಯಿಶಾಳ ಮದುವೆ ಗೋಸ್ಕರ ಅವರ ತಾಯಿ ಅವರ ಬಡತನದ ಕಷ್ಟವನ್ನು ಮುಮಾಸ್ ಚ್ಯಾರಿಟೀ ಯವರ ಬಳಿ ಹೇಳಿಕೊಂಡಾಗ, ಮುಮಾಸ್ ಚ್ಯಾರಿಟೇಬಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರೋಪಿ ಮೊಹಮ್ಮದ್ ಇಕ್ಬಾಲ್ ತಮೀಮ್ ಎಂಬವರು ಜಮಾತ್ ಅಧ್ಯಕ್ಷರ ದೃಢಪತ್ರವನ್ನು ತರುವಂತೆ ತಿಳಿಸಿದ್ದು, ಅದರಂತೆ ಆಯುಶಾ ಜಮಾತ್ ಅದ್ಯಕ್ಷರಿಂದ ದೃಡೀಕರಣ ಪತ್ರವನ್ನು ಪಡೆದುಕೊಂಡು ಮುಮಾಸ್ ಚ್ಯಾರಿಟೇಬಲ್ ಟ್ರಸ್ಟ್‌ಗೆ ನೀಡಿದ್ದು, ಆರೋಪಿ ಮೊಹಮ್ಮದ್ ಇಕ್ಬಾಲ್ ಆಯಿಶಾಳ ಧ್ವನಿಮುದ್ರಿತ ವಿಜ್ಷಾಪನೆ ಯನ್ನು ವ್ಯಾಟ್ಸ್ ಪ್ ನಲ್ಲಿ ಬಿತ್ತರಿಸಿ, ಆಯುಶಾಳ ಕೆನರಾ ಬ್ಯಾಂಕ್ ಮೂಡಬಿದ್ರೆ ಶಾಖೆಯ ಖಾತೆ ಖಾತೆಗೆ ಹಣ ಹಾಕುವಂತೆ ಕೋರಿದ್ದು, ಅದರಂತೆ ರೂಪಾಯಿ 28,75,000/- (ಇಪ್ಪತ್ತೆಂಟು ಲಕ್ಷದ ಎಪ್ಪತ್ತೈದು ಸಾವಿರ) ಸಂಗ್ರಹಣೆಯಾಗಿದ್ದು, ನಂತರ ಆರೋಪಿಯು ಆಯಿಶಾ ಮತ್ತು ಅವರ ತಾಯಿಗೆ ಹಣ ನೀಡುವಂತೆ ಒತ್ತಡವನ್ನು ಹೇರಿ ಎರಡು ಖಾಲಿ ಚೆಕ್ ಗಳನ್ನು ಪಡೆದುಕೊಂಡಿದ್ದು ಸದರಿ ಚೆಕ್‌ಗಳನ್ನು ಸಹಿ ವ್ಯತ್ಯಾಸ ಇದ್ದುದರಿಂದ ಹಣ ಡ್ರಾ ಮಾಡಲು ಸಾಧ್ಯವಾಗದೇ ಇದ್ದಾಗ ಆರೋಪಿಯು ನಾಲ್ಕು ಜನ ಅಪರಿಚತರನ್ನು ಆಯುಶಾಳ ಮನೆಗೆ ಕರೆದುಕೊಂಡು ಬಂದು ಆಯಿಶಾ ಮತ್ತು ಅವರ ತಾಯಿಗೆ ಬೆದರಿಸಿ ಅವರ ವಿರುದ್ದ ಸುಳ್ಳು ಕೇಸನ್ನು ಮಾಡುವುದಾಗಿ ಬೆದರಿಕೆ ಹಾಕಿ ಒತ್ತಾಯಪೂರ್ವಕವಾಗಿ ಆಯಿಶಾರವರ ಕೆನರಾ ಬ್ಯಾಂಕ್ ಮೂಡಬಿದ್ರೆ ಶಾಖೆಯಿಂದ 8,75,000/- ಹಣವನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿ ಸಮಾಜ ಭಾಂದವರಿಗೆ ಮೋಸ , ವಂಚನೆ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ . ಎಂಬಿತ್ಯಾದಿ