ಅಭಿಪ್ರಾಯ / ಸಲಹೆಗಳು

Crime Reported in  Mangalore East PS

ಪಿರ್ಯಾದಿದಾರರಾದ ರಿಯಾನ್ ರುಸಾರಿಯೋ ಎಂಬವರ ಬಾಬ್ತು ಮಂಗಳೂರು ನಗರದ ಕದ್ರಿ ನಂತೂರು ರಸ್ತೆಯಲ್ಲಿರುವ ಜಿಮ್ಮಿಸ್ ಸುಪರ್ ಮಾರ್ಕೇಟ್ ಗೆ ದಿನಾಂಕ:18-05-2021 ರಂದು ಬೆಳಿಗ್ಗೆ 08.45 ಗಂಟೆಗೆ ಡಾ.ಶ್ರೀನಿವಾಸ ಕಕ್ಕಿಲಾಯ ಎಂಬವರು  ಮುಖಕ್ಕೆ ಮಾಸ್ಕ ಹಾಕದೇ ಸಾಮಾಗ್ರಿಗಳನ್ನು  ಖರೀದಿ ಮಾಡಲು ಬಂದಾಗ ಪಿರ್ಯಾದಿದಾರರು ಅವರಲ್ಲಿ ಮಾಸ್ಕ್ ಹಾಕುವಂತೆ ತಿಳಿಸಿದಾಗ ಡಾ.ಶ್ರೀನಿವಾಸ ಕಕ್ಕಿಲಾಯವರು ನಾನು ಮಾಸ್ಕ್ ಇಲ್ಲದೇ ರೋಗಿಗಳಿಗೆ ಚಿಕಿತ್ಸೆ ನೀಡಿರುತ್ತೇನೆ. ಎಂದು ಹೇಳಿ ಪಿರ್ಯಾದಿದಾರರು ಮಾಸ್ಕ್ ನ್ನು ಧರಿಸುವಂತೆ ಪದೇ ಪದೇ ತಿಳಿಸಿದರೂ ಮಾಸ್ಕ್ ಹಾಕದೇ ಸರ್ಕಾರ ಮೂರ್ಖ ನಿಯಮಗಳನ್ನು ಮಾಡಿರುತ್ತದೆ.ಎಂದು ಹೇಳಿ ಸರ್ಕಾರದ ಆದೇಶವನ್ನು  ಅವಹೇಳನ ಮಾಡಿರುತ್ತಾರೆ ,ಪ್ರಸ್ತುತ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುತ್ತಿರುವ ಬಗ್ಗೆ ಸರ್ಕಾರವು ಕಡ್ಡಾಯ ಮಾಸ್ಕ್ ಧರಿಸಲು ಆದೇಶ ಮಾಡಿದರೂ ಕೂಡ ಡಾ.ಶ್ರೀನಿವಾಸ ಕಕ್ಕಿಲಾಯರವರು ಮಾಸ್ಕ್ ಹಾಕದೇ ಜಿಮ್ಮಿ ಸುಪರ್ ಮಾರ್ಕೇಟ್ ಶಾಪ್ ಗೆ ಒಳಗೆ ಬಂದು  ಜಿಮ್ಮಿ ಸೂಪರ್ ಮಾರ್ಕೇಟ್ ನ ಇತರ ಗ್ರಾಹಕರನ್ನು ಮತ್ತು ಕೆಲಸಗಾರರನ್ನು ಅಪಾಯಕ್ಕೆ ಒಡ್ಡಿರುತ್ತಾರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Crime Reported in  Kankanady Town PS

ದಿನಾಂಕ: 19-05-2021 ರಂದು ಕಂಕನಾಡಿ ನಗರ ಪೋಲೀಸ್ ಠಾಣಾ ಪೋಲೀಸ್ ಉಪ ನಿರೀಕ್ಷಕ ಸುಂದರ ರಾಜ್ ರವರು ಠಾಣಾ ಸರಹದ್ದಿನ ರಾಷ್ಟೀಯ ಹೇದ್ದಾರಿ 66 ಪಡೀಲ್ ಜಂಕ್ಷನ್ ಎಂಬಲ್ಲಿ  ಮುಂಜಾನೆ 04.00 ಗಂಟೆಗೆ ಬ್ಯಾರಿಕೇಡ್ ಹಾಕಿ ಸಿಬ್ಬಂದಿಗಳೂಂದಿಗೆ ವಾಹನ ತಪಾಸಣೆ ಮಾಡುತ್ತಿರುವ ಸುಮಾರು ಸಮಯ 5.00 ಗಂಟೆಗೆ ಕಣ್ಣೂರು ಕಡೆಯಿಂದ ಸ್ಕೂಟರ್ ನಂಬ್ರ KA-19-HB-8408 ನೇದರಲ್ಲಿ ಇಬ್ಬರೂ ವ್ಯಕ್ತಿಗಳು ಕುಳಿತು ಅತೀ ವೇಗವಾಗಿ ಬರುತ್ತಿದ್ದು ನಿಲ್ಲಲು ಸೂಚಿಸಿದಾಗ, ನಿಲ್ಲದೇ ಪರಾರಿಯಾಗಲು ಪ್ರಯತ್ನಿಸಿದವರು ಸ್ಟೂಟರ್ ಸ್ಕೀಡ್ ಆಗಿ ರಸ್ತೆಗೆ ಬಿದ್ದಿದ್ದು ಸಹ ಸವಾರನಾಗಿದ್ದ ವ್ಯಕ್ತಿಯು ಬಿದ್ದಲ್ಲಿಂದ ಎದ್ದು ಓಡಿ ಹೋಗಿ ಪಡೀಲ್ ರೇಶನ್ ಅಂಗಡಿಯ ಎದರು ನಿಲ್ಲಿಸಿದ KA-19-HD-2104 ನೇ ಸುಜುಕಿ ಎಕ್ಸಸ್ ನಲ್ಲಿ ಪರಾರಿಯಾಗಿರುತ್ತಾನೆ ನಂತರ ಸ್ಕೀಡ್ ಆಗಿ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಎಬ್ಬಿಸಿ ವಿಚಾರಿಸಿದ್ದಲ್ಲಿ ತನ್ನ ಹೆಸರು ಸಾದತ್ ಅಲಿ @ ಅನ್ಸಾರ್ ಆಲಿ @ಆಲಿ @ ಶೌಕತ್ ಆಲಿ @ಸಾದಿಕ್ ಆಗಿದ್ದು ಪರಾರಿಯಾದ ವ್ಯಕ್ತಿಯು ಆಶ್ರಪ್ ಆಲಿ @ಆಲಿ ಆಗಿದ್ದು ತಾವುಗಳಿಬ್ಬರು ಈ ಮೊದಲೇ ವಿವಿದ ಠಾಣೆಗಳಲ್ಲಿ ಕಳ್ಳತನ ಮತ್ತು ಸುಲಿಗೆಯ ಪ್ರಕರಣದ ಆರೋಪಿಗಳಾಗಿದ್ದು ಈ ದಿನ ಕಂಕನಾಡಿ ಜಂಕ್ಷನ್ ನಲ್ಲಿ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ಮಲಗಿದ್ದ ಅಪರಚಿತ ವ್ಯಕ್ತಿಯ ಬಳಿಯಿಂದ ಮೊಬೈಲ್ ಹಾಗೂ ಪಡೀಲ್ ಬೈರಾಡಿ ಕೆರೆಯ ಬಳಿ ಕಾಮಾಗಾರಿ ನಡೆಯುತ್ತಿರುವ ಕಟ್ಟಡದಲ್ಲಿದ್ದ ಹಿಂದಿ ಭಾಷಿಕ ಕೆಲಸಗಾರರ ನಗದು ಹಣ ಮತ್ತು ಅಂದಾಜು ನಾಲ್ಕು ಮೊಬೈಲ್ ಗಳನ್ನು ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದಾಗಿದೆ, ಹಿಂದಿ ಭಾಷಿಕರಿಂದ ಮೊಬೈಲ್ ಮತ್ತು ನಗದನ್ನು ಕಳ್ಳತನ ಮಾಡಿ ಪರಾರಿಯಾದ ಆಶ್ರಪ್ ಆಲಿ @ಆಲಿ ಯು ತನ್ನ ವಶದಲ್ಲಿಟ್ಟುಕೊಂಡು ಪರಾರಿಯಾಗಿರುತ್ತಾನೆ. ಆರೋಪಿ ಸಾದತ್ ಅಲಿ ಮತ್ತು ಆಶ್ರಪ್ ಆಲಿ KA-19-HB-8408 ನೇ ಸ್ಕೂಟರ್ ನ್ನು ದಿನಾಂಕ 12-05-2021 ರಂದು ಕಂಕನಾಡಿ ಹಳೆಯ ರಸ್ತೆಯ ಅನ್ವೀತ್ ಅಪಾರ್ಟ್ ಮೆಂಟ್ ಬಳಿಯಿಂದ ಕಳ್ಳತನ ಮಾಡಿದ್ದದಾಗಿದ್ದು ಈ ಬಗ್ಗೆ ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿ ಸಾದತ್ ಆಲಿ ಯ ವಶದಲ್ಲಿದ್ದ ಮೊಬೈಲ್ ನ ವಾರಸುದಾರರ ಪತ್ತೇ ಬಾಕಿಯಿರುತ್ತದೆ. ಸಾದತ್ ಆಲಿ ಸ್ಕೂಟರ್ ನಲ್ಲಿ ಸ್ಕೀಡ್ ಆಗಿ ಬಿದ್ದ ಪರಿಣಾಮ ಕಾಲು ಮತ್ತು ಕೈ ಮೈಗೆ ತರಚಿದ ಮತ್ತು ರಕ್ತ ಗಾಯ ಹಾಗೂ ಗುದ್ದಿದ್ದ ಗಾಯವಾಗಿರುತ್ತದೆ ಎಂಬುದಾಗಿ ಸಾರಂಶ.

 Crime Reported in  Mulki PS

ದಿನಾಂಕ: 18-05-2021 ರಂದು ಪಿರ್ಯಾದಿ Shashikalaರವರ  ಗಂಡ ನಾಗೇಶ್ ಆಚಾರ್ಯರವರು ಸಿರಾಜ್ ಮತ್ತು ಅಶ್ರಫ್ ಎಂಬವರೊಂದಿಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಮಹಮ್ಮದ್ ಹನೀಫ್ ಎಂಬವರ ಮಾಲಿಕತ್ವದ ನಿರ್ಮಾಣ ಹಂತದ ಮನೆಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ ಸುಮಾರು 12-00 ಗಂಟೆ ಸಮಯಕ್ಕೆ ಹಲಗೆ ಕಟ್ಟಿಂಗ್ ಮಾಡುವ ಹ್ಯಾಂಡ್ ಮೆಷಿನ್ ನಾಗೇಶ್ ರವರ ಕಾಲಿಗೆ ತಾಗಿದ್ದುದ್ದಲ್ಲದೇ ಸಿರಾಜ್ ಎಂಬವರ ಮುಖಕ್ಕೆ ಕೂಡಾ ತಾಗಿದ್ದು ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು ದಿನಾಂಕ: 19-05-2021 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿರ್ಯಾದುದಾರರ ಗಂಡ ನಾಗೇಶ್ ರವರು ಬೆಳಿಗ್ಗೆ 3-30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ, ಈ ಘಟನೆಗೆ ಮಹಮ್ಮದ್ ಹನೀಫ್ ಎಂಬವರ ಮಾಲಿಕತ್ವದ ನಿರ್ಮಾಣ ಹಂತದ ಮನೆಯ ಸೆಂಟ್ರಿಂಗ್ ಕಂಟ್ರಾಕ್ಟ್ ವಹಿಸಿಕೊಂಡಿದ್ದ ಖಾಲಿದ್ ರವರು ಯಾವುದೇ ಮುಂಜಾಗ್ರತೆ ಕ್ರಮ ವಹಿಸದೇ ಇದ್ದು ಅಲ್ಲದೇ ಮಾನೆಯ ಮಾಲಿಕರೂ ಕೂಡ ಈ ಬಗ್ಗೆ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನ ವಹಿಸಿರುವುದರಿಂದ ಘಟನೆ ಸಂಭವಿಸಲು ಕಾರಣವಾಗಿರುತ್ತದೆ  ಎಂಬಿತ್ಯಾದಿ.

Crime Reported in  Panambur PS

ಫಿರ್ಯಾದಿ MOHAMMED ASIF ANSARI ರವರು ಸುಮಾರು 06 ತಿಂಗಳಿನಿಂದ  ಎಸ್.ಎಸ್.ಎಲ್ ಗಂಗಾ ಹೆಸರಿನ ಕಾರ್ಬೋ ಶಿಪ್ ನಲ್ಲಿ ಡೆಕ್ ಕೆಡೆಟ್  ಆಗಿ ಕೆಲಸ ಮಾಡಿಕೊಂಡಿದ್ದು ಸದ್ರಿ ಶಿಪ್ ನಲ್ಲಿ ದಿನಾಂಕ:15-05-2021 ರಂದು ಬೆಳಿಗ್ಗೆ 08.00ಗಂಟೆಗೆ ಮಂಗಳೂರು ಬಂದರಿನಿಂದ ಗುಜರಾತಿಗೆ ಹೊರಟು 08.48 ಗಂಟೆಗೆ ಪಣಂಬೂರು ಪೋರ್ಟ್ ಬಾರ್ಡರ್ ಕ್ರಾಸ್ ಆಗಿ ಗುಜರಾತ್ ನ ಕಡೆಗೆ ಸುಮಾರು 16.08 ನಾಟಿಕಲ್ ಮೈಲ್ ದೂರ ತಲುಪಿದಾಗ ಸಮಯ ಸುಮಾರು 10.30 ಗಂಟೆಗೆ ಸಮುದ್ರದಲ್ಲಿನ ಭಾರಿ ಚಂಡಮಾರುತದ ಪರಿಣಾಮ ಶಿಪ್ ಮುಂದಕ್ಕೆ ಹೋಗಲು ಅನಾನುಕೂಲವಾಗಿರುವುದರಿಂದ ಹಡಗಿನ ಶಿಪ್ ನ ಕ್ಯಾಪ್ಟನ್ ರವರು ಲಂಗರು ಹಾಕಲು ತಿಳಿಸಿದಂತೆ ಫಿರ್ಯಾದಿಧಾರರು , ಶಿಪ್ ನ  ಚೀಪ್ ಆಫಿಸರ್ ಬೆನಿಲ್ ರಾಮಚಂದ್ರರವರು, ತಮನ್ ದೀಪ್ ಸಿಂಗ್ , ಮತ್ತು ಅಮಲ್ ಜೆವಿಯರ್ ಕೆರಿ ಬಲ್ ರವರೊಂದಿಗೆ ಸೇರಿ ಕೊಂಡು ಶಿಪ್ ನ ಮುಂಬಾಗದ ಡೆಕ್ ನಲ್ಲಿರುವ  ಲಂಗರನ್ನು ಕೆಳಗೆ ಸಮುದ್ರಕ್ಕೆ ಇಳಿಸಲು ಪ್ರಯತ್ನಿಸುತ್ತಿರುವಾಗ ಸಮುದ್ರದ ಭಾರೀ ಅಲೆಗಳು ಒಮ್ಮೆಗೆ ಅವರು ಕೆಲಸ ಮಾಡುವಲ್ಲಿಗೆ ಅಪ್ಪಳಿಸಿದುದರಿಂದ ಅಮಲ್ ಜೆವಿಯರ್ ಕೆರಿಬಲ್  ರವರು ಸಮುದ್ರಕ್ಕೆ ಬಿದ್ದು ಕಾಣೆಯಾಗಿರುತ್ತಾರೆ ಮತ್ತು ಉಳಿದ 3 ಜನರು  ಡೆಕ್ ನ  ಒಳಗಡೆ ಬಿದ್ದ ಪರಿಣಾಮ ಗಾಯಗೊಂಡಿರುತ್ತಾರೆ, ಮತ್ತು ಶಿಪ್ ಹಿಂಬಾಗದ ಡೆಕ್ ನಲ್ಲಿದ್ದ ಇಬ್ಬರು ಕೂಡಾ ಡೆಕ್ ನಲ್ಲಿ ಬಿದ್ದು ಗಾಯಗೊಂಡರು, ಈ ಬಗ್ಗೆ ಶಿಪ್ ನ ಕ್ಯಾಪ್ಟನ್ ರವರು ಶಿಪ್ ಗೆ ಸಂಬಂದಿಸಿದವರಿಗೆ ಈ ಮಾಹಿತಿ ನೀಡಿದರು, ನಂತರ ಅಲ್ಲಿಯೇ ಲಂಗರು ಹಾಕಿ ಮರುದಿನ  ದಿನಾಂಕ 16-05-2021 ರಂದು ಅಲೆಗಳ ಅಬ್ಬರ ಕಮ್ಮಿಯಾದ ಬಳಿಕ ವಾಪಾಸು ಪಣಂಬೂರು ಬಂದರಿನ ಕಡೆಗೆ ಹೊರಟು ಮದ್ಯಾಹ್ನ ಸುಮಾರು 02.30 ಗಂಟೆಗೆ ಪಣಂಬೂರು ಬಂದರಿಗೆ ತಲುಪಿ ಅಮೋಘ ಲಾಜಿಸ್ಟಿಕ್ ಏಜೆನ್ಸಿ ಯ ಸಿಬ್ಬಂದಿಯವರು ಗಾಯಾಳುಗಳಾದ ಎಲ್ಲರನ್ನೂ ಅಂಬುಲೆನ್ಸ್ ನಲ್ಲಿ ಮಂಗಳೂರು  ಅಥೇನ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುತ್ತಾರೆ. ಸದ್ರಿ ಸಮುದ್ರದಲ್ಲಿ ಬಿದ್ದು ಕಾಣೆಯಾದವನ ಚಹರೆ ಈ ರೀತಿ ಇದೆ. ಪ್ರಾಯ – 60 ವರ್ಷ, ಎತ್ತರ ಸುಮಾರು 5 ಅಡಿ 4 ಇಂಚು, ಸಪೂರ ಶರೀರ, ಕಪ್ಪು ಮೈಬಣ್ಣ ,ಹೊಂದಿದ್ದು, ಕಿತ್ತಳೆ  ಬಣ್ಣದ ಬಾಯಿಲರ್ ಸೂಟ್ ಧರಿಸಿರುತ್ತಾರೆ. ಈತನನ್ನು ಪತ್ತೆಹಚ್ಚಿ ಕೊಡಬೇಕಾಗಿ  ಎಂಬಿತ್ಯಾದಿಯಾಗಿದೆ

ಇತ್ತೀಚಿನ ನವೀಕರಣ​ : 19-05-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080