ಅಭಿಪ್ರಾಯ / ಸಲಹೆಗಳು

Crime Reported in Mangalore Women PS

ದಿನಾಂಕ: 18-06-2021 ರಂದು ಫಿರ್ಯಾಧಿ ಅಪ್ರಾಪ್ತ ಬಾಲಕಿಯನ್ನು ಪೊಲೀಸ್ ಉಪ ನಿರೀಕ್ಷಕರಾದ ರೋಸಮ್ಮ ಪಿಪಿ ರವರು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ನೊಂದ ಅಪ್ರಾಪ್ತ ಬಾಲಕಿ ದಿನಾಂಕ: 11-06-2021ರಂದು ಅಸೌಖ್ಯದ ನಿಮಿತ್ತ ಸರಕರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು ದಿನಾಂಕ: 12-06-2021 ರಂದು ವೆನ್ಲಾಕ್ ಆಸ್ಪತ್ರೆಯಿಂದ ಜ್ಯೋತಿ ಕೆಎಂ ಸಿಗೆ 17-00 ಗಂಟೆಗೆ ಹೋಗುವ ಸಮಯ ರೈಲ್ವೇ ಸ್ಟೇಷನ್ ಬಳಿ ಇದ್ದ ಆರೋಪಿ ಅಜ್ಮಲ್ ಎಂಬವರ ರಿಕ್ಷಾದಲ್ಲಿ ತೆರಳುವ ಸಮಯ ಆಪ್ರಾಪ್ತ ನೊಂದ ಬಾಲಕಿಯು ತನ್ನ ಫೊನ್ ನಂಬರನ್ನು ನೀಡಿದ್ದು ದಿನಾಂಕ: 13-06-2021 ರಂದು ಆರೋಪಿತನು ಬೆಳಿಗ್ಗೆ 11-00 ಗಮಟೆ ಸಮಯಕ್ಕೆ ಹಣ್ಣು ಹಂಪಲು ನೀಡಿ ದಿನಾಂಕ: 16-06-2021 ರಂದು ಅಪ್ರಾಪ್ತ ನೊಂದ ಬಾಲಕಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಸಮಯ ಆರೋಪಿತನು ಆತನ ಪರಿಚಯದ ಅನ್ಸಾರಿ ರಸ್ತೆಯ ಬಬ್ಲು ಎಂಬವರ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ದಿನಾಂಕ: 17-06-2021 ರಂದು ಮದೀನಾ ಮಸೀದಿ ಎದುರು ಹನೀಫ್ ಎಂಬವರ ರೂಂ ಗೆ ಕರೆದುಕೊಂಡು ಹೋಗಿರುತ್ತಾನೆ. ಆರೋಪಿತನು ರಾತ್ರಿ ಸುಮಾರು 12-00 ಗಂಟೆಗೆ ಅಪ್ರಾಪ್ತ ನೊಂದ ಬಾಲಕಿಯ ಎದೆಗೆ ಕೈ ಹಾಕಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿರುತ್ತಾನೆ ಹಾಗೂ ಈ ಬಗ್ಗೆ ಯಾರಲ್ಲಿಯಾದರೂ ಹೇಳಿದರೆ ಕೊಲ್ಲದೇ ಬಿಡುವುದಿಲ್ಲ ಎಂಬುವುದಾಗಿ ಬೆದರಿಕೆ ಹಾಕಿರುತ್ತಾನೆ ಎಂಬಿತ್ಯಾದಿ

Crime Reported in Moodabidre PS

ಪಿರ್ಯಾದಿರವರು  1ನೇ ಆರೋಪಿ ಸೂರಜ್  ಜೂತೆ  ದಿನಾಂಕ: 02-05-2013 ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ವಿವಾಹದ ಸಮಯದಲ್ಲಿ  18 ಪವನು ಚಿನ್ನವನ್ನು ವರದಕ್ಷಿಣೆಯಾಗಿ ನೀಡಿ ಮದುವೆಯ ಸಂಪೂರ್ಣ ಖರ್ಚು 8 ಲಕ್ಷ ರೂಪಾಯಿ ಹಣವನ್ನು ಪಿರ್ಯಾದಿದಾರರ ಕಡೆಯವರೇ ಭರಿಸಿದ್ದು, ಮದುವೆಯಾದ ಬಳಿಕದ ದಿನಗಳಲ್ಲಿ ಪಿರ್ಯಾದಿದಾರರು ಮತ್ತು ಆರೋಪಿತನು ವಾಸವಾಗಿದ್ದ ಕಪೀಲಾ ಮನೆಯಲ್ಲಿ ಆರೋಪಿತ ಮತ್ತು ಆರೋಪಿತನ ತಾಯಿ ಆರೋಪಿತನ ತಮ್ಮ ಹಾಗೂ ಆರೋಪಿತನ ತಮ್ಮನ ಪತ್ನಿ ಆರೋಪಿತನ ತಂಗಿ ಸೇರಿಕೊಂಡು ಪಿರ್ಯಾದಿದಾರರಲ್ಲಿ ವರದಕ್ಷಿಣೆ ರೂಪದಲ್ಲಿ  ಮದುವೆ ಸಮಯ ನೀಡಿದ ಬಂಗಾರ ಕಡಿಮೆಯಾಯಿತು ಮತ್ತು ಹೆಚ್ಚಿನ ವರದಕ್ಷಿಣೆ ರೂಪದಲ್ಲಿ ಒಂದು ಸೈಟ್ ನೀಡಬೇಕೆಂದು ಒತ್ತಾಯಿಸಿದಾಗ ಪಿರ್ಯಾದಿದಾರರು ನಿರಾಕರಿಸಿದ್ದಕ್ಕೆ ಆರೋಪಿತನು ಮತ್ತು ಆರೋಪಿತನ ಮನೆಯವರು   ಪಿರ್ಯಾದಿದಾರಿಗೆ ದೂಡಿಹಾಕಿ ಕೈಯಿಂದ ಹಲ್ಲೆ ನಡೆಸಿರುವುದಾಗಿದೆ, 1ನೇ ಆರೋಪಿತನಲ್ಲಿಪಿರ್ಯಾದಿದಾರರು ಬೇರೊಂದು ಆಕ್ರಮ ಸಂಬಂಧದ ಬಗ್ಗೆ ಪತ್ತೆ ಮಾಡಿ ಪ್ರಶ್ನಿಸಿರುವುದಕ್ಕೆ ಆರೋಪಿ ಮತ್ತು ಆತನ ಕಡೆಯವರು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದು 2021ರ ಏಪ್ರಿಲ್  ತಿಂಗಳಿನಲ್ಲಿ  ಪಿರ್ಯಾದಿದಾರರು ಮತ್ತು ಮಗುವನ್ನು ನಿರ್ಲಕ್ಷಿಸಿ ಬಿಟ್ಟು ಹೋಗಿ ಈ ವರೆಗೂ ವಾಪಸ್ಸ್ ಬಂದಿರುವುದಿಲ್ಲ ಎಂಬಿತ್ಯಾದಿ.

Crime Reported in Konaje PS

ಕೊಣಾಜೆ ಠಾಣಾ ಪಿಎಸ್ಐ Vasanth C H ರವರು ದಿನಾಂಕ 19.06.2021 ರಂದು ರೌಂಡ್ಸ್ ನಲ್ಲಿ ಇರುತ್ತಾ 09:55 ಗಂಟೆಗೆ ಮಂಗಳೂರು ತಾಲೂಕು ಬೆಳ್ಮ  ಗ್ರಾಮದ ದೇರಳಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ  ಡಿಎ ಬಜಾರ್ ಎಂಬ ಅಂಗಡಿಯೊಂದನ್ನು ತೆರೆದಿಟ್ಟು ವ್ಯಾಪಾರ ಮಾಡುತ್ತಿರುವುದು  ಕಂಡು ಬಂದಿದ್ದು , ಸದ್ರಿಯವರು ಪ್ರಸ್ತುತ ಕೋವಿಡ್-19 ರೋಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ, ಕೋವಿಡ್-19 ರೋಗ ಹರಡುವಿಕೆಯ ಬಗ್ಗೆ ತಿಳಿದು, ಮಾನ್ಯ ಜಿಲ್ಲಾಧಿಕಾರಿಯವರ ಆದೇಶವನ್ನು ಉಲ್ಲಂಘಿಸಿ  ನಿರ್ಲಕ್ಷ್ಯತನ ವಹಿಸಿರುವುದರಿಂದ ಅಂಗಡಿಯವರ ಹೆಸರು ವಿಳಾಸ ಕೇಳಲಾಗಿ ನಾಝೀಲ್,  ಪ್ರಾಯ:42 ವರ್ಷ ತಂದೆ: ಹಸನಬ್ಬ, ದೇರಳಕಟ್ಟೆ ಮಸೀದಿ ಹತ್ತಿರ ಮನೆ, ಬೆಳ್ಮ ಗ್ರಾಮ, ಮಂಗಳೂರು ತಾಲೂಕು  ಎಂಬುದಾಗಿ ಹೆಸರು ವಿಳಾಸ ತಿಳಿಸಿದ್ದು ಸದ್ರಿಯವರ  ವಿರುದ್ದ ಕಲಂ 269 ಐಪಿಸಿ ನಂತೆ ಕ್ರಮ ಕೈಗೊಳ್ಳಲಾಗಿರುತ್ತದೆ ಎಂಬಿತ್ಯಾದಿ.

Crime Reported in Mulki PS

ದಿನಾಂಕ: 19-06-2021 ರಂದು ಪಿರ್ಯಾದಿ Kusumadhara K –PI ರವರು ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಯವರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಆದೇಶದಂತೆ ಸದ್ರಿ ಆದೇಶವನ್ನು ಪಾಲನೆ ಮಾಡುವ ಬಗ್ಗೆ ಇಲಾಖಾ ವಾಹನ ನಂಬ್ರ:ಕೆ.ಎ.19.ಜಿ.0513 ನೇ ಯದರಲ್ಲಿ ಸಿಬ್ಬಂದಿಗಳೋಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 08-00 ಗಂಟೆಗೆ ಸಮಯ ಮಂಗಳೂರು ತಾಲೂಕು ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಬಸ್ಸ್  ನಿಲ್ದಾಣದ ಬಳಿ ಟೊಕಿಯೋ  ಬಜಾರ್ ಎಂಬ ಬಟ್ಟೆ ಅಂಗಡಿಯು ತೆರೆದು ಅಲ್ಲಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದ್ದು ಸದರಿಯವರು ಸರಕಾರದ ನಿಯಮದಂತೆ ಈ ಅಂಗಡಿಯನ್ನು ತೆರೆಯಬಾರದೆಂದು ಸರ್ಕಾರದ ಕಟ್ಟು ನಿಟ್ಟಿನ ಆದೇಶವಿದ್ದರೂ ಅಂಗಡಿಯನ್ನು ತೆರೆದು ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದು ಗೊತ್ತಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ಬಟ್ಟೆ ಅಂಗಡಿಯನ್ನು ತೆರೆದಿರುವುದು ಕಂಡು ಬಂದಿದ್ದು, ತಾನು ಕೊರೊನಾ ವೈರಸ್ ಹರಡದಂತೆ ಯಾವುದೇ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದೇ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಮಾಡಿರುವ ಬಗ್ಗೆ ಪ್ರಕರಣ  ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 19-06-2021 06:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080