ಅಭಿಪ್ರಾಯ / ಸಲಹೆಗಳು

 Crime Reported in  Mangalore South PS

ದಿನಾಂಕ-03-07-2021 ರಂದು ಫಿರ್ಯಾದಿ ROOPESH A ರವರು ತನ್ನ ಬಾಬ್ತು KA-19 EB-8881 ನೇ ಬಜಾಜ್ ಪಲ್ಸರ್ ಮೊಟಾರ್ ಸೈಕಲ್ ನ್ನು ರಾತ್ರಿ 09-30 ಗಂಟೆಗೆ ಮಂಗಳೂರು ನಗರದ ಕಾಪ್ರಿಗುಡ್ಡ ಎಂಬಲ್ಲಿ ತಾವು ವಾಸವಾಗಿರುವ ಎಲ್ ಕೆ ಅಪಾರ್ಟ್ ಮೆಂಟ್ ನ ಕಂಪೌಂಡ್ ಒಳಗೆ ಪಾರ್ಕಿಂಗ ಸ್ಥಳದಲ್ಲಿ ಹ್ಯಾಂಡಲಾಕ ಮಾಡಿ ಮೋಟಾರು ಸೈಕಲನ್ನು ನಿಲ್ಲಿಸಿ ಮನೆಗೆ  ಹೋಗಿದ್ದು, ವಾಪಸ್ಸು ಮರುದಿನ ಬೆಳಿಗ್ಗೆ 08-00 ಗಂಟೆಗೆ ಬಂದು ನೋಡಿದಾಗ ಪಾರ್ಕ್ ಮಾಡಿದ ಸ್ಥಳದಲ್ಲಿ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಕಂಡು ಬರದೇ ಇದ್ದು,  ಅಕ್ಕ ಪಕ್ಕದ ಸ್ಥಳಗಳಲ್ಲಿ ಹುಡುಕಾಡಿದಲ್ಲಿ ಮೋಟಾರು ಸೈಕಲ್ ಕಂಡುಬರಲಿಲ್ಲ, ಈತನಕ ಮಂಗಳೂರು ನಗರದ ಎಲ್ಲಾ ಕಡೆ ಹುಡುಕಾಡಿದಲ್ಲಿ ಮೋಟಾರ್ ಸೈಕಲ್ ಪತ್ತೆಯಾಗಿರುವುದಿಲ್ಲ,  ಸದ್ರಿ ಬಜಾಜ್ ಪಲ್ಸರ್ ಮೋಟಾರು ಸೈಕಲನ್ನು ದಿನಾಂಕ:03-07-2021 ರಂದು ರಾತ್ರಿ 09-30  ಗಂಟೆಯಿಂದ ದಿನಾಂಕ 04-07-2021 ರ ಬೆಳಿಗ್ಗೆ 08-00 ಗಂಟೆಯ  ಮಧ್ಯೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಬಜಾಜ್ ಪಲ್ಸರ್ ಮೋಟಾರು ಸೈಕಲ್ ನ ಅಂದಾಜು ಮೌಲ್ಯ  15,000/- ರೂ ಆಗಬಹುದಾಗಿ, ಕಳವು ಆದ ಸದ್ರಿ ಪಲ್ಸರ್ ಮೋಟಾರು ಸೈಕಲ್ ಪತ್ತೆ ಮಾಡಿಕೊಡಬೇಕಾಗಿ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Crime Reported in  Moodabidre PS    

ಪಿರ್ಯಾದಿ MANJAPPA ರವರ  ಸೊಸೆಯ 17 ವರ್ಷದ ಮಗಳು ಮೂಡಬಿದರೆ ಆಲಂಕಾರು ಟೈಕ್ಸ್ ಟೈಲ್ಸ್ ನಲ್ಲಿ ಕೆಲಸಕ್ಕಿದ್ದು, ಆಲಂಕಾರು ಟೈಕ್ಸ್ ಟೈಲ್ಸ್ ಮಾಲಕರ ಬಾಬ್ತು ರೂಮ್ ನಲ್ಲಿ ಮಹಿಳಾ ಕೆಲಸಗಾರರೊಂದಿಗೆ ಉಳಕೊಳ್ಳುತ್ತಿದ್ದವಳು. ಮಾರ್ಚ್  ತಿಂಗಳಲ್ಲಿ ಲಾಕ್ ಡೌನ್ ಇದ್ದುದರಿಂದ ಸಕಲೇಶಪುರಕ್ಕೆ ತಾಯಿ ಮನೆಗೆ ಹೋಗಿದ್ದು, ದಿನಾಂಕ: 07-07-2021 ರಂದು ಸಕಲೇಶಪುರದಿಂದ ಆಕೆಯ ಜೊತೆಯಲ್ಲಿ ಕೆಲಸ ಮಾಡುವ ಪವಿತ್ರಾ ಎಂಬಾಕೆಯೊಂದಿಗೆ ಮದ್ಯಾಹ್ನ 3-00:00 ಗಂಟೆಗೆ ಪಿರ್ಯಾದಿದಾರರ ಮನೆಗೆ ಬಂದವರು ದಿನಾಂಕ: 09-07-2021 ರಂದು 09:0 ಗಂಟೆಗೆ ಆಲಂಕಾರು ಟೈಕ್ಸ್ ಟೈಲ್ಸ್ ಗೆ ಕೆಲಸಕ್ಕೆಂದು ಹೋದವವಳು ಕೆಲಸಕ್ಕೂ ಹೋಗದೇ, ಪಿರ್ಯಾದಿದಾರರ ಮನೆಗೂ ಬಾರದೇ  ಕಾಣೆಯಾಗಿರುತ್ತಾರೆ ಎಂಬಿತ್ಯಾದಿ

Crime Reported in  Bajpe PS

ದಿನಾಂಕ 18/07/2021 ರಂದು ಸಂಜೆ  18.00 ಗಂಟೆಯ ಸಮಯ   ಪಿರ್ಯಾದಿ KAMALA PSI ರವರು  ಹಾಗೂ ಸಿಬ್ಬಂದಿಯವರು ಇಲಾಖಾ ವಾಹನದಲ್ಲಿ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಜಂಕ್ಷನ್ ನಲ್ಲಿ ವಾಹನ  ತಪಾಸಣೆ ನಡೆಸುತ್ತಿರುವ ಸಮಯ ಮೂಡುಬಿದ್ರೆ ಕೈಕಂಬ ರಸ್ತೆ ಕಡೆಯಿಂದ ಒಂದು ಪಿಕಪ್ ವಾಹನ ಬರುವುದನ್ನು ತಡೆದು ನಿಲ್ಲಿಸಿ ಪರಿಶೀಲಿಸಲಾಗಿ ಸದ್ರಿ ವಾಹನ ಕೆಎ 11 4627 ನೇ ಪಿಕಪ್ ವಾಹನದಲ್ಲಿ ಎರಡು ಕ್ರಾಸ್ ಜರ್ಸಿ ದನಗಳನ್ನು ಬೆಳುವಾಯಿ ಕಡೆಯಿಂದ ಅಡ್ಯಾರ್ ಕಡೆಗೆ ಯಾವುದೆ ಪರವಾನಿಗೆ ಇಲ್ಲದೆ ಹಬೀಬ್ ಇಬ್ರಾಹಿಂ ಎಂಬುವವರು  ಸಾಗಾಟ ಮಾಡುತ್ತಿದ್ದುದ್ದು ಸದ್ರಿ ದನ ಸಮೇತ  ಪಿಕಪ್ ವಾಹನವನ್ನು ಸ್ವಾಧಿನ ಪಡಿಸಿಕೊಂಡು ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

Crime Reported in  Mulki PS

ದಿನಾಂಕ 18-07-2021 ರಂದು ಬೆಳಿಗ್ಗೆ ಪ್ರಕರಣದ ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ ರವರು ಠಾಣಾ ಸಿಬ್ಬಂದಿಗಳಾದ ಪ್ರಮೋದ್ ದೇವಾಡಿಗ, ಮಹೇಶ್, ಬಸವರಾಜ ನೇ ಯವರೊಂದಿಗೆ ಇಲಾಖಾ ವಾಹನ ಕೆಎ-19-ಜಿ-0513 ನೇ ದರಲ್ಲಿ ಹಳೆಯಂಗಡಿಯಲ್ಲಿ ಗಸ್ತಿನಲ್ಲಿದ್ದಾಗ ಬೆಳಿಗ್ಗೆ 09:00 ಗಂಟೆಗೆ ಕೆಮ್ರಾಲ್ ನಾಗಲಾಡಿ ಕಡೆಯಿಂದ ಯಾರೋ ದನವನ್ನು ಪಿಕಪ್ ವಾಹನದಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಪಕ್ಷಿಕೆರೆ ಜಂಕ್ಷನ್ ಗೆ ಹೋಗಿ ಪಿಕಪ್ ವಾಹನ ಬರುವಿಕೆಯನ್ನು ಕಾಯುತ್ತಾ ನಿಂತುಕೊಂಡಿರುವಾಗ 09:15 ಗಂಟೆಗೆ ಪಿಕಪ್ ವಾಹನವೊಂದು ಬಂದಿದ್ದು, ಸದರಿ ಪಿಕಪ್ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಪಿಕಪ್ ವಾಹನ ಚಾಲಕನು ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು ಹಾಗೂ ಸಿಬ್ಬಂದಿಗಳನ್ನು ಕಂಡು ಪಿಕಪ್ ವಾಹನವನ್ನು ನಿಲ್ಲಿಸಿದ್ದು, ಪಿಕಪ್ ವಾಹನದಲ್ಲಿದ್ದ ಆರೋಪಿಗಳಾದ ಪ್ರಕಾಶ್ ಡಿಲಿಮಾ ಹಾಗೂ ಬಿ. ಉಮ್ಮರಬ್ಬ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳು ದನವನ್ನು ಕಡಿದು ಮಾಂಸ ಮಾಡುವ ಉದ್ದೇಶದಿಂದ ನಾಗಲಾಡಿ ಎಂಬಲ್ಲಿಂದ ಒಂದು ದನವನ್ನು ಕಳವು ಮಾಡಿ ಯಾವುದೇ ಪರವಾನಿಗೆಯನ್ನು ಪಡೆಯದೇ ಪಿಕಪ್ ವಾಹನ KA-20-C-8354 ರಲ್ಲಿ ತುಂಬಿಸಿ ತಂದಿರುವುದಾಗಿ ತಿಳಿಸಿದ್ದು, ಒಂದು ದನ ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಪಿಕಪ್ ವಾಹನ KA-20-C-8354 ನ್ನು ಮುಂದಿನ ಕ್ರಮದ ಬಗ್ಗೆ ಮುಖೇನಾ ಸ್ವಾಧೀನಪಡಿಸಿಕೊಂಡಿರುವುದಾಗಿ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 19-07-2021 07:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080