ಅಭಿಪ್ರಾಯ / ಸಲಹೆಗಳು

Crime Reported in  Mangalore North PS

ದಿನಾಂಕ 20-05-2021 ರಂದು ಉತ್ತರ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕ ವಿಜಯರಾಜ ರವರು  ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ಬೆಳಗ್ಗಿನ ಜಾವ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿದ್ದು, ಮಂಗಳೂರು ನಗರದ ರಾವ್ ಆಂಡ್ ರಾವ್ ಸರ್ಕಲ್ ಬಳಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ  ಬೆಳಿಗ್ಗೆ 08-15 ಗಂಟೆಗೆ ಮಂಗಳೂರು ನಗರದ ರಾವ್ ಆಂಡ್ ರಾವ್ ಸರ್ಕಲ್ ಬಳಿಯ ಆರಿಯನ್ ಟವರ್ಸ್ ನ ಒಂದನೆ ಮಹಡಿಯಲ್ಲಿರುವ ಸಿಟಿ ಮೋಡ್ ಎಂಬ ಹೆಸರಿನ ರೆಡಿಮೇಡ್ ಬಟ್ಟೆ ಅಂಗಡಿಯ ಮಾಲಕರು ಕೋವಿಡ್ -19  ಕೊರೋನಾ ಸಾಂಕ್ರಾಮಿಕ ಖಾಯಿಲೆ ಹರಡಿ ಮಾನವ ಜೀವಕ್ಕೆ ಹಾನಿಯಾಗುತ್ತದೆ ಎಂದು ತಿಳಿದಿದ್ದರೂ ಕೂಡಾ, ಸರಕಾರ ಅಗತ್ಯ ವಸ್ತುಗಳ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಾಣಿಜ್ಯ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿರುವುದನ್ನು ತಿಳಿದಿದ್ದರೂ ಕೂಡಾ ಸರ್ಕಾರ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿ ಬಟ್ಟೆಗಳನ್ನು ಮಾರಾಟ ಮಾಡುವ ಅಂಗಡಿಯನ್ನು ತೆರೆದಿಟ್ಟು ನಿರ್ಲಕ್ಷತನ ತೋರಿರುವುದು ಹಾಗೂ ಸರಕಾರ ಹೊರಡಿಸಿದ ನಿಯಮಾವಳಿಗಳನ್ನು ಉಲ್ಲಂಘನೆ  ಮಾಡಿರುವುದರಿಂದ ಅಂಗಡಿಯ ಒಳಗಡೆ ಇದ್ದ ವ್ಯಕ್ತಿಯ ಹೆಸರು ವಿಳಾಸ ಕೇಳಿ ತಿಳಿಯಲಾಗಿ ಎಂ. ನೌಫಾಝ್ ಉಳ್ಳಾಲ ಪ್ರಾಯ 30 ವರ್ಷ, ತಂದೆ ಅಹಮ್ಮದ್ ಭಾವ, ವಾಸ ನಂಬ್ರ 21/5, ಮಿಲ್ಲತ್ ನಗರ, ಉಳ್ಳಾಲ ದರ್ಗಾ ಎದುರು, ಉಳ್ಳಾಲ, ಮಂಗಳೂರು ತಾಲೂಕು ಎಂದು ತಿಳಿಸಿರುತ್ತಾರೆ. ಈತನ ವಿರುದ್ದ ಕಲಂ 269 ಐಪಿಸಿ ಮತ್ತು ಕಲಂ. 4, 5 KARNATAKA EPIDEMIC DISEASE ACT- 2020 ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದು  ಎಂಬಿತ್ಯಾದಿಯಾಗಿರುತ್ತದೆ 

Crime Reported in  Traffic South PS

ದಿನಾಂಕ 20-05-2021 ರಂದು ಪಿರ್ಯಾದಿದಾರರಾದ ಮೋಹನನ್ ಪಿ ರವರ ಹೆಂಡತಿಯ ತಂಗಿ ವಸಂತಿರವರು ಅವರ ಮನೆಯಾದ ಕುಂಪಲದಿಂದ ಜೆಪ್ಪಿನಮೊಗರುವಿಗೆ ಅವರ ತಾಯಿಯನ್ನು ನೋಡಲು ಅವರ ಮಗಳು ಶ್ರೀಜಾಳ ಜೊತೆ ಸ್ಕೂಟರ್ ನಂಬ್ರ KA-19-HF-4252 ನೇದರಲ್ಲಿ ಸಹ ಸವಾರರಾಗಿ ಕುಳಿತುಕೊಂಡು ರಾ.ಹೆ.66 ರ ಏಕಮುಖ ಡಾಮಾರು ರಸ್ತೆಯಲ್ಲಿ ಸ್ಕೂಟರ್ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 09.45 ಗಂಟೆಗೆ ತೊಕ್ಕೊಟ್ಟು ಪ್ಲೈ ಓವರ್ ಮೇಲೆ ತಲುಪಿದಾಗ ಅವರ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಕಾರು ನಂಬ್ರ KA-41-P-3531 ನೇದನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮಧ್ಯೆದ ಡಿವೈಡರ್ ದಾಟಿ ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ  ಶ್ರೀಜಾಳು ಸವಾರಿ ಮಾಡುತ್ತಿದ್ದ  ಸ್ಕೂಟರಿಗೆ ಕಾರನ್ನು ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರಳಾದ ಶ್ರೀಜಾಳು ಪ್ಲೈ ಓವರ್ ರಸ್ತೆಗೆ ಬಿದ್ದಿದ್ದು, ಸಹ ಸವಾರೆ ವಸಂತಿಯವರು ಪ್ಲೈ ಓವರ್ ಮೇಲಿಂದ ಕೆಳಗಿನ ಸರ್ವೀಸ್ ರಸ್ತೆಗೆ ಎಸೆಯಲ್ಪಟ್ಟು ವಸಂತಿರವರ  ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಗಾಯವಾಗಿ ಆಸ್ಪತ್ರೆ ಕರೆದುಕೊಂಡು ಹೋಗುವದಾರಿ ಮದ್ಯದಲ್ಲಿ  ಮೃತಪಟ್ಟಿದ್ದು ಹಾಗೂ ಸವಾರಳಾದ ಶ್ರೀಜಾಳ ಮುಖದ ಬಲ ಬದಿ ಗುದ್ದಿದ ತೀವ್ರ ಸ್ವರೂಪದ ಗಾಯ ಹಾಗೂ ಎಡಕೈ ತೋಳಿನ ಹತ್ತಿರ ರಕ್ತಗಾಯವಾಗಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ  ಚಿಕಿತ್ಸೆಬಗ್ಗೆ ದಾಖಲಾಗಿರುತ್ತಾರೆ  ಎಂಬಿತ್ಯಾದಿ.

Crime Reported in  Mangalore North PS

ಶ್ರೀಮತಿ ಭಾವನಾ ಮಾಲಿ ರವರು ಮಹಾಲಕ್ಷ್ಮೀ ಮಾರ್ಕೆಟಿಂಗ್ ಎಂಬ ಹಾರ್ಡ್ ವೇರ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದು ಆರೋಪಿತನಾದ ಭರತ್ ಕುಮಾರ್ ನು ಗುತ್ತಿಗೆ ಆಧಾರದ ಮೇಲೆ ಪಿರ್ಯಾದಿದಾರರ ಸಂಸ್ಥೆಯ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದು ಕಳೆದ 02-03 ತಿಂಗಳಿನಿಂದ ಆರೋಪಿ ಭರತ್ ಕುಮಾರ್ ನು ವೈಯಕ್ತಿಕವಾಗಿ ವ್ಯವಹರಿಸಿ ಪಿರ್ಯಾದಿದಾರರಿಗೆ ಬರ ಬೇಕಾದ ಐವೇಜುಗಳನ್ನು ಪಡೆದುಕೊಂಡು ಪಿರ್ಯಾದಿದಾರರಿಗೆ ರೂ.1,50,000/- ದಿಂದ ರೂ, 250,000/-  ಲಕ್ಷ ಹಣವನ್ನು ದುರಪಯೋಗ ಪಡಿಸಿಕೊಂಡು, ಪಿರ್ಯಾದಿದಾರರು ಆರೋಪಿತನಲ್ಲಿ ವಿಚಾರಿಸಲು ಹೋದಾಗ ಜೀವ ಬೆದರಿಕೆ ನೀಡಿದಲ್ಲದೇ, ಪಿರ್ಯಾದಿದಾರರ ಅಂಗಡಿಗೆ ಬಂದು ನೀವು ಮಾಡುವುದನ್ನು ಮಾಡಿ, ನಾನು ಹಣ ಕೊಡುವುದಿಲ್ಲ, ಹಣ ಕೇಳಲು ಬಂದಲ್ಲಿ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ನೀಡಿರುತ್ತಾನೆ ಎಂಬುದಾಗಿ ದೂರು ನೀಡಿದ್ದು ಸದ್ರಿ ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Crime Reported in  Kavoor PS

ತಾರೀಕು 20/05/2021 ರಂದು ಫಿರ್ಯಾದಿ HARISH H V PSI ರವರು  ಕಾವೂರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಾ ಕಾವೂರು ಕಡೆಗೆ ಹೋಗುತ್ತಿದ್ದಾಗ ಸಮಯ ಸುಮಾರು ಬೆಳಗ್ಗೆ 10:15 ರ ವೇಳೆಗೆ ಕಾವೂರಿನ ಕೋದ್ದರ್ಬು ದೈವಸ್ಥಾನದ ಬಳಿಯಿರುವ ಫಾತಿಮಾ ಸ್ಟೋರ್ ಮಿಲ್ ಮತ್ತು ಸ್ವೀಟ್ ಜಂಕ್ಷನ್ ಎಂಬ ಹೆಸರಿನ ಅಂಗಡಿಯು ತೆರೆದುಕೊಂಡಿದ್ದು, ಅಂಗಡಿ ಒಳಗಡೆ ಆಪಾದಿತ ಮುಸ್ತಾಫ ಎಂಬವರು ನಿಗದಿತ ಸಮಯವನ್ನು ಮೀರಿ ಅಂಗಡಿಯನ್ನು ತೆರೆದು ವ್ಯಾಪಾರದಲ್ಲಿ ತೊಡಗಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಮಾರ್ಗಸೂಚಿ ಆದೇಶವನ್ನು ಪಾಲಿಸದೇ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಹಾಗೂ ಅಂಗಡಿಯೊಳಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗಿರಾಕಿಗಳೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದು, ಯಾವುದೇ ಮುಂಜಾಗ್ರತಾ ಕ್ರಮವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಂಭವಿರುವುದನ್ನು ತಿಳಿದು ಕೂಡ ನಿರ್ಲಕ್ಷವಹಿಸಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 20-05-2021 05:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080