ಅಭಿಪ್ರಾಯ / ಸಲಹೆಗಳು

 Crime Reported in  Traffic South PS

ಪಿರ್ಯಾದಿದಾರರಾದ ಚಂದ್ರ ಪೊಲೀಸ್ ಉಪ ನಿರೀಕ್ಷಕರು ,ಸಂಚಾರ ದಕ್ಷಿಣ ಪೊಲೀಸ್ ಠಾಣೆ,ನಾಗುರಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರು ನಿನ್ನೆ ದಿನ ದಿನಾಂಕ 19-07-2021 ರಂದು ಸಂಚಾರ ದಕ್ಷಿಣ ಪೊಲೀಸ್ ಠಾಣಾ ಸರಹದ್ದಿನ ಜಪ್ಪಿನಮೊಗರು –ಎಕ್ಕೂರು ರಾ.ಹೆ-66 ರಲ್ಲಿ ಸಮಯ ಸುಮಾರು ಸಂಜೆ 5-30 ರಿಂದ 6-00 ಗಂಟೆಯ ಮಧ್ಯೇ ಸಾಮಾಜಿಕ ಜಾಲತಾಣಗಳಲ್ಲಿ KA-19-MJ-8924 ನೇದರ ಕಾರಿನ ಚಾಲಕ ಅವನ ಹಿಂದಿನಿಂದ ಬರುತ್ತಿದ್ದ ಆಂಬ್ಯುಲೆನ್ಸ್ ವಾಹನದ ಚಾಲಕನು ಸೈರನ್ ಹಾಕಿಕೊಂಡು ಹೋಗುತ್ತಿದ್ದರೂ ತುರ್ತು ಸೇವಾ ವಾಹನಕ್ಕೆ ಹೋಗಲು ಅವಕಾಶ ಮಾಡಿಕೊಡದೆ ಅಡ್ಡಿ ಪಡಿಸಿರುವ ವೀಡಿಯೋ ವೈರಲ್ ಆಗುತ್ತಿದ್ದು ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿರುವುದನ್ನು ಗಮನಿಸಿ ಈ ಬಗ್ಗೆ ಮೇಲಾಧಿಕಾರಿಗಳಿಂದ ಬಂದ ಆದೇಶದ ಮೇರೆಗೆ ಸದ್ರಿ ವಿಡಿಯೋದ ಬಗ್ಗೆ ವಿಚಾರಣೆ ನಡೆಸಿದಾಗ KA-19- MJ-8924 ನೇದರ ಕಾರು ಚಾಲಕನು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ತುರ್ತು ಸೇವಾ ವಾಹನವಾದ ಆಂಬ್ಯುಲೇನ್ಸ್ ನ ಚಾಲನೆಗೆ ಅಡ್ಡಿ ಪಡಿಸಿರುತ್ತಾನೆ. ಎಂಬಿತ್ಯಾದಿ.

Crime Reported in  Mulki PS

ದಿನಾಂಕ 19-07-2021 ರಂದು ಬೆಳಿಗ್ಗೆ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಕುಸುಮಾಧರ ಕೆ ರವರು ಠಾಣಾ ಸಿಬ್ಬಂದಿಗಳಾದ ವೀರೇಶ್ ಹಾಗೂ ಪ್ರಮೋದ್ ರವರೊಂದಿಗೆ ಇಲಾಖಾ ವಾಹನ ಕೆಎ-19-ಜಿ-0513ನೇ ದರಲ್ಲಿ ಸಮವಸ್ತ್ರದಲ್ಲಿ ಬೆಳಗ್ಗಿನ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಮುಲ್ಕಿ, ಕಾರ್ನಾಡು, ಎಸ್ ಕೋಡಿ ಕಿನ್ನಿಗೋಳಿ ಮುಂತಾದ ಕಡೆ  ಸಂಚರಿಸುತ್ತಾ ಸಮಯ ಸುಮಾರು 05-45 ಗಂಟೆಗೆ ಕಿನ್ನಿಗೋಳಿಯಲ್ಲಿರುವಾಗ ಕಾಟಿಪಳ್ಳ ಕಡೆಯಿಂದ ಕಿನ್ನಿಗೋಳಿ ಕಡೆಗೆ ಒಂದು ಕಾರಿನಲ್ಲಿ ದನದ ಮಾಂಸವನ್ನು ಅನಧಿಕೃತವಾಗಿ ತೆಗೆದುಕೊಂಡು ಬರುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ  ಭಟ್ಟಕೋಡಿಯಿಂದ ಸುರತ್ಕಲ್ ಕಾಟಿಪಳ್ಳಕ್ಕೆ ಹೋಗುವ ರಸ್ತೆಯಲ್ಲಿ ಮುಂದುವರಿದು 06-00 ಗಂಟೆ ಸಮಯಕ್ಕೆ ಸುರಗಿರಿ ಎಂಬಲ್ಲಿ ಬರುತ್ತಿದ್ದ ಕೆಎ-19-ಎಂಎಫ್ -4928 ನೇ ಶಿಫ್ಟ್ ಕಾರನ್ನು ನಿಲ್ಲಿಸಿ ಪರಿಶೀಲಿಸಲಾಗಿ ಕಾರಿನ ಡಿಕ್ಕಿಯಲ್ಲಿ ಸುಮಾರು 72 ಕೆ. ಜಿ.ಯಷ್ಟು ದನದ ಮಾಂಸ ಕಂಡು ಬಂದಿದ್ದು ದನದ ಮಾಂಸ ಸಾಗಾಟದ ಬಗ್ಗೆ ಯಾವುದೇ ದಾಖಲಾತಿಗಳನ್ನು ಕೇಳಿದಾಗ ಯಾವುದೇ ಅನುಮತಿ, ಹಾಗೂ ಬಿಲ್ ವಗೈರೆ ದಾಖಲಾತಿ ಇರುವುದಿಲ್ಲ ಎಂದು ತಿಳಿಸಿದ್ದು ಮೂರು ಮಂದಿ ಆರೋಪಿಗಳು, ದನದ ಮಾಂಸ ಹಾಗೂ ಕೆಎ-19-ಎಂಎಫ್ -4928 ನೇ ಶಿಫ್ಟ್ ಕಾರನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 20-07-2021 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080