ಅಭಿಪ್ರಾಯ / ಸಲಹೆಗಳು

Crime Reported in  Mangalore North PS

ದಿನಾಂಕ 20-05-2021 ರಂದು ಬರ್ಕೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಹಾರುನ್ ಅಖ್ತರ್ ರವರು ಠಾಣಾ ಸಿಬ್ಬಂದಿ ಪ್ರದೀಪ್ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಲೇಡಿಹಿಲ್ ಜಂಕ್ಷನ್ ನಿಂದ ಉರ್ವಾ ಮಾರ್ಕೆಟ್ ಗೆ ಬರುವ ರಸ್ತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ಸಂಜೆ ಸಮಯ ಸುಮಾರು 16-15 ಗಂಟೆಗೆ ಮಂಗಳೂರು ನಗರದ ಉರ್ವಾ ಮಾರ್ಕೆಟ್ ರಸ್ತೆಯಲ್ಲಿರುವ ಜಸ್ಟ್ ಜ್ಯೂಸ್ ಎಂಬ ಅಂಗಡಿಯನ್ನು ತೆರೆದಿದ್ದು, ಜ್ಯೂಸ್ ಅಂಗಡಿಯ ಮಾಲಕರು ಕೋವಿಡ್ -19  ಕೊರೋನಾ ಸಾಂಕ್ರಾಮಿಕ ಖಾಯಿಲೆ ಹರಡಿ ಮಾನವ ಜೀವಕ್ಕೆ ಹಾನಿಯಾಗುತ್ತದೆ ಎಂದು ತಿಳಿದಿದ್ದರೂ, ಸರಕಾರ ಅಗತ್ಯ ವಸ್ತುಗಳ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ವಾಣಿಜ್ಯ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದರೂ, ಸರ್ಕಾರ ಹೊರಡಿಸಿದ ಆದೇಶವನ್ನು ಉಲ್ಲಂಘಿಸಿ ಜಸ್ಟ್ ಜ್ಯೂಸ್ ಎಂಬ ಅಂಗಡಿಯನ್ನು ತೆರೆದಿಟ್ಟು ನಿರ್ಲಕ್ಷತನ ತೋರಿರುವುದು ಹಾಗೂ ಸರಕಾರ ಹೊರಡಿಸಿದ ನಿಯಮಾವಳಿಗಳನ್ನು ಉಲ್ಲಂಘನೆ  ಮಾಡಿರುವುದರಿಂದ ಸದ್ರಿ ಜ್ಯೂಸ್ ಅಂಗಡಿಯ ಮಾಲಕರ ವಿರುದ್ದ  ಕಲಂ 269 ಐಪಿಸಿ ಮತ್ತು ಕಲಂ. 4 (2) (ಎಚ್), 5 (1) (4) KARNATAKA EPIDEMIC DISEASE ACT- 2020 ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಂಬಿತ್ಯಾದಿ.

Crime Reported in Panambur PS

ದಿನಾಂಕ: 20-05-2021 ರಂದು ಸಂಜೆ 6:20 ಗಂಟೆಗೆ ಪಿರ್ಯಾದಿದಾರಾದ ಅಬುಬ್ಬಕ್ಕರ್ ಬಾವ ಹಾಗೂ ಇನಿತರ ಇಬ್ಬರು ಪಂಚಾಯತ್ ಸದಸ್ಯರುಗಳು ಜೋಕಟ್ಟೆಯಿಂದ ಪಣಂಬೂರಿಗೆ ಹೋಗುತ್ತಿರುವಾಗ 62 ನೇ ತೋಕೂರು ಗ್ರಾಮದ ಮಡಲ ಎಂಬ ಸ್ಥಳದ ರಸ್ತೆಯ ಪಕ್ಕದಲ್ಲಿ ಕೆಎ 18 ಬಿ 2676 ಶೌಚಾಲಯದ ತ್ಯಾಜ್ಯದ ಟ್ಯಾಂಕರ್ ಲಾರಿಯಿಂದ ತ್ಯಾಜ್ಯವನ್ನು ರಸ್ತೆಯ ಪಕ್ಕದಲ್ಲಿ ಹರಿಯಬಿಡುವುದನ್ನು ಕಂಡು ವಿಡಿಯೋ ಮಾಡಿ ಸದ್ರಿ ಟ್ಯಾಂಕರ್ ಲಾರಿಯನ್ನು ಚಾಲಕ ಸಮೇತ ಠಾಣೆಗೆ ಕರೆದುಕೊಂಡು ಬಂದು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ದೂರು ನೀಡಿರುವ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು  ಎಂಬಿತ್ಯಾದಿ.

Crime Reported in Mulki PS

ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಯವರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರ ಆದೇಶ ಸಂಖ್ಯೆ: ಎಂಎಜಿ(2)ಸಿಆರ್.156/2021/133465/ಸಿ4/4 ದಿನಾಂಕ: 27-04-2021 ಹಾಗೂ ಆದೇಶ ಸಂಖ್ಯೆ: ಎಂಎಜಿ(2)ಸಿಆರ್.156/2021/133465/ಸಿ4/6 ದಿನಾಂಕ: 01-05-2021 ಮತ್ತು ಆದೇಶ ಸಂಖ್ಯೆ: ಎಜಿ(2)ಸಿಆರ್.156/2021/133465/ಸಿ4/9  ದಿನಾಂಕ: 09-05-2021 ರ ಆದೇಶದಂತೆ ಸದ್ರಿ ಆದೇಶವನ್ನು ಪಾಲನೆ ಮಾಡುವ ಬಗ್ಗೆ ಮುಲ್ಕಿ ಪೊಲೀಸ್   ಠಾಣಾ ಪೊಲೀಸ್ ನಿರೀಕ್ಷಕರಾದ ಕುಸುಮಾಧರ.ಕೆ. ರವರು ಸಿಬ್ಬಂದಿಗಳೊಂದಿಗೆ ದಿನಾಂಕ: 20-05-2021 ರಂದು 10-30 ಗಂಟೆಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ, ಲಿಂಗಪ್ಪಯ್ಯಕಾಡು, ಕೆ.ಎಸ್ ರಾವ್ ನಗರದ ಮೀನು ಮಾರ್ಕೆಟ್ ಸಮೀಪ ಇರುವ ಎ.ಹೆಚ್ ಸೂಪರ್ ಮಾರ್ಕೆಟ್ ದಿನಸಿ ಅಂಗಡಿಯನ್ನು ತೆರೆದು ಅಲ್ಲಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿದ್ದು ಸದರಿಯವರು ಸರಕಾರದ ನಿಯಮದಂತೆ ಈ ವೇಳೆಯಲ್ಲಿ ಈ ಅಂಗಡಿಯನ್ನು ತೆರೆಯಬಾರದೆಂದು ಸರ್ಕಾರದ ಕಟ್ಟು ನಿಟ್ಟಿನ ಆದೇಶವಿದ್ದರೂ ಅಂಗಡಿಯನ್ನು ತೆರೆದು ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದು ಗೊತ್ತಿದ್ದರೂ ಈ ಬಗ್ಗೆ ನಿಕ್ಷ್ಯ ವಹಿಸಿ ಅಂಗಡಿಯನ್ನು ತೆರೆದಿರುವುದು ಕಂಡು ಬಂದಿದ್ದು,  ಕೊರೊನಾ ವೈರಸ್ ಹರಡದಂತೆ ಯಾವುದೇ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳದೇ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ನಿರ್ಲಕ್ಷ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

 

Crime Reported in Moodabidre PS

ದಿನಾಂಕ: 20-05-2021 ರಂದು ಠಾಣಾ ಉಪನಿರೀಕ್ಷಕರಾದ ಸುದೀಪ್ ಎಮ್.ವಿ ಮತ್ತು ಸಿಬ್ಬಂದಿಗಳಾದ ಗೋವಿಂದರಾಜ್ ಮತ್ತು ಯಶವಂತ್ ರವರ ಜೊತೆಯಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆ ತಾಲೂಕು ಮಾರ್ಪಾಡಿ ಗ್ರಾಮದ ಜೈನ್ ಪೇಟೆ ಬಳಿಯಿದ್ದ ಪದ್ಮಾಂಭಾ ಹೋಟೆಲ್‌ನ್ನು  ಸಮಯ ಸುಮಾರು 10.00 ಗಂಟೆಗೆ ಆರೋಪಿಯು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ಹೋಟೆಲ್ ನಲ್ಲಿ ಗ್ರಾಹಕರು ಕುಳಿತು ಉಪಹಾರ ಸೇವಿಸಲು ಅವಕಾಶ ಮಾಡಿಕೊಟ್ಟು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ವ್ಯವಸ್ಥೆ ಮಾಡದೆ ವ್ಯಾಪಾರದಲ್ಲಿ ತೊಡಗಿದ್ದು, ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

2)ದಿನಾಂಕ: 20-05-2021 ರಂದು ಠಾಣಾ ಉಪನಿರೀಕ್ಷಕರಾದ ಸುದೀಪ್ ಎಮ್.ವಿ ಮತ್ತು ಸಿಬ್ಬಂದಿಗಳಾದ ಗೋವಿಂದರಾಜ್ ಮತ್ತು ಯಶವಂತ್ ರವರ ಜೊತೆಯಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆ ತಾಲೂಕು  ಬೆಳುವಾಯಿ ಗ್ರಾಮದ, ಬೆಳುವಾಯಿ ಜಂಕ್ಷನ್ ನಲ್ಲಿರುವ ಆಟೋ ನಿಲ್ದಾಣದ ಬಳಿಯಿರುವ ’ಅಮರ್ ಪ್ಯಾನ್ಸಿ ಮತ್ತು ಗಿಪ್ಟ್ ಸೆಂಟರ್’ ಅಂಗಡಿಯನ್ನು  ಸಮಯ ಸುಮಾರು 11.15 ಗಂಟೆಗೆ ಆರೋಪಿಯು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ಅಂಗಡಿಯನ್ನು ತೆರೆಯಲು ಅನುಮತಿ ಇಲ್ಲದೇ ಇದ್ದರೂ ಸಹ ತೆರೆದಿದ್ದು ಅಲ್ಲದೇ ನಿಗದಿತ ಅವಧಿಯನ್ನು ಮೀರಿ ತೆರೆದಿಟ್ಟು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ವ್ಯವಸ್ಥೆ ಮಾಡದೆ ವ್ಯಾಪಾರದಲ್ಲಿ ತೊಡಗಿದ್ದು, ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in  Ullal PS

ದಿನಾಂಕ: 20-05-2021 ರಂದು ರಾತ್ರಿ  08-10 ಗಂಟೆಯ ಸಮಯಕ್ಕೆ ಉಳ್ಳಾಲದ ಪ್ಯಾರಿಸ್ ಜಂಕ್ಷನ್ ನ ಇಂಫಾಲ್ ಇನ್ ಲ್ಯಾಂಡ್ ಕಟ್ಟಡದ ಮುಂಭಾಗದ ರಸ್ತೆಯಲ್ಲಿ  ಆರೋಪಿ ಯೋಗಿಶ್ ಅಮೀನ್ ನು ತನ್ನಲ್ಲಿ ಕೊರೋನಾ ಸಾಂಕ್ರಾಮಿಕ ಖಾಯಿಲೆ ಇದೆ ಎಂದು ತಿಳಿದಿದ್ದರು  ಈ ಬಗ್ಗೆ ಮನೆಯಲ್ಲಿ ಇರದೇ  ಈ ರೋಗವನ್ನು ಪರಿಸರದಲ್ಲಿ ಇತರರಿಗೂ ಕೂಡಾ ಹರಡಿಸಬೇಕೆಂಬ ದ್ವೇಷದಿಂದ ಉದ್ದೇಶಪೂರ್ವಕವಾಗಿ ಮುಖಕ್ಕೆ ಮಾಸ್ಕ್ ಧರಿಸದೇ, ಉಳ್ಳಾಲದ ಪ್ಯಾರಿಸ್ ಜಂಕ್ಷನ್ ನಲ್ಲಿ ಅನಗತ್ಯ ತಿರುಗಾಡಿಕೊಂಡು ಕೊರೋನಾ ಮಾಹಾಮಾರಿ ಮಾರಣಾಂತಿಕ ಸಾಂಕ್ರಾಮಿಕ ವೈರಾಣ್ ಖಾಯಿಲೆಯ ಹರಡುವಿಕೆಗೆ ಕಾರಣನಾಗಿರುವುದರಿಂದ ಈತನ ವಿರುದ್ಧ ದಾಖಲಿಸಿದ ಪ್ರಕರಣದ ಸಾರಾಂಶ. ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 21-05-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080