Feedback / Suggestions

Crime Reported in Cyber Crime PS

ಪಿರ್ಯಾದಿದಾರರು ಫೇಸ್ ಬುಕ್ ನಲ್ಲಿ ಖಾತೆ ಹೊಂದಿದ್ದು ಸದ್ರಿ ಖಾತೆಗೆ ನೆಲ್ಸನ್ ಮಾರ್ಕ್ ಹೆಸರಿನ ಪೇಸ್ ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು ಅದನ್ನು ಪಿರ್ಯಾದಿದಾರರು ಅಕ್ಸೆಪ್ಟ್ ಮಾಡಿದ್ದು ನಂತರ ಸದ್ರಿ ವ್ಯಕ್ತಿಯು ಪಿರ್ಯಾದಿದಾರರ ಜೊತೆಯಲ್ಲಿ ಫೇಸ್ ಬುಕ್ ಮುಖಾಂತರ ಸಂದೇಶ ವಿನಿಮಯ ಮಾಡುತ್ತಿದ್ದರು ನಂತರ ಆತನು ಪಿರ್ಯಾಧಿದಾರರ ವಾಟ್ಸ್ ಆಪ್ ನಂಬ್ರವನ್ನು ಪಡೆದುಕೊಂಡು +44751737590 ನೇಯದರಿಂದ ವಾಟ್ಸ್ ಆಪ್ ಮೂಲಕ ಸಂದೇಶ ಕಳುಹಿಸಿ ತಾನು ಪಿರ್ಯಾದಿದಾರರಿಗೆ ಹಣ ಕಳುಹಿಸುವುದಾಗಿ ತಿಳಿಸಿ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿರುತ್ತಾರೆ ನಂತರ ಆತನು ಪಿರ್ಯಾದಿದಾರರ ಖಾತೆಗೆ ಹಣವನ್ನು ಜಮಾ ಮಾಡಿರುವುದಾಗಿ ತಿಳಿಸಿ ಒಂದು ಡೆಪಾಸಿಟ್ ಸ್ಲಿಪ್ ನ್ನು ಕಳುಹಿಸಿಕೊಟ್ಟಿದ್ದು ನಂತರ ಪಿರ್ಯಾಧಿದಾರರನ್ನು ಸದ್ರಿ ಹಣವನ್ನು ಹಿಂಪಡೆಯಬೇಕಾದಲ್ಲಿ ಆದಾಯ ತೆರಿಗೆ ಪಾವತಿಸಬೇಕೆಂದು ತಿಳಿಸಿದ್ದು ಅದನ್ನು ನಂಬಿ ಪಿರ್ಯಾದಿದಾರರು  ಆರೋಪಿತನು ಕಳುಹಿಸಿಕೊಟ್ಟ ಇಂಡಿಯನ್ ಬ್ಯಾಂಕ್ ಡೆಲ್ಲಿ ಖಾತೆ ಸಂಖ್ಯೆ: 6997492562 ನೇಯದಕ್ಕೆ ದಿನಾಂಕ: 21/04/2021 ರಂದು ಹಂತ ಹಂತವಾಗಿ ರೂ 1,15,000/- ರೂಗಳನ್ನು ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಯಿಂದ  ಪಾವತಿಸಿರುತ್ತಾರೆ. ಪಿರ್ಯಾದಿದಾರರಿಂದ ಹಣವನ್ನು ಪಡೆದುಕೊಂಡ ಬಳಿಕ ಆರೋಪಿತನು ಯಾವುದೇ ಉಡುಗೊರೆಯನ್ನು ಕಳುಹಿಸಿಕೊಡದೆ ಪಿರ್ಯಾದಿಗೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.

Crime Reported in Mangalore North PS

ಪಿರ್ಯಾದಿ THIMMAPPA POOJARY ರವರು ಮಂಗಳೂರಿನ ಯು. ರಾಜೇಶ್ ಎಂಬವರಿಂದ ಮಂಗಳೂರು ಮೈದಾನ 3ನೇ ಕ್ರಾಶ್ ನಲ್ಲಿರುವ ರಾಜೇಶ್ ಬಾರ್ ಆಂಡ್ ರೆಸ್ಟೋರೆಂಟ್ ಎಂಬ ಹೋಟೇಲನ್ನು ಲೀಸ್ ಗೆ ಪಡೆದುಕೊಂಡು ಕರಾರು ಪತ್ರದಂತೆ ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ: 19-06-2021 ರಂದು ಬೆಳಿಗ್ಗೆ ಸುಮಾರು 8.30 ಗಂಟೆ ಸಮಯಕ್ಕೆ  ಪಿರ್ಯಾದಿದಾರರಿಗೆ ನೋಡಿ ಗುರುತು ಪರಿಚಯದ   ರೋಶನ್ ಹಾಗೂ ಮಣಿ ಎಂಬವರು  ರಾಜೇಶ್ ಬಾರ್ ಆಂಡ್ ರೆಸ್ಟೋರೆಂಟ್ ಗೆ ಬಂದು ಮದ್ಯಪಾನ ಮಾಡಲು   ಬಾಟಲಿನಲ್ಲಿ ಪಾರ್ಸಲ್ ಪಡೆದುಕೊಂಡು ಹೋಗಿ  ನಂತರ ಅವರಿಬ್ಬರು ಸಿಟಿ ಮೆಡಿಕಲ್ ಬಳಿ ಅಮಲು ಪದಾರ್ಥ ಸೇವನೆ ಮಾಡಿದ ನಂತರ ಯಾವುದೋ ಕ್ಷುಲ್ಲಕ ಕಾರಣದಿಂದ ಜಗಳ ಮಾಡಿ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದು, ಕೋಪದಿಂದ ಮಣಿ ಎಂಬಾತನು ರೋಶನ್ ನ ತಲೆಗೆ  ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿರುತ್ತಾನೆ. ನಂತರ ಮಣಿ ಎಂಬಾತನು ಅಲ್ಲಿಂದ  ಓಡಿ ಹೋಗಿ ತಪ್ಪಿಸಿಕೊಂಡಿದ್ದು, ರೋಶನ್ ನ ತಲೆಗೆ ಆದ ಗಾಯದ ಬಗ್ಗೆ ಉಪಚರಿಸಿ 108 ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ ಎಂಬಿತ್ಯಾದಿ.

Crime Reported in Traffic North PS

ದಿನಾಂಕ:20-06-2021 ರಂದು ರಾತ್ರಿ 22-25 ಗಂಟೆಗೆ ಪಿರ್ಯಾದಿದಾರರಾದ  ಧನುಷ್ ಡಿ ರವರು ಪಣಂಬೂರು ಎನ್.ಎಂ.ಪಿ.ಟಿ ಯಾರ್ಡ್ ನಲ್ಲಿ ಮೈನ್ಸ್ ಲೋಡ್ ಕೆಲಸದ ಬಗ್ಗೆ ಬರ್ತ್ 14ಇ ಪೂರ್ವದ ಕಡೆಯಿಂದ 14 ಪಶ್ಚಿಮದ ಕಡೆಗೆ ನಡೆದುಕೊಂಡು ಬರುತ್ತಾ ಬರ್ತ್ 14W ಬಳಿ ತಲುಪಿದಾಗ ಕೆ.ಕೆ ಗೇಟ್ ಕಡೆಯಿಂದ ಟಿಪ್ಪರ್ ಲಾರಿ ನಂಬ್ರ KA22C8257 ನೇಯದ್ದನ್ನು ಅದರ ಚಾಲಕ ರಾಜಾ ಸಾಬ್ ಮುಲ್ಲಾ ಎಂಬಾತನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಲಾರಿಯ ನಿಯಂತ್ರಣ ತಪ್ಪಿ 14ಬರ್ತ್ ಪಶ್ಚಿಮದ ಸಮುದ್ರಕ್ಕೆ ಬಿದ್ದ ಪರಿಣಾಮ ಲಾರಿ ಸಮುದ್ರದಲ್ಲಿ ಮುಳುಗಿದ್ದು ನಂತರ ಕೋಸ್ಟ್ ಗಾರ್ಡ್ ನವರ ಸಹಾಯದಿಂದ ಸಮುದ್ರದಲ್ಲಿ ಹುಡುಕಿ ಲಾರಿ ಚಾಲಕ ರಾಜಾ ಸಾಬ್ ಮುಲ್ಲಾನನ್ನು ನೀರಿನಿಂದ ಮೇಲೆ ಎತ್ತಿ ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ರಾಜಾ ಸಾಬ್ ಮುಲ್ಲಾರವರು 23:45 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿದ್ದು ಅಪಘಾತದ ಸಮಯ ಕತ್ತಲಾದುದರಿಂದ ಚಾಲಕನ ಬಳಿಯಲ್ಲಿ ಇನ್ನೊಬ್ಬ ಇದ್ದ ಹಾಗೆ ಕಂಡುಬಂದಿರುವುದಾಗಿ  ಪಿರ್ಯಾದಿ ಸಾರಾಂಶ.

Crime Reported in  Kavoor PS

ಪಿರ್ಯಾದಿ PRATIBHA K H PSI ರವರು ದಿನಾಂಕ 20/06/2021 ರಂದು  ರೌಂಡ್ಸ್ ಮಾಡುತ್ತಾ ಕೂಳೂರು ತಲುಪಿದಾಗ ಸಾರ್ವಜನಿಕರೊಬ್ಬರಿಂದ ಬಂದ ಮಾಹಿತಿಯೇನೆಂದರೆ ಠಾಣಾ ವ್ಯಾಪ್ತಿಯ ಪಡುಕೋಡಿ ಗ್ರಾಮದ 2 ನೇ ಕ್ರಾಸ್ ರಾಯಿಕಟ್ಟೆಯಲ್ಲಿರುವ ಕ್ಲಾಡಿ ಡಿ ಸೋಜಾ ರವರ ಮನೆಯ ಬಳಿ ಇರುವ ಸಾರ್ವಜನಿಕ ಖಾಲಿ ಜಾಗದಲ್ಲಿ ಸುಮಾರು 6-7 ಜನ ಗುಂಪಾಗಿ ಸೇರಿ ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವುದಾಗಿ ಮಾಹಿತಿ ಇದ್ದು, ಸಿಬ್ಬಂದಿಗಳ ಜೊತೆಯಲ್ಲಿ ಪಿರ್ಯಾದಿದಾರರು ಸಮಯ ಸುಮಾರು 17.45 ಗಂಟೆಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದಲ್ಲಿ ಆಪಾದಿತರು ಸರ್ಕಾರವು ಕೊರೊನಾ ವೈರಸ್ ತಡೆಗಟ್ಟಲು ಹೊರಡಿಸಿದ ಮಾರ್ಗಸೂಚಿ ಆದೇಶವನ್ನು ಉಲ್ಲಂಘಿಸಿ ಮಾನವ ಜೀವಕ್ಕೆ ಅಪಾಯಕಾರಿ ರೋಗದ ಸೊಂಕನ್ನು ಹರಡುವಲ್ಲಿ ನಿರ್ಲಕ್ಷವಹಿಸಿ ಪಡುಕೋಡಿ ಗ್ರಾಮದ 2 ನೇ ಕ್ರಾಸ್ ರಾಯಿಕಟ್ಟೆಯಲ್ಲಿರುವ ಕ್ಲಾಡಿ ಡಿ ಸೋಜಾ ರವರ ಮನೆಯ ಬಳಿ ಇರುವ ಸಾರ್ವಜನಿಕ ಖಾಲಿ ಜಾಗದ ಬದಿ ಗಿಡಗಳು ಬೆಳೆದ ಜಾಗದಲ್ಲಿ ವೃತ್ತಾಕಾರವಾಗಿ  ಕುಳಿತು ನ್ಯೂಸ್ ಪೇಪರನ್ನು ನೆಲಕ್ಕೆ ಹಾಸಿ ಒಬ್ಬರಿಗೊಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಳ್ಳದೇ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ಕುಳಿತುಕೊಂಡು ಹಣವನ್ನು ಪಣವಾಗಿಟ್ಟು ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವುದನ್ನು ನೋಡಿದ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಆಪಾದಿತರನ್ನು ತಡೆದು ನಿಲ್ಲಿಸಿ ಇಸ್ಪಿಟ್ ಜುಗಾರಿ ಆಟದಲ್ಲಿ ಬಳಸಿದ ನಗದು ರೂ.3200/- ಸೇರಿದಂತೆ 52 ಇಸ್ಪಿಟ್ ಎಲೆಗಳು, ಬಿಳಿ ಹಾಳೆಗಳು ಹಾಗೂ ನೀಲಿ ಶಾಯಿಯ ಬಾಲ್ ಪೆನ್  ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿ ಎಂಬಿತ್ಯಾದಿ.

Crime Reported in Mulki PS

ಮುಲ್ಕಿ ಪೊಲೀಸ್  ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಪಕ್ಷಿಕೆರೆ ಬಸ್ಸ್ ಸ್ಟಾಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಅಲ್ಲಿಗೆ 15-45 ಗಂಟೆಗೆ ಧಾಳಿ ನಡೆಸಲಾಗಿ ಆರೋಪಿಯು ಪರಾರಿಯಾಗಿದ್ದು ಪಾಲಿತಿನ್ ಗೋಣಿ ಚೀಲದಲ್ಲಿ 90 ಎಂಎಲ್ ಮದ್ಯ ತುಂಬಿದ ಮೈಸೂರ್ ಲ್ಯಾನ್ಸರ್ 15 ಸ್ಯಾಚೆಟ್ ಗಳು, 180 ಎಂಎಲ್ ನ ಓಲ್ಡ್ ಮಾಂಕ್ 5 ಸ್ಯಾಚೆಟ್ ಗಳು, ಮತ್ತು 180 ಎಂಎಲ್ ನ  ಬ್ಯಾಗ್ ಪೈಪರ್ 3 ಸ್ಯಾಚೆಟ್ ಗಳು, ನಗದು ಹಣ ರೂ 205=00 ಹಣ ಇದ್ದು ಇವುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಆರೋಪಿ  ಪ್ರಭಾಕರನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದಿದ್ದರೂ ಮದ್ಯವನ್ನು ಮಾರಾಟ ಮಾಡಿದ್ದಲ್ಲದೇ, ಕೊರೊನಾ 19 ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ಸರ್ಕಾರದ ಕಟ್ಟು ನಿಟ್ಟಿನ ಆದೇಶವಿದ್ದರೂ ಸದ್ರಿ ಅದೇಶವನ್ನು ಧಿಕ್ಕರಿಸಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯವನ್ನು ಮಾರಾಟ ಮಾಡಿ ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದು ಗೊತ್ತಿದ್ದರೂ ಕೂಡಾ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆ 2020 ರಂತೆ ಉಲ್ಲಂಘನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Crime Reported in Surathkal PS            

ದಿನಾಂಕ 20/06/2021 ರಂದು ಪಿರ್ಯಾದಿ Chandrappa K PI ರವರು ಸಿಬ್ಬಂದಿಗಳ ಜೊತೆ ರೌಂಡ್ಸ್ ನಲ್ಲಿರುವಾಗ ದೊರೆತ ಖಚಿತ ಮಾಹಿತಿಯ ಮೇರೆಗೆ ಕಾಟಿಪಳ್ಳ ಗ್ರಾಮದ ಅಬ್ದುಲ್ ರಜಾಕ್ ಗೆ ಸೇರಿದ ಕಟ್ಟಡದ ಒಂದು ಕೋಣೆಯಲ್ಲಿ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಹೆಸರಿನ ಿಸ್ಪೀಟ್ ಜೂಜಾಟ್ ಮಾಡುತ್ತಿದ್ದ ಆರೋಪಿಗಳಾದ 1]  ಹನುಮಂತ ಗೌಡ (35), 2] ಹನಮಂತ (35),  3] ನಿರುಪಾದಪ್ಪ ಎಲಿಗಾರ (35),   4] ವೀರಭಧ್ರ  ಗೌಡ (40),  5] ಸೊಮ್ಮಣ್ಣ ಪಬ್ಬಲಾರ್ (45),  6] ರಮೇಶ್ ಗೌಡ, (45),  7] ನಿರುಪಾದಪ್ಪ ಜ್ಯೋತಿ (28) ಇವರನ್ನು 17-00 ಗಂಟೆಗೆ ದಾಳಿ ನಡೆಸಿ ವಶಕ್ಕೆ ಪಡೆದುರುವುದಾಗಿದೆ.ಆರೋಪಿಗಳ ವಶದಲ್ಲಿ ಜೂಜಾಟಕ್ಕೆ ಉಪಯೋಗಿಸಿದ 23,060/-ರೂ ,ಇಸ್ಪೀಟ್ ಎಲೆಗಳು- 52  ಹಾಗೂ ಬೆಡ್ ಶೀಟ ಇರುವುದಾಗಿದೆ.ಆರೋಪಿಗಳ ವಿರುದ್ದ ಕ್ರಮ ಜರುಗಿಸಿರುವುದು ಎಂಬಿತ್ಯಾದಿಯಾಗಿರುತ್ತದೆ.

Last Updated: 21-06-2021 06:18 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080