ಅಭಿಪ್ರಾಯ / ಸಲಹೆಗಳು

Crime Reported in  Mangalore Rural PS

ಫಿರ್ಯಾಧಿ Tukarama ರವರು ನೀರುಮಾರ್ಗ ಸುಬ್ರಮಣ್ಯ ಭಜನಾ(ರಿ) ಮಂದಿರದ ಅಧ್ಯಕ್ಷರಾಗಿದ್ದು, ಭಜನಾ ಮಂದಿರದ ಸದ್ಯಸರಾದ ಗಣೇಶ್ ರವರು ಎಂದಿನಂತೆ ದಿನಾಂಕ 20-07-2021 ರಂದು ರಾತ್ರಿ 7.30 ಗಂಟೆ ಸುಮಾರಿಗೆ ಭಜನಾ ಮಂದಿರಕ್ಕೆ ಬಂದು ದೀಪ ಹಚ್ಚಿ ನಂತರ ಮಂದಿರದ ಬಾಗಿಲಿಗೆ ಬೀಗ ಹಾಕಿ ಭಧ್ರಪಡಿಸಿ ಮನೆಗೆ ಹೋಗಿದ್ದು, ಮರುದಿನ ದಿನಾಂಕ 21-07-2021 ರಂದು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ದೀಪ ಹಚ್ಚಲು ಗಣೇಶ್ ರವರು ಬಂದಾಗ ಮಂದಿರದ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿರುವುದು ಕಂಡು ಬಂದಿರುತ್ತದೆ. ಕೋಡಲೇ ಗಣೇಶ್ ರವರು ಫಿರ್ಯಾಧಿದಾರರಿಗೆ ಕರೆ ಮಾಡಿ ವಿಷಯ ತಿಳಿಸಿದಂತೆ ಫಿರ್ಯಾಧಿದಾರರು ಬಂದು ನೋಡಲಾಗಿ ಭಜನಾ ಮಂದಿರ ಮುಖ್ಯದ್ವಾರದ ಬಾಗಿಲಿಗೆ ಹಾಕಿದ್ದ ಬೀಗ ಹೊಡೆದಿದ್ದು ಕಂಡುಬಂದಿದ್ದು, ಒಳಹೋಗಿ ನೋಡಲಾಗಿ ಮಂದಿರದ ಒಳಗಡೆ ಇದ್ದ ಕಾಣಿಕೆ ಡಬ್ಬಿಯನ್ನುಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿರುತ್ತದೆ. ನಂತರ ಮಂದಿರದ ಸಿ.ಸಿ. ಕ್ಯಾಮೇರಾವನ್ನು ಪರಿಶೀಲಿಸಲಾಗಿ ದಿನಾಂಕ 21-07-2021 ರ ರಾತ್ರಿ 1.00 ಗಂಟೆಯಿಂದ 2.25 ಗಂಟೆ ಮಧ್ಯೆ ಯಾರೋ ಇಬ್ಬರು ಕಳ್ಳರು ಮಂದಿರದ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಕಾಣಿಕೆ ಡಬ್ಬಿಯನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿರುತ್ತದೆ. ಕಾಣಿಕೆ ಡಬ್ಬಿಯಲ್ಲಿ ಭಕ್ತಾಧಿಗಳಿಂದ ಸಂಗ್ರಹವಾಗಿದ್ದ ಸುಮಾರು 3500/- ರೂ ಗಳು ಇರಬಹುದು ಎಂಬುದಾಗಿ ಹಾಗೂ ಈ ಬಗ್ಗೆ ಆಸುಪಾಸಿನಲ್ಲಿ ಹುಡುಕಾಡಿದಾಗ ಜನನ ವೆಲ್ಡಿಂಗ್ ಶಾಪ್ ಬಳಿ ಕಾಣಿಕೆ ಡಬ್ಬಿ ಹಾಗೂ ಬೀಗವನ್ನು ಹೊಡೆದ ಸ್ಥಿತಿಯಲ್ಲಿ ಸಿಕ್ಕಿದ್ದು, ಈ ಕೃತ್ಯ ಎಸಗಿದವರನ್ನು ಪತ್ತೆ ಮಾಡಬೇಕಾಗಿ ನೀಡಿದ ದೂರು.

Crime Reported in  Surathkal PS

ಪ್ರಕರಣದ ಪಿರ್ಯಾದಿ SMT SUMATHI (52)ದಾರರು ದಿನಾಂಕ 20-07-2021 ರಂದು ಮದ್ಯಾಹ್ನ ಸುಮಾರು 02-30 ಗಂಟೆಗೆ ಒಬ್ಬಳೇ ಮನೆಯಲ್ಲಿದ್ದಾಗ ಅಪರಿಚಿತ ಆರೋಪಿಯು ಮನೆಯ ಸಿಟ್ ಔಟ್ ಬಳಿ ನಿಂತು ಬಾಗಿಲನ್ನು ಪದೇ ಪದೇ ತಟ್ಟಿದಾಗ ಪಿರ್ಯಾದಿದಾರರು ಬಾಗಿಲನ್ನು ತೆರೆದ ಸಮಯದಲ್ಲಿ ಆರೋಪಿಯು ಏಕಾ ಏಕಿ ಪಿರ್ಯಾದಿದಾರರನ್ನು ದೂಡಿ ಬೊಬ್ಬೆ ಹೊಡೆಯದಂತೆ ಅವರ ಬಾಯಿಗೆ ಶಾಲನ್ನು ಒತ್ತಿ ಹಿಡಿದು ಮನೆಯ ಹಾಲ್ ಒಳಗಡೆ ಬಾಗಿಲಿನ ಸಮೀಪದಲ್ಲಿರುವ ಗೋಡೆಗೆ ದೂಡಿ ಹಿಡಿದು ಅವರ ಕುತ್ತಿಗೆಯಲ್ಲಿದ್ದ ಸುಮಾರು  32 ಗ್ರಾಮ್ಸ್ ತೂಕದ ಕರಿಮಣಿ ಸರವನ್ನು ಸುಲಿಗೆ ಮಾಡಲು ಪ್ರಯತ್ನಿಸಿದ ಸಮಯದಲ್ಲಿ ಪಿರ್ಯಾದಿದಾರರು ಪ್ರತಿರೋದಿಸಿದಾಗ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವು ತುಂಡಾಗಿರುತ್ತದೆ. ಮಾಂಗಲ್ಯ ಇದ್ದ ಸರದ ತುಂಡು ಪಿರ್ಯಾದಿದಾರರಲ್ಲಿ ಉಳಿದು ಕೊಂಡಿದ್ದು ಇನ್ನುಳಿದ ತುಂಡಿನೊಂದಿಗೆ ಆರೋಪಿಯು ಪರಾರಿಯಾಗಿರುತ್ತಾನೆ. ಆರೋಪಿಯು ಸುಲಿಗೆ ಮಾಡಿದ ಕರಿಮಣಿ ಸರದ ತುಂಡಿನ ಅಂದಾಜು ಮೌಲ್ಯ ಸುಮಾರು 60,000/- ರೂಪಾಯಿಗಳಷ್ಟು ಆಗಿರುವುದಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ

Crime Reported in  Moodabidre PS

ದಿನಾಂಕ 24/04/2021 ರಂದು ಬೆಳಿಗ್ಗೆ 11.00 ಗಂಟೆಯ ಸಮಯ ಮೂಡಬಿದ್ರೆ ತಾಲೂಕು ಪಡುಕೊಣಜೆ ಗ್ರಾಮದ ಮುಂಡುಕಲ್ಲು ಬಸ್ ಸ್ಟಾಪ್ ಬಳಿ ಪೆಟ್ರೋಲ್ ಟ್ಯಾಂಕರ್ ಲಾರಿ ನಂಬ್ರ ಕೆ ಎ 21 ಎ 4495 ಚಾಲಕ ಟ್ಯಾಂಕರನ್ನು ಮೂಡಬಿದ್ರೆ ಕಡೆಯಿಂದ ಶಿರ್ತಾಡಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಶಿರ್ತಾಡಿ ಕಡೆಯಿಂದ ಮೂಡಬಿದ್ರೆ ಕಡೆಗೆ ಟಾಟಾ ಎಸ್ ವಾಹನ ಕೆ ಎ 17.2202 ವನ್ನು ರಸ್ತೆಯ ತೀರ ಎಡಬದಿಯಲ್ಲಿ ಸವಾರಿ ಮಾಡಿ ಕೊಂಡು ಹೋಗುತ್ತಿದ್ದ ,ಪಿರ್ಯಾದಿದಾರರ ಗಂಡನ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಸ್ವರೂಪದ ಗಾಯವಾದ ,ಪಿರ್ಯಾದಿದಾದರ ಗಂಡನನ್ನು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ಕರೆತಂದಿದ್ದು ,ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಎ, ಜೆ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾರೆ.  ಕೆ ಎ 21.ಎ 4595 ಚಾಲಕ ಸುರೇಶ ಗೌಡ ಟ್ಯಾಂಕರನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿದ್ದೆ ಈ ಅಪಘಾತಕ್ಕೆ ಕಾರಣವಾಗಿರುತ್ತದೆ.

Crime Reported in  Mangalore Women PS

ದಿನಾಂಕ 20-07-2021 ರಂದು ಸಂಜೆ 16.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ನವ್ಯಶ್ರೀ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರಿಗೆ ಮೈಸೂರಿನ ಎಂ. ಎಂ. ವಿಶ್ವನಾಥ ಭಂಡಾರಿರವರ ಮಗ ಅರವಿಂದ ವಿ ಎಂಬುವರ ಜೊತೆ ದಿನಾಂಕ 12-07-2020 ರಂದು ಮೂಡಬಿದ್ರೆಯಲ್ಲಿ ಮದುವೆಯಾಗಿದ್ದು, ಮದುವೆಯ ಸಮಯ ಗಂಡನ ಮನೆಯವರ ಬೇಡಿಕೆಯಂತೆ 60 ಪವನ್ ಚಿನ್ನ ಹಾಗೂ ಹುಡುಗನಿಗೆ ಚಿನ್ನದ  ಬ್ರೇಸ್ಲೆಟ್ ಹಾಗೂ ಎಂಟು ಲಕ್ಷ ವರದಕ್ಷಿಣೆಯನ್ನು ನೀಡಿರುತ್ತಾರೆ. ದಿನಾಂಕ 13-07-2020 ರಂದು ಗಂಡನ ಮನೆಯಾದ ಮೈಸೂರಿಗೆ ಹೋಗಿದ್ದು, 15 ದಿನಗಳ ಕಾಲ ಮೈಸೂರಿನಲ್ಲಿದ್ದು, ನಂತರ ಗಂಡ ಕೆಲಸದ ನಿಮಿತ್ತ ವಾಸವಾಗಿದ್ದ ಮಡಿಕೇರಿಯ ಮನೆಗೆ ತೆರಳಿರುತ್ತಾರೆ. ಅಲ್ಲಿ ಪಿರ್ಯಾದಿದಾರರ ಗಂಡ ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಆರೋಪಿತನಿಗೆ ಬೇರೆ ಹೆಂಗಸರ ಜೊತೆಯಲ್ಲಿ ಸಂಬಂಧವಿರುವ ಬಗ್ಗೆ ಪಿರ್ಯಾದಿದಾರರಿಗೆ ತಿಳಿದು ವಿಚಾರಿಸಿದಾಗ ಆರೋಪಿತನು ಬೆಲ್ಟ್ ನಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ನೀನು ನನ್ನ ತಂದೆ ತಾಯಿಯ ಮನೆಯಾದ ಮೈಸೂರಿನಲ್ಲೇ ಬಿದ್ದಿರಬೇಕು ಎಂದು ಹೇಳಿ, ಮೈಸೂರಿಗೆ ತಂದು ಬಿಟ್ಟಿದ್ದು,  ಆರೋಪಿ 2 KENCHAMMA ಹಾಗೂ 3 VISHWANATHA BANDARI  ರವರು 1ನೇ ಆರೋಪಿತ ಹುಟ್ಟು ಹಬ್ಬದ ದಿನ ಉಳಿದ ವರದಕ್ಷಿಣೆಯನ್ನು ನೀಡಬೇಕು ಎಂದು ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದಲ್ಲದೇ ಆರೋಪಿತರೆಲ್ಲರೂ ಸೇರಿ ಸಾಯಿಸುವುದಾಗಿ ಹಾಗೂ ಪಿರ್ಯಾದಿದಾರರು ಕೊರೊನಾದಿಂದ ಸತ್ತಿದ್ದು ಎಂದು ಸುಳ್ಳು ಸುದ್ಧಿ ಹಬ್ಬಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಮನೆಯಿಂದ ಹೊರ ಹಾಕಿರುತ್ತಾರೆಂಬಿತ್ಯಾದಿ

Crime Reported in  Cyber Crime PS

ಪಿರ್ಯಾದಿದಾರರಾದ ರೋಷಲ್ ಗ್ಲೆನಿಟಾ ಫೆರ್ನಾಂಡಿಸ್ ರವರು 16 ವರ್ಷದ ಬಾಲಕಿಯಾಗಿದ್ದು ನಗರದ ಮಿಲಾಗ್ರಿಸ್ ಸ್ಕೂಲಿನಲ್ಲಿ 10 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವುದಾಗಿದೆ. ಇವರು ತಮ್ಮ  ಆನ್‍ಲೈನ್ ತರಗತಿಯ ಬಗ್ಗೆ ತನ್ನ ತಾಯಿಯ ಬಾಬ್ತು ಏರ್ಟೆಲ್ ಸಿಮ್ ಹೊಂದಿರುವ ಒಪ್ಪೋ ಕಂಪೆನಿಯ ಮೊಬೈಲ್ ನ್ನು ಉಪಯೋಗಿಸುತ್ತಿದ್ದರು.  ದಿನಾಂಕ: 19/07/2021 ರಂದು ಸಂಜೆ 19.47 ಗಂಟೆಗೆ ಪಿರ್ಯಾದಿದಾರರ ವಾಟ್ಸಪ್ ನಂಬರಿಗೆ  ಅಪರಿಚಿತ ವ್ಯಕ್ತಿಯು  8113044114 ನೇ ನಂಬ್ರದಿಂದ    ಹಾಯ್ ಎಂಬುದಾಗಿ ಸಂದೇಶ ಕಳುಹಿಸಿದ್ದು ಈ ಬಗ್ಗೆ ಪಿರ್ಯಾದಿದಾರರು ನೀನು ಯಾರೆಂದು  ಕೇಳಿದಾಗ ಅಪರಿಚಿತ ವ್ಯಕ್ತಿಯು ಯಾವುದೇ ಪ್ರತ್ಯತ್ತರ ನೀಡದೇ ಇದ್ದು ತದನಂತರ  ರಾತ್ರಿ  21.24 ಗಂಟೆಗೆ ಅದೇ ಅಪರಿಚಿತ ವ್ಯಕ್ತಿಯು ಇಬ್ಬರು ವಯಸ್ಕ ವ್ಯಕ್ತಿಗಳು ಲೈಂಗಿಕ  ಚಟುವಟಿಕೆಯಲ್ಲಿ ತೊಡಗಿರುವ ಒಂದು ಅಶ್ಲೀಲ ಜಿಫ್ ವೀಡಿಯೋವನ್ನು ಕಳುಹಿಸಿದ್ದು ಇದರಿಂದ ಪಿರ್ಯಾದಿದಾರರು ಓದಿನ ಕಡೆಗೆ ಸರಿಯಾದ ಗಮನವನ್ನು ನೀಡಲು ಸಾಧ್ಯವಾಗದೇ ಇದ್ದು  ಮಾನಸಿಕ ಹಿಂಸೆಯಿಂದ ನೊಂದಿರುವುದಾಗಿದೆ. ಎಂಬಿತ್ಯಾದಿ.

Crime Reported in  Konaje PS

ಪಿರ್ಯಾದಿರವರಿಗೆ  ಕಳೆದ ಒಂದು ವರ್ಷದ ಹಿಂದೆ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಮ್ ನಲ್ಲಿ ಮಂಜುನಾಥ ಎಂಬವರ ಪರಿಚಯವಾಗಿದ್ದು ಬಳಿಕ ಪರಸ್ಪರರು ಚಾಟಿಂಗ್ ಮಾಡುತ್ತಾ, ಪೋಟೋ ಹಂಚಿಕೆ ಮಾಡಿಕೊಂಡಿದ್ದು, ಇತ್ತಿಚಿಗೆ ಮಂಜುನಾಥನು  “ನಿನ್ನ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ. 5 ಲಕ್ಷ ರೂಪಾಯಿ ನೀಡಿದರೇ, ನಿನ್ನ ಯಾವೂದೇ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಿಲ್ಲ” ಎಂದು ಹಣ ಸುಲಿಗೆ ಮಾಡುವ ಉದ್ದೇಶದಿಂದ ಬೆದರಿಕೆ ಹಾಕಿದ್ದು, ಇದರಿಂದ ಪಿರ್ಯಾದಿದಾರರು ಭಯಗೊಂಡು ದಿನಾಂಕ 17.07.2021 ರಂದು ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಕುಕ್ಕದಕಟ್ಟೆ ಎಂಬಲ್ಲಿರುವ ತಮ್ಮ  ಮನೆಯಲ್ಲಿ ಯಾರಿಗೂ ತಿಳಿಸದೇ ಚಾಕ್ಲೆಟ್ ಜೊತೆಗೆ ಇಲಿ ಪಾಷಾಣವನ್ನು ಸೇರಿಸಿಕೊಂಡು ಸೇವಿಸಿರುತ್ತಾರೆ. ನಂತರ ದಿನಾಂಕ 19.07.2021 ರಂದು ಪಿರ್ಯಾದಿದಾರರು ಅಸ್ವಸ್ಥರಾಗಿದ್ದರಿಂದ ತಾಯಿ ವೇದಾವತಿಯವರು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲು ಮಾಡಿದ್ದು, ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿ ಹಾಗೂ ಇದಕ್ಕೆಲ್ಲ ಅರೋಪಿ ಮಂಜುನಾಥನೇ ಕಾರಣವಾಗಿದ್ದು, ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿರ್ಯಾದಿದಾರರು ಆಸ್ಪತ್ರೆಯಲ್ಲಿ ಹೇಳಿಕೆ ನೀಡಿರುತ್ತಾರೆ ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 22-07-2021 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080