ಅಭಿಪ್ರಾಯ / ಸಲಹೆಗಳು

Crime Reported in Urva PS 

BEJAI  KAPIKAD ನಿವಾಸಿ ಪಿರ್ಯಾದಿ SMT  MAMATHA DEVANANDA ರವರು  ಮತ್ತು  ಆರೋಪಿ BEMAHAI(A1) RATHI(A2)ಗಳು  ನೆರೆಕರೆಯವರಾಗಿದ್ದು  ಪಿರ್ಯಾದಿದಾರರು  ತನ್ನ  ಮನೆಯ  ನಾಲ್ಕು  ದಿಕ್ಕುಗಳಲ್ಲಿ  ಸಿಸಿ  ಕ್ಯಾಮಾರ  ಅಳವಡಿಸಿದ  ಬಗ್ಗೆ ಅಸಮದಾನ  ಹೊಂದಿದ್ದ ಆರೋಪಿತ  ಬೀಮಯ್ಯ  ಎಂಬವರು  ದಿನಾಂಕ   13.06.2021 ರಂದು  ರಾತ್ರಿ 10:00  ಗಂಟೆಗೆ  ಪಿರ್ಯಾದಿದಾರರನ್ನು  ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ನಿನ್ನ  ಗಂಡ  ಲೌಡ ನೀನು  ಯಾವ  ಕಾರಣಕ್ಕೆ ಜಿಮ್  ಗೆ  ಹೋಗುವುದು  ಎಂಬುದಾಗಿ  ನನಗೆ ಗೊತ್ತಿದೆ” ಎಂದು  ಅವಾಚ್ಯ  ಶಬ್ದದಿಂದ ಬೈದುದಲ್ಲದೆ, ತಲವಾರು  ಗನ್  ತೋರಿಸಿ ಬೆದರಿಸಿರುತ್ತಾರೆ ದಿನಾಂಕ 15.06.2021  ರಂದು  ಆರೋಪಿತೆ  ರತಿ ರವರು ಬೆಳಿಗ್ಗೆ  ...... ಎಂದು  ಅವಾಚ್ಯ  ಶಬ್ದದಿಂದ ಬೈದು ನಿಂದಿಸಿರುತ್ತಾರೆ  ಎಂಬಿತ್ಯಾದಿ

Crime Reported in Kankanady Town PS

ಪಿರ್ಯಾದಿದಾರರಾದ ಸ್ವಾಮೀತ್ ಶೆಟ್ಟಿ (25) ದಿನಾಂಕ 21-06-2021 ರಂದು ಯಾರೋ ಕಳ್ಳರು ತಮ್ಮ ಮನೆಯ ಸಾಕುದನಗಳನ್ನು ಕಳ್ಳತನ ಮಾಡುತ್ತಾರೆ ಎಂಬ ಮಾಹಿತಿ ಬಂದ ಮೇರೆಗೆ ತನ್ನ ತಮ್ಮಂದಿರೊಂದಿಗೆ ಹೊರಗಡೆ ಕಟ್ಟಿಹಾಕಿದ್ದ ದನಗಳನ್ನು ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆಗುತ್ತು ಎಂಬಲ್ಲಿರುವ ಮನೆಯ ಸಮೀಪ ತಂದು ಕಟ್ಟಿಹಾಕುತ್ತೀರುವ ಸಮಯ ರಾತ್ರಿ ಸುಮಾರು 11:30 ಗಂಟೆಗೆ ಇದೇ ವಿಚಾರದಲ್ಲಿ ಪಿರ್ಯಾದಿದಾರರ ತಂದೆಯಾದ ವಿಶ್ವನಾಥ ಶೆಟ್ಟಿ (52) ತಕರಾರು ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ “ಅವಾಚ್ಯ ಶಬ್ದಗಳಿಂದ ನೀನ್ಯಾಕೆ ನನ್ನ ದನಗಳನ್ನು ಕಟ್ಟಿಹಾಕಿದ್ದಿ” ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಪಿರ್ಯಾದಿದಾರರಿಗೆ ಹೊಡದಿರುವುದಲ್ಲದೇ, ಬಳಿಕ ಆತನು ತಪ್ಪಿಸಿಕೊಂಡು ಅವರ ಮನೆಯ ಒಳಗಡೆ ಹೋದಾಗ ಪಿರ್ಯಾದಿದಾರರ ತಂದೆಯು ಅವರನ್ನು ಹಿಂಬಾಲಿಸಿ ಮನೆಯ ಒಳಗಡೆ ಬಂದು ಬಾಗಿಲು ಮುಚ್ಚಿ, ಚಿಲಕವನ್ನು ಹಾಕಿದ್ದು, ಬಳಿಕ ಪಿರ್ಯಾದಿದಾರರನ್ನು ಉದ್ದೇಶಿಸಿ “ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವಾಗಿ” ಜೀವ ಬೆದರಿಕೆ ಒಡ್ಡಿರುವುದಲ್ಲದೇ, ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಮನೆಯೊಳಗಿದ್ದ ಪ್ಲಾಸ್ಟಿಕ್ ಕ್ಯಾನ್ ನಲ್ಲಿದ್ದ ಪೆಟ್ರೊಲ್ ನ್ನು ಪಿರ್ಯಾದಿದಾರರ ಮೈ ಮೇಲೆ ಸುರಿದು ಅಲ್ಲಿಯೇ ಇದ್ದ ಸಿಗರ್ ಲೈಟರ್ ನಿಂದ ಬೆಂಕಿ ಹಚ್ಚಿರುವುದರಿಂದ ಪಿರ್ಯಾದಿದಾರರ  ಮೈಮೇಲೆ ಅಲ್ಲಲ್ಲಿ ಸುಟ್ಟ ಗಾಯಗಳಾಗಿರುತ್ತದೆ  ಎಂಬಿತ್ಯಾದಿ.

Crime Reported in Traffic North PS

ದಿನಾಂಕ:21-06-2021 ರಂದು 21-00 ಗಂಟೆಗೆ ಪಿರ್ಯಾದಿದಾರರಾದ ಅಬ್ದುಲ್ ಹಕೀಂರವರ ತಮ್ಮ ಇಸ್ಮಾಯಿಲ್ ನಿಸಾರ್ ರವರು ಜೊಮೊಟೋ ಆನ್ ಲೈನ್ ಫುಡ್ ಡೆಲೆವೆರಿ ಕಂಪೆನಿಯ ಕೆಲಸದ ನಿಮಿತ್ತ ಅವರ ಬಾಬ್ತ KA19EP0362 ನೇಯದರಲ್ಲಿ ಆರ್ಡರ್ ಬಗ್ಗೆ ಪಾವಂಜೆ ಕಡೆಯಿಂದ ಮುಕ್ಕ ಕಡೆಗೆ ಬರುತ್ತಾ ರಾಹೆ 66 ರ ಪಾವಂಜೆ ಸೇತುವೆ ಆರಂಭದ ಎಡಬದಿಯ ರಸ್ತೆಯಲ್ಲಿ ನಿಲ್ಲಿಸಿದ ಬಗ್ಗೆ ಯಾವುದೇ ಸೂಚನೆ ಮತ್ತು ವಾಹನದ ಪಾರ್ಕಿಂಗ್ ಲೈಟ್ ಹಾಕದೇ ಅಪಾಯಕಾರಿ ರೀತಿಯಲ್ಲಿ ನಿಲ್ಲಿಸಿದ್ದ KA19C8741 ನೇ ನಂಬ್ರದ ಲಾರಿಯ ಹಿಂಬದಿಗೆ ಮೋಟಾರ್ ಸೈಕಲ್ ಸವಾರ ಇಸ್ಮಾಯಿಲ್ ನಿಸಾರ್ ರವರು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಇಸ್ಮಾಯಿಲ್ ನಿಸಾರ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಎಡ ಕೈ ಮತ್ತು ಎಡಕಾಲಿಗೆ ಮೂಳೆ ಮುರಿತದ ಗಂಭಿರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಫ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರ್ಯಾದಿ ಸಾರಾಂಶ.

 

ಇತ್ತೀಚಿನ ನವೀಕರಣ​ : 22-06-2021 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080