ಅಭಿಪ್ರಾಯ / ಸಲಹೆಗಳು

Crime Reported in  E and N Crime PS

ಪಿರ್ಯಾದಿದಾರರಾದ ಪಟೇಲ್ ಶ್ರೀನಿವಾಸ ರಾವ್, ಪ್ರಾಯ 85 ವರ್ಷ ರವರು ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ ಸರ್ವೆ ನಂಬ್ರ 78/4, ಸರ್ವೆ ನಂಬ್ರ 78/1ಸಿಪಿ1, ಇಡ್ಯಾ ಗ್ರಾಮದ ಸರ್ವೆ ನಂಬ್ರ 4/1ಸಿ1 ನೇ ದರಲ್ಲಿ ಒಟ್ಟು ಸುಮಾರು 1 ಎಕರೆ 43 ಸೆಂಟ್ಸ್ ಜಾಗ ಇದ್ದು, ಪಿರ್ಯಾದಿದಾರರಿಗೆ ತುರ್ತಾಗಿ ದೊಡ್ಡ ಪ್ರಮಾಣದಲ್ಲಿ ಹಣದ ಅವಶ್ಯಕತೆ ಇದ್ದುದರಿಂದ ಪಿರ್ಯಾದಿದಾರರು ಆರೋಪಿ 1) DINESH HEGDE ULEPADI(A1) / CHINNAPPA, FLAT NO 1003 10 TH FLOOR MOURISHKA PALACE, KADRI KAMBLA 2) RAVINDRA(A2) / DHAMODAR ACHARYA, HOUSE NO 2-114-1 SOUMYASRI NILAYA 2ND BLOCK,KATIPALLA ರಲ್ಲಿ ಹಣದ ಅವಶ್ಯಕತೆಯ ಬಗ್ಗೆ ಹಾಗೂ ಆಸ್ತಿಯನ್ನು ಮಾರಾಟ ಮಾಡುವ ಬಗ್ಗೆ ತಿಳಿಸಿದ್ದು, ಆರೋಪಿತರು ಪಿರ್ಯಾದಿದಾರರ ಬಾಬ್ತು ತಲಾ 50 ಸೆಂಟ್ಸ್ (1 ಎಕರೆ) ಜಾಗ ಖರೀದಿಸುವುದಾಗಿಯೂ ಸೆಂಟ್ಸ್ ಒಂದಕ್ಕೆ ರೂ. 1,50,000/- ರಂತೆ ನೀಡುವುದಾಗಿ ತಿಳಿಸಿ ಪಿರ್ಯಾದಿದಾರರಿಗೆ ಆಶ್ವಾಸನೆ ನೀಡಿದ್ದು, ಪಿರ್ಯಾದಿದಾರರಿಗೆ ಆರೋಪಿತರ ಪರಿಚಯ ಇದ್ದುದರಿಂದ  ಆರೋಪಿತರನ್ನು ನಂಬಿ ವಿಶ್ವಾಸದಿಂದ ಆರೋಪಿತರು ನೀಡಿರುವ ದಾಖಲೆಗಳಿಗೆ ಸಹಿ ಹಾಕಿ ನೀಡಿದ್ದು,  ಆರೋಪಿತರು ರೂ. 49,28,700/-ನ್ನು ಪಾವತಿಸಿ ಉಳಿದ ರೂ. 1 ಕೋಟಿಯನ್ನು ನೀಡುವುದಾಗಿ ನಂಬಿಸಿ ಹಣವನ್ನು ನೀಡದೇ ಸತಾಯಿಸುತ್ತಾ ಇದ್ದುದಲ್ಲದೇ ಆರೋಪಿತರು ಪಿರ್ಯಾದಿದಾರರ ಸಂಪರ್ಕಕ್ಕೆ ಸಿಗದೇ ಇದ್ದುದನ್ನು ಕಂಡು ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿತರು ಪಿರ್ಯಾದಿದಾರರನ್ನು ವಿಶ್ವಾಸಕ್ಕೆ ಪಡೆದು, ನಂಬಿಸಿ, ದಾಖಲೆಗಳನ್ನು ಸೃಷ್ಠಿಸಿ ಮೋಸದಿಂದ ವಂಚಿಸಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ.

Crime Reported in Ullal PS

ಪ್ರಕರಣದ ಫಿರ್ಯಾದಿದಾರರಾದ ಸಂದೀಪ್.ಜಿ.ಎಸ್. ಪೊಲೀಸ್ ನಿರೀಕ್ಷಕರು, ಉಳ್ಳಾಲ ಪೊಲೀಸ್ ಠಾಣೆ ರವರು ಸಿಬ್ಬಂದಿಗಳ ಜೊತೆಯಲ್ಲಿ ದಿನಾಂಕ. 21-7-2021 ರಂದು ರಾತ್ರಿ ಸಮಯ ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಾ ರಾತ್ರಿ ಸುಮಾರು 10:10 ಗಂಟೆಗೆ ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಬೀರಿ ಜಂಕ್ಷನ್ ಬಳಿ ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಮಯ ಮಂಗಳೂರು ಕಡೆಯಿಂದ ಕೇರಳ ಕಡೆಗೆ ಬರುತ್ತಿದ್ದ ಕೆಎಲ್-56-ಎಲ್-6763 ನೇ ಮಾರುತಿ ಸಿಲೇರಿಯೋ ಕಾರನ್ನು ಸೂಚನೆ ಕೊಟ್ಟು ನಿಲ್ಲಿಸಿದಾಗ ಅದರ ಚಾಲಕ ಶ್ರವಣ್ ರಾಜ್ ಕಾರಿನಿಂದ ಇಳಿದು ಓಡಲು ಯತ್ನಿಸಿದಾಗ ಆತನನ್ನು ಸುತ್ತುವರಿದು ಹಿಡಿದು, ನಂತರ ಕಾರನ್ನು ತಪಾಸಣೆ ನಡೆಸಿದಾಗ ಸದ್ರಿ ಕಾರಿನಲ್ಲಿ ಆರೋಪಿತನು ಯಾವುದೇ ಪರವಾನಿಗೆ ಇಲ್ಲದೇ ಸುಮಾರು 180 ಎಂ.ಎಲ್.x 48 ರಂತೆ ಇರುವ 25 ಬಾಕ್ಸ್ ಗಳಿಗಿಂತಲೂ ಅಧಿಕ ಬಾಕ್ಸ್ ಗಳಲ್ಲಿ ಓ.ಸಿ, ಬಾಸ್, ಡಿ.ಕೆ. ಎಂಬಿತ್ಯಾದಿ ಕಂಪೆನಿಯ ವಿಸ್ಕಿ ಎಂಬ ಮದ್ಯ ತುಂಬಿದ ಬಾಕ್ಸ್ ಗಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದುದಲ್ಲದೆ, ರಾತ್ರಿ 10-00 ಗಂಟೆಯ ನಂತರ ಲಾಕ್ ಡೌನ್ ಅವಧಿಯಾಗಿದ್ದರೂ ಆರೋಪಿತನು ಅನಗತ್ಯವಾಗಿ ಕಾರನ್ನು ಚಲಾಯಿಸಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಸರಕಾರ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿದಲ್ಲದೆ, ಸಾಂಕ್ರಾಮಿಕ ರೋಗ ಹರಡಲು ಆರೋಪಿತನು ಸಹಕರಿಸಿದ್ದು, ಮದ್ಯದ ಅಂದಾಜು ಮೌಲ್ಯ ರೂ.75 ಸಾವಿರ ಹಾಗೂ ಕಾರಿನ ಅಂದಾಜು ಮೌಲ್ಯ ರೂ. 2ಲಕ್ಷ ಆಗಬಹುದು. ಈ ಬಗ್ಗೆ ಆರೋಪಿತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 22-07-2021 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080