Crime Reported in Cyber Crime PS
1) ದಿನಾಂಕ 21-06-2021 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿದಾರರು ತನ್ನ ಇನ್ ಸ್ಟಾ ಗ್ರಾಂ ಖಾತೆಯಲ್ಲಿ Srinivas ಎಂಬವರು ಹೋಂಡಾ ಡಿಯೋ 23000 (Honda Dio 23000) ಎಂಬ ವಾಹನವು ಮಾರಾಟಕ್ಕಿದೆ ಎಂಬ ಬಗ್ಗೆ ಜಾಹಿರಾತನ್ನು ಹಾಕಿ ಅದರಲ್ಲಿ 8763043320 ನಂಬರನ್ನು ಸಂಪರ್ಕಿಸಲು ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು ತನ್ನ ನಂಬ್ರದಿಂದ ಮೇಲೆ ತಿಳಿಸಲಾದ ನಂಬರಿಗೆ ಕರೆ ಮಾಡಿ ಆ ವ್ಯಕ್ತಿಯೊಂದಿಗೆ ಚರ್ಚೆ ಮಾಡಿದ್ದು ಆಗ ಆತನು ತಾನು 18000/- ಕೊಡುವಂತೆ ಒಪ್ಪಂದ ನಡೆಸಿರುತ್ತಾರೆ. ಅಲ್ಲದೇ ತಾನು ಆರ್ಮಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿ ತನ್ನ ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು, ಕಛೇರಿಯ ಪೋಟೊವನ್ನು ಪಿರ್ಯಾದಿದಾರರಿಗೆ ವಾಟ್ಸಪ್ ನಲ್ಲಿ ಕಳುಹಿಸಿರುತ್ತಾರೆ. ಆಮೇಲೆ ಕೂಡಾ ಶ್ರೀನಿವಾಸ್ ಎಂಬವರು ಪುನ ಕರೆ ಮಾಡಿ ಮುಂಗಡ ಹಣ ಕಳುಹಿಸುವಂತೆ ತಿಳಿಸಿದ್ದು ಅದರೊಂದಿಗೆ ಆರ್.ಸಿ ವರ್ಗಾಯಿಸುವ ಬಗ್ಗೆ ಆಧಾರ್ ಕಾರ್ಡ್ ನ್ನು ನೀಡಲು ತಿಳಿಸಿರುವಂತೆ ಪಿರ್ಯಾದಿದಾರರು ತನ್ನ ತಾಯಿಯ ಆಧಾರ್ ಕಾರ್ಡಿನ ಪ್ರತಿಯನ್ನು ಕಳುಹಿಸಿದ್ದು ಪಿರ್ಯಾದಿದಾರರು ತನ್ನ ಸ್ನೇಹಿತ ಅನಿಲ್ ರವರ ಗೂಗಲ್ ಪೇ ದಿಂದ ಮುಂಗಡ ಹಣ 3000 ರೂ ಶ್ರೀನಿವಾಸ್ ಎಂಬವರು ನೀಡಿದ ಗೂಗಲ್ ಪೇ ನಂಬ್ರ 7089490158 ಗೆ. ಕಳುಹಿಸಿರುತ್ತಾರೆ. ನಂತರ ಕೂಡಾ ಶ್ರೀನಿವಾಸ ಎಂಬವರು 8763043320 ಹಾಗೂ 7008096413 ನೇ ನಂಬ್ರದಿಂದ ಹಲವಾರು ಬಾರಿ ಪಿರ್ಯಾದಿದಾರರಿಗೆ ಕರೆ ಮಾಡಿ ಪಿರ್ಯಾದಿದಾರರ ಸ್ನೇಹಿತರ ಪೋನ್ ಪೇ ನಂಬ್ರದಿಂದ ಹಂತ ಹಂತವಾಗಿ ಹಣವನ್ನು ತನ್ನ ಗೂಗಲ್ ಪೇ ನಂಬ್ರ 7089490158, 7089778040 ಗೆ ಒಟ್ಟು ಮೊತ್ತ ರೂ.51,300/- ನ್ನು ತನ್ನ ಖಾತೆಗೆ ವರ್ಗಾಯಿಸಿ ಕೊಂಡು ಪಿರ್ಯಾದಿದಾರರಿಗೆ ಹೊಂಡಾ ಡಿಯೋ ವಾಹನವನ್ನು ಕಳುಹಿಸದೇ ಮೋಸ ಮಾಡಿರುತ್ತಾರೆ. ಎಂಬಿತ್ಯಾದಿ.
2) ಮಾನ್ಯ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯ ಕೇಂದ್ರ ಸರ್ಕಾರವು ಕಾಣೆಯಾದ ಮತ್ತು ಶೋಷಿತ ಮಕ್ಕಳ ಕೇಂದ್ರವನ್ನು (National Centre for Missing and Exploited Children) ದಿನಾಂಕ: 26-04-2019 ರಂದು ಸ್ಥಾಪಿಸಿರುತ್ತದೆ. ಶೋಷಿತ ಮಕ್ಕಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ Cyber Tip Line ರಿಪೋರ್ಟ್ ಸಿಡಿಯನ್ನು NCRB ರವರಿಂದ ಬೆಂಗಳೂರು ಸಿಐಡಿ ಯವರು ಅಂಚೆ ಮೂಲಕ ಸ್ವೀಕರಿಸಿಕೊಂಡು ಸದ್ರಿ ಟಿಪ್ ಲೈನ್ ನಲ್ಲಿ ನೋಂದಣಿಯಾಗಿರುವ ದೂರುಗಳನ್ನು ಪರಿಶೀಲಿಸಿ ವಿಚಾರಣೆ ಕೈಗೊಂಡು ದೂರನ್ನು ಸಂಬಂಧಪಟ್ಟ ಸರಹದ್ದಿನ ಪೊಲೀಸು ಅಧಿಕಾರಿಗಳು ದಾಖಲಿಸಿಕೊಂಡು ತನಿಖೆ /ವಿಚಾರಣೆ ಕೈಗೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಅದರಂತೆ Cyber Tip Line ರಲ್ಲಿ ಮಂಗಳೂರು ನಗರ ಸರಹದ್ದಿಗೆ ಸಂಬಂಧಪಟ್ಟ ದಾಖಲಾತಿಯನ್ನು ಕಳುಹಿಸಿಕೊಟ್ಟಿದ್ದನ್ನು ದಿನಾಂಕ: 22/06/2021 ರಂದು ಸ್ವೀಕರಿಸಿ ವರದಿ ಹಾಗೂ ಸಿಡಿಯನ್ನು ಪರಿಶೀಲಿಸಲಾಗಿ 27-06-2020 ರಿಂದ 28-06-2020 ರಂದು, ಮಗುವಿನ ಅಶ್ಲೀಲತೆಯ ವೀಡಿಯೋವನ್ನು astncold999@gmail.com (screen/user name-Astn ) ಎಂಬುವರು ಡೌನ್ ಲೋಡ್ ಮಾಡಿ ಅಪ್ ಲೋಡ್ ಮಾಡಿರುವ ಮಾಹಿತಿ ಇರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಅಶ್ಲೀಲತೆ ವೀಡಿಯೋ, ಆರೋಪಿಯ ಮೊಬೈಲ್ ನಂಬರ್, ಇಮೇಲ್ ಐಡಿ ಇತರೆ ಒಳಗೊಂಡಿರುವುದು ಕಂಡುಬರುತ್ತದೆ. ಸದ್ರಿ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಿ ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿಯ ವಿರುದ್ದ ಕಲಂ:67(ಬಿ) ಐಟಿ ಕಾಯ್ದೆ ರಂತೆ ಸ್ವಯಂ ಪ್ರೇರಿತ ವಾಗಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗಿದೆ ಎಂಬಿತ್ಯಾದಿ
3) Cyber Tip Line ರಲ್ಲಿ ಮಂಗಳೂರಿಗೆ ಸಂಬಂಧಿಸಿದ ದೂರನ್ನು ದಿನಾಂಕ: 22/06/2021 ರಂದು ಕಳುಹಿಸಿಕೊಟ್ಟಿರುವುದನ್ನು ಸ್ವೀಕರಿಸಿ ಪರಿಶೀಲಿಸಲಾಗಿ 04-06-2020 ರಂದು, ಮಗುವಿನ ಅಶ್ಲೀಲತೆಯ ವೀಡಿಯೋವನ್ನು Shan Royz (Screen Name-sanjth. ) ಎಂಬುವರು ಡೌನ್ ಲೋಡ್ ಮಾಡಿ ಅಪ್ ಲೋಡ್ ಮಾಡಿರುವ ಮಾಹಿತಿ ಇರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಅಶ್ಲೀಲತೆ ವೀಡಿಯೋ, ಆರೋಪಿಯ ಮೊಬೈಲ್ ನಂಬರ್, ಇಮೇಲ್ ಐಡಿ ಇತರೆ ಒಳಗೊಂಡಿರುವುದು ಕಂಡುಬರುತ್ತದೆ. ಸದ್ರಿ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಿ ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿಯ ವಿರುದ್ದ ಕಲಂ:67(ಬಿ) ಐಟಿ ಕಾಯ್ದೆ ರಂತೆ ಸ್ವಯಂ ಪ್ರೇರಿತ ವಾಗಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗಿದೆ ಎಂಬಿತ್ಯಾದಿ
Crime Reported in Bajpe PS
“ಫಿರ್ಯಾದಿ Vijay Kumar ರವರ ತಂದೆ ಅಶೋಕ ಶೆಟ್ಟಿ ಪ್ರಾಯ 52 ವರ್ಷ ಎಂಬವರು ಕುಡಿತದ ಚಟವನ್ನು ಹೊಂದಿದ್ದು, ನಿನ್ನೆ ದಿನ ದಿನಾಂಕಃ 22-06-2021 ರಂದು ಮಂಗಳೂರು ತಾಲೂಕು ಬಜಪೆ ಗ್ರಾಮದ ಕೊಂಚಾರ್ ನಲ್ಲಿನ ತನ್ನ ವಾಸದ ಮನೆಯಿಂದ ತೆರಳಿದ್ದವರನ್ನು ಸಂಜೆ 6.30 ಗಂಟೆಗೆ ಕೊಂಚಾರ್ ನಲ್ಲಿ ಪಿರ್ಯಾದಿದಾರರ ಪರಿಚಯದವರು ನೋಡಿದ್ದು ಆ ಬಳಿಕ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ ಎಂಬಿತ್ಯಾದಿಯಾಗಿದೆ.
ಕಾಣೆಯಾದವರ ವಿವರ
1)ಹೆಸರು : ಅಶೋಕ ಶೆಟ್ಟಿ
2)ಪ್ರಾಯ: : 52 ವರ್ಷ
3)ವಿಳಾಸ : # 4-176(98)2, ಎಮ್.ಎಸ್.ಇ.ಝಡ್ ಕಾಲನಿ, ಧೂಮಾವತಿ ಧಾಮ, ಕೊಂಚಾರ್, ಬಜಪೆ ಗ್ರಾಮ, ಮಂಗಳೂರು ತಾಲೂಕು.
4)ಎತ್ತರ : 6 ಅಡಿ, ಸಾಧಾರಣ ಶರೀರ, ಕಪ್ಪು ಮೈಬಣ್ಣ, ಕಪ್ಪು-ಬಿಳಿ ಕೂದಲು ಗಡ್ಡ ಇರುತ್ತದೆ.
5)ಮಾತನಾಡುವ ಭಾಷೆ : ಕನ್ನಡ, ತುಳು, ಭಾಷೆ ಮಾತನಾಡುತ್ತಾರೆ.
Crime Reported in Moodabidre PS
ಪಿರ್ಯಾದು JOOYS SUJAY ರವರು ನೆಲ್ಲಿಕಾರು ಗ್ರಾಮದಲ್ಲಿ ಪೂರ್ವಿಕರಿಂದ ಬಂದ ಸ್ವಂತ ಮನೆಯನ್ನು ಹೊಂದಿದ್ದು, ವಿದ್ಯಾಗಿರಿಯಲ್ಲಿ ತಮ್ಮ ಮಗಳೊಂದಿಗೆ ವಾಸವಾಗಿರುತ್ತಾರೆ. ನೆಲ್ಲಿಕಾರುವಿನಲ್ಲಿರುವ ಮನೆಯಲ್ಲಿ ಪ್ರಸ್ತುತ ಯಾರೂ ವಾಸ ಇಲ್ಲದೆ ಇದ್ದು ಪಿರ್ಯಾದುದಾರರು ಮತ್ತು ಅವರ ಮಗಳು ಆಗಾಗ್ಗೆ ಈ ಮನೆಗೆ ಬಂದು ಹೋಗುವುದಾಗಿರುತ್ತದೆ. ಹೀಗಿರುವಾಗ ದಿನಾಂಕ: 17-06-2021 ರಿಂದ ದಿನಾಂಕ: 22-06-2021 ರ ನಡುವೆ ಯಾರೋ ಆಸಾಮಿಗಳು ಪಿರ್ಯಾದುದಾರರ ನೆಲ್ಲಿಕಾರುವಿನಲ್ಲಿರುವ ಮನೆಯ ಮುಂಭಾಗಿಲಿನ ಬೀಗ ಮುರಿದು ಮನೆಯಲ್ಲಿದ್ದ ಸುಮಾರು 60.000/-ರೂ.ಬೆಲೆಬಾಳುವ ವಾಚುಗಳು, ಕ್ಯಾಮರಾ, ಟಿವಿ ಮುಂತಾದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿರುವ ದೂರು ಇತ್ಯಾದಿ.
2)ಪಿರ್ಯಾದಿ VISHALರವರ ಮನೆಯಾದ ಒಂಟಿಕಟ್ಟೆಯಿಂದ ಹೆಂಡತಿ ರಮ್ಯ,ಹಾಗೂ ಮಗು ಸಮಯ ಸುಮಾರು 12.00 ಗಂಟೆಗೆ ಮನೆಯಿಂದ ಎರಡು ಜನರು ಹೋಗಿದ್ದು. ನಂತರ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಅವರು ಈವರೆಗೆ ಮೂಡಬಿದ್ರೆ ಮಂಗಳೂರು ಸುತ್ತಮುತ್ತ ನಮ್ಮ ಕುಟುಂಬವರಿಗೂ ವಿಚಾರಿಸಲಾಗಿ ಮತ್ತು ಹುಡುಕಾಡಿದಲ್ಲಿ ಹೆಂಡತಿ ರಮ್ಯ, ಮಗು ರುತ್ವಿ ರವರು ಪತ್ತೆಯಾಗಿರುವುದಿಲ್ಲ. ಕಾಣೆಯಾದವರನ್ನು ಪತ್ತೆ ಹಚ್ಚಿ ಕೊಡಬೇಕು ಎಂಬಿತ್ಯಾದಿ ದೂರಿನ ಸಾರಾಂಶವಾಗಿರುತ್ತದೆ.