ಅಭಿಪ್ರಾಯ / ಸಲಹೆಗಳು

Crime Reported in  E and N Crime PS

ಪಿರ್ಯಾದಿ SMT.SUJATHA V SHENOY ರವರು ತನ್ನ ಗಂಡ ಹಾಗೂ ಆರೋಪಿತರಾದ ಮನೋಜ್ ನಾಯಕ್ ಜತೆ ಸೇರಿ ಹರಿ ಓಂ ವೆಂಚರ್ಸ್ ಎಂಬ ಸಂಸ್ಥೆಯನ್ನು ಪಾಲುದಾರಿಕೆಯಲ್ಲಿ ಪ್ರಾರಂಭಿಸಿ 2015 ರಲ್ಲಿ ಮಂಗಳೂರಿನ ಕಲಾಕುಂಜದ ಬಳಿ ಹರಿ ಓಂ ಹರ್ಷಾಲಯ ವಸತಿ ಸಮುಚ್ಛಯವನ್ನು ಕಟ್ಟಲು ನಿರ್ಧರಿಸಿದ್ದು ಆರೋಪಿತನು ಪಿರ್ಯಾದಿದಾರರಲ್ಲಿ ಸದ್ರಿ ವಸತಿ ಸಮುಚ್ಛಯದ ಕಾಂಟ್ರಾಕ್ಟ್ ಕೆಲಸವನ್ನು ಮಾಡುವುದಾಗಿ ತಿಳಿಸಿ ಪಿರ್ಯಾದಿದಾರರನ್ನು ನಂಬಿಸಿ ಕಾಮಗಾರಿಯ ಬಾಬ್ತು ರೂ. 3,54,14,967/- ಹಣವನ್ನು ಪಡೆದು ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ ರೂ. 2,28,74,906/- ಮೊತ್ತದ ಕಾಮಗರಿಯನ್ನು ನಡೆಸಿ ಸುಳ್ಳು ಲೆಕ್ಕ ಪತ್ರವನ್ನು ತಯಾರಿಸಿ ಕಾಮಗಾರಿಯನ್ನು ಅರ್ಧದಲ್ಲಿ ನಿಲ್ಲಿಸಿ ಹೋಗಿದ್ದು, ಇದರಿಂದ ಪಿರ್ಯಾದಿದಾರರಿಗೆ ಸುಮಾರು 1,15,57,167/- ರೂಪಾಯಿಕ್ಕಿಂತಲೂ ಅಧಿಕ ನಷ್ಟವುಂಟು ಮಾಡಿದ್ದಲ್ಲದೇ ಸದ್ರಿ ವಸತಿ ಸಮುಚ್ಛಯದಲ್ಲಿ ಪ್ಲ್ಯಾಟ್ ಖರೀದಿ ಬಾಬ್ತು ಮತ್ತು 1000 ಚ.ಅಡಿ ವಾಣಿಜ್ಯ ಅಂಗಡಿಯ ಬಾಬ್ತು ಇತರರಿಂದ ಹಣವನ್ನು ಪಡೆದು, ನಮ್ಮ ಸಂಸ್ಥೆಗೆ ಪಾವತಿಸದೇ ಆರೋಪಿತನು ಆತನ ಸ್ವಂತಕ್ಕೆ ಬಳಸಿ ನಂಬಿಕೆ ದ್ರೋಹವೆಸಗಿ, ಪಿರ್ಯಾದಿದಾರರಿಗೆ ನಷ್ಟವುಂಟು ಮಾಡಿ, ಕೆನರಾ ಬ್ಯಾಂಕ್ ಪೌಂಡರ್ಸ್ ಬ್ರಾಂಚಿನಿಂದಲೂ ಸಾಲವನ್ನು ಪಡೆದು ಸರಕಾರಕ್ಕೆ ಪಾವತಿಸಬೇಕಾದ ಜಿ.ಎಸ್.ಟಿ. ರೂ. 19,98,400/- ಹಣವನ್ನು ಕಟ್ಟದೇ ಸರಕಾರಕ್ಕೆ ಹಾಗೂ ಪಿರ್ಯಾದಿದಾರರಿಗೆ ನಂಬಿಸಿ ವಿಶ್ವಾಸಕ್ಕೆ ಪಡೆದು ಮೋಸದಿಂದ ವಂಚಿಸಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ

Crime Reported in  Mangalore Rural PS

ತಾರೀಕು 23-07-2021 ರಂದು ನೀರಜ್ ಚೌಧುರಿ ಎಂಬವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದಿಯ ಸಾರಾಂಶವೇನೆಂದರೆ, ತಾನು ಮೂಲತಃ ಬಿಹಾರ ರಾಜ್ಯದ ಬಗಲಪುರ ಜಿಲ್ಲೆಯ ಸಾರತ್ ಪುರೈನಿಯ ನಿವಾಸಿಯಾಗಿರುತ್ತೇನೆ. ಸುಮಾರು 10 ವರ್ಷಗಳ ಹಿಂದೆ ಮಂಗಳೂರಿಗೆ ಕೂಲಿ ಕೆಲಸಕ್ಕೆಂದು ಬಂದವನು, ಮಂಗಳೂರು ನಗರದ ಪಚ್ಚನಾಡಿಯ 2 ಎಕ್ರರ್ಸ್ ಮಾಲಕರಾದ ಮೈಕೆಲ್ ರವರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಅಲ್ಲೇ ಪತ್ನಿ ಸುಭದ್ರಾ ದೇವಿ (32) ಮಕ್ಕಳಾದ ಕುಮಾರಿ ಪೂನಂ ಚೌಧುರಿ (12), ಕುಮಾರಿ  ತೃಪ್ತಿ ಚೌಧುರಿ (10), ಮತ್ತು ಕುಮಾರಿ ಕಿರ್ತೀ (8) ಎಂಬವರೊಂದಿಗೆ ವಾಸವಾಗಿದ್ದೆ. ತನ್ನ ಅಣ್ಣ ಸಂತೋಷ್ ಚೌಧುರಿ ಬೆಂಗಳೂರಿನಲ್ಲಿ ಸುಮಾರು 2 ತಿಂಗಳ ಹಿಂದೆ  ಮೃತಪಟ್ಟಿದ್ದು, ಆತನ ಅಂತ್ಯ ಸಂಸ್ಕಾರಕ್ಕೆಂದು ತಾನು ಬೆಂಗಳೂರಿಗೆ ಹೋದವನು ಅಲ್ಲೇ ಇದ್ದೆ. ದಿನಾಂಕ 14-07-2021 ರಂದು ಬೆಳಿಗ್ಗೆ ಸುಮಾರು 11-00 ಗಂಟೆಗೆ ಪತ್ನಿ ಸುಭದ್ರಾದೇವಿ ನನಗೆ ಕರೆ ಮಾಡಿ ತಾನು ಮತ್ತು ಮಕ್ಕಳು ಬೆಂಗಳೂರಿಗೆ ಬರುತ್ತಿದ್ದೇವೆ ಎಂದು ಮಂಗಳೂರಿನಿಂದ ಹೊರಟವರು, ಬೆಂಗಳೂರಿಗೆ ಬಾರದೇ, ಊರಿಗೂ ಹೋಗದೆ ಕಾಣೆಯಾಗಿರುತ್ತಾರೆ. ಆಕೆ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಕಾಣೆಯಾದ ನನ್ನ ಪತ್ನಿ ಮಕ್ಕಳನ್ನು ಪತ್ತೆ ಮಾಡಿಕೊಡಬೇಕು ಎಂಬಿತ್ಯಾದಿ

Crime Reported in  Ullal PS

ಪ್ರಕರಣದ ಫಿರ್ಯಾದಿ H. Haneef ರವರು ಉಳ್ಳಾಲ ಮುಕ್ಕಚ್ಚೇರಿಯಲ್ಲಿ ಅಬ್ಬುಸಾಲಿ ಎಂಬವರ ಮಾಲಕತ್ವದ ಮನೆಯನ್ನು ನೋಡಿಕೊಳ್ಳುವವರಾಗಿದ್ದು, ದಿನಾಂಕ: 20-07-2021 ರಂದು ಸಂಜೆ 04-00 ಗಂಟೆಗೆ ಫಿರ್ಯಾದಿದಾರರು ಮುಕ್ಕಚ್ಚೇರಿಯ ಮನೆಯ ಬೀಗವನ್ನು ಭದ್ರ ಪಡಿಸಿ, ಮನೆಯ ಕಂಪೌಂಡ್ ಗೇಟಿನ ಬೀಗವನ್ನು ಭದ್ರಪಡಿಸಿ, ಊರಿಗೆ ತೆರಳಿದ್ದು, ದಿನಾಂಕ: 23-07-2021 ರಂದು ಬೆಳಿಗ್ಗೆ 08-00 ಗಂಟೆಗೆ ಫಿರ್ಯಾದಿದಾರರು ಮನೆಗೆ ಬಂದಾಗ ಮನೆಯ ಮುಖ್ಯ ಗೇಟ್ ಓಪನ್ ಆಗಿದ್ದು, ಮನೆಯ ಕಾರು ಶೆಡ್ಡ್ ನಲ್ಲಿ ಇರಿಸಿದ್ದ ಎರ್ಟಿಗಾ ಕಾರು ನಂಬ್ರ ಕೆಎ 19 ಎಂ.ಇ. 9178 ಇಲ್ಲದೇ ಇದ್ದು, ಮನೆಯ ಒಳಗೆ ಪ್ರವೇಶಿಸಿದಾಗ ಮನೆಯ ರೂಮ್ ಗಳ ಬಾಗಿಲು ತೆರೆದು ಅದರಲ್ಲಿದ್ದ ಕಪಾಟಿನಲ್ಲಿಟ್ಟಿದ್ದ ಬಟ್ಟೆಬರೆಗಳು ಇತರ ವಸ್ತುಗಳು ಹೊರಗೆ ಎಳೆದು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬರುತ್ತದೆ. ಮನೆಯ ಮೇಲಿನ ಅಂತಸ್ತಿನ ಬಾಗಿಲನ್ನು ನೋಡಿದಾಗ ಯಾರೋ ಕಳ್ಳರು ಡೋರನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ, ಮೇಲಿನ ಅಂತಸ್ತಿನ ರೂಮಿನ ಬಾಗಿಲನ್ನು ಯಾವುದೋ ಸಾಧನದಿಂದ ಒಡೆದು ರೂಮಿನ ಒಳಗೆ ಬೆಲೆಬಾಳುವ ಸೊತ್ತುಗಳಿಗೆ ಹುಡುಕಾಟ ನಡೆಸಿರುವುದು ಕಂಡು ಬಂದಿರುತ್ತದೆ. ಮನೆಯ ಡೈನಿಂಗ್ ಹಾಲ್ ನಲ್ಲಿ ಇದ್ದ ಮರದ ಕಪಾಟನ್ನು ತೆರೆದು ಹುಡುಕಾಟ ನಡೆಸಿ, ಅಲ್ಲಿದ್ದ ಎರ್ಟಿಗಾ ಕಾರು ನಂಬ್ರ ಕೆಎ 19 ಎಂ.ಇ. 9178 ನೇದರ ಕೀಯನ್ನು ಕಳವು ನಡೆಸಿ, ಅದೇ ಕೀಯನ್ನು ಬಳಸಿ, ಕಾರನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಯಾರೋಕಳ್ಳರು ದಿನಾಂಕ: 20-07-2021 ರಂದು ಸಂಜೆ 4-00 ಗಂಟೆಯಿಂದ ದಿನಾಂಕ: 23-07-2021 ರ ಬೆಳಿಗ್ಗೆ 08-00 ಗಂಟೆಯ ಮದ್ಯದಲ್ಲಿ ಮನೆಯ ಒಳಗೆ ಪ್ರವೇಶಿಸಿ, ಬೆಲೆಬಾಳುವ ವಸ್ತುಗಳಿಗೆ ಹುಡುಕಾಟ ನಡೆಸಿ, ಕಾರನ್ನು ಕಳವು ನಡೆಸಿ  ಹೋಗಿರುವುದಾಗಿದೆ.  ಕಳವು ನಡೆಸಿದ ಕಾರಿನ  ಅಂದಾಜು ಮೌಲ್ಯ  4,50,000/-  ಆಗಬಹುದು.  ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ಫಿರ್ಯಾದಿ.

Crime Reported in  Cyber Crime PS

ಪಿರ್ಯಾದಿದಾರರು ಮ್ಯಾಜಿಕ್ ಬ್ರಿಕ್ ವೆಬ್ ಸೈಟ್ ನಲ್ಲಿ ಪಿರ್ಯಾದಿದಾರರ ಬಾಬ್ತು ಮಂಗಳೂರು ಕುಳಾಯಿ ಯಲ್ಲಿರುವ ಫ್ಲಾಟ್ ನ್ನು ಬಾಡಿಗೆ ನೀಡುವ ಬಗ್ಗೆ ಜಾಹಿರಾತು ಹಾಕಿದ್ದು ಈ ಬಗ್ಗೆ ದಿನಾಂಕ: 20/07/2021 ರಂದು ಅಂಕಿತ್ ವಿಜಯ್ ಎಂಬವರು ಪಿರ್ಯಾದಿದಾರರಿಗೆ ಕರೆ ಮಾಡಿ ತಾನು ಸೈನಿಕನಾಗಿದ್ದು ಪ್ರಸ್ತುತ ಅಹಮದಾಬಾದ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮಂಗಳೂರಿಗೆ ವರ್ಗಾವಣೆಯಾಗಿರುವುದರಿಂದ  ತನಗೆ ಕುಳಾಯಿಯಲ್ಲಿರುವ ಪಿರ್ಯಾದಿಯ ಫ್ಲಾಟ್ ಬಾಡಿಗೆಗೆ ಬೇಕೆಂದು  ತಿಳಿಸಿ ಮಿಲಿಟರಿ ಸಮವಸ್ತ್ರದಲ್ಲಿರುವ ತನ್ನ ಭಾವಚಿತ್ರ, ಹಾಗೂ ಆಧಾರ್ ಕಾರ್ಡ್ ನ್ನು ವಾಟ್ಸ್ ಆಪ್ ಮೂಲಕ ಕಳುಹಿಸಿಕೊಟ್ಟು ಫ್ಲಾಟ್ ನ ಭಾವಚಿತ್ರಗಳನ್ನು ಕಳುಹಿಸಿಕೊಡುವಂತೆ ಕೋರಿಕೊಂಡಿರುತ್ತಾನೆ, ಅದರಂತೆ ಪಿರ್ಯಾದಿದಾರರು ಫ್ಲಾಟ್ ನ ಭಾವಚಿತ್ರವನ್ನು ಆತನ ಮೊಬೈಲ್ ಸಂಖ್ಯೆ 9394886798 ನೇಯದಕ್ಕೆ ಕಳುಹಿಸಿಕೊಟ್ಟಿರುತ್ತಾರೆ.ನಂತರ ದಿನಾಂಕ: 20/07/2021 ರಂದು ರಾತ್ರಿ 9.30 ಗಂಟೆಗೆ ಅಂಕಿತ್ ವಿಜಯ್ ಪಿರ್ಯಾದಿದಾರರಿಗೆ ಕರೆಮಾಡಿ ನನ್ನ ಮನೆಯವರಿಗೆ ಫ್ಲಾಟ್  ಇಷ್ಟವಾಗಿದ್ದು ಫ್ಲಾಟ್ ಬಾಡಿಗೆಗೆ ಬೇಕೆಂದು ತಿಳಿಸಿರುತ್ತಾನೆ ಅದರಂತೆ ಪಿರ್ಯಾದಿದಾರರು ಫ್ಲಾಟ್ ಗೆ ತಿಂಗಳಿಗೆ ರೂ 10,000/- ಬಾಡಿಗೆ ಹಾಗೂ ರೂ 25000/- ಡೆಪಾಸಿಟ್ ನೀಡಬೇಕಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಆರೋಪಿತನು ಫ್ಲಾಟ್ ನ್ನು ಕಾಯ್ದಿರುವ ಬಗ್ಗೆ ತಾನು  ಮುಂಗಡವಾಗಿ ಡೆಪಾಸಿಟ್ ಹಣ ರೂ 25,000/- ಪಾವತಿಸುವುದಾಗಿ ತಿಳಿಸಿ ತನ್ನ ಅಕೌಂಟೆಂಟ್ ರಣದೀಪ್ ಸಿಂಗ್ ಹಾಗೂ ಮೇಲಾಧಿಕಾರಿ ಪ್ರಶಾಂತ್ ಗುಪ್ತಾ ಎಂಬವರು ದೆಹಲಿಯಲ್ಲಿದ್ದು ಅವರು ಹಣವನ್ನು ಪಾವತಿಸುವುದಾಗಿ ತಿಳಿಸಿರುತ್ತಾರೆ.  ನಂತರ ಆರೋಪಿತರು ಪಿರ್ಯಾದಿದಾರರಿಗೆ ರೂ 50 ನ್ನು ಅವರ ಬಾಬ್ತು ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ಸಂಖ್ಯೆಗೆ ವರ್ಗಾಯಿಸಿರುತ್ತಾರೆ ತದನಂತರ ಪಿರ್ಯಾದಿದಾರರ  ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ರೂ 2,23,500/- ಗಳನ್ನು ಆರೋಪಿತರು   IDFC FIRST BANK ಖಾತೆ ಸಂಖ್ಯೆ: 10072934421 ನೇಯದಕ್ಕೆ ಅನಧಿಕೃತವಾಗಿ ವರ್ಗಾಯಿಸಿ ಪಿರ್ಯಾದಿಗೆ ಮೋಸಮಾಡಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 23-07-2021 07:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080