ಅಭಿಪ್ರಾಯ / ಸಲಹೆಗಳು

Crime Reported in  Surathkal PS

1) ದಿ : 23-05-2021 ರಂದು ಠಾಣಾ ಪಿಸಿ ಸಂತೋಷ ರಾಥೋಡ್ ಇವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಫಿರ್ಯಾಧಿ Taranatha ರವರು ಸಿಬ್ಬಂಧಿಗಳೊಂದಿಗೆ ಸುರತ್ಕಲ್ ಗ್ರಾಮದ ಪಡ್ರೆ ಧೂಮಾವತಿ ಧೈವಸ್ಥಾನ ಹಿಂಬದಿಯ ಗದ್ದೆಯಲ್ಲಿ ಮಾನವ ಜೀವಕ್ಕೆ ಅಪಾಯಕರವಾದ ಕರೋನ ಸೊಂಕು ಹರಡುವ ಸಾದ್ಯತೆಯಿರುವುದನ್ನು ಮನಗಂಡು ಸಹ ಮುಖಕ್ಕೆ ಮಾಸ್ಕ್ ಗಳನ್ನು ಧರಿಸದೇ ಸಾಮಾಜಿತ ಅಂತರವನ್ನು ಪಾಲಿಸದೇ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಈಗಾಗಲೇ ಹೊರಡಿಸಿರುವ ಸರಕಾರದ ಆದೇಶವನ್ನು ಉಲ್ಲಂಘಿಸಿದಲ್ಲದೇ ಕರೋನಾ ನಿಯಂತ್ರಣಕ್ಕೆ ಮತ್ತು ಸುರಕ್ಷತೆಗೆ ಯಾವುದೇ  ಕ್ರಮಗಳನ್ನು ಕೈಗೊಳದೇ  ಸಾರ್ವಜನಿಕ ಸ್ಥಳದಲ್ಲಿ ಎರಡು ಕೋಳಿಗಳ ಕಾಲಿಗೆ ಸಣ್ಣ ಚೂರಿಗಳನ್ನು ಕಟ್ಟಿ, ಅವುಗಳನ್ನು ಕಾದಾಡಲು ಬಿಟ್ಟು  ಉರಿಯ ಕೋಳಿಗೆ 50 ರೂ, ಕಪ್ಪು ಉರಿಯ ಕೋಳಿಗೆ 50 ರೂ. ಹಾಗೂ 100 ರೂ. ಎಂದು ಗುಂಪಿನಲ್ಲಿದ್ದವರು ಕೂಗಿ ಕೋಳಿಗಳ ಮೇಲೆ ತಮ್ಮ ಸ್ವಂತ ಲಾಭಗೋಸ್ಕರ ಹಣವನ್ನು ಪಣವಾಗಿರಿಸಿ ಚೂರಿಯಿಂದ ಚುಚ್ಚಿ ಹಿಂಸೆ ನೀಡಿ ಕೋಳಿ ಅಂಕ ಎಂಬ ಜುಗಾರಿ ಆಟ ಆಡಿದ  ಆರೋಫಿಗಳಾದ ಗುಣಪಾಲ್ ಶೆಟ್ಟಿ ರಾಕೇಶ್, ಚಿತ್ರೇಶ್ ಹಾಗೂ ಇತರರ ಪೈಕಿ ಆರೋಪಿ ಗುಣಪಾಲ್ ಶೆಟ್ಟಿ ಇವರನ್ನು ವಶಕ್ಕೆ ಪಡೆದು ಮೇಲ್ಕಾಣಿಸಿದ ಕೋಳಿ ಅಂಕಕ್ಕೆ  ಉಪಯೋಗಿಸಿದ ಎರಡು ಸಣ್ಣ ಚೂರಿಗಳು ಹಾಗೂ ಕಪ್ಪು ಬಣ್ಣದ  ನೂಲುಗಳು-2  ಹಾಗೂ ನಗದು  ರೂ  200/ ಮಾತ್ರ ( ರೂಪಾಯಿ ಇನ್ನೂರು ಮಾತ್ರ)  ಕೆಂಪು ಕಪ್ಪು ಬಣ್ಣದ ಕೋಳಿ  -1  ( ಕುಪ್ಪು ಕುಪುಲೆ  ) ಮತ್ತು  ಬಿಳಿ ಕಪ್ಪು ಬಣ್ಣದ ಗರಿವುಳ್ಳ ಕೋಳಿ -1 ( ಬೊಳ್ಳೆಗಳನ್ನು ಹಾಗೂ ಕೆಎ-19/ಹೆಚ್.ಜಿ.-1709-  Pulser 125 (Black), ಕೆಎ-19/ಹೆಚ್.ಡಿ-5418, -aprilia 150 (Blue) , ಕೆಎ-19/ಹೆಚ್.ಡಿ. 4171, -Discover 125 (Blue), ಕೆಎ-19/ಹೆಚ್.ಎಫ್-7785, - Honda Activa (Black), ಕೆಎ-19/ಇಟಿ-0926, - Pulser 150 (Red), ಕೆಎ-19/ಇಡಬ್ಲ್ಯೂ-6785, -Passion Pro 135 (Black), ಕೆಎ-19/ ಇಡಬ್ಲ್ಯೂ-4212, Dio (Orange), ಕೆಎ-19/ಇಝಡ್-2891, Activa Honda (Red), SuzukI Access 125 (Meron Colour), ಕೆಎ-19/ಹೆಚ್.ಬಿ-0186, - Access 125 (Blue Deep), ಕೆಎ-19/ಹೆಚ್.ಡಿ-9493, Dio (Grey), ಕೆಎ-19/ಹೆಚ್.ಎ-9203, Dio (Black), ಕೆಎ-19/ಇಡಿ-4458 Activa Matrix (White)  ಗಳನ್ನು  ವಶಕ್ಕೆ ಪಡೆದಿರುವುದಾಗಿದೆ ಸದ್ರಿ ವಾಹನಗಳ ಒಟ್ಟು ಮೌಲ್ಯ 2.00.000/- ( ರೂಪಾಯಿ ಎರಡು ಲಕ್ಷ ಮಾತ್ರ ) ಮೇಲ್ಕಾಣಿಸಿದ ಎರಡು ಕೋಳಿಗಳ ಒಟ್ಟು ಅಂದಾಜು ಮೌಲ್ಯ ರೂ 1,000/-

2) ದಿ: 23-05-2021 ರಂದು ಪಿರ್ಯಾದಿದಾರರಾದ ಚಂದ್ರಪ್ಪ ಕೆ ಪೊಲೀಸ್ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ  ಸಂಜೆ 8-00 ಗಂಟೆಗೆ ಇಡ್ಯಾ  ಗ್ರಾಮದ ಕಾನದ ಬಳಿ ಇರುವ ಹಿದಾಯಿತುಲ್ಲ ಎಂಬವರಿಗೆ ಸೇರಿದ ಕಟ್ಟಡದ ಎರಡನೇ ಮಹಡಿಯಲ್ಲಿ ರೂ ನಂಬ್ರ ವಿದ್ಯುತ್ ಬಿಲ್ ಆರ್ ಆರ್ ನಂಬ್ 1641-5  ಎಂಬ ಹೆಸರಿನ ಕಟ್ಟಡದಲ್ಲಿ ನೆಲದಲ್ಲಿ ಚಾಪೆಯನ್ನು ಹಾಕಿ ಕೊಂಡು  ಚಾಪೆಯ ಮೇಲೆ ಸುತ್ತುವರಿದು, ಕುಳಿತು ಅಂದರ್ ರೂ. 100/ ಬಾಹರ್ ರೂ. 100/ ಎಂದು ಹೇಳಿಕೊಂಡು ಹಣವನ್ನು ಪಣವಾಗಿರಿಸಿ ಹಿಡಿದುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ  ಅಂದರ್ ಬಾಹರ್  ಎಂಬ ಹೆಸರಿನ ಜುಗಾರಿ ಆಟವಾಡುತ್ತಿರುವ ಆರೋಪಿಗಳಾದ  1] ಅಸೀಪ್ 2] ಇಮ್ರಾನ್, 3]  ರಾಕೇಶ್ 4] ವಿನೋದ್ ಕುಮಾರ್ ಹೆಚ್.ಸಿ  5] ಮಹಮ್ಮದ್ ಶರೀಫ್. 6] ಹುಲ್ಲಪ್ಪ ಇವರುಗಳನ್ನು ವಶಕ್ಕೆ ಪಡೆದಿದ್ದು ಆರೋಪಿಗಳು ಜೂಜಾಟಕ್ಕೆ ಉಪಯೋಗಿಸಿದ ನಗದು ರೂ 29,300/- ರೂ. ಇಸ್ಪೀಟ್ ಎಲೆಗಳು-52 ಹಾಗೂ ಅವರುಗಳ ಬಾಬ್ತು 7 ಮೊಬೈಲ್ ಸೆಟ್ ಗಳನ್ನು ವಶಕ್ಕೆ ಪಡೆದಿರುವುದಾಗಿದೆ. ಮಾನವ ಜೀವಕ್ಕೆ ಅಪಾಯಕರವಾದ ಕರೋನ ಸೊಂಕು ಹರಡುವ ಸಾದ್ಯತೆಯಿರುವುದನ್ನು ಮನಗಂಡು ಸಹ ಮೇಲ್ಕಾಣಿಸಿದ ಕಟ್ಟಡದಕ್ಕು ಕರೋನಾ ನಿಯಂತ್ರಣಕ್ಕೆ ಮತ್ತು ಸುರಕ್ಷತೆಗೆ ಯಾವುದೇ  ಕ್ರಮಗಳನ್ನು ಕೈಗೊಳದೇ ಹಾಗೂ ಸ್ಧಳದಲ್ಲಿ  ಸರಕಾರದ ನಿಯಮವನ್ನು ಪಾಲಿಸದೇ ಯಾವುದೇ ಪರವಾನಿಗೆಯನ್ನು ಪಡೆಯದೇ ತಮ್ಮ ಸ್ವಂತ ಲಾಭಗೋಸ್ಕರ ಹಣವನ್ನು ಪಣವಾಗಿರಿಸಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಕ್ರಮವಾಗಿ ಅಂದರ್ ಬಾಹರ್ ಎಂಬ ಹೆಸರಿನ ಜುಗಾರಿ ಆಟವನ್ನು ಆಡಿದ್ದಾಗಿರುತ್ತದೆ. ಅವರುಗಳ ಮೇಲೆ ಕಾನೂನು ಕ್ರಮ ಜರಗಿಸುವುದು.

Crime Reported in Mangalore Women PS

ಪಿರ್ಯಾದಿ ಸುಮೈದಾ ಬಾನು ರವರು ದಿನಾಂಕ 02/10/2018 ರಂದು ಗಂಜಿಮಠದ ರಿಯಾಜ್ ಎಂಬಾತನನ್ನು  ಮುಸ್ಲಿಂ ಸಂಪ್ರದಾಯದಂತೆ ಗುರುಪುರ ಕೈಕಂಬದ  ಮೇಘಾ ಪ್ಲಾಜಾ ಹಾಲ್ ನಲ್ಲಿ ಮದುವೆಯಾಗಿದ್ದು, ಮದುವೆಯ ಸಮಯ ಗಂಡನ ಚಿಕ್ಕಮ್ಮ ನಬೀಸಾರವರ ಒತ್ತಾಯದ ಮೇರೆಗೆ 30 ಪವನ್ ಚಿನ್ನವನ್ನು ಹಾಕಿರುತ್ತಾರೆ. ಮದುವೆಯಾದ ಎರೆಡು ತಿಂಗಳ ಬಳಿಕ  ಪಿರ್ಯಾದಿದಾರರ ಗಂಡನ ಚಿಕ್ಕಮ್ಮ ನಬೀಸಾರವರು ಪಿರ್ಯಾದಿದಾರರ ಬಳಿ ಇದ್ಧ ಎರೆಡೂವರೆ ಪವನ್ ಚಿನ್ನವನ್ನು ಪಡೆದುಕೊಂಡು ವಾಪಾಸ್ ನೀಡದೇ ಸತಾಯಿಸುತ್ತಿದ್ದರು.  ಬಳಿಕ ಪಿರ್ಯಾದಿದಾರರು ತಾಯಿಗೆ ಮನೆಗೆ ಬಂದು ವಾಪಾಸ್ ಗಂಡನ ಮನೆಗೆ ಹೋದಾಗ ಪಿರ್ಯಾದಿದಾರರ ಗಂಡ ಚಿನ್ನ ತಂದೀದ್ದೀಯಾ ಎಂದು ಕೇಳಿದ್ದು, ಅದಕ್ಕೆ ಪಿರ್ಯಾದಿದಾರರು  ಯಾಕೆ ನಿಮಗೆ ಚಿನ್ನ ಬೇಕು ಎಂದು ಕೇಳಿದಾಗ ಪಿರ್ಯಾದಿದಾರರ ಗಂಡ “ಅರತ್ ಪರ್ನವುಲ್“ (ಬೇರೆಯವರಿಗೆ ಹುಟ್ಟಿದವಳು) ಎಂಬುವುದಾಗಿ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ನೀಡುತ್ತಿದ್ದು, ಪಿರ್ಯಾದಿದಾರರ ಗಂಡ ಹಾಗೂ ಗಂಡನ ಮನೆಯವರು ಇನ್ನೂ ಹೆಚ್ಚಿನ ಚಿನ್ನವನ್ನು ನಿನ್ನ ತಂದೆಯ ಮನೆಯಿಂದ  ವರದಕ್ಷಿಣೆಯಾಗಿ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ಮಾನಸಿಕ ಹಾಗೂ ದೈಹಿ ಹಿಂಸೆ ನೀಡಿರುತ್ತಾರೆ. ದಿನಾಂಕ 19-04-2021 ರಂದು ಪಿರ್ಯಾದಿದಾರರು ಗಂಡನ ಮನೆಯಲ್ಲಿದ್ದ ಸಮಯ ಆರೋಪಿತರೆಲ್ಲರೂ ಸೇರಿ ಪಿರ್ಯಾದಿದಾರರ 10 ಪವನ್ ನೆಕ್ಲೆಸ್ ಚೈನ್ ಹಾಗೂ 2 ಪವನ್ ಬ್ರಾಸ್ ಲೈಟನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿರುತ್ತಾರೆ. ಪಿರ್ಯಾದಿದಾರರು ರಂಜಾನ್ ಹಬ್ಬದ ಪ್ರಯುಕ್ತ ತಾಯಿ ಮನೆಗೆ ಹೋಗಿ ದಿನಾಂಕ 21-05-2021 ರಂದು ಬೆಳಿಗ್ಗೆ 10.00 ಗಂಟೆಗೆ ವಾಪಾಸ್ ಗಂಡನ ಮನೆಗೆ ತನ್ನ ತಂದೆ, ಅಣ್ಣ ಹಾಗೂ ಕಾರಿನ ಚಾಲಕ ಅಜ್ರತ್ ರವರೊಂದಿಗೆ ಬಂದಿದ್ದ ಸಮಯ ಪಿರ್ಯಾದಿದಾರರ ಗಂಡ ನೀನು ಹೆಚ್ಚಿನ ಚಿನ್ನ ಮತ್ತು ಹಣವನ್ನು ತಂದಿದ್ದೀಯಾ ಎಂದು ಕೇಳಿದ್ದು, ನಾದಿನಿ ತಾನ್ಸಿಯಾ ಎಂಬುವರು ನೀನು ಮನೆಯಿಂದ ಹೊರಟು ಹೋಗು ಎಂದು ಹೇಳಿದ್ದು, ದೊಡ್ಡ ನಾಧಿನಿ ಮುಸೈಬಾ ಎಂಬಾಕೆಯು ನೀನು ನಾಯಿ ನಿನ್ನ ಅಮ್ಮ ನಾಯಿ ನೀನು ಉಡ ನುಗ್ಗಿದ ಹಾಗೇ ಎಂದು ಹೇಳಿದ್ದು, ಅಸ್ಮತ್ ರವರು ಕೂಡಾ ಅವಾಚ್ಯ ಶಬ್ದಗಳಿಂದ  ಬೈದು ಅವರೆಲ್ಲರೂ ಸೇರಿಕೊಂಡು ಪಿರ್ಯಾದುದಾರರನ್ನು ಹಿಡಿದುಕೊಂಡಾಗ ಮುಸೈಬಾ ಎಂಬಾಕೆಯು ಎಡ ಕೆನ್ನೆಗೆ ಹೊಡೆದಿರುತ್ತಾರೆ. ಹಾಗೂ ತಾನ್ಸಿಯಾ ರವರು ಪಿರ್ಯಾದಿದಾರರ ಬಲ ಕೈ ಹಿಡಿದು ಎಳೆದಿದ್ದು, ಅಸ್ಮತ್ ರವರು ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಕರಿಮಣಿಯನ್ನು ಎಳೆದು ತುಂಡು ಮಾಡಿದ್ದು, ಪಿರ್ಯಾದಿದಾರರ ಅತ್ತೆ ಮತ್ತು ಗಂಡನ ಚಿಕ್ಕಮ್ಮ ನೆಬೀಸಾ ರವರು ಪಿರ್ಯಾದಿದಾರರನ್ನು ಜಗುಲಿಯ ಬಳಿ ಇರುವ ಗೇಟಿಗೆ ದೂಡಿ ಹಾಕಿ ಸೊಂಟಕ್ಕೆ ಗಾಯವನ್ನುಂಟು ಮಾಡಿರುತ್ತಾರೆ

 

ಇತ್ತೀಚಿನ ನವೀಕರಣ​ : 24-05-2021 05:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080