ಅಭಿಪ್ರಾಯ / ಸಲಹೆಗಳು

Crime Reported in  Mangalore Rural PS

ಪಿರ್ಯಾದಿ Hemavathi ರವರು ಕೆಲ್ರಾಯ್ ಸಂತ ಅನ್ನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯನಿಯಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 23-06-2021 ರಂದು ಶಾಲೆಯ ಸಹೋದ್ಯೋಗಿಯಾಗಿರುವ ಪ್ರೆಸ್ಸಿ ಮೊಂತೆರೋ ರವರು ಶಾಲೆಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಮರುದಿನ ದಿನಾಂಕ 24-06-2021 ರಂದು ಬೆಳಿಗ್ಗೆ 8.45 ಗಂಟೆ ಸುಮಾರಿಗೆ ಫಿರ್ಯಾಧಿದಾರರು ಎಂದಿನಂತೆ ಪ್ರೆಸ್ಸಿ ಮೊಂತೆರೋ ರವರೊಂದಿಗೆ ಶಾಲೆಗೆ ಬಂದಾಗ ಶಾಲೆಯ ಆಫೀಸ್ ರೂಮ್ ನ ಬಾಗಿಲಿನ ಚಿಲಕ ಮುರಿದು ಬೀಗ ಒಡೆದಿದ್ದು ಕಂಡುಬಂದಿದ್ದು, ಆಪೀಸ್ ರೂಮಿನ ಒಳಗೆ ಹೋಗಿ ನೋಡಲಾಗಿ ಆಫೀಸ್ ರೂಮಿನ ಡ್ರಾವರ್ ನಲ್ಲಿಟ್ಟಿದ್ದ ರೂ 200/- ನಗದು ಹಣ ಹಾಗೂ ಪೆನ್ ಡ್ರೈವ್-1, ಸಿ.ಸಿ ಕ್ಯಾಮೇರಾ-1, ಮೈಕ್-1 ಹಾಗೂ ಸ್ಪೀಕರ್ ನ್ನು ಯಾರೋ ಕಳ್ಳರು ದಿನಾಂಕ  23-06-2020 ರಂದು ಮಧ್ಯಾನ್ಹ 12.30 ಗಂಟೆಯಿಂದ ದಿನಾಂಕ 24-06-2021 ರ ಬೆಳಿಗ್ಗೆ 8.45 ರ ಮಧ್ಯದಲ್ಲಿ ಶಾಲೆಯ ಆಫೀಸ್ ರೂಮಿನ ಬೀಗವನ್ನು ಒಡೆದು ಒಳಪ್ರವೇಶಿಸಿ ಕಳ್ಳತನ ಮಾಡಿರುತ್ತಾರೆ ಎಂಬಿತ್ಯಾದಿ ಸಾರಾಂಶ.

Crime Reported in Mangalore Rural PS

ದಿನಾಂಕ 23.06.2021 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ ಸುಮಾರು 14-00 ಗಂಟೆಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ತಾಲೂಕು ಅರ್ಕುಳ ಗ್ರಾಮದ ಅರ್ಕುಳ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಗಾಂಜಾ ಎಂಬ ಅಮಲು ಪದಾರ್ಥವನ್ನು ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ ಬಂದ ಮಾಹಿತಿಯಂತೆ ಮಧ್ಯಾಹ್ನ ಸಮಯ 14:15 ಗಂಟೆಗೆ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ  ಸಂದೀಪ್, ಪಿ.ಸಿ ಆನಂದ  ರವರೊಂದಿಗೆ  ಅರ್ಕುಳ ಗ್ರಾಮದ ಅರ್ಕುಳ ಬಸ್ ನಿಲ್ದಾಣದ ಹತ್ತಿರ ಹೋದಾಗ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಮಾಹಿತಿದಾರರು ತಿಳಿಸಿದ ಚಹರೆಯ  ವ್ಯಕ್ತಿಯೊಬ್ಬ ಪೊಲೀಸ್ ಜೀಪನ್ನು ಕಂಡು ಓಡಲು ಪ್ರಯತ್ನಿಸಿದವನನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದಾಗ ಆತನು ಗಾಂಜಾ ಎಂಬ ಅಮಲು ಪದಾರ್ಥವನ್ನು ಸೇವಿಸಿದಂತೆ ಕಂಡು ಬಂದಿದ್ದು, ಆತನನ್ನು ವಿಚಾರಿಸಿದಾಗ ಆತನು ತನ್ನ ಹೆಸರು ಮಹಮ್ಮದ್ ಹಿದಾಯತುಲ್ಲಾ (26), ತಂದೆ- ಹಸನಬ್ಬ ವಾಸ- ಕುಂಪನಮಜಲು ಮನೆ, ಫರಂಗಿಪೇಟೆ ಅಂಚೆ ಪುದು ಗ್ರಾಮ ಬಂಟ್ವಾಳ ತಾಲೂಕು  ದ.ಕ ಜಿಲ್ಲೆ ಎಂದು ತಿಳಿಸಿದ್ದು. ಸದ್ರಿ ವ್ಯಕ್ತಿಯು ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿರುವ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ನೀಡುವಂತೆ ಮಂಗಳೂರು ಎ.ಜೆ ಅಸ್ಪತ್ರೆಯ  ಕಾರ್ಯನಿರತ ವೈದ್ಯಾಧಿಕಾರಿಯವರ ಮುಂದೆ ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಿದಾಗ ಪರೀಕ್ಷಿಸಿದ ವೈದ್ಯರು ಮಹಮ್ಮದ್ ಹಿದಾಯತುಲ್ಲಾ ಈತನು ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿರುತ್ತಾನೆ ಎಂಬುದಾಗಿ ದೃಢಪತ್ರ ನೀಡಿರುತ್ತಾರೆ. ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ವರದಿಯಂತೆ ಮಹಮ್ಮದ್ ಹಿದಾಯತುಲ್ಲಾ ವಿರುದ್ಧ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

2) ದಿನಾಂಕ 23.06.2021 ರಂದು ಪಿರ್ಯಾದಿದಾರರಾದ Manjula P PSI ರವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ ಸುಮಾರು 14-45 ಗಂಟೆಗೆ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಸಹ್ಯಾದ್ರಿ ಕಾಲೇಜ್ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಗಾಂಜಾ ಎಂಬ ಅಮಲು ಪದಾರ್ಥವನ್ನು ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ ಬಂದ ಮಾಹಿತಿಯಂತೆ ಮಧ್ಯಾಹ್ನ ಸಮಯ 15:00 ಗಂಟೆಗೆ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ  ಸಂದೀಪ್, ಪಿ.ಸಿ ಆನಂದ  ರವರೊಂದಿಗೆ ಇಲಾಖಾ ವಾಹನದಲ್ಲಿ ಅಡ್ಯಾರ್ ಗ್ರಾಮದ ಸಹ್ಯಾದ್ರಿ ಕಾಲೇಜು ಬಸ್ ನಿಲ್ದಾಣದ ಹತ್ತಿರ ಹೋದಾಗ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಮಾಹಿತಿದಾರರು ತಿಳಿಸಿದ ಚಹರೆಯ  ವ್ಯಕ್ತಿಯು ಗಾಂಜಾ ಎಂಬ ಅಮಲು ಪದಾರ್ಥವನ್ನು ಸೇವಿಸಿದಂತೆ ಕಂಡು ಬಂದಿದ್ದು, ಆತನನ್ನು ವಿಚಾರಿಸಿದಾಗ ಆತನು ತನ್ನ ಹೆಸರು ಹಮ್ಮದ್ ಬಶೀರ (30), ತಂದೆ- ಅಬ್ದುಲ್ ಗಫೂರ, ವಾಸ- 4-78/3 ಕುಂಪನಮಜಲು ಮನೆ, ಫರಂಗಿಪೇಟೆ ಅಂಚೆ ಪುದು ಗ್ರಾಮ ಬಂಟ್ವಾಳ ತಾಲೂಕು ದ.ಕ ಜಿಲ್ಲೆ ಎಂದು ತಿಳಿಸಿರುತ್ತಾನೆ. ಸದ್ರಿ ವ್ಯಕ್ತಿಯು ಮಾದಕ ವಸ್ತುವಾದ ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ನೀಡುವಂತೆ ಮಂಗಳೂರು ಎ.ಜೆ ಅಸ್ಪತ್ರೆಯ  ಕಾರ್ಯನಿರತ ವೈದ್ಯಾಧಿಕಾರಿಯವರ ಮುಂದೆ ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಿದಾಗ ಪರೀಕ್ಷಿಸಿದ ವೈದ್ಯರು ಹಮ್ಮದ್ ಬಶೀರ ಈತನು ಮಾದಕ ವಸ್ತುವಾದ ಗಾಂಜಾವನ್ನು ಸೇವಿಸಿರುತ್ತಾನೆ ಎಂಬುದಾಗಿ ದೃಢಪತ್ರ ನೀಡಿರುತ್ತಾರೆ. ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ವರದಿಯಂತೆ ಹಮ್ಮದ್ ಬಶೀರ ವಿರುದ್ಧ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 24-06-2021 07:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080