ಅಭಿಪ್ರಾಯ / ಸಲಹೆಗಳು

Crime Reported in  Cyber Crime PS

ದಿನಾಂಕ: 23/05/2021 ರಂದು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಮಾವ ರವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಪಿರ್ಯಾದಿದಾರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ, ಪಿರ್ಯಾದಿದಾರರ ಮಾವ ಅಪಘಾತಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದು ತುರ್ತು ಹಣದ ಅವಶ್ಯಕತೆ ಇದೆ ಎಂದು ನಂಬಿಸಿ ಪಿರ್ಯಾದಿದಾರರ ಬ್ಯಾಂಕ್ ಆಪ್ ಇಂಡಿಯಾ ಮಡಿಕೇರಿ ಶಾಖೆಯ ಉಳಿತಾಯ ಖಾತೆ ಯಿಂದ ಹಂತ ಹಂತವಾಗಿ ರೂ 50,000/- ಗಳನ್ನು ಆರೋಪಿತನ ಫೋನ್ ಪೇ ಖಾತೆ ಸಂಖ್ಯೆ: 8099653581 ನೇಯದಕ್ಕೆ ವರ್ಗಾಯಿಸಿಕೊಂಡು ಮೋಸ ಮಾಡಿರುತ್ತಾರೆ ಎಂಬಿತ್ಯಾದಿ

Crime Reported in  Mangalore Rural PS

ಮಾರಕ ಖಾಯಿಲೆಯಾದ ಕೋವಿಡ್-19 ಸಾಂಕ್ರಮಿಕ ರೋಗ ತೀವ್ರಗತಿಯಲ್ಲಿ ಹರಡುತ್ತಿರುವುದರಿಂದ ರೋಗ ಹರಡದಂತೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಲಾಕ್ಡೌನ್ ಜಾರಿಗೊಳಿಸಿದ್ದು, ಲಾಕ್ಡೌನ್ ಜ್ಯಾರಿಯಲ್ಲಿರುವ ದಿನಗಳಲ್ಲಿ ಸರಕಾರದ ಹಾಗೂ ಜಿಲ್ಲಾಧಿಕಾರಿಯವರ ಆದೇಶದಂತೆ ದ.ಕ. ಜಿಲ್ಲೆಯಾದ್ಯಂತ ಪ್ರತಿದಿನ ಬೆಳಿಗ್ಗೆ 06-00 ಗಂಟೆಯಿಂದ ಬೆಳಿಗ್ಗೆ 09-00 ಗಂಟೆಯ ತನಕ ಸಾರ್ವಜನಿಕರಿಗೆ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶವಿದ್ದು ಮತ್ತು ಅವಶ್ಯಕ ಸಾಮಾಗ್ರಿಗಳ ಅಂಗಡಿಗಳನ್ನು ಪ್ರತಿದಿನ ಬೆಳಿಗ್ಗೆ 10.00 ಗಂಟೆಯ ಒಳಗಡೆ ಮುಚ್ಚಿ, ಮಾರಾಟಗಾರರು ಹಾಗೂ ಖರೀದಿದಾರರು ತಮ್ಮ ತಮ್ಮ ಮನೆಗಳಿಗೆ ತೆರಳತಕ್ಕದ್ದು, ಎಂಬುದಾಗಿ ಆದೇಶವಾಗಿರುತ್ತದೆ. ಸದ್ರಿ ಆದೇಶದ ಪಾಲನೆಗಾಗಿ ದಿನಾಂಕ: 25-05-2021 ರಂದು ಪಿರ್ಯಾದಿ Johnson Dsouza PI ರವರು ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಾ ಮಂಗಳೂರು ನಗರ ಅರ್ಕುಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75 ರ ಸಮೀಪದ  ಬಿ. ಹೆಚ್. ವಳಸಿಲ್” ಎಂಬುದಾಗಿ ಬರೆದಿರುವ ಅಂಗಡಿಯ ಬಳಿಗೆ ಬೆಳಿಗ್ಗೆ 10.30 ಗಂಟೆಗೆ ತಲುಪಿದಾಗ ಸದ್ರಿ ಅಂಗಡಿಯನ್ನು ತೆರೆದಿಟ್ಟು ಅದರ ಮಾಲೀಕನಾದ  ನಿಸಾರ್ ಎಂಬಾತನು ಲಾಕ್ ಡೌನ್ ಆದೇಶವನ್ನು ಪಾಲಿಸಲು ನಿರ್ಲಕ್ಷ್ಯ ತೋರಿ, ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದರಿಂದ  ರೋಪಿ ವಿರುದ್ದ THE DISASTER MANAGEMENT ACT, 2005 (U/s-51(b)); IPC 1860 (U/s-269) ರಂತೆ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in  Moodabidre PS               

ದಿನಾಂಕ: 19-05-2021 ರಂದು ಕಲ್ಲಮುಂಡ್ಕೂರಿನ ಯಶೋದರ ಎಂಬವರು ಕಲ್ಲಮುಂಡ್ಕೂರು ಪೇಟೆಯ ಬಳಿ ಅನಾಮದೇಯ ವ್ಯಕ್ತಿ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ಹೈವೇ ಪೆಟ್ರೋಲ್ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರು ತೆರಳಿ ಆತನನ್ನು ವಿಚಾರಿಸಿದಾಗ ಆತನು ಹಿಂದಿ ಭಾಷೆ ಮಾತನಾಡುವ ವ್ಯಕ್ತಿಯಾಗಿದ್ದು, ಆತನು ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿರುವುದರಿಂದ ಆತನ ಮನೆಯವರಿಗೆ ವಿಷಯವನ್ನು ತಿಳಿಸಿದ್ದು ಆತನ ಮನೆಯವರು ನಾವುಗಳು ಉತ್ತರ ಪ್ರದೇಶದಿಂದ ಮಂಗಳೂರಿಗೆ ಬಂದು ಆತನನ್ನು ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದು ಅಲ್ಲಿಯವರೆಗೆ ಆತನನ್ನು ಸುರಕ್ಷಿತವಾಗಿ ಇರಿಸುವ ಉದ್ದೇಶದಿಂದ ಆತನ ಮನೆಯವರು ಬರುವ ತನಕ ಆಲಂಗಾರಿನ ಮೌಂಟ್ ರೋಶರಿಯೋ ಆಶ್ರಮದಲ್ಲಿ ಇರಿಸಿದ್ದು, ಆತನು ನಿನ್ನೆ ದಿನ ದಿನಾಂಕ: 24-05-2021 ರಂದು 22.00 ಗಂಟೆಗೆ ಊಟ ಮಾಡಿ ಮಲಗಿದವನು ಈ ದಿನ ದಿನಾಂಕ: 25-05-2021 ರಂದು ಬೆಳಿಗ್ಗೆ 07.00 ಗಂಟೆಯ ಮದ್ಯಾವದಿಯಲ್ಲಿ ಆಶ್ರಮದಲ್ಲಿ ನೋಡಿದಾಗ ಕಾಣೆಯಾಗಿದ್ದು, ಆತನನ್ನು ಆಲಂಗಾರು ವಠಾರದಲ್ಲಿ, ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ.

Crime Reported in  Surathkal PS

ಪಿರ್ಯಾದಿ Mohammad Nawaz (43) ರವರು ದಿನಾಂಕ 23-05-2021 ರಂದು ಬೆಳಿಗ್ಗೆ ಸುಮಾರು 09-30 ಗಂಟೆಗೆ ಚೊಕಬೆಟ್ಟು ಗ್ರಾಮದ ಪಿರ್ಯಾದಿದಾರರ ವಾಸ್ತವ್ಯದ ಮನೆಯ ಎದುರುಗಡೆ ಇರುವ  ಪಿರ್ಯಾದಿದಾರರಿಗೆ ಸೇರಿದ ರಜಾಕ್ ಸ್ಟೋರ್ ಎಂಬ ಅಂಗಡಿಯನ್ನು ಲಾಕ್ ಡೌನ್ ಇರುವ ಕಾರಣ ಬಾಗಿಲು ಹಾಕಿ ದಿನಾಂಕ 24-05-2021 ರಂದು ಬೆಳಿಗ್ಗೆ 07-00 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಕಿಟಕಿಯ ಮೂಲಕ ಡ್ರಾಯರ್ ನಲ್ಲಿ ಇರಿಸಿದ್ದ ಸರಿ ಸುಮಾರು 12,000 ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುವ ವಿಚಾರ ಗಮನಕ್ಕೆ ಬಂದಿರುತ್ತದೆ. ಆದ್ದರಿಂದ ಮುಂದಿನ ಕ್ರಮದ ಬಗ್ಗೆ ಕೋರಿಕೆ ಎಂಬಿತ್ಯಾದಿ

2) ಪಿರ್ಯಾದಿ Ameer Hussain(61) ರವರು ತಣ್ಣೀರುಬಾವಿ ಮೊಹಿದ್ದಿನ್ ಜುಮ್ಮಾ ಮಸೀದಿ ಕಮೀಟಿ ಚೊಕಬೆಟ್ಟು ಅಧ್ಯಕ್ಷರಾಗಿದ್ದು ಮಸೀದಿಯಲ್ಲಿ  ದಿನಾಂಕ 13-05-2021 ರಂದು ಮಧ್ಯರಾತ್ರಿ 01-00  ಗಂಟೆಗೆ ಮಸೀದಿಯ ಎದುರುಗಡೆ ಇರುವ ಕಾಣಿಕೆ ಡಬ್ಬಿಯನ್ನು ಒಡೆದು ಸುಮಾರು 16,000 ರೂ ನಗದು ಹಾಗೂ ಕಛೇರಿಯ ನುಗ್ಗಿ ಜಾಲಾಡಿ ಡ್ರಾಯರ್ ನಲ್ಲಿರುವ ಸುಮಾರು 1,700 ನೋಟಿನ ಕಟ್ಟು ,ಒಟ್ಟು ಅಂದಾಜು 17,700 ನಗದು ಹಣ   ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ವಿಚಾರ ಗಮನಕ್ಕೆ ಬಂದಿರುತ್ತದೆ. ಜಮಾತ್ ಕಮೀಟಿಯರೊಂದಿಗೆ ಚರ್ಚಿಸಿ ತಡವಾಗಿ ಈ ದಿನ ದೂರು ನೀಡಿರುವದಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ

ಇತ್ತೀಚಿನ ನವೀಕರಣ​ : 25-05-2021 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080