ಅಭಿಪ್ರಾಯ / ಸಲಹೆಗಳು

 

Crime Reported in  Mangalore Rural PS

ಪಿರ್ಯಾಧಿ Rajendra Shetty  M ರವರು ಮಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಆಗಿದ್ದು ದಿನಾಂಕ 25-05-2021 13.45 ಗಂಟೆಗೆ ಮಲ್ಲೂರು ಗ್ರಾಮ ಪಂಚಾಯತ್ ಹೊರಗಡೆ ರಸ್ತೆ ಬದಿಯಲ್ಲಿ ನಾಲ್ಕು ಮಂದಿ ಯುವಕರು ಮಾಸ್ಕ್ ಧರಿಸದೇ ನಿಂತಿರುವುದನ್ನು ಕಂಡು ಫಿರ್ಯಾಧಿದಾರರು ಅವರೊಡನೆ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ಆದೇಶ ಮಾಡಿದ್ದರೂ ನೀವು ಮಾಸ್ಕ್ ಧರಿಸದೇ ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿದ್ದೀರಿ ಎಂಬುದಾಗಿ ತಿಳಿಸಿ ಮೊಬೈಲ್ ನಿಂದ ಪೋಟೋ , ವಿಡಿಯೋ ಮಾಡಿದಾಗ ಸದ್ರಿ ಯುವಕರು ಫಿರ್ಯಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಬಲ ಕೆನ್ನೆಗೆ , ಮುಕಕ್ಕೆ ಹೊಡೆದು ನೋವುಂಟು ಮಾಡಿರುತ್ತಾರೆ ಈ ವೇಳೆ ಸ್ಥಳೀಯರಾದ ಅಬುಬಕ್ಕರ್ ಎಂಬುವವರು ಇದ್ದಿದ್ದು ಅವರೂ ಕೂಡಾ ಫಿರ್ಯಾಧಿದಾರರನ್ನು ಎಳೆದಾಡಿರುತ್ತಾರೆ ತಕ್ಷೀರನ್ನು ಕಂಡು ಪಂಚಾಯತ್ ಕಛೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಅಧ್ಯಕ್ಷರು ಬಂದಾಗ ಆರೋಪಿಗಳು KA 19 MJ 9737 ಮತ್ತು ಸ್ಕೂಟರ್ KA 19 EW 6783 ರಲ್ಲಿ ಸ್ಥಳದಿಂದ ಪರಾರಿಯಾಗಿರುತ್ತಾರೆ ಆರೋಪಿಗಳು ಮಾಸ್ಕ್ ಧರಿಸದೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಿರ್ಲಕ್ಷ್ಯತನ ತೋರಿರುವುದನ್ನು ಫಿರ್ಯಾದಿದಾರರು ಪ್ರಶ್ನಿಸಿದರೆಂಬ ಕಾರಣಕ್ಕೆ ಆರೋಪಿಗಳು ಈ ಕೃತ್ಯವನ್ನು ನಡೆಸಿದ್ದಾಗಿದೆ ಎಂಬಿತ್ಯಾದಿ ಪಿರ್ಯಾದಿ ಸಾರಾಂಶ  

Crime Reported in  E and N Crime PS

ಸಂದೀಪ್. ಜಿ.ಎಸ್. ಪೊಲೀಸ್ ನಿರೀಕ್ಷಕರು, ಉಳ್ಳಾಲ ಪೊಲೀಸ್ ಠಾಣೆ ರವರು ದಿನಾಂಕ 25-05-2021 ರಂದು ಸಿಬ್ಬಂದಿ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ದಿನಾಂಕ 26-05-2021 ರ ಬೆಳಗ್ಗಿನ ಜಾವ 03-04 ಗಂಟೆಗೆ ಮಂಗಳೂರು ದಕ್ಷಿಣ ಉಪ ವಿಭಾಗ ಸಿ.ಹೆಚ್.ಸಿ. ರವರು  ಪಿರ್ಯಾದಿಗೆ ಕರೆ ಮಾಡಿ ಮೂಡಬಿದ್ರೆ ಠಾಣಾ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿತನು ಕೆಂಪು ಬಣ್ಣದ ಸ್ಕೋಡಾ ಕಾರಿನಲ್ಲಿ ಮುಡಿಪು ಕಡೆಗೆ ಬಂದಿರುವುದಾಗಿ ಮಾಹಿತಿ ಬಂದಂತೆ ಸದ್ರಿ ಕಾರನ್ನು ಬೆನ್ನಟ್ಟಿಕೊಂಡು ಬರುತ್ತಿದ್ದ ಪಿ.ಎಸ್.ಐ. ಮೂಡಬಿದ್ರೆ  ಮತ್ತು ಸಿಬ್ಬಂದಿಯವರು ಮುಡಿಪು ಪೇಟೆಯಲ್ಲಿ ನಿಲ್ಲಿಸಲು ಸೂಚಿಸಿದ್ದರೂ ನಿಲ್ಲಿಸದೇ ದೇರಳಕಟ್ಟೆ ಕಡೆಗೆ ಬರುತ್ತಿದ್ದು ಅದರೊಂದಿಗೆ ಈಚರ್ ಲಾರಿ ಕೂಡಾ ವೇಗವಾಗಿ ಬರುತ್ತಿದ್ದು, ಸದ್ರಿ ವಾಹನಗಳು ಕೇರಳ ಕಡೆಗೆ ಒಳರಸ್ತೆಯಲ್ಲಿ ಹೋಗುವ ಸಾಧ್ಯತೆ ಇದ್ದು ಸದ್ರಿ ವಾಹನಗಳೆರಡನ್ನು ಪತ್ತೆ ಮಾಡಲು ಸಹಕರಿಸುವಂತೆ ಕೋರಿ ಕೊಂಡಂತೆ ಉಳ್ಳಾಲ ಠಾಣೆಯ ಹೆಚ್ಚುವರಿ ಸಿಬ್ಬಂದಿಗಳೊಂದಿಗೆ ತೆರಳಿ ಕೆಸಿರೋಡ್ - ಒಲವಿನ ಹಳ್ಳಿ ಜಂಕ್ಷನ್ ಬಳಿಗೆ ಬೆಳಿಗ್ಗೆ ಸುಮಾರು 3:40 ಗಂಟೆಗೆ ತಲುಪಿದಾಗ ಕೆಂಪು ಬಣ್ಣದ ಸ್ಕೋಡಾ ಕಂಪೆನಿಯ ಕಾರು ಮತ್ತು ಅದರ ಹಿಂದುಗಡೆ ಬರುತ್ತಿದ್ದ ಈಚರ್ ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದು ಅಲ್ಲದೇ ಅಲ್ಲಿಗೆ  ಮೂಡಬಿದ್ರೆ PSI ರವರು ಸಿಬ್ಬಂದಿಗಳೊಂದಿಗೆ ಮತ್ತು ACP ಸ್ಕ್ವಾಡ್ ಸಿಬ್ಬಂದಿಯವರು ಬಂದಿದ್ದು, ಕಾರಿನಲ್ಲಿದ್ದ ಇಬ್ಬರು ಯುವಕರು ಮತ್ತು ಈಚರ್ ಇನ್ಸುಲೇಟರ್ ಲಾರಿಯಲ್ಲಿದ್ದ ಇಬ್ಬರು ಯುವಕರು ವಾಹನದಿಂದ ಇಳಿದು ಓಡಿ ಹೋಗಲು ಪ್ರಯತ್ನಿಸುತ್ತಿದ್ದವರನ್ನು ಹಿಡಿದು ಕೆಎ-03-ಎಂಕೆ-0649 ನೇ ಕೆಂಪು ಸ್ಕೋಡಾ ಕಾರು ಚಾಲಕನಲ್ಲಿ ವಿಚಾರಿಸಿದ್ದಲ್ಲಿ  1)ಮೊಹಮ್ಮದ್ ಫಾರೂಕ್ (24) ಮತ್ತು ಇನ್ನೋರ್ವ 2) ಸೈಯ್ಯದ್ ಮೊಹಮ್ಮದ್ (31) ಎಂಬುದಾಗಿಯೂ ಕೆಎ-20-ಸಿ-6345 ನೇ ಲಾರಿಯಲ್ಲಿದ್ದವರು 3)ಮೊಹಮ್ಮದ್ ಅನ್ಸಾರ್ (23) ಮತ್ತು 4) ಮೊಧೀನ್ ನವಾಜ್ (34) ಎಂದು ತಿಳಿಸಿದ್ದು ಅವರುಗಳನ್ನು ವಿಚಾರಿಸಿದ್ದಲ್ಲಿ ಕಾರಿನ  ಹಿಂಭಾಗದ ಢಿಕ್ಕಿಯಲ್ಲಿ ಗೋಣಿ ಚೀಲದಲ್ಲಿ ಹಾಗೂ ಲಾರಿಯ ಹಿಂಭಾಗದ ಕಂಟೈನರ್ ಒಳಗಡೆ ಗೋಣಿ ಚೀಲದಲ್ಲಿ ಗಾಂಜಾ ಇರುವುದಾಗಿಯೂ ಸದ್ರಿ ಗಾಂಜಾವನ್ನು ನಾಲ್ಕು ಜನ ಒಟ್ಟು ಸೇರಿ ಆಂಧ್ರಪ್ರದೇಶದ ವಿಶಾಖಪಟ್ಟಣ ಎಂಬಲ್ಲಿಂದ ಶ್ರೀನಿವಾಸ ಎಂಬಾತನಿಂದ ಹಣಕ್ಕೆ ಖರೀದಿ ಮಾಡಿಕೊಂಡು ವಾಹನಗಳಲ್ಲಿ ತುಂಬಿಸಿಕೊಂಡು ಬಂದು ಉಪ್ಪಳ, ಕಾಸರಗೋಡು ಕಡೆಗಳಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡ ಮೇರೆಗೆ ಕೆಎ-03-ಎಂಕೆ-0649 ನೇ ಕಾರಿನ ಢಿಕ್ಕಿಯಲ್ಲಿ ಎರಡು ಗೋಣಿ ಚೀಲದಲ್ಲಿದ್ದ ರೂ. 5,60,000/- ಮೌಲ್ಯದ ಸುಮಾರು 60 ಕೆಜಿ 680 ಗ್ರಾಂ ತೂಕದ  ಗಾಂಜಾವನ್ನು ಮತ್ತು ಕೆಎ-20-ಸಿ-6345 ನೇ ಲಾರಿಯಲ್ಲಿ ಆರು ಗೋಣಿ ಚೀಲದಲ್ಲಿದ್ದ ರೂ.14,40,000/- ಮೌಲ್ಯದ ಸುಮಾರು 157 ಕೆ.ಜಿ. 060 ಗ್ರಾಂ ತೂಕದ  ಗಾಂಜಾವನ್ನು (ಒಟ್ಟು ರೂ. 20,00,000/- ಮೌಲ್ಯದ ಸುಮಾರು 217 ಕೆ.ಜಿ. 740 ಗ್ರಾಂ ) ಗಾಂಜಾ ಸಾಗಾಟ ಮಾಡಲು ಉಪಯೋಗಿಸಿದ್ದ ರೂ. 4,00,000/- ಮೌಲ್ಯದ KA-03-MK-0649 ನೇ ಕಾರು, ರೂ. 5,00,000/- ಮೌಲ್ಯದ KA-20-C-6345 ನೇ ಈಚರ್ ಇನ್ಸುಲೇಟರ್ ಲಾರಿಯನ್ನು  ಸ್ವಾಧೀನ ಪಡಿಸಿರುವುದಲ್ಲದೇ ಈಚರ್ ಲಾರಿಯ ಕ್ಯಾಬಿನ್ ಸೀಟಿನ ಅಡಿಯಲ್ಲಿದ್ದ ರೂ. 1,000/- ಮೌಲ್ಯದ 3 ತಲವಾರು ಮತ್ತು 1 ಚೂರಿಯನ್ನು ಹಾಗೂ ಆರೋಪಿ ಮೊಹಮ್ಮದ್ ಫಾರೂಕ್ ಎಂಬಾತನ ರೂ. 5,000/- ಮೌಲ್ಯದ VIVO  - 18 Plus ಮೊಬೈಲ್, ಸೈಯ್ಯದ್ ಮೊಹಮ್ಮದ್ ವಶದಲ್ಲಿದ್ದ ರೂ. 10,000/- ಮೌಲ್ಯದ IPhone X ಮೊಬೈಲ್, ಮೊಹಮ್ಮದ್ ಅನ್ಸಾರ್ ವಶದಲ್ಲಿದ್ದ ರೂ. 3,000/- ಮೌಲ್ಯದ Redmi ಮೊಬೈಲ್  ಮತ್ತು ಮೊಧೀನ್ ನವಾಜ್ ವಶದಲ್ಲಿದ್ದ ರೂ. 10,000/- ಮೌಲ್ಯದ IPhone ಮೊಬೈಲನ್ನು ಸ್ವಾಧೀನಪಡಿಸಿದ್ದು  ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ  ರೂ. 29,29,000/- ಆಗಿದ್ದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುವುದು  ಎಂಬಿತ್ಯಾದಿ

Crime Reported in  Kankanady Town PS 

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕ ಒಕ್ಕೂಟ ನಿಯಮಿತ, ಮಂಗಳೂರು ಡೈರಿಯ ನಗದು ವಿಬಾಗದಲ್ಲಿ ಆಡಳಿತ ಸಹಾಯಕ ದರ್ಜೆ-2 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ್ ಎಮ್ ಟಿ ಎಂಬುವರು ದಿನಾಂಕ 19-05-2021 ರಂದು ಹಾಲು ವಿತರಣಾ ಮಾರ್ಗದ ಗುತ್ತಿಗೆದಾರರ ಒಕ್ಕೂಟಕ್ಕೆ ಪಾವತಿಸಿದ ನಗದು ರೂ 24,36,959 ನ್ನು ಮರುದಿನ ದಿನಾಂಕ 20-05-2021 ರಂದು ಎಕ್ಸಿಸ್ ಬ್ಯಾಂಕಿಗೆ ಜಮೆ ಮಾಡಬೇಕಾಗಿದ್ದು ರೂ 21,36,959 ನ್ನು ಮಾತ್ರ ಜಮೆ ಮಾಡಿ ರೂ 3 ಲಕ್ಷ ಹಣವನ್ನು ಬಾಕಿ ಉಳಿಸಿದ್ದು ನಂತರ ದಿನಾಂಕ 20-05-2021 ರಂದು ಹಾಲು ವಿತರಣಾ ಮಾರ್ಗದಿಂದ ಗುತ್ತಿಗೆದಾರರು ಒಕ್ಕೂಟಕ್ಕೆ ಪಾವತಿಸಿದ ನಗದು 23,13,827 ರೂ ನ್ನು ದಿನಾಂಕ 21-05-2021 ರಂದು ಎಕ್ಸಿಸ್ ಬ್ಯಾಂಕಿಗೆ ಜಮೆ ಮಾಡಬೇಕಾಗಿದ್ದು, ಈ ಹಣವನ್ನು ಜಮೆ ಮಾಡದೇ ಕರ್ತವ್ಯಕ್ಕೆ ಬಾರದೆಯಿದ್ದು ಅವರಿಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದೆಯಿದ್ದಾಗ ಸದ್ರಿ ನಾಗರಾಜ್ ಎಮ್ ಟಿ ರವರನ್ನು ಕಛೇರಿಗೆ ಬರ ಹೇಳಿ ಅವರ ವಶದಲ್ಲಿದ್ದ ನಗದುಕೋಶವನ್ನು ಅವರ ಸಮಕ್ಷಮ ತೆರಯಿಸಿದಾಗ ನಗದುಕೋಶದಲ್ಲಿ ರೂ 4,73,869 ಮಾತ್ರ ಹಣವಿದ್ದು ರೂ 18,39,95.65 ಹಣವು ಕಡಿಮೆಯಿದ್ದು ಒಟ್ಟು ರೂ 21,39,958.65 ಹಣವನ್ನು ನಾಗರಾಜ್ ಎಮ್ ಟಿ ರವರು ತಾನು ನೌಕರನಾಗಿದ್ದ ದಕ್ಷಿಣ ಕನ್ನಡ ಹಾಲು ಒಕ್ಕೂಟ ಸಂಘಕ್ಕೆ ಪಾವತಿಸದೇ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಸಂಸ್ಥೆಗೆ ನಂಬಿಕೆ ದ್ರೋಹ, ಮೋಸ ಮತ್ತು ವಂಚನೆ ಮಾಡಿರುತ್ತಾರೆ, ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 27-05-2021 11:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080