ಅಭಿಪ್ರಾಯ / ಸಲಹೆಗಳು

Crime Reported in  Cyber Crime PS

ಪಿರ್ಯಾದಿದಾರರು ಕೆನರಾ ಬ್ಯಾಂಕ್ ಫೌಂಡರ್ಸ್ ಬ್ರಾಂಚ್, ಡೊಂಗರಕೇರಿ ಯಲ್ಲಿ ಖಾತೆಯನ್ನು ಹೊಂದಿರುತ್ತಾರೆ. ದಿನಾಂಕ 25-06-2021 ರಂದು ಮಧ್ಯಾಹ್ನ ಸಮಯ ಪಿರ್ಯಾದಿದಾರರು  ಮನೆಯಲ್ಲಿ ಮಲಗಿದ್ದ ಸಮಯ ಸುಮಾರು 3.45 ಗಂಟೆಗೆ +916372729087ನೇ ನಂಬ್ರದ ಮೊಬೈಲ್ ಒಂದರಿಂದ ಕರೆಯೊಂದು ಬಂದಿದ್ದು ಕರೆ ಮಾಡಿದ ವ್ಯಕ್ತಿಯು ತಾನು ಕೆನರಾ ಬ್ಯಾಂಕ್ ನಿಂದ ಕರೆ ಮಾಡುವುದಾಗಿ ತಿಳಿಸಿದ್ದು ಪಿರ್ಯಾದಿದಾರರ ಎ.ಟಿ.ಎಂ ಕಾರ್ಡ್ expirty ಆಗಿದ್ದು ಎ.ಟಿ.ಎಂ ಕಾರ್ಡ್ ರಿನೀವಲ್ ಬಗ್ಗೆ ಡೆಬಿಟ್ ಕಾರ್ಡ್ ವಿವರವನ್ನು ಒದಗಿಸುವಂತೆ ತಿಳಿಸಿದ್ದು  ಅದರಂತೆ ಪಿರ್ಯಾದಿದಾರರು ಎದ್ದು ಕಪಾಟಿನಿಂದ ಡೆಬಿಟ್ ಕಾರ್ಡನ್ನು ತೆಗೆದು ತನ್ನ  ಡೆಬಿಟ್ ಕಾರ್ಡ್ ಸಂಖ್ಯೆ ಹಾಗೂ expiry ದಿನಾಂಕವನ್ನು ತಿಳಿಸಿರುತ್ತಾರೆ. ಕೂಡಲೇ ಪಿರ್ಯಾದಿದಾರರ ಬ್ಯಾಂಕ್ ಖಾತೆ ಯಿಂದ ಹಂತ ಹಂತವಾಗಿ ಒಟ್ಟು ಮೊತ್ತ ರೂ.1,00,000/- ಯನ್ನು ಮೋಸದಿಂದ ತನ್ನ ಖಾತೆಗೆ ವರ್ಗಾಯಿಸಿರುವುದಾಗಿದೆ. ಎಂಬಿತ್ಯಾದಿ.

Crime Reported in  Mangalore East PS

ಪಿರ್ಯಾದಿ Anston Ashish Gonsalves ರವರು ತನ್ನ ಹೆಂಡತಿ ಶ್ರೀಮತಿ ಕ್ಯಾರೊಲಿನ್ ನಿಕಿತಾ ಗೊನ್ಸಾಲ್ವಿಸ್ ರವರೊಂದಿಗೆ ದಿನಾಂಕ 24-06-2021 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಕೆಲಸ ಮುಗಿಸಿ ತನ್ನ ಮನೆ ಕಡೆಗೆ ಹೋಗುತ್ತಿರುವಾಗ ಆರೋಪಿಗಳು ಹಲ್ಲೆ ಮಾಡುವ ಮತ್ತು ಪಿರ್ಯಾದಿದಾರರ ಹೆಂಡತಿಯ ಮಾನಭಂಗ  ಮಾಡುವ ಸಮಾನ ಉದ್ದೇಶದಿಂದ ಒಂದನೇ ಆರೋಪಿ ಕೀಗನ್ ಲೂಯಿಸ್ ರವರು ಪಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೂಡಿಹಾಕಿ ಕಾಲಿನಿಂದ ತುಳಿದು ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಕೈಗಳಿಗೆ ಮತ್ತು ತಲೆಯ ಹಿಂಭಾಗಕ್ಕೆ ಹೊಡೆದು ರಕ್ತ ಗಾಯ ಮಾಡಿರುವುದಲ್ಲದೆ 2 ನೇ ಆರೋಪಿ ಐವನ್ ಲೂಯಿಸ್ ರವರು ಪಿರ್ಯಾದಿದಾರರ ಕುತ್ತಿಗೆಗೆ ಚೂರಿಯಿಂದ ಗೀರಿದ್ದು ಈ ಸಮಯ ಬಿಡಿಸಲು ಬಂದ ಪಿರ್ಯಾದಿದಾರರ ಹೆಂಡತಿಯನ್ನು 1 ನೇ ಆರೋಪಿ ಕೀಗನ್ ಲೂಯಿಸ್ ಅಪ್ಪಿ ಹಿಡಿದು ಬಲಗೈಯನ್ನು ತಿರುಗಿಸಿ  ಬೆವರ್ಸಿ ..ಎಂದು ಅವಾಚ್ಯವಾಗಿ ನಿಂದಿಸಿರುವುದಲ್ಲದೇ 2 ನೇ ಆರೋಪಿ ಐವನ್  ಲೂಯಿಸ್ ಪಿರ್ಯಾದಿದಾರರ ಹೆಂಡತಿಯನ್ನು ಹಿಡಿದುಕೊಂಡು ಅವರ ಬಲಕೈ ತಟ್ಟಿನ ಹೆಬೆರಳ್ಳಿನ ಬಳಿ ಚೂರಿಯಿಂದ ಗೀರಿ ರಕ್ತ ಗಾಯ ಪಡಿಸಿ ಜೀವ ಬೆದರಿಕೆ ಹಾಕಿರುವುದಾಗಿದೆ.ಪಿರ್ಯಾದಿದಾರರು ಮನೆಯಲ್ಲಿ ನಾಯಿಗಳನ್ನು ಸಾಕುತ್ತಿದ್ದು ಅವುಗಳು ಬೇರೆಯವರನ್ನು ಪಿರ್ಯಾದಿದಾರ ಮನೆಯ ಕಂಪೌಂಡಿಗೆ ಬರಲು ಬಿಡುವುದಿಲ್ಲವೆಂಬ ದ್ವೇಷದಿಂದ ಆರೋಪಿಗಳು ಈ ಕೃತ್ಯ ಮಾಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 26-06-2021 05:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080