ಅಭಿಪ್ರಾಯ / ಸಲಹೆಗಳು

Crime Reported in  Mangalore Rural PS

ದಿನಾಂಕ 26-05-2021 ರಂದು 20-00 ಗಂಟೆಗೆ, ಅಡ್ಯಾರು ಗ್ರಾಮದ ಸೋಮನಾಥ ಕಟ್ಟೆ ಬಳಿಯ “ವಾರಿಧಿ” ಎಂಬ ಲಾಡ್ಜ್ ನಲ್ಲಿ ಉಲಾಯಿ-ಪಿದಾಯಿ ಎಂಬ ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಪೀಟ್ ಎಲೆಗಳನ್ನು ಉಪಯೋಗಿಸಿಕೊಂಡು ಜುಗಾರಿ ಆಟವಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ, 22-00 ಗಂಟೆಗೆ ಸದ್ರಿ ವಾರಿಧಿ ಲಾಡ್ಜ ನ 1 ನೇ ಮಹಡಿಯ ರೂಮ್ ನಂಬ್ರ 105 ಕ್ಕೆ ದಾಳಿ ನಡೆಸಿದಾಗ ಸದ್ರಿ ಕೊಠಡಿಯ ಹಾಲ್ನಲ್ಲಿ  ಆರೋಪಿತರಾದ (1) ಶ್ರೀಕಾಂತ ಶೆಟ್ಟಿ, (2) ಅರುಣ ಬೆಳ್ಚಡ (3) ಚಂದ್ರಶೇಖರ (4) ರೋಹಿತ್ ಪೂಜಾರಿ (5) ಜಯಂತ್ ಗಾಣಿಗ (6) ಶರತ್ (7) ರಾಹುಲ್ (8) ನವೀನ್ ಎನ್ (9 ) ಪ್ರೀತಮ್ (10) ಶೈಲೇಶ್ ಎಂಬವರು ಕೋವಿಡ್ 19- ಮಾರ್ಗಸೂಚಿಯನ್ನು ಉಲ್ಲಂಘಿಸಿ, ನೆಲದಲ್ಲಿ ತೀರಾ ಹತ್ತಿರದಲ್ಲಿ ಮುಖಕ್ಕೆ ಮಾಸ್ಕ್ ಧರಿಸದೇ  ಹಣವನ್ನು ಪಣವಾಗಿಟ್ಟು ಇಸ್ಪೀಟ್ ಕಾರ್ಡ್ಗಳಿಂದ ಉಲಾಯಿ-ಪಿದಾಯಿ [ಅಂದರ್-ಬಾಹರ್] ಎಂಬ ಅದೃಪ್ಟದ ಆಟ ಆಡುತ್ತಿದ್ದುದ್ದನ್ನು ಕೊಠಡಿಯ ವಿದ್ಯುತ್ ದೀಪದ ಬೆಳಕಿನ ಸಹಾಯದಿಂದ ಆಡುತ್ತಿದ್ದು  ಕೋವಿಡ್ 19 ರ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಎಲ್ಲಾ ಆರೋಪಿತರನ್ನು ವಶಕ್ಕೆ ಪಡೆದು ಅವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 9500/- ರೂಪಾಯಿ ಸುಮಾರು 32200/- ರೂಪಾಯಿ ಮೌಲ್ಯದ 8 ಮೋಬೈಲ್ ಹ್ಯಾಂಡ್ ಸೆಟ್ ಹಾಗೂ ಸುಮಾರು 1226700/- ಮೌಲ್ಯದ ವಾಹನಗಳನ್ನು ಸ್ವಾಧೀನ ಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

Crime Reported in  Traffic South PS

ದಿನಾಂಕ 27-05-2021 ರಂದು ಪಿರ್ಯಾದಿ SMT DEEPIKA (34) ರವರ ಗಂಡನಾದ ದಯಾನಂದರವರು (45) ಅವರ ಬಾಬ್ತು ಸ್ಕೂಟರ್ ನಂಬ್ರ KA-19-EK-8664 ನೇದರಲ್ಲಿ ಮನೆಯಿಂದ ಜಪ್ಪಿನಮೊಗರು ಮಾರ್ಗವಾಗಿ ಬೊಂದೇಲ್ ಕಡೆಗೆ ರಾ.ಹೆ 66 ರ ಎಕಮುಖ ಡಾಮಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು   ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 07.30 ಗಂಟೆಗೆ ಪಂಪ್ ವೆಲ್ ಪ್ಲೈ  ಓವರ್ ಮೇಲೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಗಂಡ  ಸವಾರಿ ಮಾಡುತ್ತಿದ್ದ ಸ್ಕೂಟರಿನ ಹಿಂಬದಿಯಿಂದ ಕಾರು ನಂಬ್ರ  KA-70-M-2627 ನೇದನ್ನು ಅದರ ಚಾಲಕ ರಾಜೇಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಗಂಡ ದಯಾನಂದರವರು  ಸವಾರಿ ಮಾಡುತ್ತಿದ್ದ ಸ್ಕೂಟರ್ ನಂಬ್ರ  KA-19-EK-8664  ನೇದರ ಹಿಂಬದಿಗೆ ಡಿಕ್ಕಿ ಪಡಿಸಿ ಕಾರು ಮಗುಚಿ ಬಿದ್ದ ಪರಿಣಾಮ ಸ್ಕೂಟರ್ ಸವಾರ ದಯಾನಂದರವರು ಸ್ಕೂಟರ್  ಸಮೇತ ರಸ್ತೆಗೆ ಬಿದ್ದು, ಅವರ ಬಲಕಣ್ಣಿನ ಮೇಲೆ ಹುಬ್ಬಿನ ಬಳಿ ಹಾಗೂ ಗಲ್ಲಕ್ಕೆ  ರಕ್ತಗಾಯ, ಹಾಗೂ ಬಲಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಅಪಘಾತಕ್ಕೀಡಾದ ಸ್ಕೂಟರ್ ಸವಾರ ದಯಾನಂದರವರನ್ನು ಚಿಕಿತ್ಸೆಯ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಪಂಪ್ ವೆಲ್ ಇಂಡಿಯಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

Crime Reported in  Surathkal PS          

ದಿನಾಂಕ: 26/05/2021 ರಂದು ಸಂಜೆ ಸಮಯ ಸುಮಾರು 05-30ಗಂಟೆಗೆ ಪಿರ್ಯಾದಿ Laxman (60) ರವರ Katippallaದ  ಮನೆಗೆ ಜ್ಞಾನೇಶ್ ಎಂಬವರು ಅಕ್ರಮ ಪ್ರವೇಶ ಮಾಡಿ ಏಕಾಏಕಿಯಾಗಿ “ ನನ್ನ ತಾಯಿಗೆ ಕೆಟ್ಟ ಭಾಷೆಯಲ್ಲಿ ಬೈಯ್ಯುತ್ತಿಯಾ” ಎಂದು ಹೇಳಿ ರೀಪಿನಂತಹ ಮರದ ತುಂಡಿನಿಂದ ಪಿರ್ಯಾದಿದಾರರ ಬಲಕಾಲಿಗೆ,ಎಡಕಾಲಿಗೆ,ಎರಡು ಕೈಗಳಿಗೆ ಹಾಗೂ ಮುಖಕ್ಕೆ ಹೊಡೆದಿರುವುದಾಗಿದೆ.ಆ ಸಮಯ ಪಿರ್ಯಾದಿದಾರರ ಹೆಂಡತಿ ಬಂದು ಬಿಡಿಸಿರುತ್ತಾರೆ.ನಂತರ ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರ ಮಗ ಮತ್ತು ಪತ್ನಿ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.ಪಿರ್ಯಾದಿದಾರರು ಹಾಗೂ ಆಪಾದಿತನ ತಾಯಿಗೂ ಹಳೇ ದ್ವೇಷವಿದ್ದು.ಅದೇ ದ್ವೇಷದಿಂದ ಹಲ್ಲೆ ನಡೆಸಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ

Crime Reported in  Panambur PS

ಪಿರ್ಯಾದಿದಾರರಾದ ಸಿನಾನ್ ಅಫ್ರೀದ್ ಎಂಬವರು ನಿರ್ವವಾಕ ಕೆಲಸ ಮಾಡಿಕೊಂಡಿರುವ  ಕೆ.ಎ 19 ಎ.ಬಿ 0215 ನೇ  ಲಾರಿಯ ಮಾಲೀಕ ಹಾಗೂ ಚಾಲಕರಾಗಿರುವ ಮೊಹಮ್ಮದ್  ಮನ್ಸೂರ್  ಎಂಬುವರೊಂದಿಗೆ  ಕೆ.ಎ 19 ಎ.ಬಿ 0215 ನೇ  ಲಾರಿಯಲ್ಲಿ ಎಮ್.ಆರ್.ಪಿ.ಎಲ್  ನಿಂದ  ಪ್ಲಾಸ್ಟೀಕ್ ಮಣಿಗಳನ್ನು ತುಂಬಿದ 25 ಕೆ.ಜಿ ಯ ಚೀಲಗಳನ್ನು ಲೋಡ್ ಮಾಡಿಕೊಂಡು, ಎಮ್.ಆರ್.ಪಿ.ಎಲ್ ನಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ  ಬ್ರೈಟ್ ಪ್ಯಾಕೇಜಿಂಗ್ ಕಂಪನಿಯ ಯಾರ್ಡ್ ಗೆ ಅನ್ ಲೋಡ್ ಮಾಡಿಸುವ ಬಗ್ಗೆ ದಿನಾಂಕ: 26-05-2021 ರಂದು ಸಮಯ ಸುಮಾರು ರಾತ್ರಿ 19-00 ಗಂಟೆಗೆ  ಲಾರಿಯ ಮಾಲೀಕರಾದ ಮೊಹಮ್ಮದ್ ಮನ್ಸೂರ್ ರವರು ಚಾಲನೆ ಮಾಡಿಕೊಂಡು ಅನ್ ಲೋಡ್ ಮಾಡುವ ಸ್ಥಳಕ್ಕೆ ಲಾರಿಯನ್ನು ನಿಲ್ಲಿಸಿದ್ದು, , ಪಿರ್ಯಾಧಿದಾರರು ಲಾರಿಯ ಕ್ಯಾಬಿನ್ ಮೇಲೆ ಹತ್ತಿದ್ದು, ಮೊಹಮ್ಮದ್ ಮನ್ಸೂರ್ ರವರು ಕೆಳಗಿನಿಂದ  ಹಗ್ಗ ಬಿಚ್ಚಿದಂತೆ ಪಿರ್ಯಾಧಿದಾರರು ಹಗ್ಗವನ್ನು ಕ್ಯಾಬಿನ್ ಮೇಲೆ ಹಾಕುತ್ತಿರುವಾಗ, ಲಾರಿಯ ಹಿಂಭಾಗದಲ್ಲಿ ಜೋಡಿಸಿರುವ ಪ್ಲಾಸ್ಟೀಕ್ ಮಣಿಗಳನ್ನು ತುಂಬಿದ ಚೀಲಗಳು ಒಮ್ಮೇಲೆ ಜಾರಿ, ಕೆಳಗೆ ನಿಂತು ಹಗ್ಗ ಬಿಚ್ಚುತಿದ್ದ ಮೊಹಮ್ಮದ್ ಮನ್ಸೂರ್ ರವರ ಮೇಲೆ ಬಿದ್ದು, ಸ್ಥಳದಲ್ಲಿಯೇ ಮೊಹಮ್ಮದ್ ಮನ್ಸೂರ್ ರವರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಪಿರ್ಯಾಧಿದಾರರು ಕೂಡಲೇ ಕಂಪನಿಯ ಕಾರಿನಲ್ಲಿ ಕಾರಿನ ಚಾಲಕ ಸಹಾಯದಿಂದ ಎ.ಜೆ ಆಸ್ವತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿದ್ದಾಗ ಮೃತಪಟ್ಟಿರುವುದಾಗಿಯೂ, ಆದುದ್ದರಿಂದ ಮೊಹಮ್ಮದ್ ಮನ್ಸೂರ್ ರವರು  ಮೃತಪಡಲು ಕಾರಣರಾದ ಸಂಬಂದಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ

Crime Reported in  Kavoor PS

ದಿನಾಂಕ 26/05/2021 ರಂದು ಪಿರ್ಯಾದಿ HARISH H V PSI ರವರು ಕಾವೂರು ಜಂಕ್ಷನ್ ನಲ್ಲಿ ಸಿಬ್ಬಂದಿಯವರ ಜೊತೆ ವಾಹನ ತಪಾಸಣೆ ಕರ್ತವ್ಯದಲ್ಲಿ ನಿರತರಾಗಿದ್ದ ಸಮಯ ಪಿರ್ಯಾದಿದಾರರ ಜೊತೆ ಕರ್ತವ್ಯದಲ್ಲಿದ್ದ ಠಾಣಾ ಸಿಬ್ಬಂದಿಯಾದ ಹೆಚ್, ಸಿ  ವಿಶ್ವನಾಥ ರವರಿಗೆ  ಬಂದ ಮಾಹಿತಿಯನ್ನು ಪಿರ್ಯಾದಿದಾರರಿಗೆ ತಿಳಿಸಿದ್ದು, ಠಾಣಾ ವ್ಯಾಪ್ತಿಯ ದೇರೆಬೈಲ್ ಚರ್ಚ್ ಹಿಂಬದಿಯಲ್ಲಿ ಸುಮಾರು 10-12 ಜನ ಸೇರಿ ಮುಖಕ್ಕೆ ಮಾಸ್ಕ ಧರಿಸದೆ ಒಬ್ಬರಿಗೊಬ್ಬರು ದೈಹಿಕ ಅಂತರ ಕಾಪಾಡಿಕೊಳ್ಳದೆ ಹಣವನ್ನು ಪಣವಾಗಿಸಿ ಜೂಜಾಟದಲ್ಲಿ ನಿರತಾರಾಗಿರುವುದಾಗಿ ಮಾಹಿತಿ ಇದ್ದು, ಸದ್ರಿ ಜೂಜಾಟಕ್ಕೆ ಕೂಡಲೇ ದಾಳಿ ನಡೆಸದೆ ಇದ್ದಲ್ಲಿ ಅವರುಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಠಾಣೆಯಲ್ಲಿದ್ದ ಸಿಬ್ಬಂದಿಗಳನ್ನು ಬರಮಾಡಿಕೊಂಡು ಸಿಬ್ಬಂದಿಗಳ ಜೊತೆಯಲ್ಲಿ ಪಿರ್ಯಾದಿದಾರರು ಸ್ಥಳಕ್ಕೆ ತೆರಳಿ ದಾಳಿ ನಡೆಸಿದಲ್ಲಿ ಆಪಾದಿತರು ಸರ್ಕಾರವು ಕೊರೊನಾ ವೈರಸ್ ತಡೆಗಟ್ಟಲು ಹೊರಡಿಸಿದ ಮಾರ್ಗಸೂಚಿ ಆದೇಶವನ್ನು ಉಲ್ಲಂಘಿಸಿ ಮಾನವ ಜೀವಕ್ಕೆ ಅಪಾಯಕಾರಿ ರೋಗದ ಸೊಂಕನ್ನು ಹರಡುವಲ್ಲಿ ನಿರ್ಲಕ್ಷವಹಿಸಿ ಸಾರ್ವಜನಿಕ ಸ್ಥಳದಲ್ಲಿ ಕುರ್ಚಿ ಮತ್ತು ಟೇಬಲ್ ಗಳನ್ನು ಇರಿಸಿ ಗುಂಪಾಗಿ ಕುಳಿತುಕೊಂಡು, ಹಣವನ್ನು ಪಣವಾಗಿಟ್ಟು ಜೂಜಾಟದಲ್ಲಿ ನಿರತರಾಗಿರುವುದನ್ನು ನೋಡಿದ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಆಪಾದಿತರನ್ನು ತಡೆದು ನಿಲ್ಲಿಸಿ ಜೂಜಾಟದಲ್ಲಿ ಬಳಸಿದ ನಗದು ರೂ.7200/- ಸೇರಿದಂತೆ ಒಟ್ಟು ಸುಮಾರು 8700/- ರೂ.ಮೌಲ್ಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿರುವುದಾಗಿ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 27-05-2021 05:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080