ಅಭಿಪ್ರಾಯ / ಸಲಹೆಗಳು

 Crime Reported in  Mangalore Women PS

ದಿನಾಂಕ 26-07-2021 ರಂದು ಪಿರ್ಯಾದಿದಾರರಾದ ಶ್ರೀಮತಿ ಗಾಯಿತ್ರಿ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಮೂಡಬಿದ್ರೆಯ  ಸತೀಶ್ ಎಂಬುವರನ್ನು ಮದುವೆಯಾಗಿದ್ದು, ಅವರ ಸಂಸಾರೀಕ ಜೀವನದಲ್ಲಿ ಬಿರುಕು ಉಂಟಾಗಿ ಮಾನ್ಯ ನ್ಯಾಯಾಲಯದಲ್ಲಿ ವಿಚ್ಚೇದನೆ ಪ್ರಕರಣ ವಿಚಾರಣೆಯಲ್ಲಿರುತ್ತದೆ. ಪಿರ್ಯಾದಿದಾರರ ತಂದೆ ತಾಯಿಯ ಮನೆ ಚಿಕ್ಕದಾಗಿದ್ದು, ಬೇರೆ ವಾಸಿಸುವರೇ ಬಾಡಿಗೆ ಮನೆಯನ್ನು ಹುಡುಕುತ್ತಿದ್ದ ಸಮಯ ಸುಮಾರು 2 ತಿಂಗಳ ಹಿಂದೆ ಬೆಂಗರೆ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಎಂಬುವರಿಂದ ಬಾಡಿಗೆ ಮನೆ ಪಡೆದು  ಅವರ ಬಟ್ಟೆ ಬರೆಗಳನ್ನು ಇಟ್ಟು ಬಂದಿದ್ದು, ಬಳಿಕ ಪಿರ್ಯಾದಿದಾರರಿಗೆ ಜ್ವರ ಬಂದಿದ್ದರಿಂದ ಬಾಡಿಗೆ ಮನೆಗೆ ತೆರಳಲು ಅಸಾದ್ಯವಾಗಿದ್ದು, ಆ ಸಮಯ ಆರೋಪಿ ಎಡೆಬಿಡದೆ ಫೋನ್ ಮಾಡಿ ಬಟ್ಟೆ ಬರೆಗಳನ್ನು ವಾಪಾಸ್ ಕೊಂಡು ಹೋಗುವಂತೆ ತಿಳಿಸಿರುತ್ತಾರೆ. ದಿನಾಂಕ 08-06-2021 ರಂದು ಸುಮಾರು 10.30 ಗಂಟೆಗೆ ಪಿರ್ಯಾದಿದಾರರಿಗೆ ಕರೆ ಮಾಡಿ ದಿನಾಂಕ 09-06-2021 ರಂದು ಆರೋಪಿ ಮನೆಯಲ್ಲಿದ್ದ ಬಟ್ಟೆ ಬರೆಗಳನ್ನು ಕುಂಟಿಕಾನದ ಪ್ಲೈ ಓವರ್ ಅಡಿಯಲ್ಲಿ ತಂದು ನೀಡುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ತೆರಳಿದ್ದು, ಅಲ್ಲಿಗೆ ಬಂದ ಆರೋಪಿತನು ಬಟ್ಟೆ ತರಲು ಮರೆತು ಹೋಗಿದ್ದು, ನೀನು ಬಂದಲ್ಲಿ ಮನೆಯಿಂದ ಬಟ್ಟೆ ಕೊಡುವುದಾಗಿ ಆತನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದು, ಕಾರಿನಲ್ಲಿ ಹೋಗುವಾ ಸಮಯ ಆರೋಪಿತನು ಪಿರ್ಯಾದಿದಾರರೊಂದಿಗೆ ಆಶ್ಲೀಲವಾಗಿ ಮಾತನಾಡುತ್ತಾ,  ಆತನ ಮನೆಗೆ ಹೋಗುವಾ ಒಳರಸ್ತೆಗೆ ಕಾರನ್ನು ಚಲಾಯಿಸಿ ಜನ ಸಂಚಾರ ಇಲ್ಲದ ಒಳ ಜಾಗದಲ್ಲಿ ಕಾರು ನಿಲ್ಲಿಸಿ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ. ನಂತರ ಅದೇ ಕಾರಿನಲ್ಲಿ ಪಿರ್ಯಾದಿದಾರರ ಮನೆಯ ಸಮೀಪ ಕರೆದುಕೊಂಡು ಬಂದಿದ್ದು, ಪಿರ್ಯಾದಿದಾರರು ಮುಖ್ಯ ರಸ್ತೆ ಸಿಕ್ಕಿದ ಕೂಡಲೇ ಕಾರಿನಿಂದ ಇಳಿದು ತಪ್ಪಿಸಿಕೊಂಡು ಬಂದಿರುತ್ತಾರೆ. ಮರ್ಯಾದೆಯ ದೃಷ್ಟಿಯಿಂದ ದೂರು ದಾಖಲಿಸುವುದು ಬೇಡವೆಂದು ಪಿರ್ಯಾದಿದಾರರು ಸುಮ್ಮನಿದ್ದು, ಆರೋಪಿಯು ಆಗಾಗ ಪಿರ್ಯಾದಿದಾರರಿಗೆ ಕರೆ ಮಾಡಿ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಆತನ ಬೇಡಿಕೆಯನ್ನು ಪಿರ್ಯಾದಿದಾರರು ನಿರಾಕರಿಸಿದಾಗ  ಮೊಬೈಲ್ ಗೆ ಮೆಸೇಜ್ ಮೂಲಕ ಮದುವೆಯಾಗದಿದ್ದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆಂಬಿತ್ಯಾದಿ.

Crime Reported in  Mangalore North PS

ಪಿರ್ಯಾದಿ  SOORAJ KUMAR ರವರು ಸೌತ್ ಇಂಡಿಯಾ ಟ್ರಾನ್ಸ್ ಪೋರ್ಟ್ ಭಟ್ಕಲ್ ಬಜಾರ್, ಬಂದರ್, ಮಂಗಳೂರು ಎಂಬ ಟಾನ್ಸ್ ಪೊರ್ಟ್ ಕಛೇರಿಯ ಮ್ಯಾನೇಜರ್ ಆಗಿ ಸುಮಾರು 04 ವರ್ಷಗಳಿಂದ ಕೆಲಸ ಮಾಡಿಕೊಂಡಿರುವುದಾಗಿದೆ. ಸದ್ರಿ ಟ್ರಾನ್ಸ್ ಪೊರ್ಟ್  ಕಂಪನಿಯಲ್ಲಿ ಅಡಿಕೆ ಹಾಗು ಇತರ ಕಾಡುಪ್ಪತ್ತಿ ಗಳನ್ನು ವಿವಿಧ  ಅಂಗಡಿ ಮಾಲೀಕರಿಂದ ಟಾನ್ಸ್ ಪೋರ್ಟ್ ಬಗ್ಗೆ ಪಡೆದುಕೊಂಡು  ನಂತರ ಹೊರಗಿನ ಟ್ರಾನ್ಸ್ ಪೋರ್ಟ್ ಏಜೆನ್ಸಿಯವರಿಂದ ಲಾರಿಗಳನ್ನು ಬಾಡಿಗೆಗೆ ಪಡೆದು ವಿವಿಧ ರಾಜ್ಯಗಳಿಗೆ ಸರಕುಗಳನ್ನು ತುಂಬಿಸಿ ಕಳುಹಿಸಿಕೊಡುವುದಾಗಿದೆ. ಅದರಂತೆ ದಿನಾಂಕ 19.07.2021 ರಂದು ಬೋಳೂರಿನ ಜಯಲಕ್ಷ್ಮಿ ಟಾನ್ಸ್ ಪೋರ್ಟ್ ಬುಕಿಂಗ್ ಆಫೀಸ್ ನಿಂದ MH-09-BC-9467 ಎಂಬ ಲಾರಿಯನ್ನು ಗುಜರಾತಿನ ರಾಜ್ ಕೋಟನಲ್ಲಿರುವ ನಮ್ಮ ಬ್ರಾಂಚ್ ಆಫೀಸಿಗೆ ತಲುಪಿಸುವರೇ ಸುಮಾರು 291 ಚೀಲ ಅಡಿಕೆಯನ್ನು ತುಂಬಿಸಿ ಅದೇ ದಿನ ರಾತ್ರಿ 10 ಗಂಟೆಗೆ ನಮ್ಮ ಬಂದರಿನ ಆಫೀಸಿನಿಂದ ಲಾರಿ ರಾಜ್ ಕೋಟ್ ಗೆ ಹೊರಟಿರುತ್ತದೆ. ಮರು ದಿನ ದಿನಾಂಕ;20-07-2021 ರಂದು ಕೂಡ ಬೋಳೂರಿನ ಜಯಲಕ್ಷ್ಮಿ ಟಾನ್ಸ್ ಪೋರ್ಟ್ ಬುಕಿಂಗ್ ಆಫೀಸ್ ನಿಂದ MH-13-R-3114 ಎಂಬ ಇನ್ನೊಂದು ಲಾರಿಯಲ್ಲಿ ಸುಮಾರು 301 ಚೀಲ ಅಡಿಕೆಯನ್ನು ತುಂಬಿಸಿ ಗುಜರಾತಿನ ರಾಜ್ ಕೋಟನಲ್ಲಿರುವ ನಮ್ಮ ಬ್ರಾಂಚ್ ಆಫೀಸಿಗೆ ತಲುಪಿಸುವರೇ ಕಳೂಹಿಸಿರುತ್ತೇವೆ. ಸದ್ರಿ ಲಾರಿಗಳು ದಿನಾಂಕ;24-07-2021 ರಂದು ಗುಜರಾತಿನ ರಾಜ್ ಕೋಟನಲ್ಲಿರುವ ನಮ್ಮ ಬ್ರಾಂಚ್ ಆಫೀಸಿಗೆ ತಲುಪಬೇಕಾಗಿದ್ದು, ಸದ್ರಿ ಲಾರಿಗಳು ಈತನಕ ನಮ್ಮ ಗುಜರಾತಿನ ಆಫೀಸಿಗೂ ತಲುಪದೇ ಇದ್ದು ಈ ಬಗ್ಗೆ ಪೋನ್  ಮೂಲಕ ಕೂಡ ವಿಚಾರಿಸಲಾಗಿ ಫೋನ್ ಗಳು ಸ್ವಿಚ್ ಆಫ್ ಆಗಿರುತ್ತವೆ. ಸದ್ರಿ ಲಾರಿಗಳ ಚಾಲಕರು ಬಾವೇಶ್ ಕೆ ಷಾ ಹಾಗೂ ಆಶೀಶ್  ಮತ್ತು ಮಹಾರಾಷ್ರದ ನಾಸಿಕ್ ನಲ್ಲಿರುವ  ಜೋಷಿ ಟ್ರಾನ್ಸ್ ಪೊರ್ಟ್  ಮಾಲಕರಾದ ವಿಜಯ್ ಜೋಷಿ ಮತ್ತು ಡ್ಯಾನೀಶ್ ವಿಜಯ ಜೋಷಿ ಟ್ರಾನ್ಸ್ ಪೊರ್ಟ್ ನಲ್ಲಿ ಕೆಲಸ ಮಾಡುವವರು ಇವರುಗಳು ನಮಗೆ ಮೋಸ ಮಾಡುವ ಉದ್ದೇಶದಿಂದ  ಸುಮಾರು 2 ಕೋಟಿ ರೂಪಾಯಿಯ ಅಡಿಕೆ ತುಂಬಿದ ಲಾರಿಗಳನ್ನು ಮಂಗಳೂರಿನಿಂದ ಚಾಲಾಯಿಸಿಕೊಂಡು ಹೋಗಿ ಗುಜರಾತಿನ ರಾಜ್ ಕೋಟನಲ್ಲಿರುವ ನಮ್ಮ ಬ್ರಾಂಚ್ ಆಫೀಸಿಗೆ ತಲುಪಿಸುತ್ತೇನೆಂದು ಪಿರ್ಯಾದಿದಾರಿಗೆ  ನಂಬಿಸಿ ಮೋಸ ಮಾಡಿರುತ್ತಾರೆ. ಆದುದರಿಂದ ಸದ್ರಿ ಯವರ ವಿರು ದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸ ಬೇಕಾಗಿ ಈ ಮೂಲಕ ಕೋರಿಕೆ ಎಂಬಿತ್ಯಾದಿ.

Crime Reported in  Traffic North PS

ದಿನಾಂಕ 26-07-2021 ರಂದು KA-03-D-7993 ನಂಬ್ರದ ಬಿಳಿ ಬಣ್ಣದ ಟೂರಿಸ್ಟ್ ಡಿಸೈರ್ ಕಾರನ್ನು ಅದರ ಚಾಲಕನಾದ ಮನೀಷ್ V. ದೇವಾಡಿಗ ಎಂಬಾತನು ಕಡಮ ಎಂಬಲ್ಲಿ ಕಿನ್ನಿಗೋಳಿ ಕಡೆ ಯಿಂದ ಬಳ್ಕುಂಜೆ ಕಡೆಗೆ ಹಾಗೂ KA-19-EA-8462 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರನಾದ ಉಮೇಶ್ ಎಂಬಾತನು ಗುರುಪ್ರಸಾದ್ ದೇವಾಡಿಗ ಎಂಬಾತನನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಬಳ್ಕುಂಜೆ ಕಡೆಯಿಂದ ಕಿನ್ನಿಗೋಳಿ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು ಮೋಟಾರು ಸೈಕಲ್ ಸವಾರ ಉಮೇಶ ಎಂಬಾತನಿಗೆ ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಕನ್ಸೆಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಶೀನಿವಾಸ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದು, ಅಲ್ಲದೇ ಮೋಟಾರ್ ಸೈಕಲ್ ಸಹಸವಾರ ಗುರುಪ್ರಸಾದ್ ಎಂಬಾತನು ಗಂಭೀರ ಸ್ವರೂಪದ ಗಾಯಗೂಂಡು ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported in  Kankanady Town PS

ಪಿರ್ಯಾದಿ Santhosh Kumar T ರವರು  ಜಪ್ಪಿನಮೊಗರು ದ್ವಾರದ ಬಳಿ ಇರುವ ಹಸೀನಾ ಬೀಬಿ  ಎಂಬವರ ಕಾಂಪ್ಲೆಕ್ಸ್ ನಲ್ಲಿ ಬಾಡಿಗೆ ರೂಮಿನಲ್ಲಿ ಅಯ್ಯಾಂಗಾರ್  ಕೇಕ್ ಹೌಸ್ ಎಂಬ ಬೇಕರಿ ಇಟ್ಟುಕೊಂಡಿದ್ದು, ದಿನಾಂಕ 25-07-2021  ರಂದು ಪಿರ್ಯಾದುದಾರರು ರಾತ್ರಿ 10.30 ಗಂಟೆಗೆ  ಬೇಕರಿ  ಬಂದ್ ಮಾಡಿ ಹೋಗಿದ್ದು, ದಿನಾಂಕ 26-07-2021 ರಂದು ಬೆಳಿಗ್ಗೆ 07.00 ಗಂಟೆಗೆ ಬೇಕರಿಗೆ ಬಂದಾಗ ಯಾರೋ ಕಳ್ಳರು ಅಂಗಡಿಯ ಬಲಬದಿಯ ಬೀಗ ಮುರಿದು ಅಂಗಡಿಯ ಒಳ ಪ್ರವೇಶಿಸಿ ನಂತರ ಅಂಗಡಿಯ ಕ್ಯಾಶ್,  ಡ್ರಾವರ್ ನಲ್ಲಿರಿಸಿದ್ದ   ರೂ 41,000 ಸಾವಿರ  ಹಣ ಹಾಗೂ ಅಂಗಡಿಗೆ ಅಳವಡಿಸಿದ ಸಿಸಿ ಕ್ಯಾಮರೆದ ಡಿವಿಆರ್ ನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

2) ಪಿರ್ಯಾದಿ Kadri Surendra ರವರು ತಮ್ಮ ಹೆಂಡತಿಯೊಂದಿಗೆ ಮಂಗಳೂರು ಕಪಿತಾನಿಯೋದ ಹೊಸಮನೆ ಕಾಂತಪ್ಪ ರೋಡ್ ಎಂಬಲ್ಲಿ ವಾಸಮಾಡಿಕೊಂಡಿದ್ದು, ದಿನಾಂಕ 23-07-2021 ರಂದು ಮಧ್ಯರಾತ್ರಿ 1.40 ರ ಸಮಯದಲ್ಲಿ ಯಾರೋ ಕಳ್ಳರು ಬಂದು ಪಿರ್ಯಾದಿದಾರರ ಮನೆಯ ಮಹಡಿಯ ಮೇಲಿನ ರೂಮ್ ನ ಕಿಟಕಿಯ ರಾಡ್ ನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ರೂಮ್ ನ ಕಪಾಟಿನ ಒಳಗಿದ್ದ 3000 ರೂಪಾಯಿ ಹಣವನ್ನು ಕಳವು ಮಾಡಿಕೊಂಡು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 27-07-2021 05:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080