ಅಭಿಪ್ರಾಯ / ಸಲಹೆಗಳು

Crime Reported in  Kavoor PS

ಫಿರ್ಯಾದಿ HC HARIPRASAD K ರವರಿಗೆ ದಿನಾಂಕ 28-05-2021 ರಂದು ಬೆಳಗ್ಗೆ 10:30 ಗಂಟೆಗೆ ಠಾಣಾ ಪೊಲೀಸ್ ನಿರೀಕ್ಷಕರು ದೂರವಾಣಿ ಕರೆ ಮಾಡಿ ಬೊಂದೇಲ್ ಜಂಕ್ಷನ್ ಬಳಿ KA 01 HG 7856 ನಂಬ್ರದ ಬೈಕ್ನ್ನು ಅದರ ಸವಾರ ರಸ್ತೆ ಬದಿಯಲ್ಲಿ ಮಾಸ್ಕ್ ಧರಿಸದೇ ಸಕಾರಣವಿಲ್ಲದೇ ಬೈಕ್ ನಿಲ್ಲಿಸಿರುವುದಾಗಿ  ಬಗ್ಗೆ ತನಗೆ ಬಂದ ಮಾಹಿತಿಯನ್ನು ತಿಳಿಸಿದ ಮೇರೆಗೆ ಸದ್ರಿ ಸ್ಥಳಕ್ಕೆ ಹೋಗಿ ಕ್ರಮ ಜರುಗಿಸುವಂತೆ ನೀಡಿದ ಮೌಖಿಕ ಆದೇಶದಂತೆ ಪಿರ್ಯಾದಿದಾರರು 10.35 ಗಂಟೆಗೆ ಠಾಣೆಯಿಂದ ಹೊರಟು 10.50 ಗಂಟೆಗೆ ಸದ್ರಿ ಸ್ಥಳಕ್ಕೆ ತಲುಪಿದಾಗ ಠಾಣಾ ವ್ಯಾಪ್ತಿಯ  ಬೊಂದೆಲ್  ಜಂಕ್ಷನ್ ಬಳಿ ವ್ಯಕ್ತಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕದೇ, ಸಕಾರಣವಿಲ್ಲದೇ KA 01 HG 7856 ನಂಬ್ರದ ಬೈಕ್ ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ಬೈಕ್ ಬಳಿ ನಿಂತುಕೊಂಡಿದ್ದು, ಸದ್ರಿ ವ್ಯಕ್ತಿಯನ್ನು ವಿಚಾರಿಸಿದಾಗ ಶಿವಣ್ಣ ಜೆ (ಪ್ರಾಯ 36) ಎಂಬುದಾಗಿ ತಿಳಿಸಿರುತ್ತಾರೆ. ಅಲ್ಲದೇ ಕೊರೊನಾ ವೈರಸ್ ತಡೆಗಟ್ಟುವ ಬಗ್ಗೆ ನಿಬಂದನೆಗಳನ್ನು ವಿಧಿಸಿ ಸಂಪೂರ್ಣ ಕರ್ಪ್ಯೂ ವಿಧಿಸಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕರ್ಪ್ಯೂ ಆದೇಶವನ್ನು ಹೊರಡಿಸಿರುವ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ಕೂಡ ಇದನ್ನು ಉಲ್ಲಂಘಿಸಿ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಮಾನವ ಜೀವಕ್ಕೆ ಅಪಾಯಕಾರಿಯಾದ ರೋಗದ ಸೊಂಕು ಹರಡುವ ಸಂಭವವಿರುವುದನ್ನು ತಿಳಿದು ಕೂಡ ನಿರ್ಲಕ್ಷ ವಹಿಸಿರುವುದರಿಂದ ಇವರ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Crime Reported in  Traffic South PS

ದಿನಾಂಕ 28-05-2021 ರಂದು ಪಿರ್ಯಾದಿ ANKITH  ರವರು ADYAR ಸೋಮನಾಥ ಕಟ್ಟೆಯ ಎದುರು ರಸ್ತೆ  ಬದಿ ರಸ್ತೆ ದಾಟಲು ನಿಂತುಕೊಂಡಿರುವ  ಸಮಯ ಸುಮಾರು ಮದ್ಯಾಹ್ನ 12-15 ಗಂಟೆಗೆ ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಓಮ್ನಿ ಕಾರು ನಂಬ್ರ KA-19-N-4172 ನೇದನ್ನು ಅದರ ಚಾಲಕ ಮಹಮ್ಮದ್ ಉನೈಸ್ ಎಂಬಾತನು ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಕಾರನ್ನು ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಟಯರ್ ಅಂಗಡಿ ಪಕ್ಕದಲ್ಲಿ  ಡಾಮಾರು ರಸ್ತೆಯಿಂದ ಸುಮಾರು 15 ಅಡಿ ದೂರ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ  KA-02-AF-4868 ಟ್ಯಾಂಕರ್ ಲಾರಿಯ ಹಿಂಬದಿಗೆ ಕಾರನ್ನು ಡಿಕ್ಕಿಪಡಿಸಿದ ಪರಿಣಾಮ ಕಾರಿನ ಚಾಲಕ ಮೊಹಮ್ಮದ್ ಉನೈಸ್ ಗೆ  ಎಡಬದಿ ಕೆನ್ನೆಯ ಹತ್ತಿರ ಗಂಭೀರ ಸ್ವರೂಪದ ಗಾಯ ಹಾಗೂ ಎರಡು ಕಿವಿಯಲ್ಲಿ ರಕ್ತಗಾಯ  ಹಾಗೂ ಅದರಲ್ಲಿದ್ದ ಸಹ ಪ್ರಯಾಣಿಕ ದಾವೂದ್ ಹಕೀಂಗೆ ಹಣೆಗೆ ಗಂಭೀರ ಸ್ವರೂಪದ ರಕ್ತಗಾಯ, ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ಎಡಕಾಲಿನ  ಹಿಮ್ಮಡಿ ಹತ್ತಿರ ಮೂಳೆ ಮುರಿತದ ಗಾಯವಾಗಿದ್ದು,  ಹಾಗೂ ಇನ್ನೊಬ್ಬ ಸಹ ಪ್ರಯಾಣಿಕನಿಗೆ ಮುಸ್ತಫಾ ಅರ್ಕುಳರವರ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ನಂತರ ಅಲ್ಲಿ ಸೇರಿದ ಜನರು ಮಹಮ್ಮದ್ ಉನೈಸ್ ಹಾಗೂ ದಾವೂದ್ ಹಕೀಂ ನನ್ನು ಅಂಬುಲೆನ್ಸೊಂದರಲ್ಲಿ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಹಾಗೂ ಮುಸ್ತಫಾ ಅರ್ಕುಳರವರನ್ನು ಕಾರೊಂದರಲ್ಲಿ ತುಂಬೆ ಪಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಮಹಮ್ಮದ್ ಉನೈಸ್  ಹಾಗೂ ದಾವೂದ್ ಹಕೀಂ ರವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

Crime Reported in  Bajpe PS

“ಪಿರ್ಯಾದಿ T. Devaraj ರವರು ದಿನಾಂಕ 28.05.2021 ರಂದು ಬೆಳಿಗ್ಗೆ ತಮ್ಮ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19ಇಟಿ-6221 ನೇಯದರಲ್ಲಿ ಕಟೀಲಿನಿಂದ ಕಾವೂರಿಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಬೆಳಿಗ್ಗೆ ಸುಮಾರು 08:45 ಗಂಟೆಗೆ ಮಂಗಳೂರು ತಾಲೂಕು, ಬಡಗ ಎಕ್ಕಾರು ಗ್ರಾಮದ, ಎಕ್ಕಾರು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಹಿಂದಿನಿಂದ ಕಾರು ನಂಬ್ರ ಕೆಎ-51ಎಂಬಿ-0210 ನೇಯದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಕೈಗೆ ಮೊಣ ಕಾಲಿಗೆ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ” ಎಂಬಿತ್ಯಾದಿ

Crime Reported in  Traffic South PS

ದಿನಾಂಕ   26-05-2021  ರಂದು    ಪಿರ್ಯಾದಿದಾರರಾದ    ಮೊಹಮ್ಮದ   ಅಝರತ್    ಎಂಬುವರು    ಸ್ಕೂಟರ್   ನಂಬರ್   KA-19-EZ-5737  ನೇದರಲ್ಲಿ   ಮನೆಯಿಂದ   ತೊಕ್ಕೊಟ್ಟು ಕಡೆಗೆ    ಸವಾರಿ ಮಾಡಿಕೊಂಡು   ಹೋಗುತ್ತಿರುವ  ಸಮಯ  ಸುಮಾರು    ಬೆಳಿಗ್ಗೆ    09:45 ಗಂಟೆಗೆ   ಮಂಗಳೂರು   ತಾಲೂಕು   ಮುನ್ನೂರು   ಗ್ರಾಮದ    ಬಬ್ಬುಕಟ್ಟೆ  ಶಾಲೆಯ  ಬಳಿ   ಇರುವ   ಏರು   ಡಾಮಾರು   ರಸ್ತೆಯ  ಬಳಿ  ತಲುಪಿದಾಗ  ಪಿರ್ಯಾದಿದಾರರ   ವಿರುದ್ದ ದಿಕ್ಕಿನಿಂದ   ಅಂದರೆ  ತೊಕ್ಕೊಟ್ಟು    ಕಡೆಯಿಂದ    ನಿತ್ಯಾಧರ    ನಗರದ   ಕಡೆಗೆ    ಮೋಟಾರ್   ಸೈಕಲ್ ನಂಬ್ರ    KA-19-EH-4661 ನೇದನ್ನು  ಅದರ   ಸವಾರ   ರಮೀಝ್ ಎಂಬಾತನು   ದುಡುಕುತನ ಹಾಗೂ   ನಿರ್ಲಕ್ಷ್ಯತನದಿಂದ    ಸವಾರಿ ಮಾಡಿಕೊಂಡು   ಬಂದು   ಪಿರ್ಯಾದಿದಾರರು    ಸವಾರಿ ಮಾಡುತ್ತಿದ್ದ    ಸ್ಕೂಟರ್ ನ   ಬಲಬದಿಗೆ    ಡಿಕ್ಕಿ   ಹೊಡೆದ  ಪರಿಣಾಮ       ಅವರ     ಬಲಕಾಲಿನ ಪಾದದ   ಎರಡನೇ  ಮತ್ತು  ಮೂರನೇ   ಬೆರಳುಗಳು  ತುಂಡಾಗಿದ್ದು    ಅವರನ್ನು   ಚಿಕಿತ್ಸೆ   ಬಗ್ಗೆ   ಅಲ್ಲಿ   ಸೇರಿದ   ಸಾರ್ವಜನಿಕರು  ಮತ್ತು   ಅಪಘಾತ ಪಡಿಸಿದ    ಮೋಟಾರ್  ಸೈಕಲ್    ಸವಾರ   ವಾಹನವೊಂದರಲ್ಲಿ   ಕರೆದುಕೊಂಡು ಹೋಗಿ  ತೊಕ್ಕೊಟ್ಟು    ನೇತಾಜಿ  ಎಲ್ಲಪ್ಪ  ಆಸ್ಪತ್ರಯಲ್ಲಿ   ಪ್ರಥಮ  ಚಿಕಿತ್ಸೆ  ಕೊಡಿಸಿ ನಂತರ   ಹೆಚ್ಚಿನ ಚಿಕಿತ್ಸೆ    ಬಗ್ಗೆ    ದೇರಳಕಟ್ಟೆ     ಕಣಚೂರು    ಆಸ್ಪತ್ರೆಗೆ  ಕರೆದುಕೊಂಡು   ಹೋಗಿ    ದಾಖಲು ಮಾಡಿರುತ್ತಾರೆ  . ಅಪಘಾತದ    ಸಮ,ಯ    ಅಪಘಾತ   ಪಡಿಸಿದ    ಮೋಟಾರ್   ಸೈಕಲ್  ಸವಾರನು   ಆಸ್ಪತ್ರೆ   ಚಿಕಿತ್ಸೆ   ವೆಚ್ಚವನ್ನು    ಭರಿಸುವುದಾಗಿ   ತಿಳಿಸಿದ್ದು , ತದನಂತರ    ನಿರಾಕರಿಸಿದ್ದರಿಂದ   ದೂರು   ನೀಡಲು ತಡವಾಗಿರುತ್ತದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 28-05-2021 05:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080