ಅಭಿಪ್ರಾಯ / ಸಲಹೆಗಳು

Crime Reported in  Panambur PS

ದಿನಾಂಕ 27-06-2021 ರಂದು ಮದ್ಯಾಹ್ನ 12-15 ಗಂಟೆಗೆ ಪಿರ್ಯಾದಿ UMESH KUMAR PSI ರವರು  ಪೊಲೀಸ್ ಠಾಣೆಯಲ್ಲಿರುವಾಗ ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ   ಠಾಣಾ ವ್ಯಾಪ್ತಿಯ 62 ನೇ ತೋಕೂರು ರಾಮಾಂಜನೇಯ ವೃತ್ತದ ಬಳಿ ಸಂತೋಷ್ ಎಂಬಾತನು ಕೆಎ -19- ಹೆಚ್  ಇ-9527 ನೇ ಸ್ಕೂಟರ್ ನಲ್ಲಿಟ್ಟುಕೊಂಡು   ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಗೆ  ಮದ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತವಾದ  ಮಾಹಿತಿ ಮೇರೆಗೆ ದಾಳಿ ನಡೆಸಿ 180 ML ನ 20 ಪ್ಯಾಕೆಟ್ Original Choice Whisky ಒಟ್ಟು ಮೌಲ್ಯ ರೂ 1400/- ನ್ನು ಸ್ವಾದೀನ ಪಡಿಸಿ  ಆಪಾದಿತ ಸಂತೋಷನ ವಿರುದ್ದ ಸೂಕ್ತ ಕಾನೂನು  ಕ್ರಮ ಜರುಗಿಸಿರುವುದು ಎಂಬಿತ್ಯಾದಿ

Crime Reported in Traffic South PS

ದಿನಾಂಕ:05-06-2021 ರಂದು ಪಿರ್ಯಾದಿದಾರರಾದ   ಚಂದ್ರಶೇಖರರವರು  ಬೆಳಿಗ್ಗೆ ಅಂಗಡಿಯ ಸಾಮಾನುಗಳನ್ನು ತರಲು ಅವರ  ಸ್ಕೂಟರ್ ನಂಬ್ರ KA-70-E-3333 ನೇದನ್ನು ಸವಾರಿ ಮಾಡಿಕೊಂಡು ಮುಡಿಪುಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 09-30 ಗಂಟೆಗೆ ಮುಡಿಪು ಇನ್ಪೋಸಿಸ್ ಬಳಿ ತಲುಪಿದಾಗ ಅಲ್ಲಿ ನೀರಿನ ಪೈಪ್ ಲೈನ್  ಕಾಮಾಗಾರಿ ನಡೆಯುತ್ತಿದ್ದು ಕೊಣಾಜೆ ಕಡೆಯಿಂದ ಮುಡಿಪು ಕಡೆಗೆ ಹೋಗುವ ರಸ್ತೆಯನ್ನು ಮುಚ್ಚಲಾಗಿದ್ದು ಅದರಿಂದ ಸ್ಕೂಟರನ್ನು ಮುಡಿಪು ಕಡೆಯಿಂದ  ಕೊಣಾಜೆ ಕಡೆಗೆ ಬರುವ ಎಕಮುಖ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಎದುರಿನಿಂದ ಅಂದರೆ ಮುಡಿಪು ಕಡೆಯಿಂದ ಕೊಣಾಜೆ ಕಡೆಗೆ ಬರುತ್ತಿದ್ದ ಸ್ಕೂಟರ್ ನಂಬ್ರ KA-70-E-2436 ನೇದನ್ನು  ಅದರ  ಸವಾರ ಕಾರ್ತಿಕ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು  ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಎದುರಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಅಪಘಾತಪಡಿಸಿದ ಸ್ಕೂಟರ್ ಸವಾರ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕಾಲಿಗೆ ಮತ್ತು ಎಡಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಮತ್ತು  ಅಪಘಾತಪಡಿಸಿದ ಸ್ಕೂಟರ್ ಸವಾರನಿಗೂ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ  ಕಾರೊಂದರಲ್ಲಿ ದೇರಳಕಟ್ಟೆಯ ಕೆ ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಪಿರ್ಯಾದಿದಾರರು  ಆಸ್ಪತ್ರೆಯಲ್ಲಿ ದಾಖಲಾದ ಸಮಯ ಸಂಚಾರಿ ಪೊಲೀಸರು ಹೋಗಿ ಅವರನ್ನು  ವಿಚಾರಿಸಿದಾಗ ಅವರಿಗೆ ಉಂಟಾದ ಗಾಯದ ಚಿಕಿತ್ಸೆ ಕುರಿತು ಗಂಭೀರವಾಗಿ ಪರಿಗಣಿಸದೇ ಚಿಕಿತ್ಸಾ ವೆಚ್ಚ ಸಣ್ಣ ರೀತಿಯಲ್ಲಿ ಆಗಬಹುದೆಂದು ಗ್ರಹಿಸಿ ಪೊಲೀಸರಲ್ಲಿ ಕಾನೂನು ಕ್ರಮದ ಅಗತ್ಯವಿರುವುದಿಲ್ಲವೆಂದು ಅದೇ ದಿನ ದಿನಾಂಕ 05-06-2021 ರಂದು ಆಸ್ಪತ್ರೆಯಲ್ಲಿ  ಬರೆದು ಕೊಟ್ಟಿರುತ್ತಾರೆ.    ಆದರೆ ಪಿರ್ಯಾದಿದಾರರಿಗೆ ದಿನಾಂಕ 24-06-2021 ರಂದು  ತೀವ್ರವಾದ ಯೂರಿನ್ ಬ್ಲಾಕ್ ಹಾಗೂ ಪದೇ ಪದೇ ಮಲ ವಿಸರ್ಜನೆಯಾಗಿ ನಿಶ್ಯಕ್ತಿ ಉಂಟಾಗಿರುವುದರಿಂದ ಅವರನ್ನು ಅವರ  ಮನೆಯವರು ದಿನಾಂಕ 25-06-2021 ರಂದು ಮಂಗಳೂರಿನ S.C.S. ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆದುದರಿಂದ ಈ ದೂರನ್ನು ನೀಡಲು ತಡವಾಗಿರುತ್ತದೆ ಎಂತ್ಯಾದಿ.

ಇತ್ತೀಚಿನ ನವೀಕರಣ​ : 28-06-2021 05:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080