ಅಭಿಪ್ರಾಯ / ಸಲಹೆಗಳು

Crime Reported in  Urva PS                                                        

ದಿನಾಂಕ: 27-07-2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ: 28-07-2021 ರಂದು ಬೆಳಿಗ್ಗೆ 08-30 ಗಂಟೆಯ ಮಧ್ಯದವಧಿಯಲ್ಲಿ ಮಂಗಳೂರು ನಗರ ಬಿಜೈ ಕಾಪಿಕಾಡ್ ಎಂಬಲ್ಲಿರುವ ಪಿರ್ಯಾದುದಾರಾದ ರಾಮ ದೇವಾಡಿಗ ಎಂಬವರ  ಈಶ್ವರಿ ಕಮ್ಯುನಿಕೇಷನ್ ಮೊಬೈಲ್ ಅಂಗಡಿಯ ಮೇಲ್ಛಾವಣಿಯ ಹಂಚುಗಳನ್ನು ಯಾರೋ ಕಳ್ಳರು ತೆಗೆದು ಅಂಗಡಿಯ ಒಳ ಪ್ರವೇಶಿಸಿ ಡ್ರಾವರ್ ಹಾಗೂ ಶೋಕೇಸ್ ನಲ್ಲಿ ಇರಿಸಿದ ರಿಪೇರಿಗೆ ಬಂದ ಮೊಬೈಲ್ ಗಳಾದ 1) Real Me3 Pro, 2) Huwai Y20, 3) Samsung A10, 4) Red me A3, 5) MI 4A, 6) Vivo, 7) Vivo S1 Pro, 8) Red me 4A, 9) Samsung A7, 10) Micromax Infinity N-12, 11) Huwai Y5  ಹಾಗೂ ನಗದು ರೂಪಾಯಿ 4,000/- ವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳವಾದ ಮೊಬೈಲ್ ಗಳ ಅಂದಾಜು ಮೌಲ್ಯ ರೂ. 40,000/- ಆಗಬಹುದು ಎಂಬಿತ್ಯಾದಿ.

Crime Reported in  Panambur PS      

ಪಿರ್ಯಾದಿ PREEYANKA  ತೃತೀಯ ಲಿಂಗಿಯಾಗಿದ್ದು ಅವರ ಸ್ನೇಹಿತೆಯ ಜೊತೆ  ದಿನಾಂಕ: 26-07-2021 ರಂದು ಪಣಂಬೂರು ಬೈಕಂಪಾಡಿಗೆ ಬಂದು ಬೈಕಂಪಾಡಿ ರೈಲ್ವೆ ಬ್ರಿಡ್ಜ್ ಬಳಿ ಇದ್ದಾಗ ಸಮಯ ಸುಮಾರು ಸಂಜೆ 7.30 ಗಂಟೆಗೆ ಅವರ ಪರಿಚಯವಿರುವ ಮಂಗಳೂರಿನ ಅವರ ಸಮುದಾಯದ  ಹುಲಿಗೆವ್ವ, ಶಾಂತಾ, ನೀಲಿ, ಪಾರ್ವತಿ, ಪೂರ್ಣಿಮಾ,  ಎಂಬವರು ಪಿರ್ಯಾದಿದಾರರು ಇರುವ ಸ್ಥಳಕ್ಕೆ ಬಂದು ನೀವು ಯಾಕೆ ಇಲ್ಲಿಗೆ ಬಂದದ್ದು ಇದು ನಮ್ಮ ಸ್ಥಳ ಎಂದು ಹೇಳಿ ಬೇವರ್ಸಿಗಳೇ ನೀವು ಇಲ್ಲಿಂದ ಹೋಗಬೇಕು ಎಂದು ಬೈದು ನೀವು ಇಲ್ಲಿಂದ ಹೋಗದಿದ್ದರೆ ಕೊಂದು ಹಾಕುತ್ತೇವೆ ಎಂದು  ಜೀವ ಬೆದರಿಕೆ ಹಾಕಿ ಎಲ್ಲರೂ ಕೈಗಳಿಂದ ಹೊಡೆದರು ಬಳಿಕ ಪಿರ್ಯಾದಿದಾರರ  ಕುತ್ತಿಗೆಯನ್ನು ಹಿಡಿದು ಎಳೆದಾಡಿ ಗುದ್ದಿ ಹೊಡೆದು ದೂಡಿ ಹಾಕಿ ಎಲ್ಲರೂ ಕಾಲಿನಿಂದ ಒದ್ದಿರುತ್ತಾರೆ. ಪಿರ್ಯಾದಿದಾರರ ಜೊತೆಗಿದ್ದ ರೇಖಾ  ರವರಿಗೆ ಕೂಡಾ ಅವರೆಲ್ಲರೂ ಕೈಗಳಿಂದ ಹೊಡೆದು ಕಾಲಿನಿಂದ ಹೊಟ್ಟೆಗೆ ಒದ್ದಿರುತ್ತಾರೆ, ಬೆನ್ನಿಗೆ ಗುದ್ದಿರುತ್ತಾರೆ ಮತ್ತು ತಲೆ ಕೂದಲು ಹಿಡಿದು ಎಳೆದಾಡಿರುತ್ತಾರೆ. ಇದರಿಂದಾಗಿ ರೇಖಾ ರವರ ಎಡಬದಿಯ ಹೊಟ್ಟೆಗೆ ಗುದ್ದಿದ ಗಾಯವಾಗಿದೆ, ಮತ್ತು ಬೆನ್ನಿಗೆ ಕೂಡಾ ಗುದ್ದಿದ ತರದ ಗಾಯವಾಗಿದೆ. ಪಿರ್ಯಾದಿದಾರರಿಗೆ ಕುತ್ತಿಗೆಯ ಹಿಂಭಾಗಕ್ಕೆ ಬೆನ್ನಿಗೆ ಗುದ್ದಿದ ತರದ ಗಾಯವಾಗಿದೆ. ಪಿರ್ಯಾದಿದಾರರು ಮತ್ತು ಅವರ ಸ್ನೇಹಿತರು ಮಂಗಳೂರಿನಿಂದ ಬೈಕಂಪಾಡಿಗೆ ಬಂದು ಅವರ ಏರಿಯಾಕ್ಕೆ ಬರುತ್ತೇವೆ ಎಂದು ಆಕ್ಷೇಪಿಸಿ ಈ ರೀತಿ ಹಲ್ಲೆ ಮಾಡಿರುತ್ತಾರೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿಸುತ್ತೇನೆ.

2 ಮಂಗಳೂರು ತಾಲೂಕು ಬೈಕಂಪಾಡಿ ಗ್ರಾಮದ ಬೈಕಂಪಾಡಿ ಮಾರ್ಕೆಟ್ ಸಮೀಪ ರೈಲ್ವೆ ಟ್ರ್ಯಾಕ್  ಬಳಿ ದಿನಾಂಕ: 26/07/2021 ರಂದು ರಾತ್ರಿ 7.30 ಗಂಟೆ ಸಮಯಕ್ಕೆ ಪಿರ್ಯಾದಿ SHANTHA ದಾರರು ಮತ್ತು ಹುಲ್ಲಿಗೆಮ್ಮ, ಪಾರ್ವತಿ, ಪೂರ್ಣಿಮಾ ಹಾಗೂ ನೀಲಾ ರವರು ಹಣ ಬೇಡಿಕೊಂಡು ಬರುತ್ತಿರುವಾಗ ಪರಿಚಯದ ಪ್ರೇಮಾ, ರೇಖಾ, ನಿಖೀಲ್ ಮತ್ತು ಅರುಣ್ ದಂತಿ ಹಾಗೂ ಇತರರು ಸೇರಿ ಪಿರ್ಯಾದಿದಾರರು ಮತ್ತು ಇತರರಿಗೆ ಬೈಕಂಪಾಡಿ ಏರಿಯಾದಲ್ಲಿ ನೀವು ಯಾಕೆ ಹಣ ಬೇಡಿಕೊಂಡು ಬಂದಿದ್ದು ಈ ಸ್ಥಳವು ನಾವು ಹಣ ಬೇಡುವ ಸ್ಥಳವಾಗಿದೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದಲ್ಲದೇ ಆರೋಪಿಗಳು ಒಟ್ಟು ಸೇರಿ ಸಮಾನ ಉದ್ದೇಶದಿಂದ ಪಿರ್ಯಾದಿದಾರರು ಮತ್ತು ಇತರರಿಗೆ ಕಣ್ಣಿಗೆ ಖಾರದ ಪುಡಿ ಹಾಕಿ ಪಿರ್ಯಾದಿದಾರರಿಗೆ ಎದೆಗೆ ಮತ್ತು ಬೆನ್ನಿಗೆ ಹಲ್ಲೆ ಮಾಡಿ ಪೂರ್ಣಿಮಾ ರವರಿಗೆ ಕಿವಿಗೆ ಬೆನ್ನಿಗೆ, ಪಾರ್ವತಿಯವರಿಗೆ ಎದೆಯ ಬಳಿ ಎಡಕ್ಕೆ ಹಾಗೂ ಎಡ ಕಾಲಿಗೆ ಕೈಯಿಂದ ಹಲ್ಲೆ ಮಾಡಿದುದಲ್ಲದೆ ನೀಲರವರಿಗೆ ತಲೆಗೆ ಬೀಯರ್ ಬಾಟಲಿನಿಂದ ಗುದ್ದಿರುತ್ತಾರೆ ಗಾಯಗೊಂಡ ಪಿರ್ಯಾದಿದಾರರು ಮತ್ತು ಇತರರು ವೆನ್ಲಾಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ.ಪಿರ್ಯಾದಿದಾರರು ತೃತೀಯ ಲಿಂಗಿಯಾಗಿದ್ದು ಬೈಕಂಪಾಡಿ ಕಡೆಯಲ್ಲಿ ಭೀಕ್ಷಾಟನೆ ಮಾಡುವ ಸ್ಥಳಕ್ಕೆ ಆರೋಪಿತರುಗಳು ಬಂದು ಭೀಕ್ಷಾಟನೆ ಮಾಡುವುದನ್ನು ಆಕ್ಷೇಪಿಸಿದಕ್ಕೆ ಅದೇ ಕಾರಣಕ್ಕಾಗಿ ಹಲ್ಲೆ ಮಾಡಿರುವುದಾಗಿದೆ ಎಂಬಿತ್ಯಾದಿ.

Crime Reported in  Surathkal PS

ದಿನಾಂಕ: 27/07/2021 ರಂದು  ಬೆಳಿಗ್ಗೆ ಸೆಂಟ್ರಿಂಗ್ ಕೆಲಸದ ಬಗ್ಗೆ ಹೋಗಿದ್ದ ಪಿರ್ಯಾದಿ Harsha ರ  ತಂದೆ  ಚಂದಪ್ಪ ಸುವರ್ಣ ರವರು ಬೆಳಿಗ್ಗೆ ಸುಮಾರು 11:00 ಗಂಟೆಗೆ ಸುರತ್ಕಲ್ ಅಗರಮೇಲು ಮೊಹಿದ್ದೀನ್ ಜುಮ್ಮಾ ಮಸೀದಿಯ ಹಿಬಂದಿಯಲ್ಲಿ ಇರುವ ಮುಜಾಪರ್ ಇವರ ಮಾಲಿಕತ್ವದ ನಿರ್ಮಾಣ ಗುತ್ತಿಗೆಯನ್ನು  ಮೊಹಮ್ಮದ್ ಶಮೀರ್ ಇವರು ಹಾಗೂ ಅಶೋಕ್ ಇವರು ಸೆಂಟ್ರಿಂಗ್ ಗುತ್ತಿಗೆ ವಹಿಸಿದ ಪ್ಲಾಟ್ ನ ಎರಡನೇಯ ಮಹಡಿಯ ,ಉತ್ತರ ದಿಕ್ಕಿಗೆ ಅಡಿಗೆ ಕೋಣೆಯ ಉತ್ತರ ಬದಿಯಲ್ಲಿ ಕಾಂಕ್ರೀಟ್  WINDOW SHADE ನಿರ್ಮಿಸಲು ಸೆಂಟ್ರಿಂಗ್ ತಗಡು ಶೀಟಗಳನ್ನುಅಳವಡಿಸುತ್ತಿದ್ದು.ಅದರ ಅಡಿಯಲ್ಲಿ ಮರದ ರನ್ನರಗಳನ್ನು   ಅಳವಡಿಸಲು ಸದ್ರಿ ಮರದ ರನ್ನರನ್ನು ಸುತ್ತಿಗೆಯಿಂದ ಎಳೆಯುವಾಗ ಸುಮಾರು 07 ಅಡಿ ಎತ್ತರದಿಂದ ಕೆಳಗೆ ಬಿದ್ದು,ತಲೆಗೆ ಗಾಯವಾಗಿ ಅರೆ ಪ್ರಜ್ಣಾ ಅವಸ್ಥೆ ಯಲ್ಲಿದವರನ್ನು ಜೊತೆಯಲ್ಲಿ ಕೆಲಸ ಮಾಡುವ ಗಂಗಾಧರ ಹಾಗೂ ಮಾಲಿಕರಾದ ಅಶೋಕ ಇವರು ಚಿಕಿತ್ಸೆಗಾಗಿ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.    ಮನೆ ಮಾಲಿಕರಾದ ರಿಜ್ವಾನ್, ಮನೆ ನಿರ್ಮಾಣದ ಗುತ್ತಿಗೆಯನ್ನು ವಹಿಸಿದ ಮೊಹಮ್ಮದ್ ಶಮೀರ್ ಸೆಂಟ್ರಿಂಗ್ ಕೆಲಸದ ಗುತ್ತಿಗೆ ವಹಿಸಿದ ಅಶೋಕ ಇವರು 2ನೇಯ ಮಹಡಿಯ ಪ್ಲಾಟ್ ನಲ್ಲಿ ಕೆಲಸ ಮಾಡುವ ಕೆಲಸಗಾರರಾದ ಗಂಗಾಧರ ಹಾಗೂ ಇತರರು ಸೆಂಟ್ರಿಂಗ್ ಕೆಲಸ ಮಾಡುವಾಗ ಅವರ ಸುರಕ್ಷತೆಗಾಗಿ ಹೆಲ್ಮೇಟ್ ಹಾಗೂ ಕೆಲಸ ಮಾಡುವಲ್ಲಿ ಜಾಲಿಯಾ ಲಿಟ್ಟಲಿಗೆಯನ್ನು ನಿರ್ಮಿಸದೇ ನಿರ್ಲಕ್ಷತನದಿಂದ ಕೆಲಸ ಮಾಡಿಸಿದ ಪರಿಣಾಮ ಚಂದಪ್ಪ ಸುವರ್ಣ ಇವರು ಸುಮಾರು 07 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಾಯವಾಗಲು ಕಾರಣರಾಗಿರುತ್ತಾರೆ. ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 28-07-2021 08:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080