ಅಭಿಪ್ರಾಯ / ಸಲಹೆಗಳು

Crime Reported in  Traffic South PS

ದಿನಾಂಕ  29-05-2021 ರಂದು    ಪಿರ್ಯಾದಿ BUDENSAB ರವರ   ಮಾವನಾದ    ಪೀರ್ ಸಾಬ್ ರವರು   ಅವರ ಮನೆಯಾದ   ಮುಳಿಹಿತ್ಲು ವಿನಿಂದ    ಜೆಪ್ಪಿನ ಮೊಗರು  ಕಡೆಗೆ    ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿರುವ  ಸಮಯ ಸುಮಾರು   ಬೆಳಿಗ್ಗೆ   09:30 ಗಂಟೆಗೆ   ಮಹಾಕಾಳಿ ಪಡ್ಪು ಜಂಕ್ಷನ್  ಬಳಿ   ರಾಷ್ಟ್ರೀಯ  ಹೆದ್ದಾರಿ    66 ರ   ಡಾಮಾರು   ರಸ್ತೆಯನ್ನು    ದಾಟುತ್ತಿರುವಾಗ    ತಲಪಾಡಿ ಕಡೆಯಿಂದ   ಮಂಗಳೂರು  ಕಡೆಗೆ    ಕಾರು   ನಂಬ್ರ    KA-19-MD-9300  ನೇದನ್ನು  ಅದರ  ಚಾಲಕ    ಹಿತೇಶ್    ಎಂಬಾತನು     ದುಡುಕುತನ ಹಾಗೂ   ನಿರ್ಲಕ್ಷ್ಯತನದಿಂದ   ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ  ಮಾವ  ಪೀರ್  ಸಾಬ್  ರವರಿಗೆ   ಡಿಕ್ಕಿ ಪಡಿಸಿದ ಪರಿಣಾಮ  ಅವರು   ಡಾಮಾರು  ರಸ್ತೆಗೆ   ಬಿದ್ದು    ಅವರ   ಬಲಕಾಲಿನ   ಕೊಲುಕಾಲಿಗೆ     ಗಂಭೀರ      ಸ್ವರೂಪದ    ರಕ್ತ ಗಾಯ ಹಾಗೂ   ಬಲ ಕೈ ಮೊಣಕೈಗೆ    ತರಚಿದ    ರಕ್ತಗಾಯವಾಗಿದ್ದು  ಕೂಡಲೇ  ಪೊಲೀಸ್   ಹೈವೆ ಪೇಟ್ರೋಲ್ ವಾಹನದಲ್ಲಿ   ಚಿಕಿತ್ಸೆ   ಬಗ್ಗೆ    ಮಂಗಳೂರು  ಇಂಡಿಯಾನ   ಅಸ್ಪತ್ರೆಗೆ   ಕರೆದುಕೊಂಡು   ಹೋಗಿ    ದಾಖಲಿಸಿದ್ದು ,  ನಂತರ   ಹೆಚ್ಚಿನ ಚಿಕಿತ್ಸೆ   ಬಗ್ಗೆ   ವೆನ್ಲಾಕ್  ಆಸ್ಪತ್ರೆಗೆ   ಕರೆದುಕೊಂಡು    ಹೋಗಿ   ದಾಖಲು ಮಾಡಿರುತ್ತರೆ  ಎಂಬಿತ್ಯಾದಿ

Crime Reported in Bajpe PS

 ಕೆಂಜಾರು ನಿವಾಸಿ ಈ ಪ್ರಕರಣದ ಫಿರ್ಯಾದಿ Hussain Shareef ರವರ ಮಗಳು ಫಾತೀಮಾ ಸಾಹಿರಾ (21) ಎಂಬವರು ದಿನಾಂಕ 26-05-2021 ರಂದು ರಾತ್ರಿ ಊಟ ಮಾಡಿದ ನಂತರ ಫಿರ್ಯಾದಿದಾರರು ಹಾಗು ಅವರ ಹೆಂಡತಿ ಒಂದು ರೂಮಿನಲ್ಲಿ, ಫಿರ್ಯಾದಿದಾರರ ಮಗಳು ಫಾತೀಮಾ ಸಾಹಿರಾ ಹಾಗು ಮಿಶ್ರೀಯಾ ರವರು ಇನ್ನೊಂದು ರೂಮಿನಲ್ಲಿ ಮಲಗಿದ್ದು, ದಿನಾಂಕ 27-05-2021 ರಂದು ಬೆಳಗ್ಗಿನ ಜಾಗ ಸುಮಾರು 12-30ಗಂಟೆಗೆ  ಫಿರ್ಯಾದಿದಾರರ ಕಿರಿಯ ಮಗಳು ಮಿಶ್ರೀಯಾ ಫಿರ್ಯಾದಿದಾರರ ಬಳಿ ಕೂಗಿಕೊಂಡು ಬಂದಿದ್ದು  ಆಕೆಯಲ್ಲಿ ವಿಚಾರಿಸಿದಾಗ ಫಾತೀಮಾ ಸಾಹಿರಾ ರೂಮಿನಲ್ಲಿ ಇಲ್ಲದೆ ಕಾಣೆಯಾಗಿರುವ ವಿಚಾರವನ್ನು ತಿಳಿಸಿರುತ್ತಾಳೆ. ಬಳಿಕ ಫಿರ್ಯಾದಿದಾರರು ಹೆಂಡತಿ ಮತ್ತು ಕಿರಿಯ ಮಗಳು ಕಾಣೆಯಾಗಿರುವ ಫಿರ್ಯಾದಿದಾರರ ಮಗಳ ಬಗ್ಗೆ  ಅಪಾರ್ಟಮೆಂಟ್ ನಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಿದಲ್ಲಿ ಆಕೆಯ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಅಲ್ಲದೇ ಅವರ ಸಂಬಂಧಿಕರಲ್ಲಿ ವಿಚಾರಿಸಿದಾಗ ಆಕೆ ಸಂಬಂಧಿಕರ ಮನೆಗೆ ಸಹ ಹೋಗಿರುವುದಿಲ್ಲ.ಆದುದರಿಂದ ಕಾಣೆಯಾದ ಫಿರ್ಯಾದಿದಾರರ ಮಗಳನ್ನು ಹುಡುಕಿ ಕೊಡಬೇಕಾಗಿ ಲಿಖಿತ ದೂರು ನೀಡಿರುತ್ತಾರೆ ಎಂಬಿತ್ಯಾದಿ.    

Crime Reported in Moodabidre PS        

ದಿನಾಂಕ: 29-05-2021 ರಂದು ಠಾಣಾ ಉಪನಿರೀಕ್ಷಕರಾದ ಸುದೀಪ್ ಎಮ್.ವಿ ರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬಿದರೆ ತಾಲೂಕು  ಮಾರ್ಪಾಡಿ ಗ್ರಾಮದ, ಪೇಟೆಯಲ್ಲಿರುವ  ಶ್ರೀ ವೀರ ಮಾರುತಿ ವೆಜಿಟೆಬೆಲ್ಸ್ ಆಂಡ್ ಪ್ರುಟ್ಸ್ ಅಂಗಡಿಯನ್ನು ಅದರ ಮಾಲಿಕ  ಪ್ರಕರಣ ಆರೋಪಿಯು ಸಮಯ ಸುಮಾರು 10.30 ಗಂಟೆಗೆ ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ನಿಗದಿತ ಅವಧಿಯನ್ನು ಮೀರಿ ಅಂಗಡಿಯನ್ನು ತೆರೆಯಲು ಅನುಮತಿ ಇಲ್ಲದೇ ಇದ್ದರೂ ಸಹ ತೆರೆದಿಟ್ಟು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ವ್ಯವಸ್ಥೆ ಮಾಡದೆ ವ್ಯಾಪಾರದಲ್ಲಿ ತೊಡಗಿರುತ್ತಾರೆ. ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಬಗ್ಗೆ ಪಿರ್ಯಾದಿದರರು ಆರೋಪಿತರ ವಿರುದ್ಧ ಸೂಕ್ತ ಕ್ರಮಜರುಗಿಸುವಂತೆ ನೀಡಿರುವ ವರದಿ ಎಂಬಿತ್ಯಾದಿ

Crime Reported in Panambur PS

ಪಿರ್ಯಾದಿ SANKAR KUMAR MONDAL ರವರು ಅಂಡರ್ ವಾಟರ್ ಸರ್ವಿಸ್ ಕಂಪೆನಿ ಲಿಮಿಟೆಡ್ ಮುಂಬೈ ಎಂಬ ಕಂಪೆನಿಯಲ್ಲಿ ಸೈಟ್ ಇಂಜಿನಿಯರ್ ಆಗಿದ್ದು ಮಂಗಳೂರಿನ ಕೂಳೂರಿನಲ್ಲಿರುವ ಕಛೇರಿಯಲ್ಲಿ ಕೆಲಸ  ಮಾಡುತ್ತಿರುವುದಾಗಿದೆ. ಈ ಕಂಪೆನಿಯಲ್ಲಿ  1) ಪವನ್ ಚಾಂದ್ ಕಾಟೋಚ್ 2) ನಸೀಮ್ ಅಹಮ್ಮದ್ 3) ಜೈಬಾನುಲ್ ಹಕ್ ಮೆಂಡಲ್ 4) ಮನಿರುಲ್ಲಾ ಮೊಲ್ಲಾ 5) ಕರಿಬುಲ್ ಶೇಖ್ 6) ಮೈನುದ್ದಿನ್ ಶೇಖ್ 7) ಅಸ್ಪಕ್ ಆಲಿ ಕಲ್ಪೆ ಹಾಗೂ ಸೆಕ್ಯೂರಿಟಿ ಆಫಿಸರ್ ಆದ 8) ಹೇಮ್ ಕಾಂತ್ ಜಾ (50) ಇವರು ALLIANCE BOAT (ಟಗ್) ನಲ್ಲಿ ಎನ್.ಎಂ.ಪಿ.ಟಿ.ಬಂದರಿನಿಂದ ದಿನಾಂಕ:- 13-05-2021 ರಂದು ಬೆಳಿಗ್ಗೆ 03.45 ಗಂಟೆಗೆ  ಹೊರಟು ಹಡಗು ನಿಲ್ಲುವ ಸ್ಥಳಕ್ಕೆ ಹೋಗಿದ್ದು ( ಎಸ್.ಪಿ.ಎಂ) ಈ ಸ್ಥಳದಲ್ಲಿ signal point morning ಎಂಬ system ಇರುತ್ತದೆ. ಹಡಗಿನಿಂದ ಕಚ್ಚಾ ತೈಲವನ್ನು ದಿನಾಂಕ:14/05/2021 ರಂದು ಸಂಪೂರ್ಣ ಖಾಲಿ ಮಾಡಿದ ಬಳಿಕ ನಮ್ಮ ಕಂಪೆನಿಯ ಈ ಮೇಲಿನ ಕೆಲಸಗಾರರನ್ನು ಚೆಂಡಮಾರುತ ಹವಾಮಾನ ವೈಪರೀತ್ಯ ಇದ್ದುದರಿಂದ ವಾಪಾಸು ಬರುವಂತೆ ಮಾಹಿತಿಯನ್ನು ನೀಡಿದ್ದು  ದಿನಾಂಕ:-14/05/2021 ರಂದು  ಎಸ್.ಪಿ.ಎಂ.ಗೆ ಅಳವಡಿಸಿದ ರೋಪ್ ತುಂಡಾಗಿರುವುದರಿಂದ ಅದನ್ನು ಸರಿಪಡಿಸಿ ಬರುವುದಾಗಿ ತಿಳಿಸಿದ್ದು ದಿನಾಂಕ:- 15-05-2021 ರಂದು ಬೆಳಿಗ್ಗೆ ಸುಮಾರು 08.30.ಗಂಟೆಗೆ ಹೇಮಕಾಂತ್ ಜಾ ರವರು ಪಿರ್ಯಾದಿಗೆ ಗುಡ್ ಮಾರ್ನಿಂಗ್ ಮೆಸೇಜ್ ಕಳುಹಿಸಿದ್ದರು. ಪಿರ್ಯಾದಿದಾರರು ಸುಮಾರು 09.00 ಗಂಟೆಗೆ ಬೋಟ್ ನಲ್ಲಿದ್ದ ಕೆಲಸಗಾರರಿಗೆ ಕರೆ ಮಾಡಿದಾಗ ಅವರಲ್ಲಿದ್ದ ಯಾರೋಬ್ಬರು ಕರೆಯನ್ನು ಸ್ವೀಕರಿಸದೇ ಇದ್ದು ಹಲವು ಬಾರಿ ಪ್ರಯತ್ನಿಸಿದರು ಯಾರು ಕರೆಯನ್ನು ಸ್ವೀಕರಿಸದೇ ಇದ್ದುದರಿಂದ ಅನುಮಾನಗೊಂಡು  ಈ ವಿಚಾರವನ್ನು ಕೋಸ್ಟ್ ಗಾರ್ಡ, ಎನ್.ಎಂ.ಪಿ.ಟಿ., ಎಂ.ಆರ್.ಪಿ.ಎಲ್  ಹಾಗೂ ನಮ್ಮ ಕಂಪೆನಿಯ ಮೇಲಾಧಿಕಾರಿಗಳಿಗೆ ತಿಳಿಸಿದ್ದು ಎಂಟು ಜನರ ಜೊತೆ ಸಮುದ್ರದಲ್ಲಿ ಕೆಲಸ ಮುಗಿಸಿ ಟಗ್ ಬೋಟಿನಲ್ಲಿ ದಿನಾಂಕ: 15/05/2021 ರಂದು ಬೆಳಿಗ್ಗೆ 08.30 ಗಂಟೆಯ ನಂತರ  ಎನ್.ಎಂ.ಪಿ.ಟಿ.ಯ ಕಡೆಗೆ ಬರುತ್ತಿರುವಾಗ ಸಮುದ್ರದಲ್ಲಿ ಚಂಡಮಾರುತ ಗಾಳಿಯು ಟಗ್ ಬೋಟಿಗೆ ಅಪ್ಪಳಿಸಿ ಮಗುಚಿ ಬಿದ್ದು 1) ಹೇಮಕಾಂತ್  ಜಾ, 2) ಜೈಬಾನುಲ್ ಹಕ್ ಮೆಂಡಲ್ 3) ಅಸ್ಪಕ್ ಆಲಿ ಕಲ್ಪೆ ಮೃತಪಟ್ಟು, 1)ಮನಿರುಲ್ಲಾ ಮೊಲ್ಲಾ, 2)ಕರಿಬುಲಾ ಶೇಖ್, 3)ನಜೀಮ್ ಅಹಮ್ಮದ್ ರವರು ಈಜಿ ದಡ ಸೇರಿದ್ದು, 1) ಪವನ್ ಚಾಂದ್ ಕಾಟೋಚ್, 2) ಮೈನುದ್ದಿನ್ ಶೇಖ್, ಎಂಬವರು ಕಾಣೆಯಾಗಿರುತ್ತಾರೆ ಎಂಬಿತ್ಯಾದಿ

Crime Reported in Mulki PS

ದಿನಾಂಕ 28-05-2021ರಂದು ಪೊಲೀಸ್ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ದಿನಾಂಕ 23-05-2021 19-15 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ವಿಜಯಸನ್ನಿಧಿ ಬಳಿ ಗಸ್ತಿನಲ್ಲಿ ಇರುವಾಗ ಕಾರ್ನಾಡು ರಿಕ್ಷಾ ಸ್ಟಾಂಡಿನ ಬಳಿಯಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ 19-30 ಗಂಟೆಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ  ಕಾರ್ನಾಡು  ರಿಕ್ಷಾ ಸ್ಟಾಂಡಿನ  ಬಳಿಯಲ್ಲಿರುವ ಬ್ರಿಲ್ಲಿಯಂಟ್  ಸ್ಟಿಚ್ ಅಂಗಡಿ ಬಳಿಗೆ ಬಂದಾಗ ಅಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಖಾಕಿ ರಟ್ಟಿನ ಬಾಕ್ಸನ್ನು ಕೈಯಲ್ಲಿ ಹಿಡಿದು ಕೊಂಡು ನಿಂತಿರುವುದು ಕಂಡು ಬಂದ ಮೇರೆಗೆ ಆತನ ಕೈಯಲ್ಲಿದ್ದ ರಟ್ಟಿನ ಬಾಕ್ಸಿನ ಒಳಗಡೆ ಏನಿದೆ ಎಂದು ಕೇಳಿದಾಗ ಆತನು ತಡವರಿಸುತ್ತಾ ಅದು ಖಾಲಿ ರಟ್ಟಿನ ಬಾಕ್ಸ್ ಎಂದು ತಿಳಿಸಿ ಆತನು ಓಡಲು ಪ್ರಯತ್ನಿಸಿದಾಗ ಆತನನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಆತನ ಕೈಯಲ್ಲಿದ್ದ ರಟ್ಟಿನ ಬಾಕ್ಸ್ ನ್ನು ಆತನಿಂದಲೇ ಪರಿಶೀಲಿಸಿದಾಗ ಅದರಲ್ಲಿ 1) 180 ಎಂಎಲ್ ಮದ್ಯ ತುಂಬಿದ ಬಾಸ್ ಎಂಬ ಹೆಸರಿನ ಬ್ಲಾಕ್ & ಗೋಲ್ಡ್ ವಿಸ್ಕಿ 10 ಪ್ಲಾಸ್ಟಿಕ್ ಬಾಟಲಿಗಳು, 2) 180 ಎಂ ಎಲ್ ನ ಬ್ಯಾಗ್ ಪೈಪರ್ ಡಿಲಕ್ಸ್ ವಿಸ್ಕಿ5 ಸ್ಯಾಚೆಟ್ ಗಳು , 3) 180 ಎಂ ಎಲ್ ನ ಆಫೀರ್ಸ್ ಚಾಯ್ಸ್  ಸ್ಟಾರ್ ಸುಪ್ರೀಂ ವಿಸ್ಕಿ ಯ 4 ಸ್ಯಾಚೆಟ್ ಗಳು, 4) 180 ಎಂ ಎಲ್ ನ ಆಫೀಸರ್ಸ್ ಚಾಯ್ಸ್  ಸ್ಪೆಷಲ್ ವಿಸ್ಕಿಯ 3 ಸ್ಯಾಚೆಟ್ ಗಳು , 5) 180 ಎಂ ಎಲ್ ನ ಓಲ್ಡ್ ಮಾಂಕ್ ವೆರಿ ಓಲ್ಡ್ ವಾಟೆಡ್  ತ್ರಿಬಲ್ ಎಕ್ಸ್ ರಂ 3 ಸ್ಯಾಚೆಟ್ ಗಳು, 6) 180 ಎಂ ಎಲ್ ನ ಓಲ್ಡ್ ಟೆವೆರೆನ್ ವಿಸ್ಕಿಯ 2 ಸ್ಯಾಚೆಟ್ ಗಳು , 7) 180 ಎಂಎಲ್ ನ ಅಮೃತ್ ಪ್ರೆಸ್ಟೀಜ್ ವಿಸ್ಕಿ 2 ಪ್ಲಾಸ್ಟಿಕ್ ಬಾಟಲಿಗಳು ಕಂಡು ಬಂದಿರುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಿಗೆ ಇಲ್ಲದಿದ್ದರೂ ಮದ್ಯವನ್ನು ಮಾರಾಟ ಮಾಡಿದ್ದಲ್ಲದೇ, ಕೊರೊನಾ 19 ಸಾಂಕ್ರಾಮಿಕ ಕಾಯಿಲೆಯ ಬಗ್ಗೆ ಸರ್ಕಾರದ ಕಟ್ಟು ನಿಟ್ಟಿನ ಆದೇಶವಿದ್ದರೂ ಸದ್ರಿ ಅದೇಶವನ್ನು ಧಿಕ್ಕರಿಸಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮಾರಾಟ ಮಾಡಿ ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿರುವುದು ಗೊತ್ತಿದ್ದರೂ ಕೂಡಾ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯಿದೆಯನ್ನು ಉಲ್ಲಂಘನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Crime Reported in Mangalore South PS

ಪಿರ್ಯಾದುದಾರರಾದ  ಶ್ರೀಮತಿ ಪೌಲಿನಿ ಡಿಸೋಜ  ಎಂಬುವರ ಗಂಡ ಅಲ್ಬರ್ಟ್ ಡಿಸೋಜಾ  ಪ್ರಾಯ  [55] ವರ್ಷ ಎಂಬುವರು  ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದರು.  ಇವರು ಆನಾರೋಗ್ಯದಿಂದ ಬಳಲುತ್ತಿದ್ದು ಅಲ್ಲದೇ ವಿಪರೀತ ಅಮಲು ಪದಾರ್ಥವನ್ನು ಸೇವಿಸುತ್ತಿದ್ದರು. ಸದ್ರಿಯವರು ದಿನಾಂಕ : 24-05-2021 ರಂದು ಸಂಜೆ 06.00 ಗಂಟೆ ಸುಮಾರಿಗೆ  ಮನೆಯಿಂದ ಕೆಂಪು ಬಣ್ಣದ ಟಿಫನ್ ಬ್ಯಾಗ್ ಜೊತೆಗೆ ಹೊರಗೆ ಹೋದವರು  ಈ ವರೆಗೂ ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ , ಅವರು ಕೆಲಸ ಮಾಡುವ ಸ್ಥಳಕ್ಕೂ ಹೋಗದೇ ಕಾಣೆಯಾಗಿರುತ್ತಾರೆ. ಆದ್ದರಿಂದ ಪಿರ್ಯಾದಿದಾರರ ಗಂಡ ಅಲ್ಬರ್ಟ್ ಡಿಸೋಜ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ..ಕಾಣೆಯಾದ ಆಲ್ಬರ್ಟ್ ಡಿಸೋಜ ರವರ ಚಹರೆ : ಗೋಧಿ ಮೈ ಬಣ್ಣ  ಸಪೂರ ಶರೀರ , ಎತ್ತರ 5’ 7” ಇಂಚು, ಭಾಷೆ : ಕನ್ನಡ ಹಿಂದಿ, ತಮಿಳು,ಇಂಗ್ಲೀಷ್, ಮಲಯಾಳಂ ಭಾಷೆ ಮಾತನಾಡುತ್ತಾರೆ. ಬಲ ಭಾಗದ ಮೂಗಿನಲ್ಲಿ ಕಪ್ಪು ಬಣ್ಣದ ಮಚ್ಚೆಯಿರುತ್ತದೆ.  ಧರಿಸಿದ ಬಟ್ಟೆ :  ನೀಲಿ, ಹಸಿರು ,ಗ್ರೇ ಬಣ್ಣದ ಟೀ ಶರ್ಟ್,  ಮತ್ತು ಕಪ್ಪು ಬಣ್ಣದ ಪ್ಯಾಂಟ್ ಆಗಿರುತ್ತದೆ.,

 

ಇತ್ತೀಚಿನ ನವೀಕರಣ​ : 29-05-2021 05:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080