ಅಭಿಪ್ರಾಯ / ಸಲಹೆಗಳು

Crime Reported in  E and N Crime PS

ದಿನಾಂಕ  28-06-2021 ರಂದು 16-30 ಗಂಟೆಗೆ ಸಿಸಿಬಿ ಘಟಕದ  ಪೊಲೀಸ್ ನಿರೀಕ್ಷಕರಾದ ಶ್ರೀ.ಮಹೇಶ್ ಪ್ರಸಾದ್ ರವರಿಗೆ ಮಂಗಳೂರು ನಗರದ ಮಿಷನ್ ಸ್ಟ್ರೀಟ್ ಪರಿಸರದಲ್ಲಿ ಅಬ್ದುಲ್ ರಹಿಮಾನ್ ಮತ್ತು ಸಾದಿಕ್ ಎಂಬವರು KA 19 EQ 9684 ನೇ ಹೋಂಡ ಆಕ್ಟಿವ ಸ್ಕೂಟರ್ ನಲ್ಲಿ ಮಾಧಕ ವಸ್ತುವಾದ ಗಾಂಜವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಿರುವುದಾಗಿ ಮಾಹಿತಿ ಬಂದಂತೆ  ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ 19-10 ಗಂಟೆಗೆ ತಲುಪಿ 19-20 ಗಂಟೆಗೆ ಮಿಷನ್ ಸ್ಟ್ರೀಟ್ ನ City Walk commercial Complex ನಲ್ಲಿರುವ SPC juice point ಎದುರುಗಡೆ ಕಾಂಕ್ರೇಟ್ ರಸ್ತೆಯ ಬದಿಗೆ KA19 EQ 9684 ನೇ ಹೋಂಡಾ ಆಕ್ಟಿವ್ ಸ್ಕೂಟರ್ ಬಂದಿರುವುದನ್ನು ನಿಲ್ಲಿಸಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಸ್ಕೂಟರಿನಲ್ಲಿದ್ದ  ಒಟ್ಟು 3 ಕೆಜಿ 235 ಗ್ರಾಂ ತೂಕದ ಎರಡು ಪ್ಯಾಕೇಟ್ ಗಾಂಜಾ, ಎರಡು ಮೊಬೈಲ್ ಪೋನ್ ಮತ್ತು ಸ್ಕೂಟರ್ ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಇವುಗಳ ಅಂದಾಜು ಮೌಲ್ಯ 98,500/-ರೂಪಾಯಿ ಎಂಬಿತ್ಯಾದಿ.

2) ದಿನಾಂಕ  28-06-2021 ರಂದು 17-00 ಗಂಟೆಗೆ ಸಿಸಿಬಿ ಘಟಕದ  ಪೊಲೀಸ್ ನಿರೀಕ್ಷಕರಾದ ಶ್ರೀ.ಮಹೇಶ್ ಪ್ರಸಾದ್, ಮಂಗಳೂರು ನಗರದಲ್ಲಿ ಕೆ.ಎ.05.ಎಂ.ಎಫ್.1861 ಇನೋವಾ ಕಾರಿನಲ್ಲಿ ಮೊಹಮ್ಮದ್ ಅಮೀನ್ ಹಾಗೂ ಇತರರು ಮಾಧಕ ವಸ್ತುಗಳಾದ ಗಾಂಜ, ಎಂ.ಡಿ.ಎಂ.ಎ ಪಿಲ್ಸ್ ಹಾಗೂ ಇತರ ಮಾಧಕ ವಸ್ತುಗಳನ್ನು ಹೊಂದಿಕೊಂಡು ಅಕ್ರಮವಾಗಿ ಸಾಗಿಸಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಸಿಬ್ಬಂದಿಗಳೊಂದಿಗೆ  ಮಂಗಳೂರು ನಗರದ ಮಾರ್ನಮಿಕಟ್ಟೆ 2ನೇ ರೈಲ್ವೆ ಬ್ರಿಡ್ಜ್ ಬಳಿಗೆ  19-45 ಗಂಟೆಗೆ ತಲುಪಿದ ಸಮಯ ಮ್ಯಾಟೆಲಿಕ್ ಗೋಲ್ಡನ್ ಬಣ್ಣದ  ಕೆ.ಎ.05.ಎಂ.ಎಫ್.1861 ನಂಬ್ರದ ಇನ್ನೊವ ಕಾರು ನಿಂತಿದ್ದು, ಕಾರಿನಲ್ಲಿದ್ದ  ಮೊಹಮ್ಮದ್ ಅಮೀನ್ ರಾಫಿ, ಮೊಹಮ್ಮದ್ ಅಫ್ವಾಮ್  ಮತ್ತು ರೋಶನ್ ಯೂಸೂಫ್ ರವರುಗಳನ್ನು ವಶಕ್ಕೆ ಪಡೆದು ಅವರುಗಳಿಂದ 4 ಗ್ರಾಂ ತೂಕದ 9  ಎಂ.ಡಿ.ಎಂ.ಎ  ಪಿಲ್ಸ್,   2 ಕೆ.ಜಿ 168 ಗಾಂಜ, 1 ಗ್ರಾಂ 86 ಮಿಲಿ ಗ್ರಾಂ ತೂಕದ ಎಂ.ಡಿ.ಎಂ.ಎ ಪೌಡರ್, ಪ್ಲಾಸ್ಟಿಕ್ ಸಾಟೇಜ್ , ಮೊಬೈಲ್ ಪೋನ್ ಗಳು 3  ಮತ್ತು ಕೆ.ಎ.05.ಎಂ.ಎಫ್.1861 ನಂಬ್ರದ ಇನ್ನೊವ ಕಾರನ್ನು ಮಹಜರು ಮೂಲಕ ಸ್ವಾಧೀನಪಡಿಸಿ ಕೊಂಡಿರುತ್ತಾರೆ. ಇವುಗಳ ಅಂದಾಜು ಮೌಲ್ಯ ರೂ 9,49,760/- ಎಂಬಿತ್ಯಾದಿ.

Crime Reported in  Panambur PS

ಪಿರ್ಯಾದಿದಾರರು ಮಂಗಳೂರು ತಾಲೂಕು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬ್ರೈಟ್ ಪ್ಯಾಕೇಜಿಂಗ್ ಖಾಸಗಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುತ್ತಾರೆ. ಆಪಾದಿತ Ankit Bansal ಪಿರ್ಯಾದಿದಾರರ ಮಗನಾಗಿದ್ದು, ಪಿರ್ಯಾದಿದಾರರು ನೇಮಕಗೊಳಿಸಿದಂತೆ ಪಿರ್ಯಾದಿದಾರರ ಕಂಪನಿಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿಕೊಂಡಿದ್ದು, ಆಪಾದಿತನಿಗೆ ವಿವಾಹವಾದ ಬಳಿಕ ಪಿರ್ಯಾದಿದಾರರ  2ನೇ ಮಗನನ್ನು ಕಂಪನಿಯಲ್ಲಿ ನಿರ್ದೇಶಕರನ್ನಾಗಿ ಮಾಡಿದ ಬಳಿಕ ಆಪಾದಿತ ಪಿರ್ಯಾದಿದಾರರಿಗೆ ಮತ್ತು ಪಿರ್ಯಾಧಿದಾರರ ಪತ್ನಿ, 2ನೇ ಮಗನಿಗೆ ಕಿರುಕುಳ ನೀಡಿ ಪಿರ್ಯಾಧಿದಾರರ ಕಂಪನಿಯ ವ್ಯವಹಾರವನ್ನು ಸರಿಯಾಗಿ ನಡೆಸದೇ ಉದ್ದೇಶಪೂರ್ವಕವಾಗಿ ಪಿರ್ಯಾದಿದಾರರ ಕಂಪನಿಗೆ ಕೆಟ್ಟ ಹೆಸರು ಬರುವಂತೆ, ನಷ್ಟವಾಗುವಂತೆ, ಉದ್ಯೋಗಿಗಳ ಮದ್ಯೆ ಗುಂಪುಗಾರಿಕೆ ಸೃಷ್ಟಿಸಿ ಪಿರ್ಯಾದಿದಾರರ ಕಂಪನಿಯ ವ್ಯವಹಾರಕ್ಕೆ  ನಷ್ಟ ಉಂಟಾಗುವಂತೆ ಹಾಗೂ ಕಂಪನಿಯ ಹೆಸರನ್ನು ಹಾಳು ಮಾಡಿರುತ್ತಾರೆ. ಇವರನ್ನು ಪ್ರಶ್ನಿಸಿರುವ ಪಿರ್ಯಾದಿದಾರರು ಹಾಗೂ ಅವರ ಪತ್ನಿಗೆ ಕಿರುಕುಳ ನೀಡಿ ಪಿರ್ಯಾದಿದಾರರು ಕಂಪನಿಯ ಕಛೇರಿಗೆ ನುಗ್ಗಿ ಅಲ್ಲಿದ್ದ ಅವರನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರ 2ನೇ ಮಗನಿಗೆ ಕೈಯಿಂದ ದೂಡಿ ಹಾಕಿರುತ್ತಾರೆ. ಇದಲ್ಲದೇ ಪಿರ್ಯಾದಿದಾರರ ಕಂಪನಿಗೆ ಸಂಬಂಧಪಟ್ಟ ದಾಖಲಾತಿಗಳನ್ನು, ಲ್ಯಾಪಟಾಪ್ ಗಳನ್ನು ಕಳ್ಳತನ ಮಾಡಿ ನಂಬಿಕ ದ್ರೋಹ ಎಸಗಿರುತ್ತಾರೆ. ಎಂಬಿತ್ಯಾದಿಯಾಗಿರುತ್ತದೆ

Crime Reported in  Mulki PS

ದಿನಾಂಕ: 28-06-2021 ರಂದು ಸಮಯ 15:30 ಗಂಟೆಗೆ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೊಹಮ್ಮದ್ ನಾಸೀರ್ ಎಂಬವರು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಚೀಟಿ ಬರೆಯುತ್ತಿರುವ ಬಗ್ಗೆ ಮಾಹಿತಿ ಬಂದಂತೆ ಹೆಚ್.ಸಿ Pramod Devadiga ನೇಯವರು ಮಫ್ತಿಯಲ್ಲಿ ಸ್ಥಳಕ್ಕೆ 15-45 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿ ಮರೆಯಲ್ಲಿ ನಿಂತು ನೋಡಲಾಗಿ ಮೊಹಮ್ಮದ್ ನಾಸೀರ್ ಎಂಬವರು  ಮಟ್ಕಾ ದಂಧೆ ಬಗ್ಗೆ ಸಾರ್ವಜನಿಕರಿಂದ ಹಣ ಪಡೆದುಕೊಂಡು ಜೂಜಾಟ ಆಡುತ್ತಿರುವುದು ಕಂಡು ಬಂದಿರುವುದರಿಂದ ಠಾಣೆಗೆ ಹಿಂತಿರುಗಿ ಬಂದು ಅವನನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ನೀಡಿದ ದೂರಿನ ಪ್ರಕಾರ ಆರೋಪಿತನ ಮೇಲೆ 78(i)(iii) ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

2) ದಿನಾಂಕ 27-06-2021ರಂದು ಫಿರ್ಯಾದಿ Lalsab ರವರು ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ನಾಗಬನದ ಬಳಿ ಇದ್ದಾಗ ಮಲ್ಲಿಕಾರ್ಜುನ ಮಠದ ಬಳಿಯಿಂದ ಜನರು ಜೋರಾಗಿ ಮಾತನಾಡುವುದನ್ನು ಕೇಳಿ ಅಲ್ಲಿಗೆ  ಹೋದಾಗ ಅಲ್ಲಿರುವ ಕೆಎ 19 ಎಬಿ 7711 ನೇ ನಂಬ್ರದ ಬಸ್ಸಿನಲ್ಲಿ ಮಹಿಳೆಯರು ಇದ್ದು ಚಾಲಕನಲ್ಲಿ ಈ ಹೊತ್ತಿನಲ್ಲಿ ನೀವು ಮಹಿಳೆಯರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿರುವುದು ಎಂಬುದಾಗಿ ಕೇಳಿದಾಗ ಚಾಲಕ ಪ್ರವೀಣ್ ನು ಕಣಚೂರು ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ಮ್ಯಾನೇಜರ್ ನವಾಝ್ ಎಂಬಾತನ ಸೂಚನೆಯ ಮೇರೆಗೆ ಮಹಿಳೆಯರಿಗೆ ಕೊರೊನಾ ಲಸಿಕೆಯನ್ನು ಕೊಡಿಸುವ ಬಗ್ಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಲ್ಲದೇ, ಈ ಬಗ್ಗೆ ದಾಖಲಾತಿಗಳನ್ನು ಕೇಳಿದಾಗ ಯಾವುದೇ ದಾಖಲಾತಿ ಇಲ್ಲವೆಂದು ತಿಳಿಸಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ತುಂಬಿಸಿಕೊಂಡು ಹೋಗುವುದು ಸರಿಯಲ್ಲ ಎಂಬುದಾಗಿ ತಿಳಿಸಿದಾಗ ಚಾಲಕನು ಬಸ್ಸಿನಲ್ಲಿದ್ದ ಮಹಿಳೆಯರನ್ನು ಬಸ್ಸಿನಿಂದ ಇಳಿಸಿ ಕಳುಹಿಸಿದ್ದು, ಪ್ರಸ್ತುತ ರಾಜ್ಯದಲ್ಲಿ ಕೊರೊನಾ ವೈರಾಣು ಖಾಯಿಲೆಯ ಬಗ್ಗೆ ಲಾಕ್ ಡೌನ್ ಇದ್ದು ಮಾನ್ಯ ಜಿಲ್ಲಾಧಿಕಾರಿಯವರು ಜನಸಂದಣಿ ಸೇರಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಮಾಡಿದ್ದರೂ, ಬಸ್ಸಿನ ಚಾಲಕನು ಕೊರೊನಾ ಖಾಯಿಲೆ ಹರಡುವ ಸಾದ್ಯತೆಯಿದ್ದರೂ ಕೂಡಾ ಸಾಮಾಜಿಕ ಅಂತರವನ್ನು ಕಾಯ್ದಿರಿಸಿಕೊಳ್ಳದೇ ಜನರನ್ನು ಸೇರಿಸಿ ಕಣಚ್ಚೂರು ಆಸ್ಪತ್ರೆಯ ಮ್ಯಾನೇಜರ್ ನವಾಝ್ ನ ಸೂಚನೆಯಂತೆ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಲು ಪ್ರಯತ್ನಿಸಿದ್ದಾಗಿದೆ

Crime Reported in  Moodabidre PS        

ದಿನಾಂಕ: 28-06-2021 ರಂದು ಪಿರ್ಯಾದಿ Chandrahash Rai ರವರು ಪಿಸಿ ದರ್ಶನ್ ರವರ ಜೊತೆಯಲ್ಲಿ ಠಾಣಾ ಸರಹದ್ದಿನಲ್ಲಿ ಬೈಕ್ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 16.00 ಗಂಟೆಗೆ ಮೂಡಬಿದರೆ ತಾಲೂಕು ಮಾರ್ಪಾಡಿ ಗ್ರಾಮದ ಹಿರೋ ಹೋಂಡಾ ಶೋ ರೂಮ್ ಬಳಿಯಿರುವ “ಎಮ್. ಎಸ್. ಕೃಷ್ಣ ಸುಪಾರಿ ಡಿಪೋ“ ಎಂಬ ಅಂಗಡಿಯ ಬಳಿ ಬಂದಾಗ ಅಂಗಡಿಯ ಮಾಲೀಕನು ಅವಧಿ ಮೀರಿ ಅಂಗಡಿಯನ್ನು ವ್ಯಾಪಾರಕ್ಕಾಗಿ ತೆರೆದಿಟ್ಟು ಆರೋಪಿಯು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ಅಂಗಡಿಯನ್ನು ನಿಗದಿತ ಅವಧಿಯನ್ನು ಮೀರಿ ಅಂಗಡಿಯನ್ನು ತೆರೆದಿಟ್ಟು ವ್ಯಾಪಾರದಲ್ಲಿ ತೊಡಗಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಎಂಬಿತ್ಯಾದಿ.

2) ದಿನಾಂಕ 28-06-2021 ರಂದು ಸಂಜೆ 07-15 ಗಂಟೆಗೆ ಠಾಣಾ ಸರಹದ್ದಿನ ಮೂಡಬಿದ್ರೆ ತಾಲೂಕು ಬಡಗಮಿಜಾರು ಗ್ರಾಮದ ಕೊಂಡೆಬೆಟ್ಟು ಎಂಬಲ್ಲಿ ಸಾರ್ವಜನಿಕ ಕಾಲು ದಾರಿಯಲ್ಲಿ ಯಾರೋ ವ್ಯಕ್ತಿಗಳು ಕಾಡು ಪ್ರಾಣಿಗಳನ್ನು ಕೊಲ್ಲುವ ಉದ್ದೇಶದಿಂದ ಸ್ಪೋಟಕ ತೋಟೆಯನ್ನು ಕೋಳಿಯ ಕರುಳುಗಳೊಂದಿಗೆ ಸುತ್ತಿ ಇಟ್ಟಿದ್ದು, ಈ ಸ್ಫೋಟಕ ತೋಟೆಯು ಮಾನವ ಹಾಗೂ ಪ್ರಾಣಿಗಳ ಜೀವಕ್ಕೆ ಅಪಾಯಕಾರಿಯಾದ ಸ್ಫೋಟಕ ವಸ್ತು ಎಂಬ ತಿಳುವಳಿಕೆ ಇದ್ದರೂ ಕೂಡ ನಿರ್ಲಕ್ಷತನದಿಂದ ಸಾರ್ವಜನಿಕ ಸ್ಥಳದಲ್ಲಿ ಸ್ಫೋಟಕ ತೋಟೆಯನ್ನು ಇಟ್ಟಿರುತ್ತಾರೆ ಎಂಬಿತ್ಯಾದಿ ಸಾರಾಂಶ.

3) ದಿನಾಂಕ; 28-06-2021 ರಂದು ಸಮಯ ಸುಮಾರು 19.30 ಗಂಟೆಗೆ ಪಿರ್ಯಾದಿ Muneer ರವರು ಶೊರ್ಮವಾಲಾ ಹೋಟೆಲ್‌ನ ಬಳಿಗೆ ಅರ್ಡರ್ ಮಾಡಲು ಹೋಗಿದ್ದು ಅಲ್ಲಿಯೇ ಟಿ ಎಸ್  ಕೆಪೆಯಲ್ಲಿ ಕೆಲಸ ಮಾಡುವ ಸಿನಾನ್  ಎಂಬುವರ ವೈಪೈ ಪಿರ್ಯಾದಿದಾರರ ಮೊಬೈಲ್‌ಗೆ ಕನೆಕ್ಟ್ ಆಗಿದ್ದು, ಮೊಬೈಲ್ ಆನ್ ಮಾಡಿ ಯುಟ್ಯೂಬ್‌ಗೆ ಹೋಗಿ ವೀಡಿಯೋ ನೋಡುತ್ತಿದ್ದಾಗ ಸೆಕ್ಸ್ ವಾಯ್ಸ್ ಕೇಳಿಸಿದ್ದು ಅದು ವೈ-ಪೈ ಮೂಲಕ ಟಿ ಎಸ್ ಕೆಪೆಯ ಟಿವಿಗೆ ಕೆನೆಕ್ಟ್ ಆಗಿದ್ದರಿಂದ ಈ ಶಬ್ದವನ್ನು ಕೇಳಿಸಿಕೊಂಡ ಸಿನಾನ್ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕ್ಷಮೆಯಾಚಿಸಿದರೂ ಬಿಡದೆ ಕೈಗಳಿಂದ ಮತ್ತು ಪ್ಲಾಸ್ಟಿಕ್ ಚೇರ್‌ನಿಂದ, ಹಲ್ಲೆ ಮಾಡಿದ್ದು, ಇದರಿಂದ ಪಿರ್ಯಾದಿದಾರರ ತುಟಿಗೆ, ಎದೆಯ ಭಾಗಕ್ಕೆ ಗಿರಿದ ನಮೂನೆಯ ಗಾಯಗಳಾಗಿರುತ್ತದೆ ಎಂಬಿತ್ಯಾದಿ ಪಿರ್ಯಾದಿಯ ಸಾರಾಂಶವಾಗಿದೆ.

ಇತ್ತೀಚಿನ ನವೀಕರಣ​ : 29-06-2021 07:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080