ಅಭಿಪ್ರಾಯ / ಸಲಹೆಗಳು

Crime Reported in  Kavoor PS

ಫಿರ್ಯಾದಿ ROHIDAS ರವರು ಪಿ.ಡಬ್ಲ್ಯೂ.ಡಿ ಕಾಂಟ್ರಕ್ಟ್ ಕೆಲಸ  ಮಾಡಿಕೊಂಡಿದ್ದು, ಹೊಸಬೆಟ್ಟು ಗ್ರಾಮದ ಶಿವಗಿರಿ ಎಂಬಲ್ಲಿ 5 ಸೆಂಟ್ಸ್ ಜಾಗದಲ್ಲಿ ಸ್ಥಿರಾಸ್ತಿಯನ್ನು ಹೊಂದಿದ್ದು, ಸದ್ರಿ ಸ್ಥಿರಾಸ್ತಿಯನ್ನು ಮಂಗಳೂರಿನ ಬಿಲ್ಡಿಂಗ್ ಸೊಸೈಟಿಯಿಂದ ಸಾಲ ಮಾಡಿ ಮಾರಾಟ ಮಾಡುವ ದೃಷ್ಠಿಯಿಂದ ಹೊಸ ಮನೆಯನ್ನು ನಿರ್ಮಿಸಿದ್ದು ನಂತರ ಮನೆ ಕೆಲಸವು ಪೂರ್ಣ ಗೊಂಡ ನಂತರ ಈ ಮನೆಯನ್ನು ಮಾರಾಟ ಮಾಡುವ ಉದ್ದೇಶದಿಂದ ದಿನಾಂಕ 25-11-2020 ರಂದು ಮತ್ತು 29-11-2020 ರಂದು ಉದಯವಾಣಿ ದಿನ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಮೊಬೈಲ್ ಸಂಖ್ಯೆಯನ್ನು ನೀಡಿದ್ದರು. ಜಾಹೀರಾತು ನೀಡಿದ ಒಂದು ವಾರದಲ್ಲಿ 7829894477 ನಂಬರ್ ನಿಂದ ನಿತಿನ್ ರಾಜ್ ಬೆಂಗಳೂರು ಮತ್ತು ಧನರಾಜ್ ವಿಟ್ಲ ಎಂಬ ಹೆಸರಿನ ವ್ಯಕ್ತಿಗಳು ಕರೆ ಮಾಡಿ ನಾನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು ನನ್ನ ಸಂಸ್ಥೆಯ ಮಾಲಕರಿಗೆ ಮಂಗಳೂರಿನಲ್ಲಿ ಮನೆ ಅಗತ್ಯತೆಯಿದ್ದು ತಿಳಿಸಿ. ನಮ್ಮ ಬಾಸ್ ನಿಂದ ಪಿರ್ಯಾದಿದಾರರ ಮನೆಗೆ 50 ಲಕ್ಷ  ಸಾಲ ತೆಗೆಸಿಕೊಡುತ್ತೇನೆಂದು ಹೇಳಿ ಧನರಾಜ್ ವಿಟ್ಲ ರವರು  ಫಿರ್ಯಾದಿದಾರನ್ನು  ಶ್ರೀ ರಂಗಪಟ್ಟಣಕ್ಕೆ ಬರಲು ಹೇಳಿ ಪಿರ್ಯಾದಿದಾರರಿಗೆ ಲೋನ್ ಕೋಡುವ ಹಣ ರಾಜಕಾರಣಿಗಳ ಕಪ್ಪು ಹಣ ಬ್ಯಾಗ್ ನಲ್ಲಿ 1.5 ಕೋಟಿ ರೂಪಾಯಿ ಕಪ್ಪುಹಣ ಎಂಬುದಾಗಿ ತಿಳಿಸಿ ಈ ಹಣವನ್ನು ನಾವು ಬಿಳಿ ಮಾಡ ಬೇಕು ಎಂದು ಹೇಳಿ 5  ಲೀಟರ್ ನ ಕ್ಯಾನ್ ನಲ್ಲಿ ಲಿಕ್ವಿಡ್ ನಂತೆ ತೋರುವ ನೀರಿಗೆ ಮುಳುಗಿಸಿ ತೆಗೆದಾಗ ಕಪ್ಪು ಬಣ್ಣದ ಕಾಗದ 500 ರೂಪಾಯಿಯ ನೋಟಿನಂತೆ ಕಂಡಿತು.ನಂತರ 1.5 ಕೋಟಿ ಹಣ ಇದೆ ಇದನ್ನು ಪಿರ್ಯಾದಿದಾರರ ಊರಿಗೆ ಕೊಂಡು ಹೋಗಿ ಈ ಲಿಕ್ಪಿಡ್ ನಲ್ಲಿ ಮುಳುಗಿಸಿ ತೆಗೆದು ಬಿಳಿ ಮಾಡುವಂತೆ ತಿಳಿಸಿದ್ದು ಇದನ್ನು ನಂಬಿ ಪಿರ್ಯಾದಿದಾರರ ಗಾಡಿಯಲ್ಲಿದ್ದ ಟಯರ್ ನ್ನು ನಿತಿನ್ ರಾಜ್ ಗಾಡಿಗೆ ತುಂಬಿಸಿ ಆತನ ಕಾರಿನಲ್ಲಿ ಹಣದ ಬ್ಯಾಗನ್ನು ಹಾಗೂ ಲಿಕ್ಪಿಡ್ ನ್ನು ವಿಟ್ಲದ ಧನರಾಜ್ ಆತನ ಕಾರಿನ ಡಿಕ್ಕಿಯಲ್ಲಿ ಇರಿಸಿ ನಾವು ಹೊರಡುತ್ತೇವೆ ಎಂದು ಹೇಳಿ ನಾವು ಅಲ್ಲಿಂದ ಹೊರಟು ಒಂದು ಕಿಲೋ ಮೀಟರ್ ಮುಂದೆ ಬರುವ ಸಂದರ್ಭದಲ್ಲಿ ಧನರಾಜ್ ವಾಹನವನ್ನು ನಿಲ್ಲಿಸಿ ಗಾಡಿಯ ಡಿಕ್ಕಿಯಲ್ಲಿ ಯಾವುದೋ ಶಬ್ದ ಬಂದಂತೆ ಕೇಳಿಸಿದ್ದು ಪಿರ್ಯಾದಿದಾರರಲ್ಲಿ ನೋಡುವಂತೆ ತಿಳಿಸಿದನು. ಪಿರ್ಯಾದಿದಾರರು ಡಿಕ್ಕಿಯನ್ನು ತೆರೆದು ನೋಡುವಾಗ ಲಿಕ್ಪಿಡ್ ನ ಕ್ಯಾನ್ ಕೆಳಗೆ ಬಿದ್ದಿದ್ದು ಯಾವುದೇ ಲಿಕ್ಪಿಡ್ ಇರಲಿಲ್ಲ. ಪಿರ್ಯಾದಿದಾರರು ತಕ್ಷಣ ಧನರಾಜ್ ಗೆ ತಿಳಿಸಿದಾಗ ಅವರು ನಿತಿನ್ ಗೆ ಕರೆಮಾಡಿ ನಡೆದ ವಿಷಯವನ್ನು ತಿಳಿಸಿದಾಗ 10 ನಿಮಿಷದ ನಂತರ ನಾವು ನಿಂತಿರುವ ಸ್ಥಳಕ್ಕೆ ನಿತಿನ್ ರಾಜ್ ಬಂದು ಈ ಲಿಕ್ಪಿಡ್  ಚೆಲ್ಲಿರುವುದನ್ನು ನೋಡಿ ನಮಗೆ ಬೈಯ್ದು ಈ ಲಿಕ್ಪಡ್ 25 ಲಕ್ಷ ಬೆಳೆಬಾಳುವ ವಸ್ತು ಆಗಿದ್ದು, ನೀವು ಬೇಜಾಬ್ದಾರಿಯಿಂದ ಚೆಲ್ಲಿದ್ದು ಇದು ಸಿಗುವುದು ಇನ್ನು ಕಷ್ಟ ಎಂದು ಹೇಳಿ ಆತನ ಮೊಬೈಲ್ ನಿಂದ ಯಾರೋ ಹುಡುಗಿಗೆ ಕರೆ ಮಾಡಿ ಪಿರ್ಯಾದಿದಾರರಲ್ಲಿ ಮಾತನಾಡಲು ತಿಳಿಸಿ ಆ ಹುಡುಗಿ ಪಿರ್ಯಾದಿದಾರರಲ್ಲಿ ಬೇರೆ ಲಿಕ್ಪಿಡ್ ಬೇಕಾದರೆ ನೀವು 25 ಲಕ್ಷ ರೂಪಾಯಿ ನೀಡಬೇಕು ಎಂದು ತಿಳಿಸಿರುತ್ತಾಳೆ. ಬಳಿಕ ನಿತಿನ್ ನಮ್ಮಲ್ಲಿ ನಾನು ರೂಪಾಯಿ 10 ಲಕ್ಷ ರೆಡಿ ಮಾಡುತ್ತೇನೆ. ನೀವಿಬ್ಬರೂ ಸೇರಿ 15 ಲಕ್ಷ ರೆಡಿ ಮಾಡಿ ಕೂಡಲೇ ನೀಡಬೇಕಾಗಿ ತಿಳಿಸಿ ,ಕಾರಿನಲ್ಲಿರುವ ಕಪ್ಪು ಬಣ್ಣದ ಕಾಗದದ ಬ್ಯಾಗನ್ನು ಆತನ ಕಾರಿನಲ್ಲಿ ಇರಿಸಿ ನೀವು ಕೂಡಲೇ ಊರಿಗೆ ಹೋಗಿ ಹಣವನ್ನು ನೀಡಿದರೆ ಲಿಕ್ಪಿಡ್ ತರುವುದಾಗಿ ತಿಳಿಸಿದನು. ನಾವು ಎನೂ ದಿಕ್ಕು ತೋಚದೆ ಬರಿ ಕೈಯಲ್ಲಿ ಧನರಾಜ್ ಕಾರಿನಲ್ಲಿ ಊರಿಗೆ ಬಂದಿರುತ್ತೇವೆ.ಮರುದಿವಸ ವಿಟ್ಲದ ಧನರಾಜ್ ಕರೆ ಮಾಡಿ ನಾನು ಹೇಗದರೂ ಮಾಡಿ 7 ಲಕ್ಷ ಹಣವನ್ನು ರೆಡಿ ಮಾಡಿರುತ್ತೇನೆ.ನೀವು ಕೂಡಾ ಎನಾದರೂ ಮಾಡಿ  ಹಣ ರೆಡಿ ಮಾಡಿ ನಾವು ಲಿಕ್ವಿಡ್ ತರುವ ಎಂಬುದಾಗಿ ಪದೇ ಪದೇ ಪೋನ್ ಮಾಡಿ ತಿಳಿಸಿದನು ಪಿರ್ಯಾದಿದಾರರ ಹೆಂಡತಿ ಮಕ್ಕಳ ಚಿನ್ನವನ್ನು ದಿನಾಂಕ 22-03-2021 ರಂದು ಕಡುಪು ವಿವಿಧೋದ್ದೇಶ ಸಹಕಾರಿ ಸೊಸೈಟಿ ಮೂಡುಶೆಡ್ಡೆಯಲ್ಲಿ ರೂಪಾಯಿ 7 ಲಕ್ಷ 20 ಸಾವಿರಕ್ಕೆ ಅಡವಿಟ್ಟು ಆಮೇಲೆ ಬ್ಯಾಂಕ್ ನಲ್ಲಿದ್ದ 2 ಲಕ್ಷ ರೂಪಾಯಿಯನ್ನು ತೆಗೆದು ಒಟ್ಟು ಮಾಡಿ ಒಟ್ಟು 9 ಲಕ್ಷ 20 ಸಾವಿರ ರೂಪಾಯಿಯನ್ನು ನೀಡಿ ಇವರು ಮಾಡಿದ ಈ ಮೇಲಿನ ವಂಚನೆಯಿಂದ ಫಿರ್ಯಾದಿದಾರರು ಮಾನಸಿಕವಾಗಿ ಆಘಾತಗೊಂಡು ಈ ವಿಷಯವನ್ನು ಯಾರಿಗೂ ಹೇಳದೇ ನನ್ನಂತೆ ಇತರರು ಯಾರೂ ಕೂಡಾ ಆರೋಪಿತರ ವಂಚನೆಗೆ ಬಲಿಯಾಗದಿರಲಿ ಎಂಬ ಉದ್ದೇಶದಿಂದ ಈ ದಿನ ಠಾಣೆಗೆ ಬಂದು ತಡವಾಗಿ ದೂರನ್ನು ನೀಡಿರುವುದಾಗಿ ಎಂಬಿತ್ಯಾದಿ.

Crime Reported in  Surathkal PS               

ಪಿರ್ಯಾದಿ IBRAHIM ರವರ ಹಿರಿಮಗಳಾದ  ಪ್ರಾಯ ಸುಮಾರು 25 ವರ್ಷ ರಿಜ್ವಾನಾಳು ಶಿಕ್ಷಕಿಯಾಗಿದ್ದು ಪಿರ್ಯಾದಿದಾರರ ಮನೆಯಲ್ಲಿ ವಾಸವಾಗಿದ್ದು ಆಕೆಯ ಗಂಡ ದುಬೈನಲ್ಲಿರುವುದಾಗಿದೆ. ಪಿರ್ಯಾದಿದಾರರ ಎರಡನೇಯ ಮಗಳಾದ ರಾಝ್ವಿನಾಳಿಗೆ ಮಾರ್ಚ್  ತಿಂಗಳಿನಲ್ಲಿ ಮದುವೆ ಮಾಡಿಸಿಕೊಟ್ಟಿದ್ದು ಆಕೆಯ ಒಡವೆಗಳನ್ನು ಪಿರ್ಯಾದಿರಾರರ ಮನೆಯ ಕಪಾಟಿನಲ್ಲಿ ಇರಿಸಿರುವುದಾಗಿದೆ. ಅದರ ಕೀ ಹಿರಿಮಗಳಾದ ರಿಜ್ವಾನಾಳ ಬಳಿ ಇರುವುದಾಗಿದೆ. ದಿನಾಂಕ: 26/07/2021 ರಂದು ಬೆಳಿಗ್ಗೆ ಹಣದ ಅವಶ್ಯಕತೆ ಇದ್ದ ಕಾರಣ ಸದ್ರಿ ಒಡವೆಗಳನ್ನು ಅಡವಿರಿಸಲು ಕಪಾಟಿನ ಕೀಯನ್ನು ಪಿರ್ಯಾದಿದಾರರು ಕೇಳಿದಾಗ  ಹಿರಿಮಗಳು ರಿಜ್ವಾನಾಳು ಕೊಡಲು ನಿರಾಕರಿಸಿರುವುದಾಗಿದೆ. ಬಳಿಕ ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿದಾರರು ಅವರ ಮೋಟಾರ್ ಸೈಕಲ್ ನಲ್ಲಿ ಹಿರಿಮಗಳಾದ ರಿಜ್ವಾನಾಳನ್ನು ಆಕೆ ಕೆಲಸ ಮಾಡುವ ಚೊಕ್ಕಬೆಟ್ಟು ಜಾಮೀಯಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಬಿಟ್ಟು  ಮಧ್ಯಾಹ್ನ 01-00 ಗಂಟೆಗೆ ಪೋನ್ ಮಾಡಿದಾಗ ಮಂಗಳೂರಿಗೆ ಹೋಗುತ್ತಿರುವುದಾಗಿಯೂ ಒಂದು ಗಂಟೆ ಬಿಟ್ಟು ಬರುವುದಾಗಿ ಹೇಳಿ ವಾಪಸ್ಸು ಮನೆಗೆ ಬಾರದೇ ಇದ್ದು ಆಕೆಯ ಮೊಬೈಲ್ ಪೋನ್ ಸ್ವಿಚ್ಛ ಆಪ್ ಮಾಡಿರುತ್ತಾಳೆ ಮರು ದಿನ ದಿನಾಂಕ: 27/07/2021 ರಂದು ಕಪಾಟಿನ ಬಾಗಿಲನ್ನು ಒಡೆದು ನೋಡಿದಾಗ ಪಿರ್ಯಾದಿದಾರರ 2ನೇಯ ಮಗಳ ಒಡವೆಗಳು ಇರಲಿಲ್ಲ.ಕಾಣೆಯಾದ ಹಿರಿಮಗಳಾದ ರಿಜ್ವಾನಾಳು ಕೃಷ್ಣಾಪುರದ ಬಶೀರ್ ಎಂಬುವರೊಂದಿಗೆ ಪ್ರೇಮವಿದ್ದು ಆತನ ಜೊತೆ ಮೇಲ್ಕಾಣಿಸಿದ  ಒಡವೆ ಜೊತೆಯಲ್ಲಿ ಹೋಗಿರಬಹುದು  ಕಾಣೆಯಾದ ರಿಜ್ವಾನಾಳನ್ನು ಪತ್ತೆ ಮಾಡಿಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-07-2021 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080