Crime Reported in Cyber Crime PS
ಪಿರ್ಯಾದಿದಾರರಿಗೆ 2020 ನೇ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಾಪ್ ಟಾಲ್ ಸಂಸ್ಥೆಯಿಂದ ರಿಜಿಸ್ಟರ್ ಪೋಸ್ಟ್ ಬಂದಿದ್ದು ಅದನ್ನು ದಿನಾಂಕ: 09/12/2020 ರಂದು ತೆರೆದು ನೋಡಿದಾಗ ಅದರಲ್ಲಿ ನ್ಯಾಪ್ಟಾಲ್ ಸಂಸ್ಥೆಯ ಹೆಸರಿನಲ್ಲಿ ಒಂದು ಸ್ಕ್ರಾಚ್ ಕಾರ್ಡ್ ಹಾಗೂ ಪತ್ರ ಇದ್ದು ಓದಿ ನೋಡಲಾಗಿ ಪಿರ್ಯಾದಿದಾರರಿಗೆ ನ್ಯಾಪ್ಟಾಲ್ ನಿಂದ ರೂ 12 ಲಕ್ಷ ಬಹುಮಾನ ಬಂದಿರುವುದಾಗಿ ನಮೂದಿಸಲಾಗಿರುತ್ತದೆ. ಅದರಂತೆ ಪಿರ್ಯಾದಿದಾರರು ಸದ್ರಿ ಪತ್ರದಲ್ಲಿ ನಮೂದಿಸಿದ್ದ 9432582448 ನೇ ನಂಬ್ರಕ್ಕೆ ಕರೆ ಮಾಡಿ ವಿಚಾರಿಸಿದಾಗ ಕರೆಯನ್ನು ಸ್ವೀಕರಿಸಿದ ವ್ಯಕ್ತಿಯು ಅಂಚೆಯಲ್ಲಿ ಬಂದ ಪತ್ರದಲ್ಲಿ ಪಿರ್ಯಾದಿದಾರರ ಬ್ಯಾಂಕ್ ಖಾತೆ ವಿವರ ಹಾಗೂ ವಿಳಾಸವನ್ನು ನಮೂದಿಸಿ ವಾಟ್ಸ್ ಆಪ್ ಮೂಲಕ ಕಳುಹಿಸುವಂತೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಕಳುಹಿಸಿಕೊಟ್ಟಿರುತ್ತಾರೆ. ನಂತರ ಪಿರ್ಯಾದಿಗೆ 8697677298 ನೇ ನಂಬ್ರದಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ತನ್ನ ಹೆಸರು ಪ್ರದೀಪ್ ಪೂಜಾರಿ ಎಂಬುದಾಗಿ ತಿಳಿಸಿ ಬಹುಮಾನದ ಹಣವನ್ನು ಪಿರ್ಯಾದಿಯ ಖಾತೆಗೆ ವರ್ಗಾಯಿಸುವ ಬಗ್ಗೆ 46,000/- ಶುಲ್ಕವನ್ನು ಪಾವತಿಸುವಂತೆ ಹಾಗೂ ಇತರ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿ ಪಿರ್ಯಾದಿದಾರರಿಂದ ದಿನಾಂಕ: 09/12/2020 ರಿಂದ ದಿನಾಂಕ: 12/03/2021 ರ ಮಧ್ಯಾವಧಿಯಲ್ಲಿ ಪಿರ್ಯಾದಿದಾರರಿಂದ ಹಂತ ಹಂತವಾಗಿ ಒಟ್ಟು ರೂ 7,85,800/- ಗಳನ್ನು ಅಪರಿಚಿತ ವ್ಯಕ್ತಿಗಳು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಯಾವುದೇ ಬಹುಮಾನ ನೀಡದೆ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ
Crime Reported in Mangalore North PS
ಪ್ರಕರಣದ ಪಿರ್ಯಾದಿ FARAZ SALI ರವರು ಅವರ ಪತ್ನಿ ಹೆಸರಿನಲ್ಲಿರುವ KA-19-HA-2939 ನೇ ನಂಬ್ರದ ಆಕ್ಟೀವಾ ಸ್ಕೂಟರ್ ನ್ನು ತೆಗದುಕೊಂಡು ದಿನಾಂಕ 0.06.2021 ರಂದು ಬೆಳಿಗ್ಗೆ 08:00 ಗಂಟೆಗೆ ಮನೆಗೆ ಸಾಮಾಗ್ರಿಗಳನ್ನು ಖರೀದಿಸುವರೇ ಸೆಂಟ್ರಲ್ ಟಾಕೀಸು ಎದುರು ಇರುವ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕ್ಲಾಕ್ ಟವರ್ ಹತ್ತಿರ ಇರುವ ಫಾತಿಮಾ ಸ್ಟೋರ್ ಗೆ ಹೋಗಿರುತ್ತಾರೆ. ನಂತರ ಸುಮಾರು 08:30 ಗಂಟೆಗೆ ಬಂದು ನೋಡಲಾಗಿ ನಿಲ್ಲಿಸಿಟ್ಟ ಸ್ಥಳದಲ್ಲಿ ಸ್ಕೂಟರ್ ಇಲ್ಲದೇ ಇರುವುದು ಕಂಡು ಬಂದಿದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.
Crime Reported in E and N Crime PS
ದಿನಾಂಕ: 28-06-2021 ರಂದು ಬೆಳಿಗ್ಗೆ 8-00 ಗಂಟೆಗೆ ಸಿಸಿಬಿ ಪಿಎಸ್.ಐ. ರಾಜೇಂದ್ರ ರವರಿಗೆ ಬಾತ್ಮೀದಾರರಿಂದ ಮಾದಕ ವಸ್ತುಗಳನ್ನು ಸಾಗಾಟ ಮಾಡಿಕೊಂಡು ಮಂಗಳೂರು ನಗರದಲ್ಲಿನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ತಂಡದವರು ಮಂಗಳೂರು ನಗರದ ಸುರತ್ಕಲ್ ನಿಂದ ದೇರಳಕಟ್ಟೆಗೆ TN-74-AW-4970ನೇ ನೊಂದಾಣೆ ಸಂಖ್ಯೆಯ ಕೆಂಪು ಬಣ್ಣದ ಕಾರಿನಲ್ಲಿ ಹೋಗುತ್ತಿದ್ದರೆಂಬ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಹೊರಟು ಬೆಳಿಗ್ಗೆ 10-00 ಗಂಟೆಗೆ ದೇರಳಕಟ್ಟೆ ಅಂಚೆ ಕಛೇರಿ ಬಳಿಯಲ್ಲಿ TN-74-AW-4970 ನೇ ಕಾರು ಇದ್ದು, ಅಂಚೆ ಕಛೇರಿಯ ಒಳಗಡೆಯಿಂದ ರಟ್ಟು ಬಾಕ್ಸ್ ನ್ನು ತೆಗೆದುಕೊಂಡು ಕಾರಿನಲ್ಲಿ ಬಂದು ಕುಳಿತುಕೊಂಡವರನ್ನು ಕಾರನ್ನು ಮುಂದಕ್ಕೆ ಚಲಾಯಿಸಿದ ಸಮಯ ನಮ್ಮ ಇಲಾಖಾ ವಾಹನದ ಸಹಾಯ ದಿಂದ ತಡೆಗಟ್ಟಿ ಕಾರಿನ ಬಳಿಗೆ ಹೋಗಿ ಕಾರಿನಲ್ಲಿದ್ದ ಅಜ್ಮಲ್ ಟಿ, ಪ್ರಾಯ(24), ಮತ್ತು ಮಿನಿ ರಶ್ಮಿ,ಪ್ರಾಯ(27), ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಿಸಿ ಕಾರಿನ ಹಿಂಬದಿಯ ಸೀಟಿನಲ್ಲಿರಿಸಿದ್ದ ಅಂಚೆ ಕಛೇರಿಯಿಂದ ಪಡೆದುಕೊಂಡ ಪಾರ್ಸೆಲ್ ನ್ನು ಪರಿಶೀಲಿಸಿ ಅದರಲ್ಲಿದ್ದ ರೂ. 1,20,000/- ಮೌಲ್ಯದ ಒಟ್ಟು 1 ಕೆ ಜಿ 236 ಗ್ರಾಂ ತೂಕದ ಹೈಡ್ರೋವೀಡ್ ಗಾಂಜಾವನ್ನು, ಅಜ್ಮಲ್ ವಶದಲ್ಲಿದ್ದ ರೂ. 10,000/- ಮೌಲ್ಯದ ಆಪ್ಯಲ್ ಕಂಪೆನಿಯ ಐ ಫೋನ್, ಮಿನಿರಶ್ಮಿ ಎಂಬಾಕೆಯ ವಶದಲ್ಲಿದ್ದ ಒಪ್ಪೊ ಕಂಪೆನಿಯ ರೂ. 10,000/- ಮೌಲ್ಯದ ಮೊಬೈಲನ್ನು ಮಾದಕ ವಸ್ತುವನ್ನು ಹೊಂದಿದ್ದ ರೂ. 6,00,000/- ಮೌಲ್ಯದ TN-74-AW-4970ನೇ ಹುಂಡೈ ಸಾಂಟ್ರೋ ಕಾರನ್ನು ಸ್ವಾಧೀನಪಡಿಸಿದ್ದು, ಆರೋಪಿತರುಗಳಿಂದ ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ ರೂ. 7,40,000/- ಆಗಬಹುದು ಎಂಬಿತ್ಯಾದಿಯಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿಯಂತೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ.
2) ದಿನಾಂಕ 29-06-2021 ರಂದು ಇ&ಎನ್ ಸಿಪಿಎಸ್ ಠಾಣೆಯ ಹೆಚ್ ಸಿ ಸತೀಶ್.ಎಂ ರವರಿಗೆ ಮದ್ಯಾಹ್ನ 12-30 ಗಂಟೆಗೆ ಮಂಗಳೂರು ನಗರದ ಪಂಪುವೆಲ್ ನಲ್ಲಿರುವ ಫಾದರ್ ಮುಲ್ಲರ್ಸ್ ಕನ್ವೆನ್ಶನ್ ಸೆಂಟರ್ ನ ದ್ವಾರದ ಬಳಿಯಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದು, ಅವರುಗಳು ನಶೆಯಲ್ಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದಾಗಿ ಬಾತ್ಮಿದಾರರಿಂದ ಮಾಹಿತಿ ಬಂದ ಮೇರೆಗೆ, ಠಾಣಾ ಸಿಬ್ಬಂದಿಯವರೊಂದಿಗೆ ಹೊರಟು ಮಾಹಿತಿ ಬಂದ ಸ್ಥಳಕ್ಕೆ ತೆರಳಿ ನಶೆಯಲ್ಲಿದ್ದ ಮಧುಕುಮಾರ್ ಮತ್ತು ಬಳುಸನಿ ನಾಗೇಶ್ ಎಂಬವರನ್ನು ವಶಕ್ಕೆ ಪಡೆದು ಅವರು ಗಾಂಜಾ ಸೇದಿರುವ ಬಗ್ಗೆ ಒಪ್ಪಿಕೊಂಡಂತೆ ಮಾಧಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಲ್ಲಿ ಆಪಾದಿತರು ಮಾಧಕ ವಸ್ತು ಸೇದಿರುವುದು ದೃಢಪಟ್ಟಿರುವುದರಿಂದ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in Traffic North PS
ದಿನಾಂಕ:28-06-2021 ರಂದು ಸಮಯ ರಾತ್ರಿ 20-00 ಗಂಟೆಗೆ ಪಿರ್ಯಾದಿದಾರರಾದ ಪ್ರಜ್ವಲ್ ಆಚಾರ್ಯರವರ ತಮ್ಮ ಪ್ರತಾಪ್ ಆಚಾರ್ಯರವರು ಅವರ ತಾಯಿ ಜಯಂತಿರವರ ಬಾಬ್ತು KA20EU9618 ನೇ ನಂಬ್ರದ ಮೋಟಾರ್ ಸೈಕಲನ್ನು ಕಿನ್ನಿಗೋಳಿ- ಶಿಬರೂರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬಟ್ಟಕೋಡಿ ಬಳಿ ತಲುಪಿದಾಗ ಶಿಬರೂರು ಕಡೆಯಿಂದ ಕಿನ್ನಿಗೋಳಿ ಕಡೆಗೆ KA19MF5918 ನೇ ನಂಬ್ರದ ಕಾರನ್ನು ಅದರ ಚಾಲಕ ವಿನೋದ್ ಎಂಬುವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಾಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬೇರೊಂದು ವಾಹನವನ್ನು ಬಲಭಾಗದಿಂದ ಒವರ್ ಟೇಕ್ ಮಾಡಿ ಬಂದು ಪ್ರತಾಪ್ ಆಚಾರ್ಯರವರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿ ಪರಿಣಾಮ ಪ್ರತಾಪ್ ಆಚಾರ್ಯರವರು ಮೋಟಾರ್ ಸೈಕಲ್ ಸಮೇತ ರಸ್ತೆಗ ಬಿದ್ದು ಅವರ ಬಲಕಾಲಿನ ತೊಡೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರ್ಯಾದಿ ಸಾರಾಂಶ.
Crime Reported in Traffic South PS
ದಿನಾಂಕ 29-06-2021 ರಂದು ಪಿರ್ಯಾದಿದಾರರಾದ ಶ್ರೀ ನೆವಿಲ್ ಗ್ಲ್ಯಾನಿ ಡಿಸೋಜಾ ರವರು ಅವರ ಬಾಬ್ತು ಸ್ಕೂಟರ್ ನಂಬ್ರ KA-19-HF-7262 ನೇದನ್ನು ಅವರ ಮನೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಸಮಯ ಸುಮಾರು ಮದ್ಯಾಹ್ನ 3-30 ಗಂಟೆಗೆ ಪಡೀಲ್ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಬಿ ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ನಂಬ್ರ :KA-51-MC-8749 ನೇದರ ಸವಾರ ಪೃಥ್ವಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಎಡ ಕಾಲಿನ ಹಿಮ್ಮಡಿ ರಕ್ತ ಗಾಯ,ಎಡ ಗೈ ತರಚಿದ ಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಕಾರಿನ ಚಾಲಕ ಅವರ ಕಾರಿನಲ್ಲೇ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಅವರನ್ನು ಒಳರೋಗಿಯಾಗಿ ದಾಖಲಿಸಿರುತ್ತಾರೆ