ಅಭಿಪ್ರಾಯ / ಸಲಹೆಗಳು

 Crime Reported in  Mangalore Women PS

ದಿನಾಂಕ 29-07-2021 ರಂದು ರಾತ್ರಿ 19.30 ಗಂಟೆಗೆ RAYIKATTE 3RD CROSS, KULURU ನಿವಾಸಿ ಈ ಪ್ರಕರಣದ ಪಿರ್ಯಾದಿದಾರರಾದ ಶ್ರೀಮತಿ ರಾಜೇಶ್ವರಿ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರ ಮನೆಯ ನೆರೆಕರೆಯವರಾದ ದೀಪಕ್ ರೈ ಮತ್ತು ಕ್ಲೋಡಿಯಂ ಎಂಬುವರು ಪಿರ್ಯಾದಿದಾರರ ಮನೆಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿ, ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿ ಪಿರ್ಯಾದಿದಾರರ ತಲೆಗೆ ಕಲ್ಲು ಎತ್ತಿ ಬಿಸಾಡುವಾಗ ಆ ಕಲ್ಲು ಪಿರ್ಯಾದಿದಾರರ ಮಗನಾದ ದಿಶಾಂತ್ ರೈ ಗೆ ತಗುಲಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಆಡ್ಮಿಟ್ ಮಾಡಿರುತ್ತಾರೆ.  ಅಲ್ಲದೇ ಪಿರ್ಯಾದಿದಾರರ ಇನ್ನೊಬ್ಬ ಮಗಳಾದ ದೀಕ್ಷಾಳನ್ನು ಕಿಡ್ನಾಪ್ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆಂಬಿತ್ಯಾದಿ.

Crime Reported in  Urva PS

ದಿನಾಂಕ 29-07-2021 ರಂದು ಪಿರ್ಯಾದಿದಾರರಾದ ಶ್ರೀಮತಿ ವಸಂತಿ ಕೆ. ಶೆಣೈ ಎಂಬವರು ತನ್ನ ಬಾಬ್ತು Yamaha fascino ಸ್ಕೂಟರ್ ನಂಬ್ರ KA-19-EZ-6889 ನೇದರಲ್ಲಿ ತಾಯಿ ಮನೆಯಾದ ಕುಂಟಿಕಾನದಿಂದ ಮಗಳಾದ ಮೇಧಾ ಅಕ್ಷರ ಶೆಣೈಳನ್ನು ಸ್ಕೂಟರ್ ನಲ್ಲಿ ಕರೆದುಕೊಂಡು ಕೋಟೆಕಣಿ ರಸ್ತೆಯಲ್ಲಿ ಹೋಗುತ್ತಿರುವಾಗ ಸಮಯ ರಾತ್ರಿ 08.30 ಸುಮಾರಿಗೆ ಕೋಟೆಕಣಿ ವಿಕೆ ಪಾರ್ಕ್ ಆಪಾರ್ಟ್ ಮೆಂಟ್ ನ  ಹತ್ತಿರ ತಲುಪಿದಾಗ ಅವರ ಹಿಂದಿನಿಂದ ಬಂದ ಬಿಳಿ ಬಣ್ಣದ ಸ್ಕೂಟರ್ ನಲ್ಲಿ ಬಂದ ಹಳದಿ ಬಣ್ಣದ ಟೀ-ಶರ್ಟ್ ಧರಿಸಿರುವ ಸುಮಾರು 28-30 ವರ್ಷದ ಓರ್ವ ಆಪರಿಚಿತ ವ್ಯಕ್ತಿ ಅವರ ಸ್ಕೂಟರ್ ಬಳಿ ಬಂದು ಅವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಕರಿಮಣಿ ಸರವನ್ನು ಎಳೆದುಕೊಂಡು ಅರ್ಧ ಚಿನ್ನದ ಕರಿಮಣಿ ಸರದೊಂದಿಗೆ ಸ್ಕೂಟರ್ ಸಮೇತ ಉರ್ವಾಸ್ಟೋರ್ ಕಡೆಗೆ ಪರಾರಿಯಾಗಿರುತ್ತಾನೆ ಚಿನ್ನದ ಕರಿಮಣಿ ಸರದ ಒಟ್ಟು ತೂಕ 24 ಗ್ರಾಂ ಆಗಿದ್ದು ಕಸಿದು ತುಂಡಾದ ಅರ್ಧ ಚಿನ್ನದ ಕರಿಮಣಿ ಸರದ ಅಂದಾಜು ಮೌಲ್ಯ ರೂಪಾಯಿ 55,000/- ಆಗಬಹುದು ಎಂಬಿತ್ಯಾದಿ.

Crime Reported in  Mangalore East PS

ಪಿರ್ಯಾದಿ Gundappa Rathod ರವರು ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು ಪ್ರಸುತ್ತ ಪಿ ವಿ ಎಸ್ ಕಲಾಕುಂಜ ರಸ್ತೆಯ ಬಸ್ತಿಕರ ಹಾರ್ಡ್ ವೇರ್ ಅಂಗಡಿ ಬಳಿ ಬಾಡಿಗೆಗೆ ವಾಸ ಮಾಡಿಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 27/07/2021 ರಂದು ಪಿರ್ಯಾದಿದಾರರು ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು ಬೆಳಿಗ್ಗೆ ಸುಮಾರು 9.00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಮಾವನಾದ ಸಂಗಪ್ಪ ಭೋಜಪ್ಪ ಚೌವಣ ರವರು (45) ಬಾಗಲಕೋಟೆಯ ಇಲಕಲ್ ನಿಂದ ಬಂದಿದ್ದು ಬೆಳಿಗ್ಗೆ ಸುಮಾರು 9.30 ಗಂಟೆ ಸಮಯಕ್ಕೆ ಅಂಗಡಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು ವಾಪಸ್ಸು ಈ ವರೆಗೆ ವಾಪಸ್ಸು ಮನೆಗೂ ಬಾರದೇ ಅವರ ಸ್ವಂತ ಊರಿಗೆ ಹೋಗದೆ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

ಕಾಣೆಯಾದ ಮನುಷ್ಯನ ಚಹರೆಗಳು

ಹೆಸರು: ಸಂಗಪ್ಪ ಭೋಜಪ್ಪ ಚೌಹಾಣ (45)

ಎತ್ತರ: ಸುಮಾರು “4”ಅಡಿ 9 ಇಂಚು

ಬಣ್ಣ: ಗೋಧಿ ಮೈಬಣ್ಣ, ದುಂಡು ಮುಖ, ಸಾಧರಣ ಮೈಕಟ್ಟು

ಬಟ್ಟೆ: ಬಿಳಿ ಕಚ್ಚೆ,ಬಿಳಿ ತುಂಬು ತೋಳಿನ ಬನಿಯಾನ ಧರಿಸಿದ್ದು

ಭಾಷೆ: ಕನ್ನಡ,ಲಮಾಣಿ ಭಾಷೆ ಮಾತನಾಡುತ್ತಾನೆ.

Crime Reported in  Traffic South PS

 ದಿನಾಂಕ :29.07.2021 ರಂದು  ಪಿರ್ಯಾದಿದಾರರಾದ ಜಯಶ್ರೀ ಯವರು  ಅವರ ಮನೆಯಿಂದ ಕೆಲಸದ ನಿಮಿತ್ತ ತೊಕ್ಕೊಟ್ಟಿಗೆ ನಡೆದುಕೊಂಡು ಬರುತ್ತಿರುವ ಸಮಯ ಸುಮಾರು ಬೆಳಿಗ್ಗೆ 8-45 ಗಂಟೆಗೆ ತೊಕ್ಕೊಟ್ಟು ಉಳ್ಳಾಲ ಬೈಲ್ ಬಳಿಯ ರಸ್ತೆಬದಿ ತಲುಪಿದಾಗ ಉಳ್ಳಾಲ ಮಾಸ್ತಿಕಟ್ಟೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ  ಸ್ಕೂಟರ್ ನಂಬ್ರ:KA-19-EY-3493 ನೇದರ ಸವಾರ ಮೊಹಮ್ಮದ್ ಶಮೀಮ್ ಎಂಬಾತನು ಸ್ಕೂಟರ್ ನ್ನು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು  ಜಯಶ್ರೀ ಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ತಲೆಗೆ ಗುದ್ದಿದ ರೀತಿಯ ತೀವ್ರ ಸ್ವರೂಪದ ರಕ್ತಗಾಯ ಮತ್ತು ಎಡಗೈಗೆ ತರಚಿದ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಕೂಡಲೇ  ಅವರನ್ನು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ .ಎಂಬಿತ್ಯಾದಿ.ಈ ಅಪಘಾತದಿಂದ ಸ್ಕೂಟರ್ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 30-07-2021 07:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080