ಅಭಿಪ್ರಾಯ / ಸಲಹೆಗಳು

Crime Reported in  Cyber Crime PS

ದಿನಾಂಕ: 28/05/2021 ರಂದು ಪಿರ್ಯಾದಿದಾರರ ಮೊಬೈಲ್ ಸಂಖ್ಯೆಗೆ ಏರ್ಟೆಲ್ ಸಿಮ್ ವೆರಿಫಿಕೇಷನ್ ಬಗ್ಗೆ ದಾಖಲಾತಿ ಪರಿಶೀಲನೆ ಬಾಕಿ ಇದ್ದು ದಾಖಲಾತಿಗಳನ್ನು ಸಲ್ಲಿಸದಿದ್ದಲ್ಲಿ  ಸೇವೆ ಸ್ಥಗಿತಗೊಳ್ಳುವುದಾಗಿಯೂ, ಈ ಬಗ್ಗೆ 8388804277 ನಂಬ್ರಕ್ಕೆ ಸಂಪರ್ಕಿಸುವಂತೆ ಸಂದೇಶ ಬಂದಿದ್ದು, ಅದನ್ನು ನಂಬಿದ ಪಿರ್ಯಾದಿದಾರರು ಸದ್ರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿದಲ್ಲಿ ಕರೆಯನ್ನು ಸ್ವೀಕರಿಸಿದ ಅಪರಿಚಿತ ವ್ಯಕ್ತಿಯು ದಾಖಲಾತಿ ಪರಿಶೀಲನೆಯ ಬಗ್ಗೆ ಲಿಂಕ್ ಒಂದನ್ನು ಪಿರ್ಯಾದಿದಾರರ ಮೊಬೈಲ್ ಗೆ ಕಳುಹಿಸಿಕೊಟ್ಟಿದ್ದು ಅದರಂತೆ ಸದ್ರಿ ಲಿಂಕ್ ಮುಖಾಂತರ ಒಂದು ಆಪ್ ನ್ನು ಡೌನ್ ಲೋಡ್ ಮಾಡಿ ಅದರ ಮುಖಾಂತರ ರಿಚಾರ್ಜ್ ಮಾಡಲು ತಿಳಿಸಿದ ಮೇರೆಗೆ, ಅವರು ತನ್ನ  ಬ್ಯಾಂಕ್ ಖಾತೆ ವಿವರಗಳನ್ನು ಸದ್ರಿ ಆಪ್ ಮುಖಾಂತರ ದಾಖಲಿಸಿ ಮೊಬೈಲ್ ರಿಚಾರ್ಜ್ ಮಾಡಿರುತ್ತಾರೆ. ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರು ಆಪ್ ಮುಖಾಂತರ ದಾಖಲಿಸಿದ ಮಾಹಿತಿಗಳನ್ನು ಸಂಗ್ರಹಿಸಿ ಪಿರ್ಯಾದಿಯ SBI ಖಾತೆಯಿಂದ ಹಂತ ಹಂತವಾಗಿ ರೂ 74989/- ಗಳನ್ನು ಬೇರೆ ಖಾತೆಗಳಿಗೆ ಅನಧಿಕೃತವಾಗಿ ವರ್ಗಾಯಿಸಿ  ಮೋಸ ಮಾಡಿರುತ್ತಾನೆ ಎಂಬಿತ್ಯಾದಿ.

Crime Reported in  Mangalore Rural PS

ಪಿರ್ಯಾದುದಾರರಾದ ಮೊಹಮ್ಮದ್ ನೌಪಾಲ್ ಎಂಬುವವರು ತಮ್ಮ ಅಣ್ಣ ಮೊಹಮ್ಮದ್ ಅಲ್ತಾಪ್ ಎಂಬವನೊಂದಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಅಡ್ಯಾರ ಪೆಟ್ರೋಲ್ ಪಂಪ್ ಬಳಿ ಮೊಹಮ್ಮದ್ ಅಲ್ತಾಪ್ ಎಂಬವರ ಲಾರಿಯನ್ನುಅದರ ಚಾಲಕ ವಿಶ್ವನಾಥ್ ಅನ್ ಲೋಡ್ ಮಾಡಿಕೊಂಡು ಬರುತ್ತಿರುವುದಾಗಿ ತಿಳಿಸಿರುವುದರಿಂದ ಫಿರ್ಯಾಧಿದಾರರು ಮತ್ತು ಅವರ ಅಣ್ಣ ಪೆಟ್ರೋಲ್ ಪಂಪ್ ಬಳಿ ಕಾಯಿತ್ತಿದ್ದಾಗ ಬೆಳಿಗ್ಗೆ 8.30 ರ ಸಮಯಕ್ಕೆ  ಲಾರಿಯ ಚಾಲಕರೊಡನೆ ಬೈಕಿನಲ್ಲಿ ಬಂದಾತ ಕಣ್ಣೂರಿನ ಪಜ್ಜು ಎಂಬಾತನು ಗಲಾಟೆ ಮಾಡಿತ್ತಿದ್ದು ಲಾರಿಯ ಎದುರು ಬಂದು ಅಡ್ಡಹಾಕಿ ಯಾರಿಗೋ ಬರಲು ತಿಳಿಸಿ ಆ ಸಮಯ ಸ್ವಿಪ್ಟ್ ಕಾರ್ ನಂಬ್ರ KA 19 MK 3219 ಕಾರ್ ನಲ್ಲಿ ಇಬ್ಬರು ಬಂದಿದ್ದು ಪಜ್ಜು ಮತ್ತು ಕಾರ್ ನಲ್ಲಿ ಬಂದವರಿಬ್ಬರು ನಾವು  ಜೈಲಿನಿಂದ ಬಂದಿರುತ್ತೇವೆ  ಎಂದು ಹೇಳಿ ಪಜ್ಜು ಎಂಬವರು ಮಹಮ್ಮದ್ ಅಲ್ತಾಪ್ ಎಂಬವರಿಗೆ ಕೈಯಿಂದ ಮುಖಕ್ಕೆ ಹೊಡೆದು ತಡೆಯಲು ಬಂದ  ಫಿರ್ಯಾದುದಾರರಿಗೆ ಚಾಕುವಿನಿಂದ ಬಲಬುಜಕ್ಕೆ ಚುಚ್ಚಿ ಕೈಯಿಂದ ಮುಕಕ್ಕೆ ಎಡ ಕೈಗೆ ಹೊಡೆದಿರುತ್ತಾರೆ ಲಾರಿಯ ಚಾಲಕನನ್ನು ಲಾರಿಯಿಂದ ಕೆಳಗೆ ಎಳೆದು ಚಾಲಕನಿಗೂ ಕೂಡಾ ಕೈಯಿಂದ ಹೊಡೆದು ಅವರನ್ನು ಕುರಿತು ಬೇವರ್ಸಿ ರಂಡೆ ಮಕ್ಕಳು ಇಲ್ಲಿ ನೀವು ಬಂದು ಗಲಾಟೆ ಮಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅವರು ಬಂದ ಕಾರ್ ಮತ್ತು ಬೈಕಿನಲ್ಲಿ ಹೋಗಿರುತ್ತಾರೆ ಕಾರ್ ನಲ್ಲಿ ಬಂದವರ ಪೈಕಿ ಒಬ್ಬರ ಹೆಸರು ಬಜಾಲ್ ನ ನೌಫಾಲ್ ಇನ್ನೊಬ್ಬರ ಹೆಸರು ತಿಳಿದು ಬಂದಿರುವುದಿಲ್ಲವಾಗಿ ಫಿರ್ಯಾದಿಯ ಸಾರಾಂಶ

Crime Reported in  Ullal PS

ದಿನಾಂಕ: 30-05-2021 ರಂದು ಪ್ರದೀಪ್ ಟಿ.ಅರ್. ಪಿಎಸ್ಐ ರವರು ಹೆಚ್.ಸಿ. ರಂಜಿತ್ ಮತ್ತು ಪಿಸಿ  ಚಿದಾನಂದ ರವರನ್ನು ಜೊತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ತಲಪಾಡಿ ಗ್ರಾಮದ ಅಗ್ರಿಗೋಲ್ಡ್ ಬಾಬ್ತು ಜಾಗದ ಗೇಟಿನ ಬದಿ ರಾ.ಹೆ. 66 ರ ರಸ್ತೆ ಬದಿಯಲ್ಲಿ ಬೆಳಿಗ್ಗೆ 10-30 ಗಂಟೆಗೆ ಒಂದು ಕಾರು ನಿಲ್ಲಿಸಿಕೊಂಡಿದ್ದು, ಅದರಲ್ಲಿ ಚಾಲಕರ ಸೀಟಿನಲ್ಲಿ ಒಬ್ಬ ಕುಳಿತುಕೊಂಡಿದ್ದವನ ಬಳಿಗೆ ಹೋಗಿ ವಿಚಾರಿಸಿದಾಗ ಆತನು ಕೇರ:ಳ ರಾಜ್ಯದವರನಾಗಿದ್ದು, ಆತನು ವಿನಾ ಕಾರಣ ಇಲ್ಲಿಗೆ ಮಾರುತಿ ಬ್ರಿಜಾ ಕಾರು ನಂಬ್ರ ಕೆಲ್ 14 ಪಿ 4013 ನೇದರಲ್ಲಿ ಸುತ್ತಾಡುತ್ತಾ ಘನ ಸರಕಾರದ ಮತ್ತು ಮಾನ್ಯ ಜಿಲ್ಲಾಧಿಕಾರಿಯವರ ಕೋವಿಡ್ 19 ಲಾಕ್ ಡೌನ್ ಅದೇಶವನ್ನು ಉಲ್ಲಂಘಿಸಿ, ಸಾಂಕ್ರಾಮಿಕ ಕೊರೋನಾ ವೈರಾಣು ಖಾಯಿಲೆಯನ್ನು ಸಮಾಜದಲ್ಲಿ ಹರಡಲು ಕಾರಣನಾಗಿರುತ್ತಾನೆ. ಈತನ ಹೆಸರು ಕೇಳಲಾಗಿ ಶಿವಸುಬ್ರಮಣ್ಯ ಪ್ರಸಾದ್ ಎಂಬುದಾಗಿ ತಿಳಿಸಿರುತ್ತಾರೆ. ಈತನು ಪ್ರಸ್ತುತಾ ದೇಶಾದ್ಯಂತ ಹರಡಿರುವ ಮಾನವ ಜೀವಕ್ಕೆ ಅಪಾಯಕಾರಿಯಾದ ಕೋವಿಡ್ 19 ಕೋರನಾ ವೈರಸ್ ಸಾಂಕ್ರಾಮಿಕ ರೋಗದ ಸೋಂಕು ಹರಡದಂತೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಿರುವ ಸರಕಾರದ ಅದೇಶವನ್ನು  ಉಲ್ಲಂಘಿಸಿರುವ ಶಿವಸುಬ್ರಮಣ್ಯ ಪ್ರಸಾದ್ ಎಂಬಾತನ ವಿರುದ್ದ ದಾಖಲಿಸಿದ ಪ್ರಕರಣದ ಸಾರಾಂಶ. 

2) ದಿನಾಂಕ:30-05-2021ರಂದು  ಫಿರ್ಯಾದಿದಾರರಾದ ವೆಂಕಟೇಶ್ ಎಎಸ್ಐ ರವರು ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ 11-00 ಗಂಟೆಗೆ ತೊಕ್ಕೊಟ್ಟು ಒಳಪೇಟೆಯಲ್ಲಿ ತಾತ್ಕಾಲಿಕವಾಗಿ ತೆರೆಯಲಾದ ತಾತ್ಕಾಲಿಕ ಮಾರುಕಟ್ಟೆಯ ಬಳಿಗೆ ಹೋದಾಗ ಅಲ್ಲಿನ ಯು.ಪಿ. ಅಲಿಯಬ್ಬ ಚಿಕನ್ ಸ್ಟಾಲ್ ಮಾಂಸ ಮಾರಾಟದ ಅಂಗಡಿಗೆ ಎದುರುಗಡೆಯಿಂದ ಶಟರ್ ಡೋರ್ ಮುಚ್ಚಿಕೊಂಡು ಒಳಗಡೆ ಸುಮಾರು 10-15 ಜನರು ಸೇರಿಕೊಂಡು ಮಾಂಸ ಮಾರಾಟ/ಖರೀದಿ ಮಾಡುತ್ತಿದ್ದು, ಸದ್ರಿ ಅಂಗಡಿಯ ಮಾಲಕರನ್ನು ವಿಚಾರಿಸಲಾಗಿ ಯು.ಪಿ. ಅಲಿಯಬ್ಬ ತಿಳಿಸಿದ್ದು, ಸದ್ರಿಯವರು ಘನ ಸರಕಾರದ ಮತ್ತು ಮಾನ್ಯ ಜಿಲ್ಲಾಧಿಕಾರಿಯವರ ಕೋವಿಡ್ 19 ಲಾಕ್ ಡೌನ್ ಅದೇಶವನ್ನು ಉಲ್ಲಂಘಿಸಿ, ಜನರನ್ನು ಸೇರಿಸಿಕೊಂಡು ಮಾಂಸ ವ್ಯಾಪಾರ ನಡೆಸಿದ್ದು, ಮಹಾಮಾರಿ ಮಾರಾಣಾಂತಿಕ ಸಾಂಕ್ರಾಮಿಕ ಕೊರೋನಾ ವೈರಾಣು ಖಾಯಿಲೆಯನ್ನು ಸಮಾಜದಲ್ಲಿ ಹರಡಲು ಕಾರಣನಾಗಿರುತ್ತಾರೆ.  ಇವರು ಪ್ರಸ್ತುತಾ ದೇಶಾದ್ಯಂತ ಹರಡಿರುವ ಮಾನವ ಜೀವಕ್ಕೆ ಅಪಾಯಕಾರಿಯಾದ ಕೋವಿಡ್ 19 ಕೋರನಾ ವೈರಸ್ ಸಾಂಕ್ರಾಮಿಕ ರೋಗದ ಸೋಂಕು ಹರಡದಂತೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಿರುವ ಸರಕಾರದ ಅದೇಶವನ್ನು  ಉಲ್ಲಂಘಿಸಿರುವ ಯು.ಪಿ. ಅಲಿಯಬ್ಬ ಎಂಬವರ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.

Crime Reported in  Moodabidre PS

ದಿನಾಂಕ: 30-05-2021 ರಂದು ಬೆಳಗ್ಗೆ 8.45 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಅಕ್ಕಳಾದ ಗುಲಾಬಿ(75) ಎಂಬುವರು ಮೂಡಬಿದರೆಯ ಸಾವಿರಕಂಬದ ಬಸದಿ ಬಳಿಯಿರುವ ಅಂಗಡಿಗೆ ಸಾಮಾನು ತರಲೆಂದು ನಡೆದುಕೊಂಡು ಹೋಗುತ್ತಿರುವಾಗ ಮೂಡಬಿದರೆ ಕಡೆಯಿಂದ ಅಲಂಗಾರು ಕಡೆಗೆ ಹೋರಟಿದ್ದ ಕೆ.ಎ-19-ಎಎ-5845 ನೇ ಆಟೋ ರಿಕ್ಷಾದ ಚಾಲಕನು  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗುಲಾಬಿ ಎಂಬುವರಿಗೆ ಡಿಕ್ಕಿ ಪಡಿಸಿದ್ದು ಡಿಕ್ಕಿ ಪಡಿಸಿದ ಅಪಘಾತದ ಪರಿಣಾಮ ಗುಲಾಬಿಯು ರಸ್ತೆಗೆ ಬಿದ್ದು ಅವರ ಮುಖ, ಕಿವಿ ಮತ್ತು ತಲೆಗೆ ರಕ್ತಗಾಯವಾಗಿರುವುದಾಗಿದೆ. ಆಟೋ ರಿಕ್ಷಾ ಚಾಲಕನು ಆಟೋ ರಿಕ್ಷಾವನ್ನು ನಿಲ್ಲಿಸದೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸದೇ ಠಾಣೆಗೆ ಮಾಹಿತಿ ನೀಡದೇ ಆಟೋ ರಿಕ್ಷಾದೊಂದಿಗೆ ಪರಾರಿಯಾಗಿರುತ್ತಾನೆ. ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 31-05-2021 04:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080