ಅಭಿಪ್ರಾಯ / ಸಲಹೆಗಳು

Crime Reported in  Mulki PS

ಪಿರ್ಯಾದಿ Kashimbi ದಾರರ ಮಗಳು ಅಪ್ಸಾನ (ಪ್ರಾಯ 19 ವರ್ಷ) ಎಂಬವಳು ಪಿರ್ಯಾದಿದಾರರ ಗಂಡ ಬಂದೇ ನವಾಝ್ ಮಕ್ಕಳಾದ ಮೆಹಬೂಬು, ಸಮೀರಾ, ಸಹನಾ, ಅಪ್ಸನಾ, ದೌಲ್ ಸಾಬ್ , ರವರೊಂದಿಗೆ ವಾಸಮಾಡಿಕೊಂಡಿದ್ದು, ಪಿರ್ಯಾದಿದಾರರು ತನ್ನ ಗಂಡ ಹಾಗೂ ಮಗ ದೌಲ್ ಸಾಬ್, ಮಗಳು ಅಪ್ಸನಾರೊಂದಿಗೆ ಲಿಂಗಪ್ಪಯ್ಯಕಾಡಿನ ನಾಗಬನದ ಹತ್ತಿರ ಶ್ರೀ ಸಾಯಿ ಕ್ಯಾಂಟೀನ್ ನಡೆಸಿಕೊಂಡಿದ್ದು, ದಿನಾಂಕ 26/07/2021 ರಂದು ಎಂದಿನಂತೆ ಪಿರ್ಯಾದಿದಾರರು ಹಾಗೂ ಇತರರು ಕ್ಯಾಂಟೀನ್ ನಲ್ಲಿರುವ ಸಮಯ ಪಿರ್ಯಾದಿದಾರರ ಮಗಳು ಅಪ್ಸನಾ ರಾತ್ರಿ 07.15 ಗಂಟೆ ಸಮಯಕ್ಕೆ ಬಹಿರ್ದೆಸೆಗೆಂದು ಹೇಳಿ ಮನೆಗೆ ತೆರಳಿದವಳು ವಾಪಾಸ್ ಕ್ಯಾಂಟೀನ್ ಗೂ ಬಾರದೇ, ಮನೆಗೂ ಬಾರದೇ, ಇತರ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುತ್ತಾಳೆ ಎಂಬಿತ್ಯಾದಿ

ಕಾಣೆಯಾದವರ ಚಹರೆ:-

ವಯಸ್ಸು- 19  ವರ್ಷ

ಎತ್ತರ – 4.5 ಅಡಿ

ಮೈಬಣ್ಣ - ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು

ಧರಿಸಿದ್ದ ಬಟ್ಟೆ – ಅರ್ಧ ತೋಳಿನ ನೀಲಿ ಬಣ್ಣದ ಹೂಗಳಿರುವ ನೈಟಿ ಹಾಗೂ ಕೆಂಪು ಬಿಳಿ ಮಿಶ್ರಿತ ಶಾಲು

Crime Reported in  Mangalore East  Traffic PS

ದಿನಾಂಕ: 30/07/2021 ರಂದು ಪಿರ್ಯಾದಿದಾರರಾದ ಪ್ರವೀಣ್ ರವರು ತನ್ನ ಬಾಬ್ತು ಸ್ಕೂಟರ್ ನಲ್ಲಿ ಕುಪ್ಪೆಪದವಿನಿಂದ ಮಂಗಳೂರಿಗೆ ಬರುತ್ತಿದ್ದಾಗ ಸಾಯಂಕಾಲ ಸಮಯ ಸುಮಾರು 5-30 ಗಂಟೆಗೆ ನಗರದ ಬಿಕರ್ನಕಟ್ಟೆ ಕೈಕಂಬ ಜಂಕ್ಷನ್ ಬಳಿ ರಾ.ಹೆ 73 ಕ್ಕೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂದಿನಿಂದ ಚಲಿಸುತ್ತಿದ್ದ KA19EJ2029 ನಂಬ್ರದ ಮೋಟಾರು ಸೈಕಲಿಗೆ ಮರೋಳಿ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ರಾ.ಹೆ 73 ರಲ್ಲಿ KA19MG9740 ನಂಬ್ರದ ಕಾರನ್ನು ಅದರ ಚಾಲಕ ರಾಮಕೃಷ್ಣ ಎಂಬಾತನು ದುಡುಕುತನ, ಹಾಗೂ ನಿರ್ಲಕ್ಷನತದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದು ಬಳಿಕ ಅದೇ ರಸ್ತೆಯ ಎಡ ಬದಿಯಲ್ಲಿ ಮರೋಳಿ ಕಡೆಯಿಂದ ಬಿಕರ್ನಕಟ್ಟೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿ ಗರ್ಭಿಣಿ ಮಹಿಳೆ ಶ್ರೀಮತಿ ಲತಾ ಶೆಟ್ಟಿ, ಪ್ರಾಯ: 35 ವರ್ಷ ಎಂಬುವರಿಗೆ ಹಿಂಬದಿಯಿಂದ ಡಿಕ್ಕಿಪಡಿಸಿದ್ದು ಡಿಕ್ಕಿಯ ರಭಸಕ್ಕೆ ಪಾದಾಚಾರಿ ಮಹಿಳೆಯು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಹಿಂಬದಿಗೆ ಎಸೆಯಲ್ಪಟ್ಟು ಕಾರಿನ ಅಡಿಯಲ್ಲಿ ಬಿದ್ದಿದ್ದು ಇದರಿಂದ ಸದ್ರಿ ಮಹಿಳೆಗೆ ತಲೆಗೆ ಗುದ್ದಿದ ರೀತಿಯ ಗಾಯ, ಹಣೆಯಲ್ಲಿ ಚರ್ಮ ಹರಿದ ಗಾಯ, ಹಾಗೂ ಕೈಕಾಲುಗಳಿಗೆ ತರಚಿದ ರೀತಿಯ ಗಾಯವಾಗಿದ್ದು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ

ಇತ್ತೀಚಿನ ನವೀಕರಣ​ : 31-07-2021 07:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080