ಅಭಿಪ್ರಾಯ / ಸಲಹೆಗಳು

Crime Reported in Mangalore Rural PS

ಪಿರ್ಯಾದಿ Kusuma ದಾರರ ಗಂಡನಾದ ಯೋಗಿಶ್ (53) ಎಂಬವರು ಕುಡಿತದ ಚಟ ಹೊಂದಿದ್ದು 1 ವಾರದಿಂದ ಜ್ವರ ಬಂದು ಚಿಕಿತ್ಸೆ ಕೊಡಿಸಿದರು ಗುಣವಾಗದೆ ಮತ್ತು ಕುಡಿಯಲು ಸಿಗದ ಕಾರಣದಿಂದ ಮಾನಸಿಕವಾಗಿ ಖಿನ್ನತೆಯಲ್ಲಿದ್ದವರು ದಿನಾಂಕ 01/11/2021 ರಂದು ರಾತ್ರಿ ಸಮಯ ಮಲಗಿದ್ದವರನ್ನು ಪಿರ್ಯಾದಿದಾರರು ಮುಂಜಾನೆ 3 ಗಂಟೆಗೆ ಎದ್ದು ನೋಡಿದಲ್ಲಿ ಕಂಡುಬರದೆ ಬೇರೆ ಕಡೆ ಹುಡುಕಾಡಿದರೂ ಪತ್ತೆಯಾಗದೆ ಕಾಣೆಯಾಗಿರುವುದಾಗಿದೆ.

 

ಕಾಣೆಯಾದವರ ಚಹರೆ ವಿವರ

ಹೆಸರು- ಯೋಗಿಶ್ ಪೂಜಾರಿ

ವಯಸ್ಸು-53, ಎತ್ತರ- 5 ಅಡಿ 8 ಇಂಚು

ಮೈಬಣ್ಣ- ಎಣ್ಣೆಗಪ್ಪು ಮೈಬಣ್ಣ, ಜಾತಿ- ಹಿಂದೂ ಬಿಲ್ಲವ

ಮಾತನಾಡುವ ಭಾಷೆ- ತುಳು, ಕನ್ನಡ, ಹಿಂದಿ, ಮರಾಠಿ

ವಿದ್ಯಾರ್ಹತೆ-7 ನೇ ತರಗತಿ

 

Crime Reported in Traffic North PS

ದಿನಾಂಕ 01-11-2021 ರಂದು ಪಿರ್ಯಾದಿ Imthiyaz ದಾರರ ಬಾವನಾದ ಮೆಹಬೂಬ್ ಸಾಬ್ (43) ರವರು ಎಂದಿನಂತೆ ತನ್ನ ಕೂಲಿ ಕೆಲಸ ಮುಗಿಸಿಕೊಂಡು ಅವರ ಬಾಬ್ತು ಕೆಎ19 ಇಕೆ 4886 ನಂಬ್ರದ ಸ್ಕೂಟರ್ ನಲ್ಲಿ ಕೋಡಿಕಲ್ ನಿಂದ ಕೂಳೂರು ಮಾರ್ಗವಾಗಿ ಕುಂಜತ್ತಾ ಬೈಲು ದೇವಿ ನಗರ ಕಡೆಗೆ ಹೊಗುತ್ತಾ ರಾತ್ರಿ ಸಮಯ ಸುಮಾರು 08.00 ಗಂಟೆಗೆ ಕೂಳೂರು ಉಲ್ಲಾಸ್ ನಗರ 1ನೇ ಕ್ರಾಸ್ ನ ತೆರೆದ ಡಿವೈಡರ್ ನ  ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಮೆಹಬೂಬ್ ಸಾಬ್ ರವರು ಇಳಿಜಾರು ಕಾಂಕ್ರೀಟ್ ತಿರುವು ರಸ್ತಯಲ್ಲಿ ತನ್ನ ಸ್ಕೂಟರ್ ನ ಹತೋಟಿ ತಪ್ಪಿ ಸ್ಕೂಟರ್ ನ ಸಮೀಪ ಕಾಂಕ್ರೀಟ್ ರಸ್ತಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ರಕ್ತ ಗಾಯವಾಗಿ ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆ ಗೆ ಸಾಗಿಸಲ್ಪಟ್ಟವರು ಚಿಕಿತ್ಸೆ ಫಲಕಾರಿಯಾಗದೇ  ರಾತ್ರಿ 09.23 ಗಂಟೆಗೆ ಮ್ರತ ಪಟ್ಟಿದ್ದಾಗಿದೆ

 

Crime Reported in  Mangalore South PS

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ  ಅನಂತ ಮುರುಡೇಶ್ವರ್ ರವರು ರವರು ದಿನಾಂಕ: 01-11-2021 ರಂದು ರಾತ್ರಿ  ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಸಿಬ್ಬಂದಿಯವರ ಜೊತೆ ರಾತ್ರಿ ವೇಳೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ದಿನಾಂಕ: 02-11-2021 ರಂದು  ಬೆಳಗ್ಗಿನ ಜಾವ ಸುಮಾರು 02-30 ಗಂಟೆ ವೇಳೆಗೆ ಮಂಗಳೂರು ನಗರದ  ದಕ್ಕೆಯಲ್ಲಿರುವ ಮೊಬೈಲ್ ಶಾಫ್ ಬಳಿ ತಲುಪಿದಾಗ ಆರು ಜನ ವ್ಯಕ್ತಿಗಳು ತನ್ನ  ಇರುವಿಕೆಯನ್ನು ಮರೆಮಾಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಕಂಡು ಸಂಶಯಗೊಂಡು ಟಾರ್ಚ್ ಬೆಳಕಿನ ಸಹಾಯದಿಂದ ಅವರ ಹತ್ತಿರ ಹೋಗುವಷ್ಟ ರಲ್ಲಿ ಓಡಿ ಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ವಿಚಾರಿಸಿದಾಗ ಅವರ  ಹೆಸರು 1. ಮಣಿಕಂಠ, ಪ್ರಾಯ 40 ವರ್ಷ,  ಮಹಾಲಕ್ಷ್ಮೀ ಬಡಾವಣೆ ಕಾಲೋನಿ, ಗೊಪ್ಪನ ಕೊಪ್ಪ, ಹುಬ್ಬಳ್ಳಿ, 2. ಮೊಹಮ್ಮದ್ ಸದಾಕತುಲ್ಲಾ, ಪ್ರಾಯ 39 ವರ್ಷ,   2ನೇ ವಾರ್ಡ್, ರಾಮನಾಥ್ ಪುರ ಜಿಲ್ಲೆ. ತಮಿಳುನಾಡು, 3. ಸೈಜು ಎಸ್. ಪ್ರಾಯ 42 ವರ್ಷ,  ಕರಿಪುರ ಪಂಚಾಯತ್, ಕೊಲ್ಲಂ ಜಿಲ್ಲೆ, ಕೇರಳ ರಾಜ್ಯ. 4. ಜಾನು ಬ್ರೈಟ್, ಪ್ರಾಯ 36 ವರ್ಷ,  ಕಾಜಿರ ವಿಲೈ ಹೌಸ್, ತೊಳಾಯವಟ್ಟಂ, ಅಂಚೆ, ಕನ್ಯಾಕುಮಾರಿ, ತಮಿಳುನಾಡು 5. ಪ್ರೇಮರಾಜ್, ಪ್ರಾಯ 47 ವರ್ಷ,  ಸಮಾಜವಾಡಿ ಕಾಲೋನಿ, ಎಡಕಾಡ್ ಪಂಚಾಯತ್, ಕಣ್ಣೂರು ಜಿಲ್ಲೆ. ಕೇರಳ ರಾಜ್ಯ. 6. ಅಶ್ರಫ್, ಪ್ರಾಯ 25 ವರ್ಷ,  ರಾಮನಾಥಪುರಂ, ತಮಿಳುನಾಡು. ಎಂಬುವುದಾಗಿ ತಿಳಿಸಿದ್ದು ಇವರು ಅಪರ ವೇಳೆಯಲ್ಲಿ ಮೇಲಿನ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದುದ್ದರಿಂದ ಇವರುಗಳು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ರಾತ್ರಿ ವೇಳೆ ಹೊಂಚು ಹಾಕುತ್ತಿರುವುದಾಗಿ ಇವರ ವರ್ತನೆಯಿಂದ ಬಲವಾದ ಸಂಶಯ ಬಂದಿರುವುದರಿಂದ ಅವರುಗಳ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.

 

2)ಪಿರ್ಯಾದಿದಾರರಾದ ಶ್ರೀಮತಿ ಮಾಯಾ ಶಿಜು (41) ಇವರ ಗಂಡ ಶಿಜು ಎಂಬುವರು ಸುಮಾರು  08 ವರ್ಷಗಳಿಂದ ಮಂಗಳೂರು ಕೇಂದ್ರ ರೈಲ್ವೆಯಲ್ಲಿ ಇಲೇಕ್ಟ್ರೀಕಲ್ ಘಟಕದಲ್ಲಿ ಹಿರಿಯ ಟೆಕ್ನಿಶಿಯನ್ ಆಗಿ  ಕೆಲಸ ಮಾಡುತ್ತಿದರು, ಇವರು ನಗರದ ಎಕ್ಕೂರು ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ, ಇವರು ದಿನಾಂಕ;- 26/10/2021 ರಂದು ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್ಸು ಬಾರದೆ ಇದ್ದು, ಕಾಣೆಯಾಗಿರುತ್ತಾರೆ, ಅವರ ಮೊಬೈಲ್ ಕರೆ ಮಾಡಿದಲ್ಲಿ ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿರುತ್ತದೆ. ಪಿರ್ಯಾದಿದಾರು ಕೂಡಲೇ ಸಂಬಂಧಿಕರನ್ನು, ಪರಿಚಯದವರನ್ನು ಹಾಗೂ ಇಲಾಖೆಯ ಇತರ ಸಿಬ್ಬಂದಿಗಳನ್ನು ಮತ್ತು ಸ್ನೇಹಿತರನ್ನು ವಿಚಾರಿಸಿದಾಗ ಯಾವುದೇ ಮಾಹಿತಿ ಲಬ್ಯವಿರುವುದಿಲ್ಲ. ಅದ್ದರಿಂದ ಕಾಣೆಯಾದ ಶಿಜು ಪ್ರಾಯ 43 ವರ್ಷ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ. ಕಾಣೆಯಾದವರ ಚಹರೆ;ಗೋಧಿ ಮೈ ಬಣ್ಣ , ಸಾಧಾರಣ ಶರೀರ,ಎತ್ತರ 6’ .2’’  (172) cmಕಪ್ಪು ಬಣ್ಣದ ಪ್ಯಾಂಟ್, ಬೂದು ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ. ಮಲೆಯಾಳಿ, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ  ಮಾತನಾಡುತ್ತಾರೆ.

Crime Reported in Urva PS   

ಪಿರ್ಯಾದಿ Lokanatha ದಾರರು ಕುಂಟಿಕಾನದಲ್ಲಿರುವ ಭಾರತ್ ಆಟೋ ಕಾರ್ಸ್ ಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ: 13-10-2021 ರಂದು ಬೆಳಿಗ್ಗೆ 07.50 ಗಂಟೆಗೆ ಸದರಿ ಕಾರ್ ಕಂಪೆನಿಗೆ ಕೆಲಸಕ್ಕೆ ಹೋಗುವರೇ ಪಿರ್ಯಾದಿದಾರರ  ಬಾಬ್ತು KA-19-X-2005 ನೇ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲುಸ್ ಬೈಕನ್ನು ಮಂಗಳೂರಿನ ಕುಂಟಿಕಾನದ  ಪ್ಲೈಓವರ್ ಕೆಳಗೆ ನಿಲುಗಡೆ ಮಾಡಿ ಕೆಲಸಕ್ಕೆ ಹೋಗಿದ್ದು, ಕೆಲಸ ಮುಗಿಸಿ ವಾಪಾಸು ರಾತ್ರಿ ಸಮಯ 20.00 ಗಂಟೆಗೆ ಪಿರ್ಯಾದಿದಾರರು ನಿಲುಗಡೆ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ ಅವರ ಬಾಬ್ತು ಮೋಟಾರು ವಾಹನ ಇರದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಬೈಕ್ 2007 ನೇ ಮಾದರಿಯದಾಗಿದ್ದು ಕಪ್ಪು ಬಣ್ಣದ್ದಾಗಿರುತ್ತದೆ. ಇದರ ಚಾಸೀಸ್ ನಂಬ್ರ 07L16F17487, ಇಂಜಿನ್ ನಂಬ್ರ: 07L15E37937 ಆಗಿರುತ್ತದೆ. ಇದರ ಅಂದಾಜು ಮೌಲ್ಯ 15000/- ಆಗಿರುತ್ತದೆ. ಪಿರ್ಯಾದಿದಾರರು ಮಂಗಳೂರು ನಗರದಾದ್ಯಂತ ಹುಡುಕಾಡಿದಲ್ಲಿ ಈವರೆಗೆ ಸಿಗದೇ ಇದ್ದುದರಿಂದ  ದಿನ ದಿನಾಂಕ: 01-11-2021 ರಂದು ಠಾಣೆಗೆ ಬಂದು  ದೂರನ್ನು ನೀಡಿರುವುದಾಗಿದೆ. 

Crime Reported in Panambur PS

ಪಿರ್ಯಾದಿ DEEKSHITH ದಾರರು ಎರ್ ಕಂಡಿಷನಿಂಗ್ ಸರ್ವೀಸ್ ಕೆಲಸ ಮಾಡಿಕೊಂಡ್ಡಿರುತ್ತಾರೆ.  ದಿನಾಂಕ: 01-11-2021 ರಂದು ಪಿರ್ಯಾಧಿದಾರರು ತನ್ನ ಸ್ನೇಹಿತಾರದ ನಿತೇಶ್, ತಿಲಕ್, ಕಾರ್ತಿಕ್, ಸುಪ್ರೀತ್, ಚರಣ್, ದೀಕ್ಷೀತ್ , ನಿರೂಪ್  ಶಶಾಂಕ್ ರವರುಗಳೊಂದಿಗೆ ತಣ್ಣೀರುಬಾವಿ ಸಮೀಪದ IOC  ಹಿಂಭಾಗದ ಸಮುದ್ರ  ಬದಿಗೆ ವಿಹಾರಕ್ಕೆಂದು ಬಂದಿದ್ದು, ಮಧ್ಯಾಹ್ನ ಸುಮಾರು 03-30 ಗಂಟೆಗೆ ಪಿರ್ಯಾಧಿದಾರರ ಸ್ನೇಹಿತ ತಿಲಕ್ ರಾಜ್ ಎಂಬಾತನು  ಸಮುದ್ರದ ಬದಿಗೆ ಶಂಖ ಚಿಪ್ಪನ್ನು  ಆಯ್ದು ತೆಗೆಯುವ ಸಮಯ ಸಮುದ್ರ ನೀರಿನ ಅಲೆಯ ಜೋರಾಗಿ ಬಡಿದು, ಸಮುದ್ರದ ನೀರಿನ ಅಲೆಯಲ್ಲಿ ಕೊಚ್ಚಿಕೊಂಡು  ಹೋಗಿ ಕಾಣೆಯಾಗಿರುತ್ತಾನೆ.  ಸಮುದ್ರದ ನೀರಿನ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿ  ಕಾಣೆಯಾದ ತಿಲಕ್ ರಾಜ್ ಪ್ರಾಯ 20 ವರ್ಷ ಎಂಬವರನ್ನು ಪತ್ತೆ ಹಚ್ಚಿಕೊಡಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ

 

Crime Reported in  Moodabidre PS

ಪಿರ್ಯಾದಿ Ashwath ದಾರರ ತಂಗಿ ಅಶ್ವಿನಿ ಪ್ರಾಯ 28 ವರ್ಷ. ರವರನ್ನು 7 ವರ್ಷಗಳ ಹಿಂದೆ ಕಾರ್ಕಳ ಶಿರ್ವಾಲು ಎಂಬಲ್ಲಿನ ನಿವಾಸಿ ಹರೀಶ ಎಂಬುವರಿಗೆ ವಿವಾಹ ಮಾಡಿಕೊಟ್ಟಿದ್ದು, ಇವರ ದಾಂಪತ್ಯ ಜೀವನದಿಂದ ಹಿತ ಎಂಬ ಒಂದುವರೆ ವರ್ಷದ ಹೆಣ್ಣು ಮಗುವಿರುತ್ತದೆ, ಪಿರ್ಯಾಧಿದಾರರ ತಂಗಿಗೂ ಅವರ ಗಂಡ ಹರೀಶ ಎಂಬುವರಿಗೆ ಸಣ್ಣ - ಪುಟ್ಟ ವಿಷಯಗಳಲ್ಲಿ ಜಗಳವಾಗುತ್ತಿದ್ದು, ಇದೇ ವಿಚಾರವಾಗಿ 2 ವಾರಗಳ ಹಿಂದೆ ಪಿರ್ಯಾಧಿದಾರರ ಮನೆಗ ಬಂದಿರುವುದಾಗಿದೆ, ದಿನಾಂಕ: 01-11-2021 ರಂದು ಸಮಯ ಸುಮಾರು 05-45 ಗಂಟೆಗೆ ಪಿರ್ಯಾಧಿದಾರರ ಮನೆಯಿಂದ ಯಾರಿಗೂ ತಿಳಿಸದೇ ತನ್ನ ಒಂದುವರೇ ವರ್ಷದ ಮಗು ಹಿತಳನ್ನು ಕರೆದುಕೊಂಡು ಹೋಗಿರುತ್ತಾಳೆ. ಆಕೆಯ ಪತ್ತೆಗಾಗಿ ನೆರೆ - ಹೊರೆಯಲ್ಲಿ ಸಂಬಂಧಿಕರ ಮನೆಗಳಲ್ಲಿ ಕಡೆಗಳಲ್ಲಿ ಹುಡುಕಾಡಿ ಪತ್ತೆಯಾಗದ ಕಾರಣ ಠಾಣೆಗೆ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 02-11-2021 07:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080