ಅಭಿಪ್ರಾಯ / ಸಲಹೆಗಳು

Crime Reported in Mangalore North PS

ಪಿರ್ಯಾದಿ PSI SUDARSHAN T ದಾರರು ಸಿಬ್ಬಂದಿಯೊಂದಿಗೆ  ದಿನಾಂಕ 31-01-2022 ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ನಗರದ ಕುದ್ರೋಳಿ  ಬಳಿ ದಿನಾಂಕ 01.02.2022 ರಂದು ಬೆಳಿಗ್ಗೆ 04.00 ಗಂಟೆ ಸಮಯ ಓರ್ವ ವ್ಯಕ್ತಿ ಯಾವುದೋ ಅಮಲು ಪದಾರ್ಥ ಸೇವಿಸಿ ತೂರಾಡಿಕೊಂಡು ಹೋಗುತ್ತಿದ್ದವನನ್ನು ವಿಚಾರಿಸಿದಲ್ಲಿ ತನ್ನ ಹೆಸರು: ಶೇಖ್ ಮಹಮ್ಮದ್  ರಾಹಿಲ್  ಪ್ರಾಯ: 19 ವರ್ಷ,  ವಾಸ: -1ಪ್ಲ್ಯಾಟ್  ಕುದ್ರೋಳಿ ಅರೇಬಿಕನ್ ಹೌಸ್  ಕುದ್ರೋಳಿ ಮಂಗಳೂರು ಎಂಬುದಾಗಿ ತೊದಲುತ್ತಾ ನುಡಿದ್ದಿದ್ದು. ಈತನನ್ನು ವಶಕ್ಕೆ ಪಡೆದು ಎ.ಜೆ ಆಸ್ಪತ್ರೆ  ಕುಂಟಿಕಾನ, ಮಂಗಳೂರು ಆಸ್ಪತ್ರೆಯಲ್ಲಿ ವೈಧ್ಯಕೀಯ ತಪಸಾಣೆಗೆ ಒಳಪಡಿಸಿದಲ್ಲಿ  ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ವರದಿಯಿಂದ ದೃಡಪಟ್ಟಿರುವುದರಿಂದ ಆರೋಪಿ ವಿರುದ್ದ ಎನ್.ಡಿ.ಪಿ.ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.  

 

Crime Reported in Mangalore South PS

ದಿನಾಂಕ: 31/01/2022 ರಂದು ಮಂಗಳೂರು ನಗರದ ಸಿಸಿಬಿ ಘಟಕದ ಪಿ.ಎಸ್.ಐ ರಾಜೇಂದ್ರ ಬಿ ರವರು, ಸಿಬ್ಬಂದಿಯೊಂದಿಗೆ ಮಂಗಳೂರು ನಗರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ 22:30 ಗಂಟೆಗೆ ಫಳ್ನಿರ್ ರಸ್ತೆಯಲ್ಲಿರುವ ಫಳ್ನಿರ್ ಪ್ಯಾಲೇಸ್ ಎಂಬ ಲಾಡ್ಜ್ ನ ಪರಿಸರದಲ್ಲಿ ಯುವಕರು ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿದ್ದ ಬಗ್ಗೆ ಮಾಹಿತಿಯ ಮೇರೆಗೆ ಸದ್ರಿ ಸ್ಥಳಕ್ಕೆ ಪಿ.ಎಸ್.ಐ ರಾಜೇಂದ್ರ ಬಿ ರವರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ಸದ್ರಿಯವರುಗಳನ್ನು ಕೂಲಂಕುಷವಾಗಿ ವಿಚಾರಿಸಿದಾಗ ಅವರುಗಳ ಹೆಸರು 1) ಮೊಹ್ಮಮ್ಮದ್ ಸುಲ್ತಾನ್ ಪ್ರಾಯ:28 ವರ್ಷ ವಾಸ: #32 2ನೇ ಮೈನ್ 3ನೇ ಕ್ರಾಸ್ ಚಿನ್ನಪ್ಪ ಗಾರ್ಡನ್, ಬೆನ್ ಝನ್ ಟೌನ್, ಬೆಂಗಳೂರು, 2) ಆಯುಬ್ ಪ್ರಾಯ:38 ವರ್ಷ ವಾಸ: ಬಜಾಲ್ ನಂತೂರು ಶಾಂತಿನಗರ, ಬಜಾಲ್ ಅಂಚೆ ಮಂಗಳೂರು,  3) ಮೊಹಮ್ಮದ್ ತಂಝೀಲ್ ಪ್ರಾಯ:30 ವರ್ಷ ವಾಸ: ಫ್ಲಾಟ್ ನಂಬ್ರ-503 ಕಿಂಗ್ ಡಂ ಅರ್ಪಾಟ್ ಮೆಂಟ್ ಸಹರಾ ಆಸ್ಪತ್ರೆ ಬಳಿ ತೊಕ್ಕೊಟ್ಟು ಮಂಗಳೂರು, 4) ಅಬ್ದುಲ್ ಅಝೀಝ್ ಪ್ರಾಯ: 24 ವರ್ಷ ವಾಸ: ಕಂಡಲ್ ಪ್ಯಾಲೇಸ್ ಮನೆ, ಎಡನಾಡು ಅಂಚೆ ಕುಂಬಳೆ ಕಾಸರಗೂಡು, 5) ಮೊಹಮ್ಮದ್ ಫಝಲ್ @ ಪಜ್ಜು, ವಾಸ: ಎಫ್,ಎ ಮಂಝೀಲ್ ಬೋರುಗುಡ್ಡೆ ಕಣ್ಣೂರು ಮಂಗಳೂರು, 6) ರಿಯಾಸ್ @ ಸ್ಟೀಮರ್ ರಿಯಾಸ್ ಪ್ರಾಯ: 36 ವಾಸ: ಗಾಣದಬೆಟ್ಟು ಮನೆ ಕಣ್ಣೂರು ಮಂಗಳೂರು, ಎಂಬುದಾಗಿ ತಿಳಿಸಿದ್ದು, ಅವರನ್ನು ವಶಕ್ಕೆ ಪಡೆದುಕೊಂಡು ಎ.ಜೆ. ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದಲ್ಲಿ ಮಾದಕ ವಸ್ತುಗಳ ಸೇವನೆ ಮಾಡಿರುವ ಕುರಿತಾಗಿ ತಪಾಸಣೆ ನಡೆಸಲಾಗಿ ಮೇಲ್ಕಂಡವರು ಮಾದಕ ದ್ರವ್ಯಗಳನ್ನು ಸೇವನೆ ಮಾಡಿರುವ ಬಗ್ಗೆ ವರದಿಯಲ್ಲಿ ದೃಢಪಟ್ಟಿರುತ್ತದೆ. ಆದ್ದರಿಂದ 6 ಜನ ಯುವಕರ ವಿರುದ್ದ ಎನ್.ಡಿ.ಪಿ.ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.  

 

ಇತ್ತೀಚಿನ ನವೀಕರಣ​ : 01-02-2022 09:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080