ಅಭಿಪ್ರಾಯ / ಸಲಹೆಗಳು

Crime Reported in Surathkal PS

 ಪಿರ್ಯಾದಿದಾರರ ಪತ್ನಿ ಶ್ರೀಮತಿ ಝೀನತ್ ಇವರು ನಿನ್ನೆ ದಿನ ದಿನಾಂಕ: 31/03/2022 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ಹೋದವರು ಕಾಟಿಪಳ್ಳ ಗ್ರಾಮದ ಕೃಷ್ಣಾಪುರ ಬದ್ರಿಯಾ ಶಾಲೆಗೆ ಹೋಗಿ ಅಲ್ಲಿಂದ ಬೆಳಿಗ್ಗೆ 11-45 ಗಂಟೆಗೆ ಅವರ ಮಕ್ಕಳಾದ 11 ವರ್ಷದ ಮಗ, 10 ವರ್ಷದ ಮಗಳು  ಹಾಗೂ 7 ವರ್ಷದ ಮಗ ರವರನ್ನು ಕರೆದುಕೊಂಡು ಹೋದವರು ವಾಪಸ್ಸು ಮನೆಗೆ ಬಾರದೇ ಮೊಬೈಲನ್ನು ಸ್ವಿಚ್ ಆಪ್ ಮಾಡಿ ಕಾಣೆಯಾಗಿರುವುದಾಗಿದೆ. ಕಾಣೆಯಾದ ಪತ್ನಿ ಹಾಗೂ ಮಕ್ಕಳನ್ನು ಪತ್ತೆ ಮಾಡಿಕೊಂಡಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

ಕಾಣೆಯಾದವರ ಚಹರೆ ವಿವರ:

  1. ಹೆಸರು : ಶ್ರೀಮತಿ ಝೀನತ್

ಪ್ರಾಯ: 34 ವರ್ಷ

ಎತ್ತರ : 5 ಅಡಿ

ಬಣ್ಣ : ಗೋಧಿ ಬಣ್ಣ, ದುಂಡು ಮುಖ,

ಭಾಷೆ: ಹಿಂದಿ, ಬ್ಯಾರಿ, ಕನ್ನಡ, ಕೊಂಕಣಿ

ಬಟ್ಟೆಗಳ ವಿವರ: ಪಿಂಕ್ ಬಣ್ಣದ ಚೂಡಿದಾರ್ ಟಾಪ್, ಬಿಳಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ವೇಲ್ ಹಾಗೂ ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾರೆ.

 

Crime Reported in Mangalore North PS                                 

ದಿನಾಂಕ: 31-03-2022 ರಂದು ಸಂಜೆ 5-45 ಗಂಟೆಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ನಾಗರಾಜ್ ರವರು ಠಾಣೆಯಲ್ಲಿದ್ದಾಗ ಮಂಗಳೂರು ನಗರದ, ಬೀಬಿ ಅಲಾಬಿ ರಸ್ತೆಯಲ್ಲಿರುವ ಮೇಘಾ ಮಾರ್ಟ್ ಬಿಲ್ಡಿಂಗ್ ನಲ್ಲಿ ನೆಲ ಅಂತಸ್ತಿನಲ್ಲಿರುವ ಚಹಾದ ಅಂಗಡಿಯಲ್ಲಿ ಬೆಸರಾ ರಾಮ್ ಮತ್ತು ಪ್ರಭು ರಾಮ್ ಎಂಬವರು ಅಫೀಮು ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಬಂದಿದ್ದು,    ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರ ವಶವಿರುವ 67 ಗ್ರಾಂ ಅಫೀಮನ್ನು ಸ್ವಾಧೀನ ಪಡಿಸಿ ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ  ಎಂಬಿತ್ಯಾದಿ.

  

Crime Reported in Traffic South P S      

ದಿನಾಂಕ 30-03-2022 ರಂದು ಪಿರ್ಯಾದಿ NIJAAM ದಾರರು ಅವರ ಕಾರು ನಂಬರ್ KA-19-MK-8875 ನೇದರಲ್ಲಿ ದೇರಳಕಟ್ಟೆ ಕಡೆಯಿಂದ ಮಂಜನಾಡಿ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 22:30 ಗಂಟೆಗೆ ನಾಟಿಕಾಲ್ ಕ್ರಾಸ್ ಬಳಿ ತಲುಪಿದಾಗ ಕಾರು ನಂಬರ್ KA-19-MF-9125 ನೇದರ ಚಾಲಕ ಅಪಘಾತ ಪಡಿಸಿ ರಸ್ತೆ ಬದಿಯಲ್ಲಿ ತಲೆಗೆ ಗಂಬೀರವಾಗಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯನ್ನು ಪಿರ್ಯಾದಿದಾರರು ಅವರ ಕಾರಿನಲ್ಲಿ ಸಾರ್ವಜನಿಕ ಸಹಾಯದೊಂದಿಗೆ ಕಣಚೂರು  ಆಸ್ವತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿಲಾಗಿ ಗಾಯಳುವನ್ನು ಪರೀಕ್ಷಿಸಿದ ವೈದ್ಯರು ಗಾಯಳು ವ್ಯಕ್ತಿಯು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ ಇದರ ಬಗ್ಗೆ  ಅಲ್ಲಿಯ ಸಾರ್ವಜನಿಕರಲ್ಲಿ ವಿಚಾರಿಸಲಾಗಿ  KA-19-MF-9125 ನೇದರ ಕಾರು ಚಾಲಕ ಮೊಹಮ್ಮದ್ ಹಫೀಜ್ ರವರು ಅತಿವೇಗ ಹಾಗೂ ಹಾಗೂ ನಿರ್ಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಹೋಗಿ ರಸ್ತೆಯ ಬದಿಯಲ್ಲಿ ನಿಂತಿದ್ದ ಹಜೀಬುಲ್ಲ್ ಹಕ್ಟ್  ಎಂಬುವರಿಗೆ ಡಿಕ್ಕಿ  ಪಡಿಸಿರುವುದಾಗಿ ತಿಳಿದುಬಂದಿರುತ್ತಾದೆ ಈ ಅಪಘಾತಕ್ಕೆ ಕಾರಣರಾದ ಕಾರು ನಂಬರ್ KA-19-MF-9125 ನೇದರ ಚಾಲಕ ಹಫೀಜ್ ರವರ ಮೇಲೆ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 01-04-2022 08:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080