Feedback / Suggestions

Crime Reported in Traffic North Police Station                   

ದಿನಾಂಕ: 01-05-2022 ರಂದು ಪಿರ್ಯಾದಿ Ashith ದಾರರು ತನ್ನ ಮನೆಯಲ್ಲಿದ್ದಂತೆ ರಾತ್ರಿ ಸುಮಾರು 22:30 ಗಂಟೆಗೆ ಅವರ ಪರಿಚಯದ ಓರ್ವರು ದೂರವಾಣಿ ಕರೆ ಮಾಡಿ ಅವರ ತಮ್ಮ ಭರತೇಶ್ ನಿಗೆ ಹೊನ್ನಕಟ್ಟೆ ಸುಪ್ರಭಾತ ಬಾರ್ ಅಂಡ್ ರೆಸ್ಟೊರೆಂಟ್ ಎದುರು ರಸ್ತೆ ಅಪಘಾತವಾಗಿ ಗಾಯಗೊಂಡವನನ್ನು ಚಿಕಿತ್ಸೆಗಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಬಂದು ಚಿಕಿತ್ಸೆಯಲ್ಲಿದ್ದ ಅವರ ತಮ್ಮನನ್ನು ನೋಡಲಾಗಿ ಆತನ ತಲೆಯ ಹಿಂಭಾಗದಲ್ಲಿ ಗುದ್ದಿದ ರೀತಿಯ ರಕ್ತಗಾಯ, ಬಲ ತೊಡೆಯ ಬಳಿ ಎರಡು ಕಡೆ ಚರ್ಮ ಕಿತ್ತು ಹೋದ ರೀತಿಯ ರಕ್ತ ಗಾಯವಾಗಿದ್ದು, ಪಿರ್ಯಾದಿದಾರರು ಅಪಘಾತದ ಬಗ್ಗೆ ತಿಳಿದುಕೊಳ್ಳಲಾಗಿ ದಿನಾಂಕ: 01-05-2022 ರಂದು ರಾತ್ರಿ ಸುಮಾರು 22:15 ಗಂಟೆಗೆ KA-20-Z-2792 ನಂಬ್ರದ ಓಮಿನಿ ಕಾರನ್ನು ಅದರ ಚಾಲಕ ಕುಳಾಯಿಗುಡ್ಡೆ ಕಡೆಯಿಂದ ಹೊನ್ನಕಟ್ಟೆ ಜಂಕ್ಷನ್ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸುಪ್ರಭಾತ ಬಾರ್ ಅಂಡ್ ರೆಸ್ಟೊರೆಂಟ್ ಕಡೆಯಿಂದ ಬಂದ KA-19-HB-5441 ನಂಬ್ರದ ಸ್ಕೂಟರಿಗೆ ಡಿಕ್ಕಿ ಪಡಿಸಿ ನಂತರ ಮುಂದಕ್ಕೆ ಚಲಾಯಿಸಿಕೊಂಡು ಬಂದು ಹೊನ್ನಕಟ್ಟೆ ಜಂಕ್ಷನ್ ಕಡೆಯಿಂದ ಕುಳಾಯಿಗುಡ್ಡೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಮ್ಮನ ಬಾಬ್ತು KA-19-EN-2997 ನಂಬ್ರದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ತಮ್ಮ ಭರತೇಶನು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯವಾಗಿದ್ದು ಅಲ್ಲದೇ  KA-19-HB-5441 ನಂಬ್ರದ ಸ್ಕೂಟರ್ ಸವಾರರಿಗೂ ಅಪಘಾತದಿಂದ ತಲೆಗೆ ಚರ್ಮ ಹರಿದ ರೀತಿಯ ಗಾಯವಾಗಿದ್ದು, ಅಲ್ಲಿ ಸೇರಿದ ಜನರು ಭರತೇಶನನ್ನು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಹಾಗೂ ಇನ್ನೋರ್ವ ಸ್ಕೂಟರ್ ಸವಾರ ಮಾರುತಿ ಎಂಬುವರನ್ನು ಎ ಜೆ ಆಸ್ಪತ್ರೆಗೆ ದಾಖಲಿಸಿದ್ದು ಅಪಘಾತ ಪಡಿಸಿದ ಓಮಿನಿ ಕಾರಿನ ಚಾಲಕ ಅಪಘಾತದ ನಂತರ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು ಆತನ ಹೆಸರು ವಿಳಾಸ ತಿಳಿದಿರುವುದಿಲ್ಲ ಎಂಬಿತ್ಯಾದಿ.

   

Last Updated: 02-05-2022 06:29 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080