ಅಭಿಪ್ರಾಯ / ಸಲಹೆಗಳು

Crime Reported in Konaje PS

ಪಿರ್ಯಾದಿ Sandra Fernandes ರವರು ತಾಯಿ ಸಿಂಥಿಯಾ ಫೆರ್ನಾಂಡಿಸ್ (49) ಎಂಬವರೊಂದಿಗೆ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಏಂಡೆಲ್ ಕಾಟೇಜ್, ಜನನಿ ಪಿಜಿ ಹತ್ತಿರ, ಕಂಬ್ಲಪದವು ಎಂಬಲ್ಲಿ ವಾಸವಾಗಿರುತ್ತಾರೆ. ದಿನಾಂಕ 31.05.2022 ರಂದು ತಾಯಿ ಮನೆಯಲ್ಲಿಯೇ ಇದ್ದು,  ಮಧ್ಯಾಹ್ನ ಸುಮಾರು 2  ಗಂಟೆಗೆ ಪಿರ್ಯಾದಿದಾರರು ಊಟ ಮಾಡಿ ಮಲಗಿದ್ದು, ನಂತರ ಸಂಜೆ ಸುಮಾರು 5 ಗಂಟೆಗೆ ಎದ್ದು ನೋಡಿದಾಗ ತಾಯಿಯು ಕಾಣದೇ ಇರುವುದರಿಂದ ಪಿರ್ಯಾದಿದಾರರು ಹಲವು ಕಡೆಗಳಲ್ಲಿ ಹುಡುಕಾಡಿ, ನೆರೆಕೆರೆಯವರಲ್ಲಿ ವಿಚಾರಿಸಿ, ಸಂಬಂಧಿಕರಲ್ಲಿ ಕರೆ ಮಾಡಿ ಕೇಳಿದಾಗ ಪತ್ತೆಯಾಗಿರುವುದಿಲ್ಲ.  ಕಾಣೆಯಾದ ತಾಯಿಯನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿರುತ್ತಾರೆ ಎಂಬಿತ್ಯಾದಿ.

 

Crime Reported in Ullal PS

ದಿನಾಂಕ: 31.05.2022 ರಂದು ಪಿರ್ಯಾದಿ ಮನ್ಸೂರ್ ಅಲಿ ಅವರ ತಮ್ಮ ಜುಲ್ಫಿಕಾರ್ ಆಲಿ ಅವರನ್ನು ಬೆಳ್ಮ ರೆಂಜಾಡಿಯ ಅಶ್ರಫ್ ಎಂಬವರು ಸೋಮೇಶ್ವರ ಗ್ರಾಮದ ಮನೋಜ್ ಎಂಬವರ ಒಂದು ಮಹಡಿಯ ಮನೆಯ ಪೇಂಟಿಂಗ್ ಕೆಲಸಕ್ಕಾಗಿ ಕರೆದುಕೊಂಡು ಹೋಗಿ ಜುಲ್ಫಿಕರ್ ಆಲಿ ಗೆ ಅಶ್ರಫ್ ರವರು ಭದ್ರತೆಯ ಬಗ್ಗೆ  ಯಾವುದೇ ಸಲಕರಣೆಗಳನ್ನು ಒದಗಿಸದೇ ಹಾಗೂ ಎತ್ತರದಲ್ಲಿ ಕೆಲಸ ಮಾಡಿಸುವಾಗ ಸದ್ರಿ ಸ್ಥಳದಲ್ಲಿ ಯಾವುದೇ ರೀತಿಯ ಸೂಕ್ತ ಭದ್ರತೆಯ ವ್ಯವಸ್ಥೆಯನ್ನು ಕೂಡಾ ಮಾಡಿಸದೇ ಬೇಜವಾಬ್ದಾರಿ ಮತ್ತು ನಿರ್ಲಕ್ಷತನದಿಂದ ಜುಲ್ಫಿಕಾರ್ ಆಲಿ ಅವರಿಂದ ಕೆಲಸ ಮಾಡಿಸಿದ್ದರಿಂದ ಜುಲ್ಫಿಕಾರ್ ಆಲಿಯು ಬೆಳಿಗ್ಗೆ ಸುಮಾರು 10.00 ಗಂಟೆಗೆ 18 ಅಡಿ ಎತ್ತರದಿಂದ ಕೆಳಗೆ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದು ಅವರನ್ನು ದೇರಳಕಟ್ಟೆಯ ಯೇನಪೋಯಾ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು  ಹೋಗಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 11.40 ಗಂಟೆಗೆ ಜುಲ್ಫಿಕಾರ್ ಆಲಿಯು ಮೃತಪಟ್ಟಿದ್ದು ಇವರ ಮರಣಕ್ಕೆ ಅಶ್ರಫ್ ರವರ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ಕಾರಣವಾಗಿರುವುದರಿಂದ ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಪಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

Crime Reported in Moodabidre PS

ದಿನಾಂಕ: 30-05-2022 ರಂದು ಪಿರ್ಯಾದಿದಾರರು SHARATH KUMAR ಮನೆಯಿಂದ ತರಕಾರಿ ತರಲು ಮೂಡಬಿದ್ರೆ ತಾಲೂಕು ಪ್ರಾಂತ್ಯ ಗ್ರಾಮದ ಶಾಲಿಮಾರ್ ಎಂಬಲ್ಲಿ ರಸ್ತೆ ದಾಟುತ್ತಿದ್ದ ಸಮಯ ಸಂಜೆ ಸುಮಾರು 07.30 ಗಂಟೆಗೆ ಸಿದ್ದಕಟ್ಟೆಯಿಂದ ಬರುತ್ತಿದ್ದ ಕೆ.ಎ 19 ಇಜೆ 3770 ನೇ ಹೊಂಡಾ ಆಕ್ಟೀವ ವಾಹನದ ಸವಾರನು  ಅತೀ ವೇಗ ಮತ್ತು ಅಜಾಗರೂಕತೆಯಿಂದ ಯಾವುದೇ ಸೂಚನೆ ನೀಡದೇ ಒಮ್ಮೆಲೆ  ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಯ  ಮಧ್ಯೆ ಬಿದ್ದಿದ್ದು, ಅಲ್ಲಿಯೇ ಇದ್ದ ಪಿರ್ಯಾಯದಿದಾರರ ಪರಿಚಯದ ಸುರೇಶ್ ರವರು ತಕ್ಷಣ ಅಪಘಾತ ನಡೆದ ಸ್ಥಳಕ್ಕೆ ಬಂದು ಖಾಸಗಿ ವಾಹನದಲ್ಲಿ ಚಿಕಿತ್ಸೆಗಾಗಿ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪಿರ್ಯಾದಿದಾರರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಎಡಕೈಯ ಕಿರುಬೆರಳು ಮೂಳೆ ಮುರಿತ ಗಾಯ ಮತ್ತು ಉಂಗುರ ಬೆರಳು ಹಾಗೂ ಮಧ್ಯದ ಬೆರಳು ಜಜ್ಜಿದ ರೀತಿಯಲ್ಲಿ ಗಾಯವಾಗಿದ್ದು ಪಿರ್ಯಾದಿದಾರರನ್ನು ಒಳರೋಗಿಯನ್ನಾಗಿ ದಾಖಲು ಮಾಡಿರುತ್ತಾರೆ.

 

Crime Reported in Traffic South Police Station                   

ದಿನಾಂಕ:31.05.2022 ರಂದು ಪಿರ್ಯಾದಿದಾರರಾದ ಲೋಕೇಶ್(35) ವರ್ಷ ರವರು ಸ್ಕೂಟರ್ ನಂಬ್ರ:KA-19-HD-3420  ನೇದರಲ್ಲಿ ಸವಾರರಾಗಿ ರಾ ಹೆ 66ರಲ್ಲಿ ತೊಕ್ಕೊಟ್ಟು ಕಡೆಯಿಂದ ಮಂಗಳೂರು  ಕಡೆಗೆ ಬರುತ್ತಿರುವ ಸಮಯ ಸಮಾರು ಬೆಳ್ಳಿಗ್ಗೆ 09:45 ಗಂಟೆಗೆ ಕಲ್ಲಾಪು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರು ತಲುಪಿದಾಗ ಅದೇ ರಸ್ತೆಯಲ್ಲಿ KA-19-HE-7657  ನೇ ನಂಬ್ರದ ಸ್ಕೂಟರೊಂದನ್ನು ಅದರ ಸವಾರ ಏಕಮುಖ ರಸ್ತೆಗೆ ವಿರುದ್ದವಾಗಿ  ಅಂದರೆ ಕಲ್ಲಾಪು ಕಡೆಯಿಂದ ತೊಕ್ಕೊಟ್ಟು  ಕಡೆಗೆ  ಸ್ಕೂಟರ್ ದುಡುಕುತನ ಹಾಗೂ ನಿರ್ಲಕ್ಷ್ಯತನ ದಿಂದ ಸವಾರಿಮಾಡಿಕೊಂಡು ಬಂದು ಒಮ್ಮಲೇ ರಸ್ತೆಯ ಎಡಬದಿಯಿಂದ  ಬಲಬದಿಗೆ  ಸವಾರಿಮಾಡಿಕೊಂಡು  ಬಂದು  ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಗೆ ಡಿಕ್ಕಿಪಡಿಸಿ ಪರಾರಿಯಾದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಭುಜಕ್ಕೆ ಮೂಳೆಮುರಿತದ ಗಾಯ ಹಾಗೂ ಬಲಗಾಲಿನ ಮಣಿಗಂಟಿಗೆ  ತರಚಿದ ರೀತಿಯ  ಗಾಯವಾಗಿದ್ದು   ಅಲ್ಲಿಸೇರಿದ ಜನರು ಗಾಯಾಳುವನ್ನು ಉಪಚರಿಸಿದ ಬಳಿಕ ಪಿರ್ಯಾದಿದಾರರ ಸಂಬಂದಿ ದೇವರಾಜ್ ರವರು ಗಾಯಾಳುವನ್ನು ದೇರಳಕಟ್ಟೆ  ಯೆನಪೋಯ  ಆಸ್ಪತ್ರೆಗೆ ದಾಖಲಿಸಿದ್ದು  ಪಿರ್ಯಾದಿದಾರರು ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಭಿತ್ಯಾಧಿ

 

 

 

ಇತ್ತೀಚಿನ ನವೀಕರಣ​ : 01-06-2022 07:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080