ಅಭಿಪ್ರಾಯ / ಸಲಹೆಗಳು

Crime Reported in: Barke PS

ಪಿರ್ಯಾದಿದಾರರಾದ ಅಮೀನ ಪ್ರಾಯ 48 ವರ್ಷ ರವರ ಮಗ ಅನೀಶ್  ಎಂಬವರಿಗೆ ದಿನಾಂಕ:30.06.2022 ರಂದು ರಾತ್ರಿ ಸಮಯ ಸುಮಾರು 10.00 ಗಂಟೆಗೆ ಮನೆಗೆ  ನಡೆದುಕೊಂಡು ಬರುವ ಸಮಯ ಕರ್ನಲ್ ಗಾರ್ಡನ್ ಬಳಿ ಜಲೀಲ್ ಮತ್ತು ಸಮೀರ್ ಅಲಿಯಾಸ್ ಚಮ್ಮುರವರು ದ್ವಿ ಚಕ್ರ ವಾಹನದಲ್ಲಿ ಬಂದು  ತಡೆದು ನಿಲ್ಲಿಸಿ ಅವರು ತಂದಿದ್ದ ಕತ್ತಿಯಿಂದ ಪಿರ್ಯಾದಿದಾರರ ಮಗನ ಮೇಲೆ ಹಲ್ಲೆ ನಡೆಸಿ ಬಲ ಕಾಲಿಗೆ ತಿವಿದು ಮೊಣಕಾಲಿನ ಪಕ್ಕದಲ್ಲಿ ತೆರೆಚಿದ ಗಾಯವಾಗಿದ್ದು, ಪಾದದಲ್ಲಿ ರಕ್ತ ಬರುವ ಗಾಯ ಮಾಡಿದ್ದಲ್ಲದೆ ಎಡ ಕಾಲಿಗೆ ಕೂಡ ರಕ್ತಗಾಯ ಮಾಡಿದ್ದು ಗಲಾಟೆಯಲ್ಲಿ ಪಿರ್ಯಾದಿದಾರರ ಮಗ ಜಲೀಲ್ ಮತ್ತು ಸಮೀರ್ ಅಲಿಯಾಸ್ ಚಮ್ಮುರವರನ್ನು ದೂಡಿ ತಪ್ಪಿಸಿಕೊಂಡು ಮನೆಗೆ  ಬಂದಿದ್ದು ದಿನಾಂಕ:01.07.2022 ರಂದು ಬೆಳಗ್ಗೆ ಸಮಯ ಸುಮಾರು 9.00 ಗಂಟೆಗೆ ಮನೆಯ ಒಳಗೆ ಜಲೀಲ್ ಮತ್ತು ಸಮೀರ್ ಚೆಮ್ಮು ಕತ್ತಿ ಹಿಡಿದುಕೊಂಡು ಬಂದು ಪಿರ್ಯಾದಿದಾರರ ಮಗನಿಗೆ ನಿನ್ನನ್ನು ಜೀವ ಸಹಿತವಾಗಿ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ  ಬಾಟಲ್ ನಿಂದ ಪಿರ್ಯಾದಿದಾರರ ಮನೆಗೆ ಹೊಡೆದು ಗ್ಲಾಸ್ ನ್ನು ಹುಡಿ ಮಾಡಿ ಸುಮಾರು 5000/- ರೂಪಾಯಿ ನಷ್ಟ ಉಂಟು ಮಾಡಿರುವುದಾಗಿ ಎಂಬಿತ್ಯಾದಿ ದೂರಿನ ಸಾರಾಂಶವಾಗಿದೆ.

 

Crime Reported in: Traffic North Police Station

ಪಿರ್ಯಾದಿ Anitha H B ದಿನಾಂಕ: 01-07-2022 ರಂದು ಅವರ ಬಾಬ್ತು KA-15-Y-1987 ನೇ ನಂಬ್ರದ ಸ್ಕೂಟರಿನಲ್ಲಿ ಪಣಂಬೂರಿನಿಂದ ಸುರತ್ಕಲ್ ಕಡೆಗೆ ಹೋಗುತ್ತಾ ಸುರತ್ಕಲ್ ಫ್ಲೈ ಓವರ್ ಕೆಳಗಡೆ ಜಂಕ್ಷನ್ ನಲ್ಲಿ ಇಂಡಿಕೇಟರ್ ಹಾಕಿ ಬಲಕ್ಕೆ ಕೃಷ್ಣಾಪುರ ಕಡೆಗೆ ತಿರುಗಿಸುತ್ತಿದ್ದಂತೆ ಬೆಳಿಗ್ಗೆ ಸಮಯ ಸುಮಾರು 10:10 ಗಂಟೆಗೆ ಕೃಷ್ಣಾಪುರ ಕಡೆಯಿಂದ ಸುರತ್ಕಲ್ ಜಂಕ್ಷನ್ ಮುಖ್ಯ ರಸ್ತೆ ಕಡೆಗೆ KA-19-MF-7121 ನಂಬ್ರದ ಕಾರನ್ನು ಅದರ ಚಾಲಕ ಶ್ರೀನಿವಾಸ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಎಡಕೈ ಭುಜಕ್ಕೆ ಗುದ್ದಿದ ಹಾಗೂ ಎಡಕೈ ಮೊಣಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

                               

Crime Reported in: Mangalore Rural PS

ಪಿರ್ಯಾದಿದಾರರ Odette Katrak ಮುತ್ತಜ್ಜ ಜೋಕಿಂ ಮೇರಿಯನ್ ಪಿಂಟೋರವರು ವೀಲುನಾಮೆ ಮೂಲಕ ಅವರ ಮಗ ನಿವೃತ್ತ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಆಗಿದ್ದ ಪಿರ್ಯಾದಿದಾರರ ಅಜ್ಜ ಸಿಸಿಲ್ ಜಸ್ಟಿನ್ ಫಿಲೋಮಿನ್ ಪಿಂಟೋರವರಿಗೆ ಪಿತ್ರಾರ್ಜಿತವಾಗಿ ನೀಡಿದ ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ಅಲೆಗ್ಸಾಂಡರ್ ರಸ್ತೆಯಲ್ಲಿರುವ ಪೆದಮಲೆಯ ಡಿ.ಸಿ ಲೇಔಟ್ ನಲ್ಲಿರುವ ಪಿರ್ಯಾದಿದಾರರ ಬಾಬ್ತು ಸರ್ವೆ ನಂಬ್ರ: 114/2 ರಲ್ಲಿ 0.15 ಎಕರೆ ಮತ್ತು ಸರ್ವೆ ನಂಬ್ರ: 114/3 ರಲ್ಲಿ 0.42 ಎಕರೆ ಜಮೀನುಗಳನ್ನು ಆರೋಪಿಗಳು ಪಿರ್ಯಾದಿದಾರರ ಅಜ್ಜ ಸಿಸಿಲ್ ಜಸ್ಟಿನ್ ಫಿಲೋಮಿನ್ ಪಿಂಟೋರವರ ಹೆಸರನ್ನು ಶ್ರೀಮತಿ ಸಿಸಿಲ್ ಜೆಸ್ಲಿನ್ ಫಿಲೋಮಿನ್ ಪಿಂಟೋ @ ಸಿ.ಜೆ.ಪಿ ಪಿಂಟೋ ಎಂಬುದಾಗಿ ಬಿಂಬಿಸಿ ದಿನಾಂಕ: 11-11-2020 ರಂದು ಶ್ರೀಮತಿ ತೆರೆಸಾ ಲೋಬೋ ನೀ ಡಿಕುನ್ಹಾ ರವರ ಹೆಸರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಿರ್ಯಾದಿದಾರರಿಗೆ ವಂಚಿಸಿ ಆರೋಪಿಗಳ ಹೆಸರಿಗೆ ಜಮೀನನ್ನು ನೋಂದಾಯಿಸಿಕೊಂಡಿರುವುದು ಎಂಬಿತ್ಯಾದಿ.

 

Crime Reported in:Mangalore South PS      

ಪಿರ್ಯಾದಿದಾರರಾದ ಶ್ರೀಮತಿ ರಾಧಾ [39] ರವರ ಗಂಡ ಮೋನಪ್ಪ ನಾಯ್ಕ್ [43] ರವರು ಜೊತೆಯಾಗಿ ದಿನಾಂಕ: 06.05.2022 ರಂದು ಬೆಳಿಗ್ಗೆ 10:00 ಗಂಟೆಗೆ ಮಂಗಳೂರು ನಗರದ ವೆನ್ ಲಾಕ್ ಆಸ್ಪತ್ರೆಗೆ ತಮ್ಮ ಮಗಳು ಬೂಮಿಕಾಳಿಗೆ ಚಿಕಿತ್ಸೆ ಕೊಡಿಸಲು ಬಂದಿದ್ದು, ಪಿರ್ಯಾದಿದಾರರ ಗಂಡ ಮೋನಪ್ಪ ರವರು ಯಾವುದೋ ಕೆಲಸದ ಬಗ್ಗೆ ಹೊರಗಡೆ ಹೋಗಿ ಬರುತ್ತೇನೆಂದು ತನ್ನ ಹೆಂಡಿತಿಗೆ ಹೇಳಿ ಆಸ್ಪತ್ರೆಯಿಂದ ಹೋದವರು ಮರಳಿ ಆಸ್ಪತ್ರೆಗೆ ಬಂದಿರುವುದಿಲ್ಲ ಅವರ ಬಗ್ಗೆ ಸ್ನೇಹಿತರಲ್ಲಿ, ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿಯು ಸಿಕ್ಕಿರುವುದಿಲ್ಲ, ಆದುದರಿಂದ ಕಾಣೆಯಾದ ತನ್ನ ಗಂಡ ಮೋನಪ್ಪ ನಾಯ್ಕ್ ರವರನ್ನು ಪತ್ತೆಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿಯಾಗಿರುತ್ತದೆ.

                                                                                                       

Crime Reported in: Moodabidre PS    

ಪಿರ್ಯಾದಿದಾರರು Airel Deena Rodrigues ಪಿ.ಯು.ಸಿ ವಿದ್ಯಾರ್ಥಿಯಾಗಿದ್ದು ದಿನಾಂಕ:29.06.2022 ರಂದು ಆಳ್ವಾಸ್ ಪಿ.ಯು ಕಾಲೇಜಿನಲ್ಲಿ ತರಗತಿ ಮುಗಿಸಿಕೊಂಡು ಸಂಜೆ ಸುಮಾರು 18.00 ಗಂಟೆಗೆ ಮೂಡಬಿದರೆ ತಾಲೂಕಿನ ಪುತ್ತಿಗೆ ಗ್ರಾಮದ ವಿದ್ಯಾಗಿರಿ ಬಸ್ ನಿಲ್ದಾಣ ಬಳಿಯಲ್ಲಿ ಮನೆಗೆ ಹೋಗಲು ಬಸನ್ನು ಕಾಯುತ್ತಿರುವ ಸಮಯ ಮಂಗಳೂರು ಕಡೇಯಿಂದ ಬಂದ ಕೆಎ-15-9520  ಬಸ್ಸು ವಿದ್ಯಾಗಿರಿ ಬಸ್ಸ್ ನಿಲ್ದಾಣದಲ್ಲಿ ಬಂದು ನಿಂತಿದ್ದು ಆಗ ಫಿರ್ಯಾಧಿದಾರರು ಬಸ್ಸಿನ ಎದುರು ಕಡೆಯಿರುವ ಬಾಗಿಲಿನಿಂದ ಹತ್ತುತ್ತಿದ್ದ ಸಮಯ ಸದ್ರಿ ಬಸ್ಸಿನ ಚಾಲಕನಾದ ಕಬೀರ ಎಂಬಾತನು ನಿರ್ಲಕ್ಷತನ ಹಾಗೂ ಅಜಾರುಕತೆಯಿಂದ ಬಸ್ಸನ್ನು ಹಠಾತನೆ ಮುಂದಕ್ಕೆ ಚಲಾಯಿಸಿದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಅವರ ಬಲಗಾಲಿನ ಸಮೀಪ ಬಸ್ಸಿನ ಹಿಂಬದಿ ಚಕ್ರವು ಹಾದು ಹೋಗಿದ್ದು ಬಲಕಾಲಿನ ತೊಡೆಗೆ ಗುದ್ದಿದ ಗಾಯವಾಗಿದ್ದು, ನಂತರ ಅಲ್ಲೇ ಇದ್ದ ವಿದ್ಯಾರ್ಥಿಗಳು ಮತ್ತು ರಿಕ್ಷಾ ಚಾಲಕರು ಆಳ್ವಾಸ್ ಆಸ್ಪತ್ರೆಗೆ  ಕರೆ ತಂದು ಚಿಕಿತ್ಸೆಗೋಸ್ಕರ  ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೋಸ್ಕರ ಈ ದಿನ ದಿನಾಂಕ 30.06.2022 ರಂದು ಬೆಳಿಗ್ಗೆ ಮಂಗಳೂರಿನ ಮಂಗಳೂರು ನರ್ಸಿಂಗ್ ಹೋಂ ನಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ

Crime Reported in:Ullal PS

ದಿನಾಂಕ: 28-06-2022 ರ ಸಂಜೆ ಸುಮಾರು 5:00 ಗಂಟೆಯಿಂದ  ದಿನಾಂಕ: 30-06-2022 ರ ಬೆಳಿಗ್ಗೆ 08:15 ಗಂಟೆಯ ಮಧ್ಯದ ಅವಧಿಯಲ್ಲಿ ಉಳ್ಳಾಲ ತಾಲೂಕು ಮತ್ತು ಗ್ರಾಮದ ಉಳ್ಳಾಲ ಬೈಲು ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ಕೆ ಶಿವ ಎಂಬವರ ವಾಸದ ಮನೆಯ ಹಿಂಭಾಗಿಲಿನ ಚಿಲಕವನ್ನು ಯಾರೋ ಕಳ್ಳರು ಯಾವುದೇ ಆಯಧದಿಂದ ಮೀಟಿ ತೆರೆದು  ಮನೆಯ ಒಳಗೆ ಪ್ರವೇಶಿಸಿ ಮೂರು ಕೋಣೆಯಲ್ಲಿದ್ದ ಕಪಾಟುಗಳನ್ನು ಯಾವುದೋ ಆಯುಧದಿಂದ ಮೀಟಿ ತೆರೆದು  ಒಟ್ಟು ಅಂದಾಜು 14,50,000=00 ರೂಪಾಯಿ ಬೆಲೆಬಾಳು ಸುಮಾರು 38 ಪವನ್ 5 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಫಿರ್ಯಾದಿದಾರರ ಲಿಖಿತ ದೂರಿನ ಸಾರಾಂಶ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 02-07-2022 07:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080