ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS        

ದಿನಾಂಕ: 31-08-2021 ರಂದು ಮಂಗಳೂರು ನಗರದ ಮೋರ್ಗರ್ನ್ಸ್ ಗೇಟ್ ಬಳಿ  ಕಾಸಿಯಾ ಚರ್ಚ್ನ ಹಿಂದಿನ ಗೇಟ್ ಹತ್ತಿರ ಪಿರ್ಯಾದಿ Floyd D'mello ದಾರರ ತಂದೆ ಫ್ರಾನ್ಸಿಸ್ ಡಿಮೆಲ್ಲೊ (70) ರವರು  ರಸ್ತೆ ದಾಟುತ್ತಿದ್ದ ವೇಳೆ ಸಾಯಂಕಾಲ ಸಮಯ ಸುಮಾರು 5:35 ಗಂಟೆಗೆ ಮಾರ್ನಮಿಕಟ್ಟೆ ಕಡೆಯಿಂದ ಮೋರ್ಗನ್ಸ್ ಗೇಟ್ ಕಡೆಗೆ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ KA-19-HE-1198 ನಂಬ್ರದ ಸುಝುಕಿ ಆಕ್ಸೆಸ್ ಸ್ಕೂಟರನ್ನು ಅದರ ಸವಾರೆ ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ  ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಗೆ ಢಿಕ್ಕಿ ಪಡಿಸಿದ್ದು, ಢಿಕ್ಕಿಯ ಪರಿಣಾಮ ಫ್ರಾನ್ಸಿಸ್ ಡಿಮೆಲ್ಲೊ  ರವರು ಕಾಂಕ್ರೀಟ್ ರಸ್ತೆಗೆ ಬಿದ್ದು ತಲೆಗೆ, ಮೂಗಿಗೆ, ಮುಖಕ್ಕೆ ಮತ್ತು ಎಡ ಕಾಲಿಗೆ ಗಾಯಗಳಾಗಿದ್ದು, ಬಲ ಕಾಲಿಗೆ ಮೂಳೆ ಮುರಿತದ ಗಂಭೀರ ಗಾಯವಾಗಿ ಪ್ರಜ್ಞಾಹೀನರಾಗಿದ್ದವರನ್ನು ಸಾರ್ವಜನಿಕರು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು, ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತ ಪಡಿಸಿದ ಸ್ಕೂಟರ್ ಸವಾರೆಯ ಹೆಸರು ಹರ್ಷಿತಾ ಎಂದು ತಿಳಿದು ಬಂದಿರುತ್ತದೆ ಎಂಬಿತ್ಯಾದಿ.

Crime Reported in Traffic North PS

ದಿನಾಂಕ 30-08-2021 ರಂದು ಪಿರ್ಯಾದಿದಾರರಾದ ರಾಜೆಶ್ ಆಚಾರ್ಯ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-20-EP-0866 ನೇಯದರಲ್ಲಿ ನಾರಾಯಾಣ ಆಚಾರ್ಯ ರವರನ್ನು ಸಹ ಸವಾರರಾಗಿ ಕುಳ್ಳರಿಸಿಕೊಂಡು ಕಸಬಾ ಬೆಂಗ್ರೆ ಕಡೆಯಿಂದ ತಣ್ಣೀರುಬಾವಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಸಮಯ ಸಂಜೆ 18:15 ಗಂಟೆಗೆ ಭಾರತಿ ಶಿಪ್ ಯಾರ್ಡ್ ಕಂಪೆನಿಯಿಂದ ಸ್ವಲ್ಪ ಹಿಂದೆ ತಲುಪಿದಾಗ ಎದುಗಡೆಯಿಂದ ಅಂದರೆ ತಣ್ಣೀರುಬಾವಿ ಕಡೆಯಿಂದ ಕಸಬಾ ಬೆಂಗ್ರೆ ಕಡೆಗೆ ಸ್ಕೂಟರ್ ನಂಬ್ರ KA-19-EZ-6665 ನೇಯದರ ಸವಾರ ನಿಜಾಮುದ್ದೀನ್ ಕಸಬ ಮಂಗಳೂರು ಎಂಬವರು ಮಹಮ್ಮದ್ ಮುನೀರ್ ರವರನ್ನು ಸಹ ಸವಾರರಾಗಿ ಕುಳ್ಳರಿಸಿಕೊಂಡು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ವಾಹನಗಳ ಸವಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಹಣೆಯ ಬಲಭಾಗಕ್ಕೆ ರಕ್ತಗಾಯ, ಎರಡೂ ಹೆಬ್ಬರಳಿಗೆ ರಕ್ತಗಾಯ ಹಾಗೂ ಸಹ ಸವಾರರಾದ ನಾರಾಯಾಣ ಆಚಾರ್ಯ ರವರಿಗೆ ಸೊಂಟದ ಬಲಭಾಗಕ್ಕೆ ಗುದ್ದಿದ ರೀತಿ ಗಾಯವಾಗಿದ್ದು, ಹಾಗೂ ಆರೋಪಿ ಸ್ಕೂಟರಿನ ಸಹ ಸವಾರ ಮಹಮ್ಮದ್ ಮುನೀರ್ ರವರ ಮುಖಕ್ಕೆ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಮಹಮ್ಮದ್ ಮುನೀರ್ ಮಂಗಳೂರು ಹೈಲಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಪಿರ್ಯಾದಿದಾರರು ಹಾಗೂ ಸಹ ಸವಾರ ಪ್ರಥಮ ಚಿಕಿತ್ಸೆ ಪಡೆದಿರುವುದಾಗಿ ಪಿರ್ಯಾದಿ ಸಾರಾಂಶ.

Crime Reported in Mangalore North PS

ಉಳ್ಳಾಲ ಪೊಲೀಸ್ ಠಾಣಾ ಪೊಕ್ಸೋ ಆಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗಿರಿ ಮಾಡಿದ ಆರೋಪಿ ರವಿರಾಜ್ (31ವರ್ಷ) ಎಂಬಾತನನ್ನು ದಿನಾಂಕ 31-08-2021 ರಂದು ಸಂಜೆ ಮಂಗಳೂರು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಕಟ್ಟಡದ  6 ನೇ ಮಹಡಿಯಲ್ಲಿರುವ ಮಾನ್ಯ ತ್ವರಿತಗತಿ ನ್ಯಾಯಾಲಯ (FTSC-1 COURT) ನೇದರ ಮುಂದೆ ಹಾಜರುಪಡಿಸುವರೇ ಉಳ್ಳಾಲ ಪೊಲೀಸ್ ಠಾಣೆಯ  ಸಿಬ್ಬಂದಿಗಳಾದ ಪಿಸಿ  ಚಿದಾನಂದ ಮತ್ತು ಪಿಸಿ  ಅಕ್ಬರ್ ರವರು ಭದ್ರಿಕೆಯಲ್ಲಿ ಕರೆದುಕೊಂಡು ಬಂದಿದ್ದು ಸಂಜೆ ಸುಮಾರು 5-00 ಗಂಟೆ ವೇಳೆಗೆ ಪೊಲೀಸ್ ಸಿಬ್ಬಂದಿಗಳ ಭದ್ರಿಕೆಯಲ್ಲಿದ್ದ ಆರೋಪಿ ರವಿರಾಜ್ ಎಂಬಾತನು ತಪ್ಪಿಸಿಕೊಂಡು ಪರಾರಿಯಾಗಲು 6 ನೇ ಮಹಡಿಯಿಂದ ಕೆಳಗೆ ಹಾರಿದ ಪರಿಣಾಮ ಬಿದ್ದುಗಾಯಗೊಂಡು ಮೃತಪಟ್ಟಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿಯಾಗಿರುತ್ತದೆ

Crime Reported in Traffic South PS

ದಿನಾಂಕ :31-08-2021 ರಂದು ಪಿರ್ಯಾದಿ PADMANABHA ದಾರರು ಅವರ ಮೋಟಾರ್ ಸೈಕಲ್ ನಂಬ್ರ: KA-21Y-6955 ನೇದನ್ನು ಅವರ ಬಾಡಿಗೆ ಮನೆಯಾದ ಕಾಫಿಕಾಡುವಿನಿಂದ ದೇರಳಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ  ಸಮಯ ಸುಮಾರು  ಬೆಳಗಿನ ಜಾವ 5-00 ಗಂಟೆಗೆ ಕಲ್ಲಾಪು ಎಂಬಲ್ಲಿಗೆ ತಲುಪುತ್ತಿದ್ದಂತೆ ತೊಕ್ಕೊಟ್ಟು ಕಡೆಯಿಂದ ಕಲ್ಲಾಪು ಕಡೆಗೆ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಮಿನಿ ಟೆಂಪೋ ನಂಬ್ರ KA-19-AC-7335 ನೇದರ ಚಾಲಕ ಹನೀಪ್ ಎಂಬಾತನು ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ ಟೆಂಪೋವನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ಅವರ ಬಲಗೈ ಅಂಗೈಯ ತಟ್ಟಿಗೆ ಮೂಳೆ ಮುರಿತದ ಗಾಯ,ಬಲಕಣ್ಣಿನ ರೆಪ್ಪೆಗೆ ರಕ್ತ ಬರುವ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ದೇರಳ ಕಟ್ಟೆ K.S. ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ.ಎಂಬಿತ್ಯಾದಿ

Crime Reported in Moodabidre PS

ಪಿರ್ಯಾದಿದಾರರನ್ನು ಆರೋಪಿ JAMAL  ಪ್ರೀತಿಸುವಂತೆ ಒತ್ತಾಯಿಸುತ್ತಾ ಮೈ ಕೈ ಮುಟ್ಟಿ ಕಿರುಕುಳವನ್ನು ನೀಡುತ್ತಿದ್ದು, ಪಿರ್ಯಾದಿದಾರರ ಅಣ್ಣಂದಿರು ಎಷ್ಟೇ ಬುದ್ದಿವಾದವನ್ನು ಹೇಳಿದರೂ ಆತನು ಕೇಳದೇ ಇದ್ದು. ಪಿರ್ಯಾದಿದಾರರಿಗೆ ಪದೇ ಪದೇ ಪೋನ್ ಕರೆ ಮಾಡಿ ಪ್ರೀತಿಸುವಂತೆ ಒತ್ತಾಯಿಸುತ್ತಿರುವುದಲ್ಲದೇ ದಿನಾಂಕ: 29/08/2021 ರಂದು ಪಿರ್ಯಾದಿದಾರರು ಮನೆಯಲ್ಲಿ ಒಬ್ಬಳೇ ಇರುವಾಗ ಆರೋಪಿಯು  ಮನೆಗೆ ಬಂದು ಪಿರ್ಯಾದಿದಾರರನ್ನು  ಪ್ರೀತಿಸು ಎಂದು ಒತ್ತಾಯಿಸಿದಾಗ ಪಿರ್ಯಾದಿದಾರರು ನಿರಾಕರಿಸಿದ್ದು, ಆ ಸಮಯದಲ್ಲಿ ಪಿರ್ಯಾದಿದಾರರನ್ನು ಆರೋಪಿಯು ಗಟ್ಟಿಯಾಗಿ ಹಿಡಿದು ತಬ್ಬಿಕೊಂಡಾಗ ಪಿರ್ಯಾದಿದಾರರು ದೂಡಿ ಹೊರಗಡ ಓಡಿದಾಗ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆಯನ್ನು ಹಾಕಿದ್ದು, . ದಿನಾಂಕ: 30/08/2021 ರಂದು 11:00 ಗಂಟೆಗೆ ತಲೆನೋವಿಗಾಗಿ ಪಿರ್ಯಾಧಿದಾರರು ತನ್ನ ತಾಯಿ ಹಾಗೂ ಅತ್ತಿಗೆ ರೊಂದಿಗೆ ಮೂಡಬಿದರೆ ಸರಕಾರಿ ಆಸ್ಪತ್ರೆಗೆ ಹೋದಾಗ ಆರೋಪಿಯು ಪಿರ್ಯಾದಿದಾರರನ್ನು ಹಿಂಬಾಲಿಸಿಕೊಂಡು ಬಂದಿದ್ದು,ಅಲ್ಲಿ ಕೂಡಾ ತೊಂದರೆಯನ್ನು ನೀಡಿದ್ದು,  ಈ ಬಗ್ಗೆ ಪಿರ್ಯಾದಿದಾರರು ಠಾಣೆಗೆ ಬಂದು ದೂರನ್ನು ನೀಡಿದ್ದು, ಆತನಿಗೆ ಬುದ್ದಿವಾದವನ್ನು ತಿಳಿಸಿ ಕಳುಹಿಸಿಕೊಟ್ಟಿದ್ದು  ಆರೋಪಿತನು ಮನೆಗೆ ಹೋಗುವಾಗ ದಾರಿ ಮದ್ಯೆ , ಪಿರ್ಯಾಧಿದಾರರನ್ನು ಉದ್ದೇಶಿಸಿ ನಿಮಗೆ ಬುದ್ದಿ ಕಳಿಸುತ್ತೇನೆಂದು ಹೇಳಿ ಹೋಗಿದ್ದು, ದಿನಾಂಕ 31-08-2021 ರಂದು  ಬೆಳಿಗ್ಗೆ 08:00 ಗಂಟೆಗೆ  ಆರೋಪಿ ಜಮಾಲ್ ನ ಮನೆಯವರು ಪಿರ್ಯಾಧಿಯ ಮನೆಗೆ ಬಂದು ಪಿರ್ಯಾಧಿಯನ್ನು  ಮತ್ತು ಅವರ ಮನೆಯವರನ್ನು ಉದ್ದೇಶಿಸಿ  ನಿನ್ನೆ ನಿಮ್ಮೊಂದಿಗೆ ಹೋದ ಜಮಾಲ್  ಮನೆಗೆ ಬಾರದೇ ಸಂಬಂಧಿಕರ ಮನೆಗೆ ಹೋಗದೇ ಕಾಣೆಯಾಗಿದ್ದು,  ಆತನು ಮನೆಗೆ ಬಾರದಿದ್ದಲ್ಲಿ ನಿಮ್ಮನ್ನು ಬಿಡುವುದಿಲ್ಲ ಎಂದು ಬೆದರಿಕೆಯನ್ನು ಹಾಕಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ..

 

2) ಪಿರ್ಯಾದಿ AMITH KUMAR ದಾರರು ಕೆಎ-20-ಎಎ-6327 ಮಾಲಕರಾಗಿದ್ದು ಅವರ ಟೆಂಪೊದಲ್ಲಿ ಚಾಲಕರು ಎ.ರಾಜು ಎಂಬವರಾಗಿರುತ್ತಾರೆ ಗೂಡ್ಸ್ ವಾಹನದಲ್ಲಿ ಪ್ರತಿ ವಾರಕ್ಕೊಮ್ಮೆ ಮುಂಬೈ ಗೆ ದಿನಸಿ ಸಾಮಾಗ್ರಿಗಳನ್ನು ಕೊಂಡು ಹೋಗಿ ವಾಪಾಸು ಅಲ್ಲಿಂದ ಬರುವಾಗ ಮಂಗಳೂರು, ಮೂಡಬಿದ್ರೆ ಇನ್ನಿತರೆ ಕಡೆಗೆ ಗೂಡ್ಸ್ ಸಾಮಾಗ್ರಿಗಳನ್ನು ತರುವುದಾಗಿದೆ. ದಿನಾಂಕ: 17-08-2021 ರಂದು ಬೆಳಗ್ಗೆ ಸಮಯ ಸುಮಾರು 08.30 ಗಂಟೆಯಿಂದ 09.00 ಗಂಟೆಗೆ ಶೀತಲ್ ಟ್ರಾವೆಲ್ಸ್ ಮಾಲಿಕರಾದ ಶ್ರೀಕಾಂತ್ ಎಂಬವರು ಪಿರ್ಯಾದಿದಾರಿಗೆ ಫೋನ್ ಕರೆ ಮಾಡಿ ಮುಂಬೈ ಸೈಯನ್ ಚುನ್ನ ಬಟ್ಟಿ ಎಂಬಲ್ಲಿ ತನ್ನ ಗೂಡ್ಸ್ ಮತ್ತು ಟ್ರಾವೆಲ್ಸ್ ಆಫೀಸ್ ನಲ್ಲಿ ಮಂಗಳೂರಿಗೆ ಗೂಡ್ಸ್ ಪಾರ್ಸೆಲ್ ಇದೆ ವ್ಯಾಣಿಜ್ಯ ತೆರಿಗೆಯನ್ನು ಕಟ್ಟಿರುತ್ತದೆ ಎಂಬುದಾಗಿ ತಿಳಿಸಿದ್ದು, ಹಾಗೇ ಅದೇ ದಿವಸ ವಿಶಾಲ್ ಮತ್ತು ಶ್ರೀ ಟ್ರಾವೆಲ್ಸ್ ನವರು ಗೂಡ್ಸ್ ಸಾಮಾಗ್ರಿಗಳನ್ನು ಮಂಗಳೂರಿಗೆ ತರುವ ಬಗ್ಗೆ ತಿಳಿಸಿದ್ದರು. ಅದರಂತೆ ಅವರು ವಾಹನದ ಚಾಲಕನಿಗೆ ಫೋನ್ ಮಾಡಿ ವಿಚಾರವನ್ನು ತಿಳಿಸಿ ಶೀತಲ್, ವಿಶಾಲ್, ಶ್ರೀ ಟ್ರಾವೆಲ್ಸ್ ವಿಳಾಸವನ್ನು ಕೊಟ್ಟಿರುತ್ತಾರೆ. ಅದರಂತೆ  ವಾಹನದ ಚಾಲಕ ರಾಜು ಎಂಬಾತನು ಮೂರು ಟ್ರಾವೆಲ್ಸ್ ಆಫೀಸ್ ನಿಂದ ಗೂಡ್ಸ್ ಸಾಮಾಗ್ರಿಗಳನ್ನು ತುಂಬಿಸಿಕೊಂಡು ದಿನಾಂಕ: 17-08-2021 ರಂದು ಸಂಜೆ ಮುಂಬೈನಿಂದ ಹೊರಟು ಮಂಗಳೂರು ಕಡೆಗೆ ಬರುತ್ತಿರುವಾಗ ದಿನಾಂಕ: 18-08-2021 ರಂದು ಬೆಳಗಿನ ಜಾವ ಕರ್ನಾಟಕದ ಗಡಿ ಭಾಗದ ನಿಪ್ಪಣಿ ಎಂಬಲ್ಲಿ ವಾಣಿಜ್ಯ ಅಧಿಕಾರಿಗಳು ಟೆಂಪೋ ವಾಹನವನ್ನು ಹಿಡಿದು ಗೂಡ್ಸ್ ಸಾಮಾಗ್ರಿಗಳ ಬಗ್ಗೆ ಬಿಲ್ ಗಳನ್ನು ಪರಿಶೀಲಿಸಿ ಟ್ಯಾಕ್ಸ್ ಹಣವನ್ನು ಬರಿಸಿಲ್ಲವೆಂದು ಗೂಡ್ಸ್ ಸಾಮಾಗ್ರಿಗಳ ಸಮೇತ ವಾಹನವನ್ನು ವಶಕ್ಕೆ ಪಡೆದುಕೊಂಡು ರೂ 3, 50,000/- ಹಣವನ್ನು ಫೆನಾಲ್ಟಿ ಹಾಕಿದ್ದು ವಿಶಾಲ್ ಮತ್ತು ಶ್ರೀ ಟ್ರಾವೆಲ್ಸ್ ನವರು ಒಟ್ಟು 2, 00, 000/- ಹಣವನ್ನು ಕೊಟ್ಟಿರುತ್ತಾರೆ. ಶೀತಲ್ ಟ್ರಾವೆಲ್ಸ್ ಮಾಲಿಕರು ಪಿರ್ಯಾದಿದಾರರ ಮಾತಿಗೆ ಸರಿಯಾಗಿ ಸ್ಪಂದಿಸದೇ ನೀವು ಫೆನಾಲ್ಟಿಯನ್ನು ಕಟ್ಟಿ ಗೂಡ್ಸ್ ಸಾಮಾಗ್ರಿಗಳನ್ನು ತಂದ ಕೂಡಲೇ ಕೊಡುವುದಾಗಿ ತಿಳಿಸಿದ್ದು. ನಂತರ  ಬೆಳಗಾಂ ಗೆ ಹೋಗಿ ವಾಣಿಜ್ಯ ತೆರೆಗೆ ಕಛೇರಿಯ ಅಧಿಕಾರಿಗಳಿಗೆ ಫೆನಾಲ್ಟಿ ಹಾಕಿದ ರೂ 3,50,000/- ಹಣವನ್ನು ಪಾವತಿಸಿ ಗೂಡ್ಸ್ ಸಾಮಾಗ್ರಿಗಳ ಸಮೇತ ಟೆಂಪೋ ವಾಹನವನ್ನು ಬಿಡುಗಡೆಮಾಡಿ ಕಾಂತವಾರದಲ್ಲಿ ಗೋಡನ್ ನಲ್ಲಿ ಇರಿಸಿದ್ದು,ಈ ದಿನ ಶೀತಲ್ ಟ್ರಾವೆಲ್ಸ್ ಮಾಲಿಕರು ಟೆಂಪೋದಲ್ಲಿ ಬಂದು ಅವರ ಗೂಡ್ಸ್ ಸಾಮಾಗ್ರಿಗಳನ್ನು ಕೊಂಡು ಹೋಗಿರುತ್ತಾರೆ. ಅವರು ಗೂಡ್ಸ್ ಸಾಮಾಗ್ರಿಗಳನ್ನು ಕೊಂಡು ಹೋಗಲು ಬಂದಾಗ ಟ್ಯಾಕ್ಸ್ ಬರಿಸಿದ ಹಣವನ್ನು ಮತ್ತು ಟೆಂಪೋ ವಾಹನದ ಬಾಡಿಗೆಯನ್ನು ಕೇಳಿದ್ದು, ಯಾವುದೇ ಹಣವನ್ನು ಪಾವತಿಸಿರುವುದಿಲ್ಲ. ವಾಣಿಜ್ಯ ತೆರಿಗೆಯವರು ಹಾಕಿದ ಫೆನಾಲ್ಟಿ ಜೊತೆಗೆ ಪಿರ್ಯಾದಿದಾರರಿಗೆ  ರೂ 40,000/- ಇತರೆ ಖರ್ಚು ಅಗಿದ್ದು ಶೀತಲ್ ಟ್ರಾವೆಲ್ಸ್ ಮಾಲಿಕರು ಪಿರ್ಯಾಧಿದಾರರಿಗೆ ಮೋಸ ವಂಚನೆ ಮಾಡುವ ಉದ್ದೇಶದಿಂದ ಗೂಡ್ಸ್ ಸಾಮಾಗ್ರಿಗಳಿಗೆ ವಾಣಿಜ್ಯ ತೆರಿಗೆ ಕಟ್ಟಿರುವುದಾಗಿ ನಂಬಿಸಿರುವುದಲ್ಲದೇ ಪಿರ್ಯಾದಿದಾರರಿಗೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ವಾಣಿಜ್ಯ ತೆರಿಗೆ ಕಟ್ಟಿರುವುದಾಗಿ ಸುಳ್ಳು ಆಸ್ವಾಸನೆಯನ್ನು ನೀಡಿ, ಅಪ್ರಾಮಾಣಿಕನಾಗಿ ಪ್ರೇರೆಪಿಸಿ ವಾಣಿಜ್ಯ ಇಲಾಖಾಗೆ ಪಾವತಿಸಿದ ಹಣವನ್ನು ವಾಪಾಸು ಕೊಡದೇ ಮೋಸ ವಂಚನೆ ಮಾಡಿರುತ್ತಾರೆ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 01-09-2021 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080