ಅಭಿಪ್ರಾಯ / ಸಲಹೆಗಳು

 

Crime Reported in Mangalore East Traffic PS

ದಿನಾಂಕ 30-10-2021 ರಂದು ಪಿರ್ಯಾದಿದಾರರಾದ ಹಮ್ನಾಹಪ್ಸ (18) ,ಅವರ ತಾಯಿ ನೂರುನ್ನಿಸ(43) ಮತ್ತು ಅಬ್ದುಲ್ ರಹೀಂ ಅಲಿ (6) ರವರುಗಳು ಅತ್ತಾವರದಲ್ಲಿರುವ ತಮ್ಮಬಾಡಿಗೆ ಮನೆಯಿಂದ KA19-AD-4216  ಆಟೋರಿಕ್ಷಾದಲ್ಲಿ ಜೆಪ್ಪು ನಲ್ಲಿರುವ ಅಜ್ಜಿಮನೆಗೆಂದು ಹೊರಟು ಮಧ್ಯಾಹ್ನಸುಮಾರು 12.30 ಗಂಟೆಗೆ ಅತ್ತಾವರ ಕಡೆಯಿಂದ ಕೋಟಿಚೆನ್ನಯ್ಯ ಸರ್ಕಲ್ಕಡೆಗೆ ಬರುತ್ತಾ ನಂದಿಗುಡ್ಡ ಸ್ಮಶಾನದ ಎದುರಿನ ಮೈತ್ರಿ ಆಟೋಮೋಟಿವ್ಹ್ಗ್ಯಾರೇಜ್ ಎದುರಿನ ರಸ್ತಗೆ ಬಂದು ತಲುಪುತ್ತಿದ್ದಂತೆ ಆಟೋರಿಕ್ಷಾವನ್ನು ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಆಟೋರಿಕ್ಷಾದ ಎದುರುಗಡೆಯಿಂದ ಸಾರ್ವಜನಿಕರೊಬ್ಬರು ಸವಾರಿಮಾಡಿಕೊಂಡು ಹೋಗುತ್ತಿದ್ದ  KA-19-HA-1190 ಸ್ಕೂಟರಿನ ಹಿಂಬದಿಗೆ ಡಿಕ್ಕಿಹೊಡೆದ ಪರಿಣಾಮ ಆಟೋರಿಕ್ಷಾವು ಮುಗುಚಿಬಿದ್ದು, ನೂರುನ್ನಿಸರವರಿಗೆ ಮೂಗಿನ ಮಧ್ಯ, ಹಣೆಯ ಭಾಗ ಮತ್ತು ಬಲತುಟಿಯ ಬಳಿರಕ್ತ ಗಾಯವಾಗಿದ್ದು, ಎಡಕೈ ಮೊಣಗಂಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಪಿರ್ಯಾದಿದಾರರಿಗೆ ಬೆನ್ನುಸೊಂಟ ಮತ್ತು ಎರಡು ಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿದ್ದು, ಅಬ್ದುಲ್ರಹೀಂಅಲಿ (6) ರವರಿಗೆಎ ಡಕಾಲಿನ ಮೊಣಗಂಟಿಗೆ ಗುದ್ದಿದಗಾಯವಾಗಿರುತ್ತದೆ. ಆಟೋರಿಕ್ಷಾ ಚಾಲಕ ಸದ್ರಿ ಆಟೋ ರಿಕ್ಷಾದಲ್ಲಿಗಾಯಾಳುಗಳನ್ನು ಫಾದರ್ಮುಲ್ಲ ರ್ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದು ಕೊಂಡು ಹೋಗಿದ್ದು, ನೂರುನ್ನಿಸರವರಿಗೆ ವೈದ್ಯರು ಪರೀಕ್ಷಿಸಿ ಹೊರರೋಗಿಯಾಗಿ ಚಿಕಿತ್ಸೆನೀಡಿರುತ್ತಾರೆ. ಪಿರ್ಯಾದಿಮತ್ತುಅಬ್ದುಲ್ರಹೀಂಅಲಿ (6) ರವರುಮನೆಮದ್ದುಮಾಡಿಕೊಂಡಿದ್ದು, ಪಿರ್ಯಾದಿದಾರರುಗಾಯಾಳುನೂರುನ್ನಿಸರವರಆರೈಕೆಮಾಡುತ್ತಿದ್ದರಿಂದ ಈ ದಿನ ತಡವಾಗಿ ಬಂದು ಅಪಘಾತದ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕಾಗಿ ನೀಡಿದ ಪಿರ್ಯಾದಿಯಾಗಿರುತ್ತದೆ. ಎಂಬಿತ್ಯಾದಿ ಆಗಿರುತ್ತದೆ.

 

2) ದಿನಾಂಕ:31-10-2021 ರಂದು ಪಿರ್ಯಾದಿದಾರರಾದ ಕೃಷ್ಣಕುಮಾರ್.ಕೆ ಸಹಾಯಕ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಕೆ.ಪಿ.ಟಿ ಜಂಕ್ಷನ್ನಲ್ಲಿ ಕರ್ತವ್ಯದಲ್ಲಿಇದ್ದವೇಳೆ ಸಮಯ ಸುಮಾರು ಮಧ್ಯಾಹ್ನ 12.00 ಗಂಟೆಗೆ ಸದ್ರಿ ಜಂಕ್ಷನ್ನಲ್ಲಿ ಕರ್ತವ್ಯದಲ್ಲಿದ್ದ ಸಿಪಿಸಿ  ಯಶವಂತರವರು ಯೆಯ್ಯಾಡಿ ಕಡೆಯಿಂದ ಬರುತ್ತಿದ್ದ ವಾಹನಗಳಿಗೆ ನಿಲ್ಲುವಂತೆ ಸೂಚನೆ ನೀಡಿ, ಪದುವಾ ಕಡಯಿಂದ ಕೆ.ಪಿ.ಟಿ ಕಡೆಗೆ ಬಂದು ನಿಂತಿರುವ ವಾಹನಗಳಿಗೆ ಮುಂದಕ್ಕೆ ಚಲಿಸಲು ಸೂಚನೆ ನೀಡುವಾಗ ಕೆ.ಪಿ.ಟಿ ಜಂಕ್ಷನ್  ಕಡೆಯಿಂದ ಎಸ್. ಕೆ.ಎಸ್ ಕಡೆಗೆ KA-19Y-6489 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಪ್ರಶಾಂತ್ರ ವರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದೇ ರಸ್ತೆಯಲ್ಲಿ  KA-19-D-0864 ಲಾರಿಯನ್ನು ಅದರ ಚಾಲಕ ಸಮದ್ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲನ್ನು ಬಲಗಡೆಯಿಂದ ಓವರ್  ಟೇಕ್ ಮಾಡುವ ಭರದಲ್ಲಿ ಮೋಟಾರ್ ಸೈಕಲಿನ ಬಲಭಾಗದ ಹ್ಯಾಂಡಲಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್   ಸವಾರ ಪ್ರಶಾಂತ್ರವರು ಮೋಟಾರ್ ಸೈಕಲ್ ಸಮೇತ ರಾ.ಹೆ 66 ರ ಡಾಮಾರು ರಸ್ತೆಗೆ ಬಿದ್ದು, ಸದ್ರಿ ಲಾರಿಯ ಎಡಭಾಗದ ಹಿಂಬದಿಯ ಚಕ್ರಕ್ಕೆ ಸಿಲುಕಿ ಮೋಟಾರ್  ಸೈಕಲ್ ಸವಾರನನ್ನು ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋದ ಪರಿಣಾಮ ಸವಾರನ ತೊಡೆಯ ಭಾಗಕ್ಕೆ ಚರ್ಮ ಹರಿದ ತೀವ್ರ ರಕ್ತಗಾಯ, ಬಲ ಕಿಬ್ಬೊಟ್ಟೆಯ ಬಳಿ ರಕ್ತಗಾಯ ಮುಖಕ್ಕೆ ಬಲಕೈ ಮತ್ತು ಬಲ ಕಾಲಿಗೆ ತರಚಿದ ರಕ್ತಗಾಯವಾಗಿದ್ದು, ಗಾಯಾಳುವನ್ನು ಸಿಬ್ಬಂದಿಗಳ ಮತ್ತು ಸಾರ್ವಜನಿಕರ ಸಹಾಯದಿಂದ ಆಟೋ ರಿಕ್ಷಾವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:31-10-2021 ರಂದು ಮಧ್ಯಾಹ್ನ 2.02 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ.

 

Crime Reported in  Konaje PS

ಪಿರ್ಯಾದಿ Anilkumara Y M ದಾರರು ಅಜ್ಜಿ ಭದ್ರಮ್ಮ ಎಂಬವರೊಂದಿಗೆ ವಾಸವಾಗಿದ್ದು, ಈ ದಿನ ಬೆಳಿಗ್ಗೆ 08.00 ಗಂಟೆಗೆ ಕರ್ತವ್ಯಕ್ಕೆ ತೆರಳಿ ನಂತರ ಸುಮಾರು 14.00 ಗಂಟೆಗೆ ಪಿರ್ಯಾದಿದಾರು ಮನೆ ಬಂದಾಗ ಅವರ ಅಜ್ಜಿ ಭದ್ರಮ್ಮರವರು ಮನೆಯಲ್ಲಿ ಕಾಣದೇ ಇದ್ದು, ನೆರೆಹೊರೆಯಲ್ಲಿ ವಿಚಾರಿಸಿದಾಗ ಕಾಣದೇ ಇದ್ದು, ನಂತರ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿ ಸಂಬಂದಿಕರಲ್ಲಿ ವಿಚಾರಿಸಿದಾಗಲು ಯಾವುದೇ ಮಾಹಿತಿ ಇರುವುದಿಲ್ಲ. ನಂತರ ಠಾಣೆಗೆ ಬಂದು ಕಾಣೆಯಾದ ಅಜ್ಜಿಯನ್ನು ಹುಡುಕಿಕೊಡ ಬೇಕೆಂದು ದೂರು ನೀಡಿರುತ್ತಾರೆ ಎಂಬಿತ್ಯಾದಿ.

 

Crime Reported in Kavoor PS

ಪಿರ್ಯಾದಿ PAVAN ದಾರರ ಅಣ್ಣನಾದ ನಿಶಾನ್ (29) ವರ್ಷ ತಂದೆ: ಜಯರಾಮ ಶಾಂತಿನಗರ ಕಾವೂರು ಮಂಗಳೂರುನಲ್ಲಿ ಕುಟುಂಬದೊಂದಿಗೆ ವಾಸಮಾಡಿಕೊಂಡಿದ್ದು, ದಿನಾಂಕ 31/10/2021 ರಂದು ಬೆಳಿಗ್ಗೆ ಸುಮಾರು 11.00 ಗಂಟೆಗೆ ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ, ನಂತರ ಫಿರ್ಯಾದುದಾರರು ತಮ್ಮ ಸಂಬಂದಿಕರಲ್ಲಿ ಹಾಗೂ ನೆರೆಹೊರೆಯವರಲ್ಲಿ ವಿಚಾರಿಸಿದ್ದು ಫಿರ್ಯಾದುದಾರರ ಅಣ್ಣ ನಿಶಾನ್ ರವರ ಮಾಹಿತಿ ತಿಳಿದಿರುವುದಿಲ್ಲ ಆದುದರಿಂದ ಕಾಣೆಯಾದ ಫಿರ್ಯಾದುದಾರರ ಅಣ್ಣ ನಿಶಾನ್ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 01-11-2021 08:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080