Crime Reported in Mangalore North PS
ಪಿರ್ಯಾದಿದಾರರಾದ ಹರ್ಷಿತ್ ನಾಯಕ್ ರವರು ಮಂಗಳೂರು ವಿ.ಟಿ. ರೋಡ್‌ನಲ್ಲಿರುವ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸುಮಾರು 4 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, KA-19 HC-6191 ನಂಬ್ರದ ಹೊಂಡಾ ಆಕ್ವೀವಾ ಬಿಳಿ ಮತ್ತು ಸಿಲ್ವರ್ ಬಣ್ಣದ ಸ್ಕೂಟರ್‌ನ್ನು ಉಪಯೋಗ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ಎಂದಿನಂತೆ ದಿನಾಂಕ: 01-11-2021 ರಂದು ತನ್ನ ಬಾಬ್ತು ಸ್ಕೂಟರ್‌ನ್ನು ದೇವಸ್ಥಾನದ ಬಲಬದಿಯಲ್ಲಿ ಮಧ್ಯಾಹ್ನ ಸುಮಾರು 12-45 ಗಂಟೆಗೆ ನಿಲ್ಲಿಸಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ತಮ್ಮ ಮನೆಗೆ ಹೋಗಿ ನಂತರ ಮರಳಿ ಮಧ್ಯಾಹ್ನ ಸುಮಾರು 2-30 ಗಂಟೆಗೆ ಸ್ಕೂಟರ್‌ನ್ನು ಪಾರ್ಕ್ ಮಾಡಿದ್ದ ಅದೇ ಸ್ಥಳಕ್ಕೆ ಬಂದು ನೋಡಿದಾಗ ತಮ್ಮ ಸ್ಕೂಟರ್ ಅಲ್ಲಿ ಇರಲಿಲ್ಲ. ಅಂದಿನಿಂದ ಇಂದಿನ ದಿನದವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಸಿಗದ ಕಾರಣ ಈ ದಿನ ತಡವಾಗಿ ದೂರು ನೀಡಿರುತ್ತಾರೆ. ತಮ್ಮ ಬಾಬ್ತು KA-19 HC-6191 ನೇ ನೊಂದಣಿ ನಂಬ್ರದ ಹೊಂಡಾ ಆಕ್ವೀವಾ ಬಿಳಿ ಮತ್ತು ಸಿಲ್ವರ್ ಬಣ್ಣದ ಸ್ಕೂಟರ್‌ನ್ನು ಪಾರ್ಕ್ ಮಾಡಿ ನಿಲ್ಲಿಸಿದ್ದ ಸ್ಥಳದಿಂದ ಯಾರೋ ಕಳ್ಳರು ಅದನ್ನು ಡೈರಕ್ಟಾಗಿ ಸ್ಟಾರ್ಟ್ ಮಾಡಿ ಅಥವಾ ಬೇರೆ ಕೀಯನ್ನು ಉಪಯೋಗಿಸಿ ಕಳವು ಮಾಡಿಕೊಂಡು ಹೋಗಿರುವುದಾಗಿ ಹಾಗೂ ಕಳವಾದ ಸ್ಕೂಟರ್‌ನ ಸೀಟಿನ ಅಡಿಯಲ್ಲಿ ಸ್ಕೂಟರ್‌ನ ಆರ್‌ಸಿ, ವಿಮಾ ಪತ್ರ, ಎಮ್ಮಿಶನ್ ಟೆಸ್ಟ್ ಸರ್ಟಿಫಿಕೇಟ್‌ನ ಮೂಲ ದಾಖಲಾತಿಗಳು ಮತ್ತು ಲೈಸೆನ್ಸ್‌ನ ಜೆರಾಕ್ಸ್ ಪ್ರತಿಯನ್ನು ಕಳವು ಮಾಡಿಕೊಂಡಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶವಾಗಿರುತ್ತದೆ.
Crime Reported in Panambur PS
ದಿನಾಂಕ 01-12-2021 ರಂದು ಉಮೇಶ್ ಕುಮಾರ್ ಎಂ.ಎನ್. ಪೊಲೀಸ್ ಉಪ ನಿರೀಕ್ಷಕರು, ಪಣಂಬೂರು ಪೊಲೀಸ್ ಠಾಣೆರವರು ಠಾಣಾ ಸಿಬ್ಬಂದಿ ದಾದಾಸಾಬ್ ರವರೊಂದಿಗೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ 12-30 ಗಂಟೆಗೆ ಪಣಂಬೂರು ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ತಣ್ಣೀರು ಬಾವಿಯಲ್ಲಿರುವ ಗೆಸ್ಟ್ ಹೌಸ್ ಡಾಂಬಾರು ರಸ್ತೆಯ ಬದಿಯಲ್ಲಿ ಒಬ್ಬಾತನು ನಡೆದುಕೊಂಡು ಬರುತ್ತಿದ್ದು ಅಮಲು ಪದಾರ್ಥ ಸೇವಿಸಿದವರಂತೆ ಕಂಡುಬಂದಿದ್ದು, ಅವನನ್ಹು ವಿಚಾರಿಸಿ ವೈದ್ಯಕೀಯ ತಪಾಸಣೆ ಬಗ್ಗೆ ವೈದ್ಯಾಧಿಕಾರಿಗಳು, ಎ,ಜೆ.ಆಸ್ಪತ್ರೆ, ಕುಂಟಿಕಾನ, ಮಂಗಳೂರುರವರ ಬಳಿ ಕಳುಹಿಸಿಕೊಟ್ಟಿದ್ದು. ವೈದ್ಯಾಧಿಕಾರಿಗಳು ಪರೀಕ್ಷಿಸಿ ಗಾಮಜಾ ಸೇವನೆ ಮಾಡಿರುವುದಾಗಿ ಧಡಪತ್ರ ನೀಡಿರುತ್ತಾರೆ. ಆದುದರಿಂದ ಆಪಾದಿತನಾದ ರೋಹಿತ್ ಆರ್. ಪ್ರಾಯ 20 ವರ್ಷ, ವಾಸ: ತಣ್ಣೀರುಬಾವಿ ಗೆಸ್ಟ್ ಹೌಸ್ ಬಳಿ, ತಣ್ಣೀರು ಬಾವಿ. ಪಣಂಬೂರು, ಮಂಗಳೂರು ಎಂಬುವರು ಗಾಂಜಾ ಸೇವನೆ ಮಾಡಿರುವುದು ದೃಡ ಪಟ್ಟಿರುವುದರಿಂದ ಆತನ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿರುತ್ತದೆ
Crime Reported in Traffic North PS
ದಿನಾಂಕ 30-11-2021 ರಂದು ಪಿರ್ಯಾದಿ Rajesh ದಾರರು ತನ್ನ ಸ್ನೇಹಿತನಾದ ಕೃಷ್ಣ ರವರ ಜೊತೆಯಲ್ಲಿ ಸುರತ್ಕಲ್ ಪೋಸ್ಟ್ ಆಫೀಸ್ ಎದುರುಗಡೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ರಾ ಹೆ 66 ನೇ ರಸ್ತೆಯನ್ನು ಪಿರ್ಯಾದಿದಾರರು ಹಿಂದಿನಿಂದ ಹಾಗೂ ಪಿರ್ಯಾದಿದಾರರ ಸ್ನೇಹಿತ ಕೃಷ್ಣ ರವರು ಮುಂದಿನಿಂದ ರಸ್ತೆಯನ್ನು ದಾಟುತ್ತಾ ರಸ್ತೆಯ ಅಂಚಿನಲ್ಲಿ ಅಂದರೆ ಪ್ಲೈ ಓವರ್ ಪ್ರಾರಂಭವಾಗುವ ದಡದ ಬಳಿಗೆ ತಲುಪಿದಾಗ ಸಮಯ ಸುಮಾರು ಮಧ್ಯಾಹ್ನ 1:30 ಗಂಟೆಗೆ ಸುರತ್ಕಲ್ ಜಂಕ್ಷನ್ ಕಡೆಯಿಂದ ಮಂಗಳೂರು ಕಡೆಗೆ RJ-09-GB-0885 ನಂಬ್ರದ ಲಾರಿಯನ್ನು ಅದರ ಚಾಲಕ ಜಮ್ಸೆರ್ ಮೊಹಮ್ಮದ್ ಪಠಣ್ ಎಂಬಾತನು ದುಡುಕುತ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಕೃಷ್ಣ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರ ಬಲ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಹಾಗೂ ಬಲ ಕೆನ್ನೆಗೆ, ತಲೆಗೆ ಗುದ್ದಿದ ರೀತಿಯ ಗಾಯವಾಗಿ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಥರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ
Crime Reported in Traffic South PS
ಪಿರ್ಯಾದಿ AVANEESHA K M ದಾರರು ನಿನ್ನೆ ದಿನಾಂಕ: 30-11-2021 ರಂದು ಪಂಪ್ ವೆಲ್ ನಲ್ಲಿ ಕೆಲಸ ಮುಗಿಸಿ ಅವರ ತಮ್ಮನ ಬಾಬ್ತು ಸ್ಕೂಟರ್ ನಂಬ್ರ KA-21-EA-7154 ನೇದರಲ್ಲಿ ಸವಾರಿ ಮಾಡಿಕೊಂಡು ತೊಕ್ಕೊಟ್ಟು ಕಡೆಯಿಂದ ಅವರ ಮನೆಯಾದ ವರ್ಕಾಡಿ ಕಡೆಗೆ ದೇರಳಕಟ್ಟೆ ಮೂಲಕ ಹೋಗುತ್ತಾ ಸಂಜೆ ಸಮಯ ಸುಮಾರು 07.50 ಗಂಟೆಗೆ ಕುತ್ತಾರ್ ರಾಜರಾಜೇಶ್ವರಿ ದೇವಾಸ್ಥಾನದ ಬಳಿ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ದೇರಳಕಟ್ಟೆ ಕಡೆಯಿಂದ ಬರುತ್ತಿದ್ದ KA-19-EZ-3982 ನಂಬ್ರದ ಸ್ಕೂಟರನ್ನು ಅದರ ಸವಾರ ಸ್ಟೀವನ್ ಜಾಯ್ಸನ್ ಡಿ ಸೋಜಾ ಎಂಬಾತನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಬಲಗಾಲಿಗೆ ಮೂಳೆ ಮುರಿತದ ಗಾಯ ಮತ್ತು ಬಲಗೈಗೆ ತರಚಿದ ರೀತಿಯ ಗಾಯವಾಗಿದ್ದು ಅವರನ್ನು ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನೋಪೋಯ ಆಸ್ತತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಬಳಿಕ ಪಿರ್ಯಾದಿದಾರರು ಹೆಚ್ಚಿನ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಗೆ ಹೋಗಿ ದಾಖಲಾಗಿರುತ್ತಾರೆ. ಹಾಗೂ ಅಪಘಾತ ಪಡಿಸಿದ ಸ್ಕೂಟರ್ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತದೆ ಎಂಬಿತ್ಯಾದಿ
Crime Reported in Mangalore Rural PS
ಪಿರ್ಯಾದಿ Rajesh M.M. (31) ದಾರರು ಪಡು, ಬೊಂಡಂತಿಲ ಎಂಬಲ್ಲಿ ಹೆಂಡತಿ ಮಗುವಿನೊಂದಿಗೆ ವಾಸವಾಗಿದ್ದು, ದಿನಾಂಕ: 27-11-2021 ರಂದು ಬೆಳಿಗ್ಗೆ 9.00 ಗಂಟೆಗೆ ಮಗುವನ್ನು ಶಾಲೆಗೆ ಬಿಟ್ಟು ಪುತ್ತೂರಿಗೆ ಕೆಲಸಕ್ಕೆ ಹೋಗಿದ್ದು, ಮರಳಿ ರಾತ್ರಿ ಮನೆಗೆ ಬಂದಾಗ ಹೆಂಡತಿ ಕಾವ್ಯ (26 ವರ್ಷ) ಮನೆಯಲ್ಲಿ ಇಲ್ಲದೇ ಇದ್ದು, ಮಗು ಪಕ್ಕದ ಮನೆಯಲ್ಲಿದ್ದು, ಅವರಲ್ಲಿ ವಿಚಾರಿಸಿದಾಗ ತಮಗೆ ತಿಳಿದಿಲ್ಲವಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿದಾಗ ಸಹಾಯವಾಣಿಯವರು ಎಂದು ಹೇಳಿ ಕರೆ ಮಾಡಿ ನಿಮ್ಮ ಪತ್ನಿ ನಮ್ಮಲ್ಲಿದ್ದಾರೆ ಎಂಬುದಾಗಿ ತಿಳಿಸಿದ್ದು, ನಂತರ ದಿನಾಂಕ: 28-11-2021 ರಂದು ರಾತ್ರಿ 8.00 ಗಂಟೆಗೆ ಪತ್ನಿ ಕಾವ್ಯಾಳು ಸಹಾಯವಾಣಿಯವರಲ್ಲಿ ಸುಳ್ಯಕ್ಕೆ ತಾಯಿ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೋದವಳು ತಾಯಿ ಮನೆಗೂ ಹೋಗದೆ ಪಿರ್ಯಾದಿದಾರರ ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ ನಂತರ ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದೆ ಇರುವುದರಿಂದ ಠಾಣೆಗೆ ಬಂದು ಪಿರ್ಯಾದಿ ನೀಡುತ್ತಿರುವುದಾಗಿದೆ ಎಂಬಿತ್ಯಾದಿ.
ಕಾಣೆಯಾದವರ ಚಹರೆ ವಿವರ
ಹೆಸರು: ಕೆ.ಡಿ. ಕಾವ್ಯಾ
ವಯಸ್ಸು : 26 ವರ್ಷ
ಗೋದಿ ಮೈಬಣ್ಣ, ಎತ್ತರ- 4.9 ಅಡಿ
ಮಾತನಾಡುವ ಭಾಷೆ: ತುಳು ಮತ್ತು ಕನ್ನಡ
ಧರಿಸಿರುವ ಬಟ್ಟೆ- ಕೆಂಪು ಬಣ್ಣದ ಚೂಡಿದಾರ
Crime Reported in Mangalore East PS
ಪಿರ್ಯಾದಿ Manjula (54) ದಾರರ ಮಗಳಾದ ಕು|| ಪ್ರಿಯಾಂಕ ಪ್ರಾಯ 19 ವರ್ಷ ರವರು ದಿನಾಂಕ 29.11.2021 ರಂದು ಮಧ್ಯಾಹ್ನ 12:30 ಗಂಟೆಗೆ ತಾನು ವಿದ್ಯಾಭ್ಯಾಸ ಮಾಡಿಕೊಂಡಿರುವ ಕಾಲೇಜಿಗೆ ಹೋಗುವುದಾಗಿ ತಿಳಿಸಿದಂತೆ ಪಿರ್ಯಾದಿದಾರರ ಮಗನಾದ ಕಾರ್ತಿಕ್ ನು ಕಾಲೇಜಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿರುತ್ತಾನೆ. ನಂತರ ಕಾರ್ತಿಕನು ಮಧ್ಯಾಹ್ನ ಸುಮಾರು 1:30 ಗಂಟೆಗೆ ಕಾಲೇಜಿನಿಂದ ಪ್ರಿಯಾಂಕಳನ್ನು ಮನೆಗೆ ಕರೆತರಲು ಹೋದಾಗ ಅವಳು ಕಾಲೇಜಿನಲ್ಲಿ ಇಲ್ಲದೇ ಇದ್ದು, ಮನೆಗೂ ಕೂಡ ಈವರೆಗೆ ಬಂದಿರುವುದಿಲ್ಲ. ಕಾಣೆಯಾದ ಪ್ರಿಯಾಂಕಾಳನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ.
ಕಾಣೆಯಾದ ಮಹಿಳೆಯ ಚಹರೆ:
1) ಹೆಸರು : ಪ್ರಿಯಾಂಕ,
2) ತಂದೆ : ದಿವಂಗತ ಗಣಪತಿ ಶೇಟ್
3) ಪ್ರಾಯ : 19 ವರ್ಷ ( ಜನ್ಮ ದಿನಾಂಕ : 25.04.2002),
4) ಎತ್ತರ : 5 ಅಡಿ ಎತ್ತರ
5) ಚಹರೆ : ಸಾಧಾರಣ ಮೈಕಟ್ಟು, ಕಪ್ಪು ಬಣ್ಣದ ಕೂದಲು, ಸಾಧಾರಣ ಕಣ್ಣು, & ಮೂಗು,
ಮುಖದ ಬಲಬದಿಯಲ್ಲಿ ಎಳ್ಳು ಗಾತ್ರದ ಮಚ್ಚೆ ಇರುತ್ತದೆ
6) ಬಣ್ಣ : ಬಿಳಿ ಮೈ ಬಣ್ಣ
7) ಉಡುಪು : ಚುಕ್ಕೆಗಳಿರುವ ಬಿಳಿ & ನೀಲಿ ಮಿಶ್ರಿತ ಚೂಡಿದಾರ್ ಟಾಪ್ ಹಾಗೂ ನೀಲಿ ಬಣ್ಣದ ಪ್ಯಾಂಟ್
8) ಭಾಷೆ : ಕನ್ನಡ,ಇಂಗ್ಲೀಷ್, ಹಿಂದಿ, ತುಳು, ಕೊಂಕಣಿ. ಮಾತನಾಡುತ್ತಾಳೆ
9) ಕಾಣೆಯಾದ ಸ್ಥಳ : ಬೆಸೆಂಟ್ ಕಾಲೇಜ್, ಮಂಗಳೂರು.