ಅಭಿಪ್ರಾಯ / ಸಲಹೆಗಳು

Crime Reported in Konaje PS

ದಿನಾಂಕ 02-02-2022 ರಂದು ಪಿರ್ಯಾದಿ PSI Sharanappa Bhandari ದಾರರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 14-05 ಗಂಟೆಗೆ  ಬಂಟ್ವಾಳ ತಾಲೂಕು  ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಮಹಮ್ಮದ್ ಅರ್ಷಾದ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿತನನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ  “Positive for Amphitemine” ಎಂಬುದಾಗಿ  ದೃಢಫತ್ರವನ್ನು ನೀಡಿರುತ್ತಾರೆ.  ಆರೋಪಿ ಮಹಮ್ಮದ್ ಅರ್ಷಾದ್ ನು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

Crime Reported in Mangalore East Traffic PS             

ದಿನಾಂಕ : 02-02-2022 ರಂದು ಮಧ್ಯಾಹ್ನ ಪಿರ್ಯಾದಿ ZAHEER AHAMED ದಾರರು  ಕೆಲಸದಲ್ಲಿದ್ದ ವೇಳೆ ಪಿರ್ಯಾದಿದಾರರ ಚಿಕ್ಕಮ್ಮ ಶ್ರೀಮತಿ ಶಾಹಿನಾ ರವರು ಕರೆ ಮಾಡಿ, ಪಿರ್ಯಾದಿದಾರರ ಚಿಕ್ಕಪ್ಪ ಮಹಮ್ಮದ್ ಶರೀಫ್ ಇಸ್ಮಾಯಿಲ್ ರವರಿಗೆ ಅಪಘಾತವುಂಟಾಗಿ ಚಿಕಿತ್ಸೆ ಬಗ್ಗೆ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಆಸ್ಪತ್ರೆಗೆ ತೆರಳಿ ಅಲ್ಲಿದ್ದವರಲ್ಲಿ ಅಪಘಾತದ ಬಗ್ಗೆ ವಿಚಾರಿಸಿಕೊಂಡಲ್ಲಿ, ಪಿರ್ಯಾದಿದಾರರ ಚಿಕ್ಕಪ್ಪ  ಮಹಮ್ಮದ್ ಶರೀಫ್ ಇಸ್ಮಾಯಿಲ್ ರವರು ಈದಿನ ಮಧ್ಯಾಹ್ನ ಸುಮಾರು 12-15 ಗಂಟೆಗೆ KA-19-D-5234 ನಂಬ್ರದ ಟೂರಿಸ್ಟ್  ಕಾರನ್ನು ಮಂಗಳಾದೇವಿ ಕಡೆಯಿಂದ ಮಂಕಿಸ್ಟ್ಯಾಂಡ್  ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾದ ರೀತಿಯಲ್ಲಿ  ಚಲಾಯಿಸಿಕೊಂಡು ಹೋಗುತ್ತಾ ರಾಮಕೃಷ್ಣ ಆಶ್ರಮದ ಮುಖ್ಯದ್ವಾರದಿಂದ ಸ್ವಲ್ಪ ಮುಂದೆ ಅಂದರೆ ಗಣೇಶ್ ಪ್ರಸಾದ್ ಬಿಲ್ಡಿಂಗ್ ಎದುರುಗಡೆ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ KA-19-D-6746 ನಂಬ್ರದ ಟೆಂಪೋ ಟ್ರಾವೆಲರ್ ವಾಹನದ ಹಿಂಭಾಗ ಎಡಬದಿಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿಯ ಬಳಿಕ ಕಾರು ರಸ್ತೆ ಬದಿಯ ಪುಟ್ ಪಾತ್ ಮೇಲೆ ಹತ್ತಿ ನಿಂತಿರುತ್ತದೆ. ಈ ಅಪಘಾತದಲ್ಲಿ ಗಾಯಗೊಂಡ ಅಪಘಾತಪಡಿಸಿದ ಕಾರಿನ ಚಾಲಕರಾದ ಪಿರ್ಯಾದಿದಾರರ ಚಿಕ್ಕಪ್ಪ ಮಹಮ್ಮದ್ ಶರೀಫ್ ಇಸ್ಮಾಯಿಲ್ ರವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಆಟೋರಿಕ್ಷಾಯೊಂದರಲ್ಲಿ ಚಿಕಿತ್ಸೆ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಯ ಮಧ್ಯದಲ್ಲಿ ಮೃತಪಟ್ಟಿರುವುದಾಗಿದೆ ತಿಳಿದು ಬಂದಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 02-02-2022 08:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080