ಅಭಿಪ್ರಾಯ / ಸಲಹೆಗಳು

Crime Reported in Panambur PS

ದಿನಾಂಕ 02-04-2022 ರಂದು ಬೆಳಿಗ್ಗೆ 9.00 ಗಂಟೆಗೆ ಠಾಣಾ ಪಿ ಎಸ್ ಐ ಉಮೇಶ್ ಕುಮಾರ್ ರವರು ಠಾಣಾ ಹೆಚ್.ಸಿ. ಚಂದ್ರಹಾಸರವರೊಂದಿಗೆ  ಠಾಣಾ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿ ಇದ್ದ ಸಮಯ ಬೆಳಿಗ್ಗೆ 09.30-00 ಗಂಟೆಗೆ ಜೋಕಟ್ಟೆ ರೈಲ್ವೇ ಟ್ರಾಕ್ ಬಳಿ  ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ   ಮಹಮ್ಮದ್ ಸಫ್ವಾನ್, ಪ್ರಾಯ 19 ವರ್ಷ,  ವಾಸ. ಸೂರಲ್ಪಾಡಿ , ಸಲ್ವಾ ಚಿಕನ್ ಸೆಂಟರ್ ಹಿಂಬದಿ, ಕೈಕಂಬ ಮಂಗಳೂರು ಎಂಬವನನ್ನು   ವಶಕ್ಕೆ ಪಡೆದುಕೊಂಡಿದ್ದು, ಎ.ಜೆ.ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಗೊಳಪಡಿಸಿದ್ದಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡ ಪಟ್ಟಿರುವುದರಿಂದ ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

 

Crime Reported in Mangalore East PS

ಪಿರ್ಯಾದಿ SMITHA H NAYAK (49) ದಾರರ ಗಂಡ ಹರೀಶ್ ನಾಯಕ್(62) ಎಂಬುವವರು ದಿನಾಂಕ 23-03-2022 ರಂದು ಬೆಳಿಗ್ಗೆ 10:30 ಗಂಟೆಗೆ ಮನೆಯಿಂದ KA19HC4867 ಆಕ್ಟಿವ ಸ್ಕೂಟರ್ ನಲ್ಲಿ ಹಾಗೂ ಅವರ ಬಳಸುತ್ತಿದ್ದ ಮೊಬೈಲ್, ಎರಡು ಜೊತೆ ಬಟ್ಟೆಯನ್ನು ಪ್ಲಾಸ್ಟಿಕ್ ಬ್ಯಾಗಿನಲ್ಲಿ ತೆಗದುಕೊಂಡು ಮರುದಿನ ವಾಪಸ್ಸು ಬರುವುದಾಗಿ ಹೇಳಿ ಹೋದವರು ವಾಪಸ್ಸು ಮನೆಗೆ ಬರದೆ ಇದ್ದು ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಸಂಬಂದಿಕರ ಮನೆಯಲ್ಲೆಲ್ಲಾ ವಿಚಾರಿಸಿ ಪತ್ತೆಯಾಗದ ಕಾರಣ ಕಾಣೆಯಾಗಿರುವ ನನ್ನ ಗಂಡ ಮತ್ತು ಅವರು ತೆಗೆದುಕೊಂಡು  ಹೋದ KA19HC4867 ನಂಬರಿನ ವಾಹನವನ್ನು ಪತ್ತೆ ಮಾಡಕೊಡಬೇಕಾಗಿ ವಿನಂತಿ.

 Crime Reported in Mangalore South PS                                                  

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ  ಅನಂತ ಮುರುಡೇಶ್ವರ್  ರವರು ದಿನಾಂಕ: 02-04-2022 ರಂದು ಬೆಳಗ್ಗಿನ ಜಾವ 01-00 ಗಂಟೆಗೆ  ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಸಿಬ್ಬಂದಿಯವರಾದ ಪ್ರಕಾಶ್ ನಾಯ್ಕ್ ವಿ. ನೇ ರವರನ್ನು ಜೊತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ದಿನಾಂಕ: 02-04-2022 ರಂದು ಬೆಳಗ್ಗಿನ ಜಾವ ಸುಮಾರು 02-30 ಗಂಟೆ ವೇಳೆಗೆ ಮಂಗಳೂರು ನಗರದ ಶಿವನಗರ ಕೊರಗಜ್ಜನ ಗುಡಿ ಬಳಿಯಲ್ಲಿ ಓರ್ವ ವ್ಯಕ್ತಿ ತನ್ನ ಇರುವಿಕೆಯನ್ನು ಮರೆಮಾಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಕಂಡು ಸಂಶಯಗೊಂಡು ಸಿಬ್ಬಂದಿ ಸಹಾಯದಿಂದ ಹಿಡಿದು ವಿಚಾರಿಸಿದಾಗ ಹನುಮಂತ ಎನ್. ತಟ್ಟಿ, ಪ್ರಾಯ 35 ವರ್ಷ,  ವಾಸ-ನೀರಿನ ಟ್ಯಾಂಕ್ ಬಳಿ, ಗ್ರಾಮ ದುರ್ಗಾ ದೇವಸ್ಥಾನ ಹತ್ತಿರ, ಚಿಕ್ಕ ಡಂಡರಗಲ್ ಗ್ರಾಮ,  ಬಾಗಲಕೋಟೆ, ಎಂಬುವುದಾಗಿ ತಿಳಿಸಿದ್ದು ಈತನು ಅಪರ ವೇಳೆಯಲ್ಲಿ ಮೇಲಿನ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದುದ್ದರಿಂದ ಇವರುಗಳು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ಕತ್ತಲ್ಲಿ ಹೊಂಚು ಹಾಕುತ್ತಿರುವುದಾಗಿ ಇವರ ವರ್ತನೆಯಿಂದ ಬಲವಾದ ಸಂಶಯ ಬಂದಿದ್ದು, ಇವನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ಇವರ ವಿರುದ್ದ  ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 02-04-2022 04:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080