ಅಭಿಪ್ರಾಯ / ಸಲಹೆಗಳು

Crime Reported in Barke PS

ದಿನಾಂಕ: 01-10-2021 ರಂದು ಮಂಗಳೂರು ನಗರ ಜಿಲ್ಲಾ ಕಾರಗೃಹದಲ್ಲಿ ಸಂಜೆ ಸಮಯ 5-25 ಗಂಟೆಗೆ ಅಬ್ದುಲ್ ಆಸಿಕ್ ತಂದೆ: ಮಹಮ್ಮದ್ ವಾಸ: ನವಗ್ರಾಮ ಮನೆ, ಬಾಲೆಪೂಣಿ ಗ್ರಾಮ, ಬಂಟ್ವಾಳ ತಾಲೂಕು, ದ.ಕ ಜಿಲ್ಲೆ, ಎಂಬಾತನು ವಿಚಾಣಾಧೀನ ಖೈದಿ ಅಬ್ದುಲ್ ಅನ್ಸರ್ ತಂದೆ: ಮಹಮ್ಮದ್ ಬ್ಯಾರಿ ಎಂಬಾತನಿಗೆ ನೀಡಲು ತಂದ ಬಟ್ಟೆಗಳನ್ನು ಪರಿಶಿಲಿಸಲುವಾಗ ಅಬ್ದುಲ್ ಆಸಿಕ್ ನು ಮಾದಕ ದ್ರವ್ಯ ಸೇವನೆ ಮಾಡಿಕೊಂಡಿರುವಂತೆ ತೋರಿದಾಗ ಅಬ್ದುಲ್ ಆಸಿಕ್ ಎಂಬಾತನನ್ನು ವಶಕ್ಕೆ ಪಡೆದು ಮಾದಕ ದ್ರವ್ಯ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ತಪಾಸಣೆಗೆ ಸಿಬ್ಬಂದಿಯವರ ಭದ್ರಿಕೆಯಲ್ಲಿ ಮಂಗಳೂರು ನಗರ ಏ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇವರ ವೈದ್ಯಕೀಯ ತಪಾಸಣೆ ನಡೆಸಿ ಪರೀಕ್ಷಿಸಿದಲ್ಲಿ ಆಪಾದಿತರು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ

Crime Reported in Traffic South PS

ದಿನಾಂಕ: 01-10-2021 ರಂದು ಪಿರ್ಯಾದಿ SUBBA NAIK M ದಾರರು ಕೋಣಾಜೆ ವಸತಿ ಗೃಹದಿಂದ ಮುಡಿಪುಕಡೆಗೆ ಅವರ ಬಾಬ್ತು ಮೋಟಾರು ಸೈಕಲ್ ನಂಬ್ರ: KA-19-Y-8352 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 12-40 ಗಂಟೆಗೆ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಸಾಂಬರು ತೋಟ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು ಡಾಮಾರು ರಸ್ತೆಯ ಡಿವೈಡರ್ ಬಳಿ ತಲುಪಿದಾಗ ಕಾರು ನಂಬ್ರ: KL-14-Y-5761 ನೇದರ ಕಾರು ಚಾಲಕ ಮಹಮ್ಮದ್ ಮಿಕ್ ದಾದ್ ರವರು ಕಾರನ್ನು ನಿರ್ಲಕ್ಷತನ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು  ಯಾವುದೇ ಸೂಚನೆ ನೀಡದೇ ಬಲ ಬದಿಗೆ ಯು ಟರ್ನ್ ಮಾಡಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿರುತ್ತದೆ. ಈ ಅಫಘಾತದಿಂದ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅವರ ಬಲ ಕಾಲಿ ಮೊಣಗಂಟಿಗೆ , ಬಲ ಕಾಲಿನ ಮೂರು ಬೆರಳಿಗೆ ರಕ್ತ ಗಾಯ ಮತ್ತು ಎಡ ಕೈಗೆ ರಕ್ತ ಗಾಯವಾಗಿರುವುದಲ್ಲದೇ ಎದೆಗೆ ಹಾಗೂ ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಸಾರ್ವಜನಿಕರು ಹಾಗೂ ಅಪಘಾತಪಡಿಸಿದ ಕಾರು ಚಾಲಕ ಸೇರಿ ಅವರನ್ನು ರಸ್ತೆಯ ಬದಿಯಲ್ಲಿ ಉಪಚರಿಸಿ ನಂತ್ರ ಅಪಘಾತಪಡಿಸಿದ ಕಾರು ಚಾಲಕ ಪಿರ್ಯಾದಿದಾರರನ್ನು ಚಿಕಿತ್ಸೆ ಅಟೋರಿಕ್ಷಾವೊಂದರಲ್ಲಿ ಶಾಫಿ ಕ್ಲೀನಿಕ್ ಮುಡಿಪುಗೆ ಕರೆದುಕೊಂಡು ದಾಖಲು ಮಾಡಿದ್ದು ಅಲ್ಲಿನ ವೈದ್ಯರು ಅವರನ್ನು ಹೊರ ರೋಗಿಯಾಗಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿ ಕೊಟ್ಟಿರುತ್ತಾರೆ. ಈ ಅಪಘಾತದಿಂದ  ಪಿರ್ಯಾದಿದಾರರ ಬಾಬ್ತು ಮೋಟಾರು ಸೈಕಲ್ ನಂಬ್ರ: KA-19-Y-8352 ಮತ್ತು ಅಪಘಾತಪಡಿಸಿದ ಕಾರು ನಂಬ್ರ: KL-14-Y-5761 ಕೂಡಾ ಜಖಂಗೊಂಡಿರುತ್ತದೆ. ಎಂಬಿತ್ಯಾದಿ.

Crime Reported in Surathkal PS      

ದಿನಾಂಕ:01-10-2021 ರಂದು ಪಿರ್ಯಾದಿ Yallaling Marigoudra Juniour LineMan ದಾರರು ಅವರಸಹದ್ಯೋಗಿ ಬಸವರಾಜ್ ಬಾರಿಗಡ್ಡಿ ರವರ ಜೊತೆ ಮೇಲಾಧಿಕಾರಿಗಳ ನಿರ್ದೇಶನದಂತೆ ಸುರತ್ಕಲ್ ನ ಅಗರಮೇಲು ಎಂಬಲ್ಲಿನ ಸ್ಥಾವರ ಸಂಖ್ಯೆ CKB32074 ಸ್ಥಾವರದ ಗ್ರಾಹಕರಾದ ಮುಸ್ಬಾ ರವರ ವಿಧ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ತೆರಳಿದಾಗ ಸಮಯ ಸುಮಾರು 13-00 ಗಂಟೆಗೆ  ಮನೆಯಲ್ಲಿದ ಸದ್ರಿ ಮುಸ್ಬಾರವರು ಕತ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಸರಕಾರಿ ಕೆಲಸವನ್ನು ನಿರ್ವಹಿಸಲು ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈ ಕಾಲು ಕಡಿಯುವುದಾಗಿ ಬೆದರಿಸಿ, ಜೀವ ಬೇದರಿಕೆಯನ್ನು ಹಾಕಿದಾಗಿರುತ್ತದೆ.ಅಲ್ಲದೇ ಆರೋಪಿಯು ದೂರವಾಣಿಯ ಮುಖೇನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೇದರಿಕೆಯನ್ನು ಹಾಕಿರುವುದಾಗಿ ಎಂಬಿತ್ಯಾದಿಯಾಗಿರುತ್ತದೆ.

Crime Reported in Moodabidre PS

ಪಿರ್ಯಾದಿದಾರರಾದ ಶ್ರೀ ಪ್ರಶಾಂತ ಎಸ್ ಪಾಂಡಿ, ಪ್ರಾಯ: 53 ವರ್ಷ, ಉಡುಪಿ ಜಿಲ್ಲೆ ಎಂಬುವರು ತನ್ನ ಬಾಬ್ತು ಕೆಎ-19-ಇಎಫ್-8081 ನಂಬ್ರದ ಮೋಟಾರು ಸೈಕಲ್ ನಲ್ಲಿ ಕಾಂತಾವರದ ತನ್ನ ಮನೆಯಿಂದ ಹೊರಟು ಕಡಲ ಕೆರೆಯ ಕಂಪನಿಗೆ ಕೆಲಸಕ್ಕೆ ಬರುತ್ತಾ ಮೂಡಬಿದ್ರೆ ತಾಲೂಕು ಪಡುಮಾರ್ನಾಡು ಗ್ರಾಮದ ಕೆಂಪುಲು ಕ್ರಾಸ್ ಎಂಬಲ್ಲಿಗೆ ತಲುಪುವಾಗ ಮದ್ಯಾಹ್ನ ಸುಮಾರು 2-30 ಗಂಟೆಗೆ ಮೂಡಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಕೆಎ-19-ಎಬಿ-9464 ನಂಬ್ರದ ಲಾರಿಯನ್ನು ಅದರ ಚಾಲಕರಾದ ರಾಮಣ್ಣ ಪೂಜಾರಿ, ಪ್ರಾಯ: 34 ವರ್ಷ, ತಂದೆ: ವಾಸ: ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ರವರು ತನ್ನ ಬಾಬ್ತು ಲಾರಿಯನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ಕೆಎ-19-ಇಎಫ್-8081 ನಂಬ್ರದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಪಿರ್ಯಾದಿದಾರರ ಬಲಕೈ ಮತ್ತು ಎಡಕಾಲಿನ ಮೂಳೆ ಮುರಿತದ ಗಂಬೀರ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿರುವುದು ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 02-10-2021 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080