ಅಭಿಪ್ರಾಯ / ಸಲಹೆಗಳು

Crime Reported in : Mulki PS

ದಿನಾಂಕ: 02-03-2022 ರಂದು ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣಾ ಪಿ.ಎಸ್.ಐ ವಿನಾಯಕ ತೊರಗಲ್ ರವರು ಸಿಬ್ಬಂದಿಯರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ 19-45 ಗಂಟೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಸರಕಾರಿ ಹೈಸ್ಕೂಲ್ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮುಬೀನ್ ಪ್ರಾಯ: 26 ವರ್ಷ ವಾಸ: ಸರಕಾರಿ ಬಾವಿ ಬಳಿ, ಕೆ.ಎಸ್. ರಾವ್ ನಗರ,  ಕಾರ್ನಾಡು ಗ್ರಾಮ, ಮಂಗಳೂರು ತಾಲೂಕು ಎಂಬಾತನು ಹೊಗೆಬತ್ತಿಯನ್ನು ಸೇದುತ್ತಿರುವುದು ಕಂಡುಬಂದಿದ್ದು, ವಾಹನವನ್ನು ನಿಲ್ಲಿಸಿ ವಿಚಾರಿಸಿದಾಗ ಆತ ಹೊಗೆ ಬತ್ತಿಯೊಂದಿಗೆ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆತನ ವೈದ್ಯಕೀಯ ತಪಾಸಣೆ ನಡೆಸುವ ಬಗ್ಗೆ ಎ.ಜೆ.ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದ್ದು ಆಸ್ಪತ್ರೆಯಲ್ಲಿ ಆರೋಪಿಯನ್ನು ಪರೀಕ್ಷಿಸಿದ ವೈದ್ಯರು ಗಾಂಜಾ ಸೇವನೆ ಮಾಡಿರುವುದಾಗಿ ಪರೀಕ್ಷಾ ವರದಿಯ ದೃಢಪತ್ರವನ್ನು ದಿನಾಂಕ: 03-03-2022 ರಂದು ನೀಡಿದ್ದು ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ.

 

Crime Reported in Kavoor PS

ದಿನಾಂಕ: 03/03/2022 ರಂದು ಪಿರ್ಯಾದಿ PRATHIBHA K H ದಾರರು ಸಿಬ್ಬಂದಿಗಳ ಜೊತೆ ಇಲಾಖಾ ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಬೆಳಿಗ್ಗೆ 9.30 ಗಂಟೆಗೆ ಬಂಗ್ರ ಕೂಳೂರು ಗ್ರಾಮದ ಕೂಳೂರು ತಲುಪಿದಾಗ ಆರೋಪಿತನಾದ ಆಲಿಸ್ಟರ್ ಬ್ರೈನ್ ಜಾನ್ ಪುಟಾರ್ಡೊ (27) ಎಂಬಾತನು ಸಿಗರೇಟನ್ನು ಸೇದುತ್ತಿದ್ದು ನಮ್ಮ ವಾಹನವನ್ನು ಕಂಡು ಸಿಗರೇಟನ್ನು ಬಿಸಾಡಿದ್ದು ನಂತರ ಅವನನ್ನು ವಿಚಾರಿಸಿದಾಗ ಅವನು ಮಾತನಾಡುವಾಗ ತೊದಲುತ್ತಿದ್ದು ಹಾಗೂ ಅಮಲಿನಲ್ಲಿದ್ದಂತೆ ಕಂಡು ಬಂದ್ದಿದ್ದು ಆತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆತನನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ  ದೃಡಪತ್ರ ನೀಡಿರುತ್ತಾರೆ ಈ ಬಗ್ಗೆ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ.

 

Crime Reported in Mangalore South PS                                   

ದಿನಾಂಕ 26-02-2022 ರಂದು ರಾತ್ರಿ 9-10 ಗಂಟೆಯಿಂದ ಅದೇ ದಿನ ರಾತ್ರಿ 9-20 ಗಂಟೆಯ ಮದ್ಯಾವಧಿಯಲ್ಲಿ ಮಂಗಳೂರು ನಗರದ ಪಾಂಡೇಶ್ವರದ ಪೊರಂ ಪಿಜಾ ಮಹಲ್ ನ ಎದುರುಗಡೆ ರಸ್ತೆ ಬದಿಯಲ್ಲಿ ಕೀ ಸಹಿತ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿ GURUNINGAYYA ISHWARAYYA HIREMATH ದಾರರ ಆರ್. ಸಿ. ಮಾಲಕತ್ವದ ROYAL ENFIELD CLASSIC 350, 08/2016 ನೇ ಮೊಡಲ್ ನ KA25EX6499 ನೊಂದಣಿ ಸಂಖ್ಯೆಯ ME3U3S5C1GH472417 ಚೆಸಿಸ್ ನಂಬ್ರದ, U3S5C0GG122319 ಇಂಜಿನ್ ನಂಬ್ರದ, ಕಪ್ಪು ಬಣ್ಣದ, ಅಂದಾಜು ಮೌಲ್ಯ 77,000/- ರೂಪಾಯಿ ಬೆಲೆಬಾಳುವ ದ್ಚಿಚಕ್ರ ವಾಹನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಪಿರ್ಯಾದಿದಾರರು ಮತ್ತು ಅವರ ಸ್ನೇಹಿತರು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ದ್ಚಿಚಕ್ರ ವಾಹನ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 03-03-2022 07:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080