ಅಭಿಪ್ರಾಯ / ಸಲಹೆಗಳು

Crime Reported in Kankanady Town PS                                  

ದಿನಾಂಕ 02/05/2022 ರಂದು ಪಿರ್ಯಾದಿದಾರರಾದ ಎಸ್ ಹೆಚ್ ಭಜಂತ್ರಿ ಪಿಐ ರವರು ಠಾಣಾ ಸರಹದ್ದಿನಲ್ಲಿ ಸಮಯ ಸುಮಾರು ರಾತ್ರಿ 9:30 ಗಂಟೆಗೆ ಜಪ್ಪಿನಮೊಗೆರು ಆಡಂಕುದ್ರು ಬಳಿ ಬಂದು ವಾಹನಗಳನ್ನು ಪರೀಶಿಲಿಸುತ್ತಿರುವ ಸಮಯ ರಾತ್ರಿ 9:45 ಗಂಟೆಗೆ ಆಡಂಕುದ್ರುನಿಂದ ಹೆದ್ದಾರಿಗೆ ಒಂದು ಪಿಕ್ ಆಪ್ ವಾಹನ ಬರುವುದನ್ನು ಕಂಡು ತಡೆದು ನಿಲ್ಲಿಸಿ ಪರೀಶಿಲಿಸಿದಾಗ ಪಿಕ್ ಆಪ್ ವಾಹನದ ನೊಂದಣಿ ಸಂಖ್ಯೆ ಕೆಎ19 ಎಸಿ 0567 ಆಗಿದ್ದು ಚಾಲಕನಲ್ಲಿ ವಾಹನದ ದಾಖಲಾತಿಗಳನ್ನು ಕೇಳಿದಾಗ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ. ಸದ್ರಿ ಪಿಕ್ ಆಪ್ ವಾಹನವನ್ನು  ಪರಿಶೀಲಿಸಲಾಗಿ ವಾಹನದ ಬಾಡಿಯೊಳಗಡೆ ಆಕ್ರಮವಾಗಿ ಮರಳು ತುಂಬಿರುವುದು ಕಂಡು ಬಂದಿದ್ದು ಚಾಲಕನಲ್ಲಿ ಮರಳು ಸಾಗಾಟದ ಬಗ್ಗೆ. ಪರ್ಮಿಟ್ ಪತ್ರವನ್ನು ಕೇಳಿದಾಗ ಯಾವುದೇ ದಾಖಲಾತಿಗಳ ಇಲ್ಲದಿರುವುದರಿಂದ  ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ತನ್ನ ಹೆಸರು ಮಹಮ್ಮದ್ ಶಾಫಿಕ್ ಪ್ರಾಯ:30 ವರ್ಷ, ವಾಸ: ಕೆ ಸಿ ರೋಡ್, ಮುಳ್ಳುಗುಡ್ಡೆ, ಉಳ್ಳಾಲ ಮಂಗಳೂರು ಎಂಬುದಾಗಿ ತಿಳಿಸಿರುತ್ತಾನೆ. ತಾನು ಸದ್ರಿ ಪಿಕ್ ಆಪ್ ವಾಹನದ ಚಾಲಕನಾಗಿ ದುಡಿಯುತ್ತಿದ್ದು ವಾಹನದ ಮಾಲೀಕರು ತಿಳಿಸಿದಂತೆ ಆಡಂಕುದ್ರು ನೇತ್ರಾವತಿ ನದಿ ತೀರದಿಂದ ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ವಾಹನದ ಮಾಲೀಕರು ತಿಳಿಸಿದಂತೆ ಮಾರಾಟಕ್ಕೆ ಕೆಸಿ ರೋಡ್ ಕಡೆ ಹೋಗುತ್ತಿರುವುದಾಗಿ ತಿಳಿಸಿರುವುದಾಗಿದೆ. ಮರಳಿನ ಆದಾಂಜು ಮೌಲ್ಯ ರೂ 2000/- ಮತ್ತು ವಾಹನದ ಆದಾಂಜು ಮೌಲ್ಯ ರೂ 300000/-  ಆಗಬಹುದು ಸದ್ರಿ ಆರೋಪಿ ಮಹಮ್ಮದ್ ಶಾಪಿಕ್ ಮತ್ತು ಪಿಕ್ ಆಪ್ ವಾಹನದ ಮಾಲೀಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ಪಿರ್ಯಾದಿ ಎಂಬಿತ್ಯಾದಿ.

     

Crime Reported in Urva PS

ಪಿರ್ಯಾದಿದಾರರ ಮಗ ಆಯುಷ್ ಉಮೇಶ್ (22) ಎಂಬಾತನು   ಖಾಸಗೀ ಇಂಜಿನಿಯರ್  ಕಾಲೇಜ್ ನಲ್ಲಿ  ಬಿ ಇ (ಮೆಕಾನಿಕಲ್ ಇಂಜಿನಿಯರಿಂಗ್)  ಪದವಿ ಮಾಡಿದ್ದು. ಈತನಿಗೆ ಸರಿಯಾದ ಉದ್ಯೋಗ ಸಿಗದೇ ಇದ್ದುದರಿಂದ ಇದೇ ವಿಚಾರದಲ್ಲಿ ಮಾನಸಿಕವಾಗಿ ನೊಂದಿರುತ್ತಾನೆ.  ದಿನಾಂಕ 2-5-2022 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರ ಮಗನು ಈಗ ಬರುವುದಾಗಿ ಹೇಳಿ ಮನೆಯ ಸ್ಕೂಟರ್ ನಂಬ್ರ ಕೆಎ20-ಇಎಂ-3475 ನೇದರಲ್ಲಿ ಸವಾರಿ ಮಾಡಿಕೊಂಡು ಮನೆಯಿಂದ ಹೋಗಿದ್ದು ಸಂಜೆಯಾದರೂ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ ಎಂಬಿತ್ಯಾದಿ.

ಕಾಣೆಯಾದ ಹುಡುಗನ ಚಹರೆ

ಪ್ರಾಯ-22 ವರ್ಷ

ಎತ್ತರ:5 ಅಡಿ 7 ಇಂಚು

ಚಹರೆ: ಸಪೂರ ಶರೀರ, ಗೋದಿ ಮೈಬಣ್ಣ, ಕೋಲು ಮುಖ, ಕನ್ನಡಕ ಧರಿಸಿರುತ್ತಾನೆ. ಮುಖದಲ್ಲಿ ಲೈಟ್ ಗಡ್ಡ, ಮಿಸೆ ಇರುತ್ತದೆ. 2 ಇಂಚು ಉದ್ದದ ಕಪ್ಪು ತಲೆ ಕೂದಲು. ಕಪ್ಪು ಬಣ್ಣದ ಟಿ ಶರ್ಟ್, ಕಪ್ಪು ಬಣ್ಣದ ಶಾರ್ಟ್ಸ್ ಧರಿಸಿರುತ್ತಾನೆ.

ಭಾಷೆ: ಕನ್ನಡ, ಇಂಗ್ಲಿಷ್, ಹಿಂದಿ, ತುಳು ಭಾಷೆ ಬಲ್ಲವನಾಗಿರುತ್ತಾನೆ.

 

ಇತ್ತೀಚಿನ ನವೀಕರಣ​ : 03-05-2022 01:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080