ಅಭಿಪ್ರಾಯ / ಸಲಹೆಗಳು

Crime Reported in: Mangalore West Traffic PS      

ದಿನಾಂಕ:05-05-2022 ರಂದು ಪಿರ್ಯಾದಿದಾರರು YOGISH NAYAK  ಸ್ವಂತ ಕೆಲಸದ ನಿಮಿತ್ತ ಬಳ್ಳಾಲ್ ಭಾಗ್ ಜಂಕ್ಷನ್ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವ ಸಮಯ  ಸುಮಾರು 12-00ರ ವೇಳೆಗೆ ಓರ್ವ ವೃದ್ದ ವ್ಯಕ್ತಿಯು ಪ್ರಶಾಂತ್ ವೈನ್ ಶಾಪ್ ಕಡೆಯಿಂದ ತೂರಾಡುತ್ತಾ ಎಂ.ಜಿ ರಸ್ತೆ ದಾಟುತ್ತಿರುವಾಗ ಲಾಲ್ ಭಾಗ್ ಕಡೆಯಿಂದ ಪಿ.ವಿ.ಎಸ್ ಕಡೆಗೆ KA-20-ET-0129 ನೇ ದ್ವಿ ಚಕ್ರ ವಾಹನದ ಸವಾರನು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ವೃದ್ದ ವ್ಯಕ್ತಿ ಹಾಗೂ ದ್ವಿ ಚಕ್ರ ಸವಾರ ವಾಹನ ಸಮೇತ ರಸ್ತೆಗೆ ಬಿದ್ದವರನ್ನು ಕೂಡಲೇ ಪಿರ್ಯಾದಿದಾರರು ಹಾಗೂ ಇತರರು ಬಿದ್ದವರನ್ನು ಉಪಚರಿಸಿದ್ದು  ವೃದ್ದ ವ್ಯಕ್ತಿಯ ತಲೆಗೆ ಸ್ವಲ್ಪ ರಕ್ತ ಗಾಯ ಹಾಗೂ ಬಲ ಕೈಗೆ ತರಚಿದ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈದ್ಯರು ವೃದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು.ಚಿಕಿತ್ಸೆಯಲ್ಲಿದ್ದ ವೃದ್ದ ವ್ಯಕ್ತಿಯು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ:03-06-2022 ರಂದು ರಾತ್ರಿ 12-05 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

 

Crime Reported in: Traffic South Police Station

ದಿನಾಂಕ:02-06-2022 ರಂದು ಪಿರ್ಯಾದಿದಾರರಾದ ಫಜೀಲಾ ಟಿ.ಎಸ್ (42) ರವರು ಅವರ ಬಾಬ್ತು ಕಾರು ನಂಬ್ರ KL-14-R-9280  ನೇದರಲ್ಲಿ ಚಾಲಕರಾಗಿ ಪಡೀಲ್ ನ ಡಿಸೆಬಲಿಟಿ ಟ್ರೈನಿಂಗ್ ಸೆಂಟರ್ ನಿಂದ ದೇರಳಕಟ್ಟೆ ಕಡೆಗೆ ಹೋಗುತ್ತಿರುವ ಸಂಜೆ ಸಮಯ ಸುಮಾರು  05:30 ಗಂಟೆಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಸರ್ವಿಸ್ ರೋಡ್ ತಲುಪಿದಾಗ ಪಿರ್ಯಾದಿದಾರರ ಕಾರಿನ ಹಿಂದಿನಿಂದ ಅಂದರೆ ಕಲ್ಲಾಪು ಕಡೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ KA-19-AD-0028 ನೇದರ ಮಹೇಶ್ ಬಸ್ ನ ಚಾಲಕ ರಮೀಜ್ ರಾಝ್ ಎಂಬಾತನು ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಹಿಂಬದಿಯ  ಬಂಪರ್,ಹಾಗೂ ಕಾರಿನ  ಬಲ ಭಾಗದ ಹಿಂಬದಿಯ ಡೋರ್ ಜಖಂಗೊಂಡಿರುವುದಾಗಿದೆ, ಎಂಬಿತ್ಯಾದಿ.

Crime Reported in: Traffic South Police Station

ದಿನಾಂಕ:02-06-2022 ರಂದು ಪಿರ್ಯಾದಿದಾರರ MAIKAL PINTO ಮಗನಾದ ಮರ್ವಿನ್ ಸುನಿಲ್ ಪಿಂಟೊ ರವರು ಅವರ ಬಾಬ್ತು ಸ್ಕೂಟರ್ ನಂಬ್ರ KA-19-EV-9114 ನೇದನ್ನು ಪಡೀಲ್ ಕಡೆಯಿಂದ ಬಿ.ಸಿ ರೋಡ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 07:30 ಗಂಟೆಗೆ ರಾ.ಹೆ 73 ರ ಕೊಡಕಲ್ ಅಯ್ಯಪ್ಪ ದೇವಸ್ಥಾನದ ಬಳಿ ತಲುಪಿದಾಗ ಅದೇ ರಸ್ತೆಯಲ್ಲಿ ಅವರ ಹಿಂದಿನಿಂದ ಬಂದ ಅಪರಿಚಿತ ಕಾರೊಂದನ್ನು ಅದರ ಚಾಲಕ ನಿರ್ಲಕ್ಷತನ ಮತ್ತು ದುಡುಕುತನದಿಂದ  ಚಲಾಯಿಸಿಕೊಂಡು ಬಂದು ಮರ್ವಿನ್ ಸುನಿಲ್ ಪಿಂಟೊ ರವರ ಸ್ಕೂಟರಿನ ಹಿಂಬದಿಗೆ ಡಿಕ್ಕಿ ಪಡಿಸಿ ನಿಲ್ಲಿಸದೆ ಪರಾರಿಯಾಗಿರುತ್ತಾರೆ, ಈ ಅಪಘಾತದಿಂದ ಪಿರ್ಯಾದಿದಾರರ ಮಗ ಮರ್ವಿನ್ ಸುನಿಲ್ ಪಿಂಟೊ ರವರು ಡಾಮಾರು ರಸ್ತೆಗೆ ಬಿದ್ದು ಬಲ ಕಿವಿಯ ಬಳಿ ಗಂಬೀರ ಸ್ವರೂಪದ ರಕ್ತಗಾಯ ಹಾಗೂ ಬಲಭುಜದ ಬಳಿ ತರಚಿದ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದ್ದ ಸಾರ್ವಜನಿಕರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ, ಎಂಬಿತ್ಯಾದಿ.

 Crime Reported in: Bajpe PS

ಪಿರ್ಯಾದಿದಾರರಾದ ಎಂ.ಜಿ ಸಾಹುಲ್ ಹಮೀದ್ ಎಂಬವರು ಮಂಗಳೂರು ತೆಂಕುಳಿಪಾಡಿ ಗ್ರಾದಲ್ಲಿರುವ ಬಾಮಿ ಆಂಗ್ಲ ಮಾಧ್ಯಮ ಶಾಲಾ ವಾಹನ ನಂಬ್ರ ಕೆಎ-19-ಎಎ-4961 ನೇಯದರಲ್ಲಿ 6 ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು ಸದ್ರಿ ಬಸ್ಸಿನಲ್ಲಿ ಮಂಗಳೂರು ತಾಲ್ಲೂಕು ಉಳಾಯಿಬೆಟ್ಟು ಅಂಚೆ ಮತ್ತು ಗ್ರಾಮ ಅಂಗಡಿ ಮನೆ ನಿವಾಸಿ ದಿವಗಂತ ಹಸನಬ್ಬ ರವರ ಮಗ ಶಾಹುಲ್ ಹಮೀದ್ ಎಂಬವರು ಸಹ ಹಲವಾರು ವರ್ಷಗಳಿಂದ ನಿರ್ವಾಹಕರಾಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಸದ್ರಿ ಬಸ್ಸು ದಿನಂಪ್ರತಿ ಶಾಲೆಯಿಂದ ಗುರುಪುರ ಮುಖೇನ ಉಳಾಯಿಬೆಟ್ಟು ಹೋಗಿ ಮಕ್ಕಳನ್ನು ಇಳಿಸಿಕೊಂಡು ಹಾಗೂ ಬೆಳಿಗ್ಗೆ ಹೊತ್ತಿನಲ್ಲಿ ಮಕ್ಕಳನ್ನು ಕರೆದುಕೊಂಡು ಬರುತ್ತಿರುವುದಾಗಿದೆ. ದಿನಾಂಕ 01-06-2022 ರಂದು ಸಂಜೆ ಶಾಲೆ ಬಿಟ್ಟ ನಂತರ ಮಕ್ಕಳನ್ನು ಕರೆದುಕೊಂಡು ನಿರ್ವಾಹಕರೊಂದಿಗೆ ಮಕ್ಕಳನ್ನು ಇಳಿಸುವ ಪ್ರಥಮ ನಿಲುಗಡೆಯಾದ ಗುರುಪುರ ಅಗಸರಗುಡ್ಡೆ ಬಳಿ ಸಮಯ ಸುಮಾರು ಸಂಜೆ 4:15 ಗಂಟೆಗೆ ಬಸ್ಸನ್ನು ನಿಲ್ಲಿಸಿ ನಿರ್ವಾಹಕ ಶಾಹುಲ್ ಹಮೀದ್ ರವರು 6 ಮಕ್ಕಳನ್ನು 3 ಬಾರಿಯಾಗಿ ಇಳಿಸಿಕೊಂಡು ರಸ್ತೆ ದಾಟಿಸಿ ಮಕ್ಕಳ ಮನೆಯ ಕಡೆಗೆ ಕಳುಹಿಸಿ  ತಿರುಗಿ ರಸ್ತೆ ದಾಟಿ ಶಾಲಾ ವಾಹನದ ಬಳಿ ಬಂದಾಗ ಕೈಕಂಬ ಕಡೆಯಿಂದ ಗುರುಪುರದ ಕಡೆಗೆ ಕೆಎ-19-ಎಬಿ-3472 ನೇ ನಂಬ್ರದ ಟಿಪ್ಪರ್ ನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿರ್ವಾಹಕ ಶಾಹುಲ್ ರವರಿಗೆ ಢಿಕ್ಕಿ ಹೊಡೆದು ಬಳಿಕ ಶಾಲಾ ಬಸ್ಸಿನ ಹಿಂಬದಿಗೆ ರಭಸದಿಂದ ಢಿಕ್ಕಿ ಹೊಡೆದಿರುತ್ತದೆ. ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ನಿರ್ವಾಹಕ ಶಾಹುಲ್ ಹಮೀದ್ ರವರ ಎರಡೂ ಕಾಲು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ನೇತಾಡುತ್ತಿದ್ದು, ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುತ್ತದೆ. ಅಲ್ಲದೇ ಪಿರ್ಯಾದಿದಾರರಿಗೆ ಟಿಪ್ಪರ್ ಗುದ್ದಿದ ರಭಸಕ್ಕೆ ಬಸ್ಸಿನ ಸ್ಟೇರಿಂಗ್ ಎದೆಗೆ ತಾಗಿ ನೋವು ಕಾಣಿಸಿಕೊಂಡಿದ್ದು, ಬಸ್ಸಿನಲ್ಲಿದ್ದ  ಇಬ್ಬರು ಮಕ್ಕಳಿಗೂ ಗುದ್ದಿದ ಗಾಯವಾಗಿರುತ್ತದೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಗೆ ಬಿದ್ದಿದ್ದ ನಿರ್ವಾಹಕ ಶಾಹುಲ್ ಹಮೀದ್ ರವರನ್ನು ಅಂಬುಲೇನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 03-06-2022 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080