ಅಭಿಪ್ರಾಯ / ಸಲಹೆಗಳು

Crime Reported in Kavoor PS

ಫಿರ್ಯಾದಿ Smt SUMA ದಾರರು ಸುಮಾರು ಒಂದು ವರ್ಷದಿಂದ ಎದುರುಪದವು ಮೂಡಶೆಡ್ಡೆಯ ಜಯಂತಿ ಎಂಬವರ ಬಾಡಿಗೆ ಮನೆಯಲ್ಲಿ ತನ್ನ ಗಂಡನಾದ ನಿಂಗಪ್ಪನೊಂದಿಗೆ ವಾಸವಾಗಿದ್ದು,  ದಿನಾಂಕ 02/09/2021 ರಂದು ಫಿರ್ಯಾದಿದಾರರ ಗಂಡ ನಿಂಗಪ್ಪ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಸಂಜೆ ಸಮಯ ಸುಮಾರು 06:00 ಗಂಟೆಗೆ ಮನೆಯಿಂದ ಹೊರಗಡೆ ಹೋಗಿದ್ದು, ಮನೆಗೆ ವಾಪಾಸ್ಸು ಸಮಯ ಸುಮಾರು 21:30 ಗಂಟೆಗೆ ಮನೆಯ ಎದುರುಗಡೆ ಬಂದಿದ್ದು, ಆ ಸಮಯ ನಿಂಗಪ್ಪರವರಿಗೆ ಪರಿಚಯ ಇರುವ ಸ್ಥಳೀಯರಾದ ದಿವಾಕರ ಮತ್ತು ಪಚ್ಚು ಎಂಬವರು ನಿಂಗಪ್ಪನನ್ನು ಹಿಡಿದು ಹೊಡೆಯುತ್ತಿದ್ದ ಸಮಯ ಫಿರ್ಯಾದಿದಾರರು ಹತ್ತಿರ ಹೋದಾಗ ಯಾವುದೋ ಒಂದು ಹರಿತವಾದ ಆಯುಧದಿಂದ ನಿಂಗಪ್ಪನ ತಲೆಯ ಹಿಂಭಾಗಕ್ಕೆ ರಕ್ತ ಬರುವ ರೀತಿಯಲ್ಲಿ ಹೊಡೆದು ಓಡಿ ಹೋಗಿದ್ದು, ಫಿರ್ಯಾದಿದಾರರು ಸ್ಥಳೀಯರಾದ ಇಕ್ಬಲ್ ಮತ್ತು ರಜಾಕ್ ಎಂಬುವರೊಂದಿಗೆ ಆಟೋ ರಿಕ್ಷಾದಲ್ಲಿ ನಿಂಗಪ್ಪನನ್ನು ಚಿಕಿತ್ಸೆಗಾಗಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುವುದಾಗಿದೆ. ಆಪಾದಿತರು ಯಾವುದೋ ಕ್ಷುಲ್ಲಕ ಕಾರಣಕ್ಕೆ ನಿಂಗಪ್ಪನಿಗೆ ಹಲ್ಲೆ ನೆಡೆಸಿ, ಕೊಲ್ಲಲ್ಲು ಪ್ರಯತ್ನಿಸಿರುತ್ತಾರೆ ಎಂಬಿತ್ಯಾದಿ

Crime Reported in Traffic North PS

ದಿನಾಂಕ 02-09-2021 ರಂದು ಪಿರ್ಯಾದಿದಾರರಾದ ಫಜನಿಸ್ವಾಮಿ ರವರು ಬುಲೆಟ್ ಟ್ಯಾಂಕರ್ ನಂಬ್ರ KA-01-AF-2097 ನೇಯದನ್ನು ನಂತೂರು ಕಡೆಯಿಂದ ಸುರತ್ಕಲ್ನ MRPL ಕಡೆಗೆ ಹೋಗಲು ರಾ ಹೆ 66 ರಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ ಮಧ್ಯಾಹ್ನ ಸಮಯ 12:15 ಗಂಟೆಗೆ ಸುರತ್ಕಲ್ ಸಮೀಪದ ಶುಭಗಿರಿ ಹಾಲ್ ಬಳಿ ತಲಪುತ್ತಿದ್ದಂತೆ ಬೈಕಂಪಾಡಿ ಕಡೆಯಿಂದ ಸುರತ್ಕಲ್ ಕಡೆಗೆ ಮಾರುತಿ ಓಮಿನಿ ನಂಬ್ರ KA-19-MB-6482 ನೇಯದರ ಚಾಲಕ ಕಿಶೋರ್ ಎಂಬವರು ಓಮಿನಿ ಕಾರನ್ನು ನಿರ್ಲಕ್ಷತನದಿಂದ ಮಾನವಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಬುಲೆಟ್ ಟ್ಯಾಂಕರನ್ನು ಎಡಬದಿಯಿಂದ ಓವರ್ ಟೇಕ್ ಮಾಡಿಕೊಂಡು ಹೋಗುವ ಭರದಲ್ಲಿ ಬುಲೆಟ್ ಟ್ಯಾಂಕರಿನ ಎಡಬದಿ ಬಂಪರ್ ಕಾರ್ನರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಚಾಲಕನಿಗೆ ಕಾರಿನ ಮೇಲಿನ ನಿಯಂತ್ರಣ ತಪ್ಪಿ ಬುಲೆಟ್ ಟ್ಯಾಂಕರ್ ನ ಎದುರಿನಲ್ಲಿ ಅವಳಡಿಸಿರುವ ಕಬ್ಬಿಣದ ಗ್ರೀಲ್ ಗಳಿಗೆ ತಾಗಿ ತಿರಗಿ ನಿಂತಿದ್ದು ಸಮಯ ಪಿರ್ಯಾದಿದಾರರು ಬುಲೆಟ್ ಟ್ಯಾಂಕರ್ ಗೆ ಬ್ರೇಕ್ ಹಾಕಿ ನಿಲ್ಲಿಸಿದಾಗ ಹಿಂದುಗಡೆಯಿಂದ KA-19-ET-3357 ನಂಬ್ರದ ಮೋಟಾರ್ ಸೈಕಲ್ ನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ಇಸ್ಮಾಯಿಲ್ ಎಂಬವರು ಬುಲೆಟ್ ಟ್ಯಾಂಕರಿನ ಹಿಂಬದಿಗೆ ಡಿಕ್ಕಿಯಾದ ಪರಿಣಾಮ ಅವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲಕಾಲಿನ ಮೊಣಗಂಟಿಗೆ, ಕೋಲುಕಾಲಿಗೆ ಹಾಗೂ ಮಣಿಗಂಟಿಗೆ ಗುದ್ದಿದ ರೀತಿಯ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರ್ಯಾದಿ ಸಾರಾಂಶ.

Crime Reported in Surathkal PS

ದಿನಾಂಕ:02/09/2021 ರಂದು ರಾತ್ರಿ 08-30 ಗಂಟೆಗೆ 8 ELEVEN ಸೂಪರ್ ಮಾರ್ಕೆಟ್ ರಸ್ತೆಯ ಬಳಿ ಪಿರ್ಯಾದಿ Mohammed Junaid ದಾರರಿಗೆ ಮತ್ತುಅವರ ಸಹೋದರನಿಗೆ ಆಪಾದಿತರುಗಳಾದ ನಾಸೀರ್@ಮುನ್ನ,ಅನ್ಸಾರ್, ಖಾದರ ನೌಫಾಲ್,ಸಾಹೀಲ್ ಮತ್ತು ಖಲೀಲ್ ರವರುಗಳು  ಸಮಾನ ಉದ್ದೇಶದಿಂದ ಬೆರ್ವಸಿ …. ಮಗ ನಿನ್ನನ್ನು ಹೊಡೆದು ಕೊಲ್ಲುತ್ತೇವೆ ನೋಡುತ್ತಿರು ಎಂದು ಅಚಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಸೇರಿ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದು,ನಾಸೀರ್@ಮುನ್ನಾ ಎಂಬಾತನು ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ  ಚಾಕುವಿನಿಂದ ಪಿರ್ಯಾದಿದಾರರಿಗೆ ತಿವಿದ ಪರಿಣಾಮ ಪಿರ್ಯಾದಿದಾರರ ಎದೆಯ ಕೆಳ ಎಡ ಭಾಗಕ್ಕೆ ರಕ್ತ ಗಾಯವಾಗಿರುತ್ತದೆ,ಪಿರ್ಯಾದಿದಾರರ ಸಹೋದರನಿಗೆ ತರಚಿದ,ಗುದ್ದಿದ ಗಾಯಗಳಾಗಿರುತ್ತವೆ. ಪಿರ್ಯಾದಿದಾರರ ಸಹೋದರ ಅಬ್ಭಾಸ್ ಮುಜಾಪರ್ ನೊಂದಿಗೆ ಕೆಲಸದ ವಿಚಾರವಾಗಿ ತಕರಾರು ಇದ್ದು ಇದೇ ದ್ವೇಷದಿಂದ ಈ ಕೊಲೆ ಯತ್ನ ನಡೆದಿರುವುದಾಗಿದೆ. ಆಪಾದಿತ ಮೇಲೆ ಸೂಕ್ತ ಕಾನೂನು ಕ್ರಮ ಜರೂಗಿಸಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ.

Crime Reported in Moodabidre PS

ಮೂಡಬಿದರೆ ತಾಲೂಕು ಪುತ್ತಿಗೆ ಗ್ರಾಮದ ಕಾಯರ್ ಪುಂಡು ಎಂಬಲ್ಲಿ ದಿನಾಂಕ: ೦೧-೦೯-೨೦೨೧ ರಂದು ಬೆಳಿಗ್ಗೆ ಸಮಯ ಸುಮಾರು ೦೮:೩೦ ಗಂಟೆಗೆ  ಪುತ್ತಿಗೆ ಪಂಚಾಯತ್ ವತಿಯಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕ್ರತ ಕವಿ ಪಳಕಳ ಸೀತಾರಾಮ ಭಟ್ ರವರ ಮನೆಗೆ ಹೋಗುವ ದಾರಿಯಲ್ಲಿ ಅಳವಡಿಸಲಾದ ಪಳಕಳ ಸೀತರಾಮ ಭಟ್ ರಸ್ತೆ ನಾಮಫಲಕವನ್ನು ಯಾರೋ ಕಿಡಿಗೇಡಿಗಳು ದ್ವಂಸಗೊಳಿಸಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 03-09-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080